ಜೈದೇವ್‌ ಮೋಸ ಬಹಿರಂಗ ಸನ್ನಿಹಿತ, ಹಣವಿರುವ ಕಾರನ್ನು ಗೌತಮ್‌ ಭೂಮಿಕಾ ಚೇಸಿಂಗ್‌; ಹೈಸ್ಪೀಡ್‌ನಲ್ಲಿದೆ ಅಮೃತಧಾರೆ ಸೀರಿಯಲ್‌
ಕನ್ನಡ ಸುದ್ದಿ  /  ಮನರಂಜನೆ  /  ಜೈದೇವ್‌ ಮೋಸ ಬಹಿರಂಗ ಸನ್ನಿಹಿತ, ಹಣವಿರುವ ಕಾರನ್ನು ಗೌತಮ್‌ ಭೂಮಿಕಾ ಚೇಸಿಂಗ್‌; ಹೈಸ್ಪೀಡ್‌ನಲ್ಲಿದೆ ಅಮೃತಧಾರೆ ಸೀರಿಯಲ್‌

ಜೈದೇವ್‌ ಮೋಸ ಬಹಿರಂಗ ಸನ್ನಿಹಿತ, ಹಣವಿರುವ ಕಾರನ್ನು ಗೌತಮ್‌ ಭೂಮಿಕಾ ಚೇಸಿಂಗ್‌; ಹೈಸ್ಪೀಡ್‌ನಲ್ಲಿದೆ ಅಮೃತಧಾರೆ ಸೀರಿಯಲ್‌

Amruthadhaare serial Yesterday episode: ಅಮೃತಧಾರೆ ಧಾರವಾಹಿ ವೇಗ ಪಡೆದಿದೆ. ಗೌತಮ್‌ ಮತ್ತು ಭೂಮಿಕಾ ಹಣವಿರುವ ಕಾರನ್ನು ಜಿಪಿಎಸ್‌ ನೆರವಿನಿಂದ ಫಾಲೋ ಮಾಡುತ್ತಿದ್ದಾರೆ. ಭೂಮಿಕಾ ತನ್ನನ್ನು ಹೊಗಳಿರುವ ಕುರಿತು ಜೈದೇವ್‌ಗೆ ಸಂದೇಹ ಮೂಡಿದೆ.

ಜೈದೇವ್‌ ಮೋಸ ಬಹಿರಂಗ ಸನ್ನಿಹಿತ, ಹಣವಿರುವ ಕಾರನ್ನು ಗೌತಮ್‌ ಭೂಮಿಕಾ ಚೇಸಿಂಗ್‌
ಜೈದೇವ್‌ ಮೋಸ ಬಹಿರಂಗ ಸನ್ನಿಹಿತ, ಹಣವಿರುವ ಕಾರನ್ನು ಗೌತಮ್‌ ಭೂಮಿಕಾ ಚೇಸಿಂಗ್‌

Amruthadhaare serial Yesterday episode: ಅಮೃತಧಾರೆ ಧಾರಾವಾಹಿಯಲ್ಲಿ ಜೈದೇವ್‌ ಕುರಿತು ಭೂಮಿಕಾಗೆ ಸತ್ಯ ಗೊತ್ತಾಗಿದೆ. ಜೈದೇವ್‌ ಜತೆ ಮಲ್ಲಿ ಮಾತನಾಡುತ್ತ ಇರುವಾಗ ಅಲ್ಲಿಗೆ ಭೂಮಿಕಾ ಬರುತ್ತಾಳೆ. ಆಕೆಯ ಮನದಲ್ಲಿ ಕೆಂಚ ಹೇಳಿದ ಮಾತುಗಳೇ ಇರುತ್ತವೆ. ಮಲ್ಲಿಯಲ್ಲಿ ಮಗು ಹೊಟ್ಟೆಯಲ್ಲಿ ಕೈಕಾಲು ಅಲ್ಲಾಡಿಸುತ್ತ ಎಂದೆಲ್ಲ ಕೇಳುತ್ತಾನೆ. ಈ ಮೂಲಕ ಮಲ್ಲಿಯ ಪ್ರೀತಿಯ ಗಂಡನೆಂದು ನಾಟಕವಾಡುತ್ತಾನೆ. "ಜೈದೇವ್‌ ವಿಷಯದಲ್ಲಿ ಕೆಂಚ ಹೇಳಿದ್ದು ನಿಜವಾ? ಸತ್ಯ ತಿಳಿಯುವ ತನಕ ಸೈಲೆಂಟ್‌ ಆಗಿರೋದು ಒಳ್ಳೆಯದು" ಎಂದುಕೊಳ್ಳುತ್ತಾಳೆ. ಇದಾದ ಬಳಿಕ ಭೂಮಿಕಾ ಜೈದೇವ್‌ನ ಬಳಿ ಮಾತನಾಡುತ್ತಾಳೆ.

ಜೈದೇವ್‌ನನ್ನು ಹೊಗಳಿದ ಭೂಮಿಕಾ

"ನಿಮ್ಮ ಬದಲಾವಣೆ ಕುರಿತು ಖುಷಿಯಾಗಿದೆ. ನಿಮ್ಮ ಗುಡ್‌ವಿಲ್‌ ದಿನೇದಿನೇ ಜಾಸ್ತಿಯಾಗುತ್ತದೆ. ಆಸ್ಪತ್ರೆಗೆ ಇವತ್ತು ಕರೆದುಕೊಂಡು ಹೋಗಬೇಕಲ್ವ" ಎಂದು ಭೂಮಿಕಾ ಕೇಳಿದಾಗ "ಹೌದು, ಈಗ ಕರೆದುಕೊಂಡು ಹೋಗುವೆ" ಎಂದು ಜೈದೇವ್‌ ಹೇಳುತ್ತಾನೆ. "ನಿಮ್ಮ ಜತೆ ಇದ್ದರೆ ಆಕೆಗೆ ಸೆಕ್ಯುರ್ಡ್‌ ಫೀಲ್‌ ಇರುತ್ತದೆ" ಎಂದು ಭೂಮಿಕಾ ಕೂಡ ಜೈದೇವ್‌ನ ಹೊಗಳುತ್ತಾಳೆ. ಭೂಮಿಕಾ ಹೋದ ಬಳಿಕ ಜೈದೇವ್‌ ಯೋಚನೆಗೆ ಬೀಳುತ್ತಾನೆ. ನನ್ನನ್ನು ಭೂಮಿಕಾ ಏಕೆ ಹೊಗಳುತ್ತಿದ್ದಾಳೆ ಎಂದುಕೊಳ್ಳುತ್ತಾನೆ.

ಇನ್ನೊಂದೆಡೆ ಮಂದಾಕಿನಿ ತನ್ನ ಸೊಸೆಯ ಬಗ್ಗೆ ಗೆಳತಿಯರ ಬಳಿ ಹೊಗಳುತ್ತಾಳೆ. "ಮಹಿಮಾ ಹೇಗೆ ಇದ್ದಾಳೆ, ಎಲ್ಲಾ ಇಲ್ಲಿ ನೀನೇ ಮಾಡಬೇಕು. ಇಲ್ಲಿ ಮನೆ ಕೆಲಸ ಎಲ್ಲಾ ಮಾಡ್ತಾಳ? ನಿನ್ನ ಸೊಸೆಗೆ ಏನೂ ಕೆಲಸ ಬರೋಲ್ವ?" ಎಂದೆಲ್ಲ ಗೆಳತಿಯರು ಹೇಳುತ್ತಾಳೆ. ಅಲ್ಲಿ ಅಪ್ಪಿ ಇರುತ್ತಾಳೆ. ಅಪ್ಪಿಗೆ ನಗು ಬರುತ್ತದೆ. "ನೀವೆಲ್ಲ ನನ್ನ ಸೊಸೆನ ತಪ್ಪು ತಿಳಿದುಕೊಂಡಿದ್ದೀರಿ. ನನ್ನ ಸೊಸೆಗೆ ಎಲ್ಲಾ ಕೆಲಸನೂ ಮಾಡಲು ಬರುತ್ತದೆ" ಎನ್ನುತ್ತಾಳೆ. "ಈಗಿನ ಕಾಲದ ಸೊಸೆಯರು ಹೇಗೆ ಇರ್ತಾರೆ, ನಮಗೆ ಗೊತ್ತಿಲ್ವ" ಎಂದು ಕೊಂಕು ನುಡಿಯುತ್ತಾರೆ. "ಹಾಗಾದರೆ ನಿನ್ನ ಸೊಸೆಗೆ ಒಂದು ಕಾಂಪಿಟೇಷನ್‌ ಇಡೋಣ. ಗೆಲ್ತಾಳ ನೋಡೋಣ" ಎನ್ನುತ್ತಾಳೆ. "ಅವಳು ತುಂಬಾ ಬಿಝಿ" ಎನ್ನುತ್ತಾಳೆ ಮಂದಾಕಿನಿ. ಸೊಸೆಯನ್ನು ವಹಿಸಿ ಮಂದಾಕಿನಿ ಎಷ್ಟು ಮಾತನಾಡಿದ್ರೂ ಆ ಮಹಿಳಾಮಣಿಯರು ಸಿದ್ಧರಿಲ್ಲ, "ಮಹಿಮಾ ಕಾಂಪಿಟೇಷನ್‌ಗೆ ಕರೆದುಕೊಂಡು ಬನ್ನಿ" ಎನ್ನುತ್ತಾರೆ.

ಕೆಂಚನ ಕಥೆ ಗೌತಮ್‌ಗೆ ತಿಳಿಸಿದ ಭೂಮಿಕಾ

ಮನೆಗೆ ಗೌತಮ್‌ ಬಂದಾಗ ಭೂಮಿಕಾ ಟೆನ್ಷನ್‌ನಲ್ಲಿ ಇರುತ್ತಾಳೆ. ಭೂಮಿಕಾ ಗೌತಮ್‌ಗೆ ಕೆಂಚನ ವಿಷಯ ಹೇಳುತ್ತಾಳೆ. "ಕೆಂಚನ ನಾನೇ ರಿಲೀಸ್‌ ಮಾಡಿದೆ" ಎಂದಾಗ ಗೌತಮ್‌ ಭಯಪಡುತ್ತಾನೆ. "ನಾವು ಅಂದುಕೊಂಡಂತೆ ಅವನು ಮಾಡಿಲ್ಲ. ಯಾರೋ ಸಪೋರ್ಟ್‌ ಮಾಡಿದ್ದರೆ ಎಂದು ಹೇಳಿದ್ದಾನೆ. ನಮ್ಮವರೇ ಇದಕ್ಕೆ ಕಾರಣ ಎಂದು ಹೇಳಿದ್ದಾನೆ. ಸೋ ಅವನನ್ನು ಭೇಟಿಯಾಗೋಣ" ಎಂದು ಹೇಳುತ್ತಾಳೆ. ಇವತ್ತೇ ಭೇಟಿಯಾಗೋಣ ಎಂದು ಭೂಮಿಕಾ ಹೇಳಿದಾಗ ಗೌತಮ್‌ ಭೂಮಿಕಾಳನ್ನು ಕರೆದುಕೊಂಡು ಹೋಗಲು ರೆಡಿಯಾಗುತ್ತಾನೆ. ಆ ಸಮಯದಲ್ಲಿ ಜೈದೇವ್‌ ಸಿಹಿ ತರುತ್ತಾನೆ. "ಮಗು ಚೆನ್ನಾಗಿದೆ ಎಂದು ಡಾಕ್ಟರ್‌ ಹೇಳಿದ್ರು. ಆ ಖುಷಿಗೆ ಸ್ವೀಟ್‌" ಎಂದು ಸಿಹಿ ನೀಡುತ್ತಾನೆ. "ಜೈದೇವ್‌ ಅವರೇ ಸಂಜೆ ಒಂದು ಸೆಲೆಬ್ರೆಷನ್‌ ಇದೆ. ಸರ್‌ಪ್ರೈಸ್‌ ಇದೆ. ಮನೆಯಲ್ಲಿ ನಿಮ್ಮ ಖುಷಿಗಾಗಿ ಪಾರ್ಟಿ" ಎಂದು ಭೂಮಿಕಾ ಹೇಳುತ್ತಾಳೆ. ಇದನ್ನು ಕೇಳಿ ಜೈದೇವ್‌ಗೆ ಅಚ್ಚರಿಯಾಗುತ್ತದೆ.

ಭೂಮಿಕಾ ನಿಮ್ಮ ಜತೆ ಎಷ್ಟು ವಿಶ್ವಾಸದಿಂದ ಮಾತನಾಡಿದ್ರು ಎಂದು ಮಲ್ಲಿ ಖುಷಿಯಿಂದ ಹೇಳುತ್ತಾಳೆ. ನನಗೂ ಖುಷಿಯಾಯ್ತು ಎಂದು ಮಲ್ಲಿಯ ಮುಂದೆ ಜೈದೇವ್‌ ಹೇಳುತ್ತಾನೆ. "ಎಲ್ಲಾ ಸರಿ, ಭೂಮಿಕಾ ಅನಿಸಿಕೊಂಡವಳು ನನ್ನ ಜತೆ ನೈಸ್‌ ಹೊಡಿತಾ ಇದ್ದಾಳೆ. ಯಾಕೋ ಗೊತ್ತಿಲ್ಲ, ಮನಸ್ಸಿನ ಮೂಲೆಯಲ್ಲಿ ಎಲ್ಲೋ ಡೇಂಜರ್ಸ್‌ ಗಂಟೆ ಹೊಡೀತಾ ಇದೆ" ಎಂದುಕೊಳ್ಳುತ್ತಾನೆ ಜೈದೇವ್‌.

ಹಣವಿರುವ ಕಾರನ್ನು ಹಿಂಬಾಲಿಸಿದ ಗೌತಮ್‌ ಭೂಮಿಕಾ

ಇನ್ನೊಂದೆಡೆ ಜೀವನ್‌ ಗೆಳೆಯ ಮಧು "ಕಾರಿಗೆ ಜಿಪಿಎಸ್‌ ಅಳವಡಿಸಿದ್ದೇನೆ" ಎಂದು ಮಾಹಿತಿ ನೀಡುತ್ತಾನೆ. ಭೂಮಿಕಾ ನಾವು ಈಗ ಗಾಡಿಯನ್ನು ವೈಟ್‌ ಫಾಲೋ ಮಾಡೋಣ ಎಂದು ಕರೆದುಕೊಂಡು ಹೋಗುತ್ತಾರೆ ಗೌತಮ್‌. ಒಂದು ಕಡೆ ಬೇರೆ ಕಂಪನಿಯ ಮ್ಯಾನೇಜರ್‌ ಕಾರಿನೊಂದಿಗೆ ಹೊರಡುತ್ತಾರೆ. ಇನ್ನೊಂದೆಡೆ ಆ ವಾಹನವನ್ನು ಫಾಲೋ ಮಾಡಲು ಗೌತಮ್‌ ಮುಂದಾಗುತ್ತಾರೆ.

ಮಂದಾಕಿನಿ ಮತ್ತು ಮಹಿಮಾ ಮಾತನಾಡುತ್ತ ಇದ್ದಾರೆ. ಜೀವನ್‌, ಅಪ್ಪಿ ಕೂಡ ಅಲ್ಲಿದ್ದಾರೆ. ಒಂದಿಷ್ಟು ಶಾಪಿಂಗ್‌ ಮತ್ತು ಇತರೆ ವಿಷಯಗಳ ಕುರಿತು ಮಾತನಾಡುತ್ತಾರೆ. ಆ ಸಮಯದಲ್ಲಿ ಅಪ್ಪಿ ಕೂಡ ಹೊಸ ಮಾಲ್‌ನ ಕುರಿತು ಹೊಗಳುತ್ತಾಳೆ. ನೀನ್ಯಾಕೆ ಆ ಮಾಲ್‌ಗೆ ಹೋಗಿದ್ದೆ. ಯಾವಾಗ ಹೋದೆ ಎಂದು ಜೀವನ್‌ ಕೇಳುತ್ತಾನೆ. ಇಲ್ಲ ಫ್ರೆಂಡ್ಸ್‌ ಹೇಳಿದ್ರು ಎಂದು ಅಪ್ಪಿ ತಪ್ಪಿಸುತ್ತಾಳೆ. "ಈಗ ಮಾಲ್‌ಗಳಲ್ಲಿ ಬರೀ ಲವರ್ಸ್‌ ಇರೋದು, ನಾನು ಅಲ್ಲಿಗೆ ಹೋಗೋಲ್ಲ" ಎನ್ನುತ್ತಾಳೆ. "ನೋಡು ನಮ್ಮ ಮಗಳು ಎಷ್ಟು ಒಳ್ಳೆಯವಳು" ಎಂದು ಮಂದಾಕಿನಿ ಹೇಳುತ್ತಾಳೆ. "ಇಂಥವರೇ ದೊಡ್ಡ ಬಾಂಬ್‌ ಹಾಕೋದು" ಎಂದು ತಮಾಷೆಗೆ ಜೀವನ್‌ ಹೇಳಿದಾಗ ಅಪ್ಪಿಗೆ ದಿಗಿಲಾಗುತ್ತದೆ.

ಬೇರೆ ಕಂಪನಿಯ ಮ್ಯಾನೇಜರ್‌ ಕಾಲ್‌ ಮಾಡಿ ಜೈದೇವ್‌ನಿಂದ ಹಣ ತಲುಪಿಸಬೇಕಾದ ಲೊಕೆಷನ್‌ ತಿಳಿಸುತ್ತಾನೆ. ನಮ್ಮ ಹಳೆಯ ಫ್ಯಾಕ್ಟರಿಗೆ ಬನ್ನಿ ಎಂದು ಹೇಳುತ್ತಾನೆ. ಇನ್ನೊಂದೆಡೆ ಭೂಮಿಕಾ ಮತ್ತು ಗೌತಮ್‌ ಕಾರಿನಲ್ಲಿ ಜಿಪಿಎಸ್‌ ಲೊಕೆಷನ್‌ ಫಾಲೋ ಮಾಡುತ್ತಾರೆ. ಮತ್ತೊಂದೆಡೆ ಜೈದೇವ್‌ ಮತ್ತು ಮನೆಹಾಳ ಮಾವ ಖುಷಿಯಿಂದ ಮಾತನಾಡುತ್ತ ಇದ್ದಾರೆ. ತನಗೆ ದೊರಕುವ ಹಣದ ಕುರಿತು ಮಾತನಾಡುತ್ತಾನೆ. ಅಮೌಂಟ್‌ ಕ್ಯಾಷ್‌ ರೂಪದಲ್ಲಿ ಕೊಡುವ ಕಾರಣ ಸಿಕ್ಕಿ ಬೀಳುವ ಛಾನ್ಸೇ ಇಲ್ಲ ಎಂದು ಜೈದೇವ್‌ ಹೇಳುತ್ತಾನೆ. "ಭೂಮಿಕಾ ನನ್ನ ಜತೆ ತುಂಬಾ ನಾಜೂಕಾಗಿ ಮಾತನಾಡ್ತಾ ಇದ್ದಾಳೆ. ನನಗೆ ಭಯವಾಗ್ತ ಇದೆ. ಯಾಕೆ ಇಷ್ಟೊಂದು ನೈಸ್‌ ಆಗಿದ್ದಾಳೆ" ಎಂದು ಹೇಳುತ್ತಾನೆ. ಸೀರಿಯಲ್‌ ಮುಂದುವರೆಯುತ್ತದೆ.

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)

ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)

ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)

ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)

ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)

ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)

ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)

ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)

ರಣವ್‌: ಜೈದೇವ್‌

ಚಂದನ್‌: ಅಶ್ವಿನಿ

ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)

ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)

Whats_app_banner