ಕನ್ನಡ ಸುದ್ದಿ  /  ಮನರಂಜನೆ  /  ಮಾನಸಿಕವಾಗಿ ನೋವು ಅನುಭವಿಸಿಕೊಂಡು ಒಟ್ಟಿಗೆ ಬದುಕಲು ಸಾಧ್ಯವಿಲ್ಲ; ಡಿವೋರ್ಸ್‌ಗೆ ಕಾರಣ ತಿಳಿಸಿದ ಚಂದನ್‌ ಶೆಟ್ಟಿ

ಮಾನಸಿಕವಾಗಿ ನೋವು ಅನುಭವಿಸಿಕೊಂಡು ಒಟ್ಟಿಗೆ ಬದುಕಲು ಸಾಧ್ಯವಿಲ್ಲ; ಡಿವೋರ್ಸ್‌ಗೆ ಕಾರಣ ತಿಳಿಸಿದ ಚಂದನ್‌ ಶೆಟ್ಟಿ

Niveditha Gowda and Chandan Shetty divorce: ಸ್ಯಾಂಡಲ್‌ವುಡ್‌ನ ಕ್ಯೂಟ್‌ ಜೋಡಿಯೆಂದೇ ಹೆಸರು ಮಾಡಿರುವ ಚಂದನ್‌ ಶೆಟ್ಟಿ ಮತ್ತು ನಿವೇದಿತಾ ಗೌಡ ಇಂದು ಪತ್ರಿಕಾಗೋಷ್ಠಿ ನಡೆಸಿ ಡಿವೋರ್ಸ್‌ಗೆ ಕಾರಣವಾದ ಅಂಶಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ಮಾನಸಿಕವಾಗಿ ನೋವು ಅನುಭವಿಸಿಕೊಂಡು ಒಟ್ಟಿಗೆ ಬದುಕಲು ಸಾಧ್ಯವಿಲ್ಲ ಎಂದು ಚಂದನ್‌ ಶೆಟ್ಟಿ ಹೇಳಿದ್ದಾರೆ.

ಮಾನಸಿಕವಾಗಿ ನೋವು ಅನುಭವಿಸಿಕೊಂಡು ಒಟ್ಟಿಗೆ ಬದುಕಲು ಸಾಧ್ಯವಿಲ್ಲ: ಚಂದನ್‌ ಶೆಟ್ಟಿ
ಮಾನಸಿಕವಾಗಿ ನೋವು ಅನುಭವಿಸಿಕೊಂಡು ಒಟ್ಟಿಗೆ ಬದುಕಲು ಸಾಧ್ಯವಿಲ್ಲ: ಚಂದನ್‌ ಶೆಟ್ಟಿ

ಬೆಂಗಳೂರು: ನಟ, ರಾಪರ್‌ ಚಂದನ್‌ ಶೆಟ್ಟಿ ಮತ್ತು ನಟಿ ನಿವೇದಿತಾ ಗೌಡ ಇಂದು ಜಂಟಿ ಪತ್ರಿಕಾಗೋಷ್ಠಿ ನಡೆಸಿ ಡಿವೋರ್ಸ್‌ಗೆ ಕಾರಣವಾದ ಅಂಶಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ಇಬ್ಬರ ನಡುವಿನ ಹೊಂದಾಣಿಕೆ ಕೊರತೆ ಡಿವೋರ್ಸ್‌ಗೆ ಕಾರಣವಾಯಿತು ಎಂದಿದ್ದಾರೆ. ನಾನು ಮತ್ತು ನಿವೇದಿತಾ ಒಮ್ಮತದಿಂದ, ಇಬ್ಬರೂ ಒಟ್ಟಾಗಿ ನಿರ್ಧರಿಸಿಕೊಂಡು, ನಾವಿಬ್ಬರೂ ಖುಷಿಯಾಗಿ ಇರಬೇಕು ಅಂದ್ರೆ ಡಿವೋರ್ಸ್‌ ಪಡೆಯಬೇಕು ಎಂದು ಒಟ್ಟಾಗಿ ತೀರ್ಮಾನ ಮಾಡಿದೆವು. ನಮ್ಮಿಬ್ಬರ ನಡುವೆ ಯಾವುದೇ ದ್ವೇಷ, ವೈಮನಸ್ಸು ಯಾವುದೂ ಇಲ್ಲ. ಅವರ ಬೆಳವಣಿಗೆ ಕುರಿತು ನನಗೆ ಖುಷಿ ಇದೆ. ನನಗೂ ಅವರು ಸಪೋರ್ಟ್‌ ನೀಡುತ್ತಾರೆ. ಇಬ್ಬರೂ ಒಟ್ಟಾಗಿ ಒಪ್ಪಿಕೊಂಡು ಈ ನಿರ್ಧಾರಕ್ಕೆ ಬಂದಿದ್ದೇವೆ. ಎರಡು ದಿನ ಯಾರ ಕಾಲ್‌ಗೂ ಸಿಗಲಿಲ್ಲ. ಮಾತನಾಡುವ ಮನಸ್ಥಿತಿಯಲ್ಲಿ ಇರಲಿಲ್ಲ. ಇವಾಗ ಗಾಳಿಮಾತುಗಳು ಹೆಚ್ಚಾಗಿ, ಆ ಗಾಳಿ ಮಾತು ಎಲ್ಲರ ಮನಸ್ಸಲ್ಲಿ ಕುಳಿತುಕೊಳ್ಳುವುದು ಬೇಡವೆಂದು ಇಲ್ಲಿಗೆ ಬಂದಿದ್ದೇವೆ. ಸತ್ಯಾ ಸತ್ಯತೆ ಏನಿದೆಯೋ ಅದನ್ನು ನಿಮ್ಮ ಮುಂದೆ ಇಡಲು ಬಂದಿದ್ದೇವೆ ಎಂದು ಚಂದನ್‌ ಶೆಟ್ಟಿ ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಮಾನಸಿಕವಾಗಿ ನೋವು ಅನುಭವಿಸಿಕೊಂಡು ಜತೆಗಿರಲು ಸಾಧ್ಯವಿಲ್ಲ

ನಾವಿಬ್ಬರೂ ತುಂಬಾ ವರ್ಷಗಳಿಂದ ಹೊಂದಾಣಿಕೆ ಆಗದೆ ಇದ್ದರೂಹೊಂದಿಕೊಂಡು ಹೋಗಲು ಪ್ರಯತ್ನ ಪಟ್ಟೆವು. ಆದರೆ ಆ ರೀತಿ ಹೊಂದಾಣಿಕೆ, ಅಜೆಸ್ಟ್‌ಮೆಂಟ್‌ ಮಾಡಲು ಹೆಚ್ಚು ದಿನ ಸಾಧ್ಯವಾಗಲಿಲ್ಲ. ಪ್ರತಿದಿನವೂ ಈ ರೀತಿಯಾದ ಮನಸ್ತಾಪಗಳು ಬರುತ್ತಿದ್ದಾಗ ಎಲ್ಲೋ ಒಂದು ಕಡೆ ಅನಿಸಿತ್ತು. ನನ್ನ ಜೀವನಶೈಲಿ ಬೇರೆ ಇದೆ, ಇವರ ಜೀವನಶೈಲಿ ಬೇರೆ ಇದೆ. ಒಬ್ಬರಿಗೊಬ್ಬರು ಗೌರವ ನೀಡಲೇಬೇಕು. ಯಾಕೆಂದರೆ ನಾವೆಲ್ಲರೂ ಪ್ರತ್ಯೇಕ ವ್ಯಕ್ತಿಗಳು. ಈ ಭೂಮಿಯಲ್ಲಿ ನಮಗೆ ಎಷ್ಟು ಹಕ್ಕು ಇದೆಯೋ ಅಷ್ಟು ಹಕ್ಕು ಅವರಿಗೂ ಇದೆ. ಯಾರೂ ಯಾರ ಮೇಲೂ ಯಾವುದೇ ವಿಷಯದ ಕುರಿತು ಬಲವಂತ ಮಾಡಬಾರದು. ಮಾನಸಿಕವಾಗಿ ನೋವು ಅನುಭವಿಸಿಕೊಂಡು ಒಟ್ಟಿಗೆ ಇರಲು ನಮ್ಮಿಬ್ಬರಿಗೆ ಸರಿ ಬರಲಿಲ್ಲ. ಅದಕ್ಕೆ ನಾವಿಬ್ಬರು ದೂರವಾಗಲು ಬಯಸಿದೆವು ಎಂದು ಚಂದನ್‌ ಶೆಟ್ಟಿ ಮಾಹಿತಿ ನೀಡಿದ್ದಾರೆ.

ಇದಾದ ಬಳಿಕ ನಿವೇದಿತಾ ಗೌಡ ಮಾತನಾಡಿದ್ದಾರೆ. ಎಲ್ಲರ ಬೆಂಬಲಕ್ಕೆ ಅವರು ಧನ್ಯವಾದ ತಿಳಿಸಿದ್ದಾರೆ. ಈಗಾಗಲೇ ಚಂದನ್‌ ಶೆಟ್ಟಿ ಹೇಳಿದಂತೆ ನಾವಿಬ್ಬರು ಕೆಲವೊಂದು ವಿಚಾರಗಳಲ್ಲಿ ಕಂಫರ್ಟ್‌ ಆಗಿರಲಿಲ್ಲ ಎನ್ನುವ ಕಾರಣಕ್ಕೆ ಡಿವೋರ್ಸ್‌ ನೀಡಿದ್ದೇವೆ" ಎಂದು ನಿವೇದಿತಾ ಗೌಡ ಸ್ಪಷ್ಟಪಡಿಸಿದ್ದಾರೆ.

ಚಂದನ್‌ ಶೆಟ್ಟಿ ಮತ್ತು ನಿವೇದಿತಾ ಗೌಡ ಬಿಗ್‌ಬಾಸ್‌ ಸೀಸನ್‌ 5ರಲ್ಲಿ ಸ್ಪರ್ಧಿಸಿದ್ದರು. ಈ ಜೋಡಿಯ ಆಟ ಎಲ್ಲರಿಗೂ ಇಷ್ಟವಾಗಿತ್ತು. ನಿವೇದಿತಾ ಗೌಡರ ಬಗ್ಗೆ ಬೊಂಬೆ ಬೊಂಬೆ ಎಂಬ ಹಾಡು ಬರೆದು ಚಂದನ್‌ ಶೆಟ್ಟಿ ಎಲ್ಲರನ್ನೂ ರಂಜಿಸಿದ್ದರು. ಇವರಿಬ್ಬರ ಮುದ್ದಾದ ಜೋಡಿಗೆ ಎಲ್ಲರೂ ವಾಹ್‌ ಎಂದಿದ್ದರು. ಮೈಸೂರಿನ ಯುವ ದಸರಾ ವೇದಿಕೆಯಲ್ಲಿಯೇ ನಿವೇದಿತಾ ಗೌಡರಿಗೆ ಚಂದನ್‌ ಶೆಟ್ಟಿ ಪ್ರಪೋಸ್‌ ಮಾಡಿದ್ದರು. ಈ ರೀತಿ ಪ್ರಪೋಸ್‌ ಮಾಡಿದ್ದು ವಿವಾದಕ್ಕೂ ಕಾರಣವಾಗಿತ್ತು. 

ಬೆಂಗಳೂರಿನ ಶಾಂತಿನಗರದಲ್ಲಿರುವ ಕೌಟುಂಬಿಕ ನ್ಯಾಯಾಲಯವು ಇದೇ ಜೂನ್‌ 7 ರಂದು ಇವರಿಬ್ಬರಿಗೆ ಡಿವೋರ್ಸ್‌ ಮಂಜೂರು ಮಾಡಿತ್ತು. ಟಿಕ್‌ಟಾಕ್‌ ಮೂಲಕ ಬೆಳಕಿಗೆ ಬಂದ ನಿವೇದಿತಾ ಗೌಡ ಈಗ ಚಂದನ್‌ ಶೆಟ್ಟಿ ಜತೆಗೆ ಕ್ಯಾಂಡಿ ಕ್ರಶ್‌ ಎಂಬ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಮಾತ್ರವಲ್ಲದೆ ಜಿಎಸ್‌ಟಿ ಎಂಬ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಂದೇಶ್‌ ನಾಗರಾಜ್‌ ಅರ್ಪಿಸುವ, ಸಂದೇಶ್‌ ಎನ್‌ ನಿರ್ಮಾಣದ ಜಿಎಸ್‌ಟಿ ಸಿನಿಮಾದಲ್ಲಿ ಸೃಜನ್‌ ಲೋಕೇಶ್‌ ನಾಯಕನಾಗಿ ನಟಿಸುತ್ತಿದ್ದಾರೆ. ಸೃಜನ್‌ಗೆ ನಾಯಕಿಯಾಗಿ ಬಿಗ್‌ಬಾಸ್‌ ಗೊಂಬೆ ನಿವೇದಿತಾ ಗೌಡ ನಟಿಸುತ್ತಿದ್ದಾರೆ.

ಟಿ20 ವರ್ಲ್ಡ್‌ಕಪ್ 2024