ಜೈದೇವ್‌ ಸುಳ್ಳಿನ ಕಥೆ ಕೇಳಿ ಗೌತಮ್‌ ನಂಬಿಬಿಟ್ರು, ಭೂಮಿಕಾಳಿಗೆ ಗೊಂದಲ ಹೆಚ್ಚಾಯ್ತು; ಅಶ್ವಿನಿ ಮುಂದೆ ಅರುಣ್‌ ಹಣಕ್ಕಾಗಿ ನಾಟಕ- ಅಮೃತಧಾರೆ
ಕನ್ನಡ ಸುದ್ದಿ  /  ಮನರಂಜನೆ  /  ಜೈದೇವ್‌ ಸುಳ್ಳಿನ ಕಥೆ ಕೇಳಿ ಗೌತಮ್‌ ನಂಬಿಬಿಟ್ರು, ಭೂಮಿಕಾಳಿಗೆ ಗೊಂದಲ ಹೆಚ್ಚಾಯ್ತು; ಅಶ್ವಿನಿ ಮುಂದೆ ಅರುಣ್‌ ಹಣಕ್ಕಾಗಿ ನಾಟಕ- ಅಮೃತಧಾರೆ

ಜೈದೇವ್‌ ಸುಳ್ಳಿನ ಕಥೆ ಕೇಳಿ ಗೌತಮ್‌ ನಂಬಿಬಿಟ್ರು, ಭೂಮಿಕಾಳಿಗೆ ಗೊಂದಲ ಹೆಚ್ಚಾಯ್ತು; ಅಶ್ವಿನಿ ಮುಂದೆ ಅರುಣ್‌ ಹಣಕ್ಕಾಗಿ ನಾಟಕ- ಅಮೃತಧಾರೆ

Amruthadhaare serial Yesterday episode: ಜೈದೇವ್‌ ಕಥೆ ಇನ್ನೇನೂ ಎಲ್ಲರಿಗೂ ಗೊತ್ತಾಗುತ್ತದೆ ಎಂದುಕೊಂಡ ಸಂದರ್ಭದಲ್ಲಿ ಜೈದೇವ್‌ ಸುಳ್ಳಿನ ಕಥೆ ಹೇಳಿ ಎಲ್ಲರನ್ನೂ ನಂಬಿಸುತ್ತಾನೆ. ಇಷ್ಟು ಮಾತ್ರವಲ್ಲದೆ ಝೀ ಕನ್ನಡ ವಾಹಿನಿಯ ಅಮೃತಧಾರೆ ಸೀರಿಯಲ್‌ನ ನಿನ್ನೆಯ ಎಪಿಸೋಡ್‌ನಲ್ಲಿ ಸಾಕಷ್ಟು ವಿದ್ಯಮಾನಗಳು ನಡೆದಿವೆ.

ಜೈದೇವ್‌ ಸುಳ್ಳಿನ ಕಥೆ ಕೇಳಿ ಗೌತಮ್‌ ನಂಬಿಬಿಟ್ರು, ಭೂಮಿಕಾಳಿಗೆ ಗೊಂದಲ ಹೆಚ್ಚಾಯ್ತು
ಜೈದೇವ್‌ ಸುಳ್ಳಿನ ಕಥೆ ಕೇಳಿ ಗೌತಮ್‌ ನಂಬಿಬಿಟ್ರು, ಭೂಮಿಕಾಳಿಗೆ ಗೊಂದಲ ಹೆಚ್ಚಾಯ್ತು

Amruthadhaare serial Yesterday episode: ಗೌತಮ್‌ ಮತ್ತು ಭೂಮಿಕಾ ಹಣದ ಕಾರನ್ನು ಫಾಲೋ ಮಾಡಿ ನಿಗದಿತ ಸ್ಥಳದಲ್ಲಿ ಹೋಗಿ ಹುಡುಕಿದಾಗ ಅಲ್ಲಿ ಜೈದೇವ್‌ ಕಾಣಿಸುತ್ತಾನೆ. ಆತನನ್ನು ವಿಚಾರಣೆ ಮಾಡುವ ಸಂದರ್ಭದಲ್ಲಿ ಆತ ಸುಳ್ಳಿನ ಕಥೆಯೊಂದನ್ನು ಹೇಳುತ್ತಾನೆ. "ನನಗೆ ಮೂಲವೊಂದರಿಂದ ಯಾರು ಮಾಹಿತಿ ಲೀಕ್‌ ಮಾಡಿದ್ದು, ಅವರಿಗೆ ಇವತ್ತು ಹಣ ಕಳುಹಿಸುತ್ತಾರೆ ಎಂದು ತಿಳಿಯಿತು. ಅದಕ್ಕೆ ನಾನು ಆ ಸ್ಥಳಕ್ಕೆ ಹೋಗಿದ್ದೆ" ಎಂದು ಸುಳ್ಳು ಹೇಳುತ್ತಾನೆ. "ಅದೇ ಟೈಮ್‌ಗೆ ನಂಗೆ ಅಲ್ಲಿ ಕೆಂಚ ಅಲ್ಲಿದ್ದ. ನಿಮಗೊಂದು ಸತ್ಯ ಹೇಳುವೆ. ಗೌತಮ್‌ ಮತ್ತು ಭೂಮಿಕಾರನ್ನು ನಾನೇ ಕಿಡ್ನ್ಯಾಪ್‌ ಮಾಡಿದ್ದು ಎಂದು ಹೇಳಿದ. ಗೌತಮ್‌ ಬಂದು ಸೇವ್‌ ಮಾಡಿದ್ದ. ನಾನು ಆ ಕುಟುಂಬವನ್ನು ಏನೂ ಮಾಡಿದ್ರೂ ಬಿಡೋಲ್ಲ ಎಂದ" ಎಂದು ಸುಳ್ಳು ಹೇಳುತ್ತಾನೆ. "ನಾನು ಸತ್ಯ ಹೇಳ್ತಿನಿ. ನಿಮಗೆ ದುಡ್ಡು ಕೊಡ್ತಿನಿ ಎಂದು ಹೇಳಿದ್ದ. ಅದಕೂ ಒಪ್ಪಿಕೊಂಡಿದ್ದೆ" ಎಂದು ಹೇಳುತ್ತಾನೆ. "ಕೆಂಚನ ಅಲ್ಲಿಗೆ ಬರೋಕ್ಕೆ ಹೇಳಿದ್ದು ನಾನೇ" ಎಂದು ಭೂಮಿಕಾ ಹೇಳುತ್ತಾಳೆ. ಈ ಮೂಲಕ ಜೈದೇವ್‌ನ ಸುಳ್ಳನ್ನು ನಂಬಿ ಭೂಮಿಕಾ ನಿಜ ಹೇಳುತ್ತಾರೆ. ಈ ಮೂಲಕ ಜೈದೇವ್‌ ಸುಳ್ಳಿನ ಕಥೆ ಹೇಳಿ ಎಲ್ಲರನ್ನೂ ನಂಬಿಸ್ತಾನೆ. "ಯಾರನ್ನೂ ನಂಬುವುದು, ಯಾರನ್ನೂ ಬಿಡುವುದು ಒಂದು ಅರ್ಥ ಆಗ್ತಾ ಇಲ್ಲ" ಎಂದುಕೊಳ್ಳುತ್ತಾಳೆ ಭೂಮಿಕಾ.

ಭೂಮಿಕಾಳಿಗೆ ಗೊಂದಲ ಹೆಚ್ಚಾಯ್ತು

ಭೂಮಿಕಾ ಮತ್ತು ಗೌತಮ್‌ ಮಾತನಾಡುತ್ತಾರೆ. "ಜೈದೇವ್‌, ಅಶ್ವಿನಿ, ಮಹಿಮಾ, ಪಾರ್ಥ ಎಲ್ಲರನ್ನೂ ತುಂಬಾ ಇಷ್ಟಪಡುವೆ. ಇವರಲ್ಲಿ ಯಾರಿಗಾದರೂ ಏನಾದರೂ ಆದ್ರೆ ನನಗೆ ತಡೆಯಲು ಆಗೋದಿಲ್ಲ" ಎಂದು ಗೌತಮ್‌ ಹೇಳುತ್ತಾನೆ. "ಜೈದೇವ್‌ ಕೈ ನೋವು ಬೇಗ ಕಡಿಮೆಯಾಗುತ್ತದೆ. ವರಿ ಮಾಡಬೇಡಿ" ಎಂದು ಭೂಮಿಕಾ ಹೇಳುತ್ತಾಳೆ. "ನಾನು ಮೊನ್ನೆ ಆತನಿಗೆ ಒಂದು ಮಾತು ಹೇಳಿದ್ದಕ್ಕೆ ಆತ ಕಂಪನಿ ಕುರಿತು ಕಾಳಜಿ ವಹಿಸಿದ. ಏನು ಹೇಳಬೇಕು ಎಂದು ಗೊತ್ತಾಗ್ತಾ ಇಲ್ಲ" ಎಂದೆಲ್ಲ ಮಾತನಾಡುತ್ತಾರೆ.

ಜೈದೇವ್‌ನ ಕೈ ಗಾಯ ನೋಡಿ ಮಲ್ಲಿ ಅಳುತ್ತಾಳೆ. ಆತ ಸಮಧಾನ ಹೇಳುತ್ತಾನೆ. ಅಣ್ಣ ಕಷ್ಟದಲ್ಲಿರುವಾಗ ತಮ್ಮನಾಗಿ ನಾನು ನೆರವು ನೀಡಬೇಕಲ್ವ ಎಂದು ಜೈದೇವ್‌ ನಾಟಕ ಮುಂದುವರೆಸುತ್ತಾನೆ.

"ಮತ್ತೆ ಕನ್‌ಫ್ಯೂಷನ್‌, ಕೆಂಚ ನಿಜನಾ, ಜೈದೇವ್‌ ನಿಜನಾ" "ಜೈದೇವ್‌ ಹೇಳಿದ್ದು ನಿಜ ಎನಿಸುತ್ತದೆ. ಕೆಂಚ ಸುಳ್ಳು ಹೇಳಿದ್ನ. ಜೈದೇವ್‌ನ ಅರ್ಥ ಮಾಡಿಕೊಳ್ಳುವುದರಲ್ಲಿ ನಾನು ಎಡವಿದ್ನ" ಎಂದು ಭೂಮಿಕಾ ಯೋಚನೆಗೆ ಬೀಳುತ್ತಾಳೆ. ಆ ಸಮಯದಲ್ಲಿ ಆನಂದ್‌ ಬಂದ್‌ ಗೌತಮ್‌ನ ಭೇಟಿಯಾಗಿ ಬಯ್ಯುತ್ತಾನೆ. ಇಷ್ಟು ದೊಡ್ಡ ವಿಷಯಕ್ಕೆ ನೀನು ಅತ್ತಿಗೆ ಇಬ್ಬರೇ ಹೋಗಿದ್ದೀರಾ? ಏನಾದರೂ ಹೆಚ್ಚು ಕಮ್ಮಿ ಆಗಿದ್ರೆ ಏನು ಗತಿ" ಎಂದೆಲ್ಲ ಕಾಳಜಿಯಿಂದ ಗದರಿಸುತ್ತಾನೆ. "ನನಗೊಂದು ಮಾತು ಹೇಳಬೇಕೆಂದು ಅನಿಸಿಲ್ವ ನಿನಗೆ. ಎಷ್ಟು ದೊಡ್ಡ ರಿಸ್ಕ್‌ ತೆಗೆದುಕೊಂಡಿದ್ದೀಯಾ ಗೊತ್ತಾ ನಿನಗೆ" ಎಂದೆಲ್ಲ ಬೇಸರದಲ್ಲಿ ಹೇಳುತ್ತಾನೆ.

"ನೋಡು ಆನಂದ ನನ್ನ ಕಂಪನಿಯ ಕುರಿತು ನಾನು ತುಂಬಾ ಪೊಸೆಸಿವ್‌. ಇದನ್ನು ಬೆಳೆಸಿದರ ಹಿಂದೆ ನನ್ನ, ನನ್ನ ತಂದೆಯ ಶ್ರಮ ಇದೆ. ನನ್ನ ಕಂಪನಿಗೆ ಅದರದ್ದೇ ಆದ ಗೌರವ, ಘನತೆ ಇದೆ. ಅದಕ್ಕೆ ಯಾರೋ ಮಸಿ ಬಳಿಯೋ ಪ್ರಯತ್ನ ಮಾಡಿದ್ದಾರೆ. ಹಣ, ಟರ್ನೊವರ್‌ ಯಾವುದೂ ಮುಖ್ಯವಲ್ಲ. ನನ್ನ ಕಂಪನಿಯ ಕುರಿತು ಒಂದು ಗುಡ್‌ವಿಲ್‌ ಇದೆಯಲ್ವ. ಅದು ಮುಖ್ಯ" ಎಂದು ಗೌತಮ್‌ ಹೇಳುತ್ತಾನೆ. "ನಮ್ಮ ಕಂಪನಿಗೊಂದು ಕಪ್ಪು ಚುಕ್ಕಿ ಬಿದ್ದಿದೆ. ನನಗೆ ರಿಸ್ಕ್‌ ಯಾವುದೂ ತಲೆಗೆ ಬಂದಿಲ್ಲ ಕಣೋ" ಎನ್ನುತ್ತಾನೆ. "ನನಗೂ ಒಂದು ಮಾತು ಹೇಳಬೇಕಿತ್ತು ಕಣೋ. ನಾನು ಪೊಲೀಸರನ್ನು ಕರೆದುಕೊಂಡು ಸ್ಪಾಟ್‌ಗೆ ಬರ್ತಾ ಇದ್ದೆ. ಅದು ಬಿಟ್ಟು ಒಬ್ಬನೇ ಹೋಗಿಬಿಟ್ಟಿದ್ದೀಯ. ದೊಡ್ಡ ಹೀರೋ ಅಂದುಕೊಂಡಿದ್ಯಾ. ಅತ್ತಿಗೆನ ಬೇರೆ ಕರೆದುಕೊಂಡು ಹೋಗಿದ್ಯ. ಪ್ರಾಣಕ್ಕೆ ಏನಾದರೂ ಅಪಾಯವಾಗಿದ್ರೆ" ಎಂದು ಆನಂದ್‌ ಹೇಳುತ್ತಾನೆ. "ನಿಮಗಾಗಿ ನಾವು ಇಬ್ರೂ ಇದ್ದೇವೆ. ಇನ್ನು ಮುಂದೆ ಹಾಗೆಲ್ಲ ಮಾಡಬೇಡ" ಎಂದು ಆನಂದ್‌ ಹೇಳುತ್ತಾನೆ. "ಕ್ಷಮಿಸು ಕಣೋ" ಎಂದು ಗೌತಮ್‌ ಹೇಳುತ್ತಾನೆ. "ಎಲ್ಲಾ ಸಮಸ್ಯೆಗೂ ಒಂದು ಸೊಲ್ಯುಷನ್‌ ಇದ್ದೇ ಇರುತ್ತದೆ" ಎಂದು ಆನಂದ್‌ ಸಮಧಾನ ಮಾಡುತ್ತಾನೆ.

ಭೂಮಿಕಾ ಕೆಂಚನಿಗೆ ಕಾಲ್‌ ಮಾಡುತ್ತಾಳೆ. ಆ ಕಾಲ್‌ ಪಿಕ್‌ ಮಾಡುವುದಿಲ್ಲ. ಕೆಂಚ ಸುಳ್ಳು ಹೇಳಿದ್ನ ಎಂದು ಯೋಚನೆ ಮಾಡುತ್ತಿರುವಾಗ ಅಲ್ಲಿಗೆ ಆನಂದ್‌ ಬರುತ್ತಾನೆ. ಭೂಮಿಕಾಳಿಗೂ ಕಾಳಜಿಯಿಂದ ಬಯ್ಯುತ್ತಾನೆ. "ನಮಗೆ ಹೇಳದೇ ಕೇಳದೇ ಕಳ್ಳನ ಹಿಡಿಯಲು ಹೋಗಿದ್ರಲ್ಲ. ಯಾಕೆ ಹೋಗಿದ್ರಿ. ಅವನಂತೂ ಹೇಳಿಲ್ಲ. ನೀವಾದ್ರೂ ಹೇಳಬೇಕಿತ್ತು. ಸಿಕ್ಕಾಪಟ್ಟೆ ಬೇಜಾರಾಯ್ತು" ಎಂದು ಆನಂದ್‌ ಹೇಳುತ್ತಾನೆ. "ಅವಸರದಲ್ಲಿ ಹೋದೆವು" ಎಂದು ಭೂಮಿಕಾ ಹೇಳುತ್ತಾಳೆ.

ಅಶ್ವಿನಿ ಮುಂದೆ ಅರುಣ್‌ ಹಣಕ್ಕಾಗಿ ನಾಟಕ

ಅಶ್ವಿನಿ ಮತ್ತು ಆಕೆಯ ಗಂಡ ಮಾತನಾಡುತ್ತಾರೆ. ಈಗ ಷೇರುಪೇಟೆ ಎಂಟು ಪರ್ಸೆಂಟ್‌ ಬಿದ್ದಿದೆ. ಈಗ ಹಣ ಹಾಕಿದ್ರೆ ಖಂಡಿತಾ ಲಾಭ ರಿಕವರಿ ಆಗ್ತಾ ಇತ್ತು ಎಂದು ಆತ ಹೇಳುತ್ತಾನೆ. ಇಷ್ಟು ಕಡಿಮೆ ಸಮಯದಲ್ಲಿ ನಿನಗೆ ಪ್ರಾಫಿಟ್‌ ಬರುತ್ತೆ ಎಂದಾದ್ರೆ ನಾನು ದುಡ್ಡು ಅರೆಂಜ್‌ ಮಾಡ್ತಿನಿ ಎಂದು ಅಶ್ವಿನಿ ಭರವಸೆ ನೀಡುತ್ತಾಳೆ. ಆತನ ವಂಚನೆ, ಮೋಸ ಈಕೆಗೆ ಅರ್ಥ ಆಗುವುದಿಲ್ಲ.

ಇನ್ನೊಂದೆಡೆ ಮಂದಾಕಿನಿಗೆ ಆಕೆಯ ಗೆಳತಿಯರು ಕಾಲ್‌ ಮಾಡುತ್ತಾರೆ. ನಿನ್ನ ಸೊಸೆ ಕಾಂಪಿಟೇಷನ್‌ಗೆ ಒಪ್ಪಿಕೊಂಡಿದ್ದಾಳ ಎಂದು ಕೇಳುತ್ತಾಳೆ. "ಅವಳು ಒಪ್ಪಿಕೊಂಡಿದ್ದಾಳೆ. ಆದರೆ, ನಾಳೆ ಬಿಝಿ ಇದ್ದಾಳೆ" ಎಂದು ಹೇಳುತ್ತಾಳೆ. "ನಿನ್ನ ಸೊಸೆಗೆ ಏನೂ ಬರೋದಿಲ್ಲ. ನಾಳೆ ನೀನು ಬರಬೇಕು. ನಿನ್ನ ಸೊಸೆ ಅಡುಗೆ ಮಾಡಲೇಬೇಕು" ಎಂದು ಹೇಳುತ್ತಾಳೆ. "ನಿನ್ನ ಸೊಸೆಗೆ ಏನೂ ಬರೋದಿಲ್ಲ ಎಂದು ಒಪ್ಪಿಕೊಂಡು ಬಿಡು" ಎಂದೆಲ್ಲ ಹೇಳುತ್ತಾರೆ. ಇನ್ನೊಂದೆಡೆ ಶಕುಂತಲಾದೇವಿ ಮತ್ತು ಮನೆಹಾಳ ಮಾವನ ಮುಂದೆ ಜೈದೇವ್‌ ನಡೆದ ಘಟನೆ ಏನೆಂದು ಹೇಳುತ್ತಾನೆ. ಸೀರಿಯಲ್‌ ಮುಂದುವರೆಯುತ್ತದೆ.

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)

ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)

ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)

ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)

ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)

ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)

ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)

ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)

ರಣವ್‌: ಜೈದೇವ್‌

ಚಂದನ್‌: ಅಶ್ವಿನಿ

ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)

ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)

Whats_app_banner