Aparna Funeral: ಸ್ಮಾರ್ತ ಬ್ರಾಹ್ಮಣ ಸಂಪ್ರದಾಯದ ಪ್ರಕಾರ ಪಂಚಭೂತಗಳಲ್ಲಿ ನಿರೂಪಕಿ ಅಪರ್ಣಾ ಲೀನ
ಕನ್ನಡ ಸುದ್ದಿ  /  ಮನರಂಜನೆ  /  Aparna Funeral: ಸ್ಮಾರ್ತ ಬ್ರಾಹ್ಮಣ ಸಂಪ್ರದಾಯದ ಪ್ರಕಾರ ಪಂಚಭೂತಗಳಲ್ಲಿ ನಿರೂಪಕಿ ಅಪರ್ಣಾ ಲೀನ

Aparna Funeral: ಸ್ಮಾರ್ತ ಬ್ರಾಹ್ಮಣ ಸಂಪ್ರದಾಯದ ಪ್ರಕಾರ ಪಂಚಭೂತಗಳಲ್ಲಿ ನಿರೂಪಕಿ ಅಪರ್ಣಾ ಲೀನ

ನಟಿ, ನಿರೂಪಕಿ ಅಪರ್ಣಾ ಅವರ ಅಂತ್ಯಸಂಸ್ಕಾರ ಬೆಂಗಳೂರಿನ ಬನಶಂಕರಿ ವಿದ್ಯುತ್‌ ಚಿತಾಗಾರದಲ್ಲಿ ನೆರವೇರಿತು. ಸ್ಮಾರ್ತ ಬ್ರಾಹ್ಮಣ ಸಂಪ್ರದಾಯದ ಪ್ರಕಾರ ಅಪರ್ಣ ಅವರ ಅಂತ್ಯಸಂಸ್ಕಾರ ನಡೆಯಿತು.

Aparna Funeral: ಸ್ಮಾರ್ತ ಬ್ರಾಹ್ಮಣ ಸಂಪ್ರದಾಯದ ಪ್ರಕಾರ ಪಂಚಭೂತಗಳಲ್ಲಿ ನಿರೂಪಕಿ ಅಪರ್ಣಾ ಲೀನ
Aparna Funeral: ಸ್ಮಾರ್ತ ಬ್ರಾಹ್ಮಣ ಸಂಪ್ರದಾಯದ ಪ್ರಕಾರ ಪಂಚಭೂತಗಳಲ್ಲಿ ನಿರೂಪಕಿ ಅಪರ್ಣಾ ಲೀನ

Aparna Funeral: ಶ್ವಾಸಕೋಶದ ಕ್ಯಾನ್ಸರ್‌ನಿಂದ ಅಸುನೀಗಿದ ನಟಿ, ನಿರೂಪಕಿ ಅಪರ್ಣಾ ಅವರ ಅಂತ್ಯಸಂಸ್ಕಾರ ಬೆಂಗಳೂರಿನ ಬನಶಂಕರಿ ವಿದ್ಯುತ್‌ ಚಿತಾಗಾರದಲ್ಲಿ ಶುಕ್ರವಾರ (ಜುಲೈ 12) ನೆರವೇರಿತು. ಸ್ಮಾರ್ತ ಬ್ರಾಹ್ಮಣ ಸಂಪ್ರದಾಯದ ಪ್ರಕಾರ ಅಪರ್ಣ ಅವರ ಅಂತ್ಯಸಂಸ್ಕಾರ ನಡೆಯಿತು.

ಬನಶಂಕರಿಯ ಮನೆ ಬಳಿ ಅಪರ್ಣಾ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಚಿತ್ರೋದ್ಯಮದ ಆಪ್ತರು, ಕಿರುತೆರೆ, ರಂಗಭೂಮಿಯ ಕಲಾವಿದರು ಅಪರ್ಣಾ ಅವರ ಅಂತಿಮ ದರ್ಶನ ಪಡೆದು, ಕಣ್ಣೀರಾದರು.

ಇದೇ ವೇಳೆ ಅವರ ಆಪ್ತ ಸ್ನೇಹಿತೆಯರು ಯಾವ ಮೋಹನ ಮುರಳಿ ಕರೆಯಿತೋ ಹಾಡಿಗೆ ಧ್ವನಿಯಾಗಿ ಬೀಳ್ಕೊಟ್ಟರು. ತೆರೆದ ವಾಹನದ ಮೂಲಕ ಶವವನ್ನು ಬನಶಂಕರಿ ಚಿತಾಗಾರಕ್ಕೆ ಕೊಂಡೊಯ್ದು, ಬ್ರಾಹ್ಮಣ ಸಂಪ್ರದಾಯದಂತೆ ಅಂತಿಮ ಪೂಜಾ ವಿಧಾನ ನೆರವೇರಿಸಿ, ಅಗ್ನಿ ಸ್ಪರ್ಷ ಮಾಡಲಾಯಿತು.

ಇದಕ್ಕೂ ಮುನ್ನ ಪೊಲೀಸ್‌ ಇಲಾಖೆಯಿಂದ ಗೌರವ ನಮನ ಸಲ್ಲಿಸಲಾಯಿತು. ಮೂರು ಸುತ್ತು ಕುಶಾಲತೋಪು ಸಿಡಿಸಿ ಖಾಕಿ ಪಡೆಯಿಂದ ಅಪರ್ಣಾ ಅವರಿಗೆ ಗೌರವ ಅರ್ಪಿಸಲಾಯಿತು. ಕುಟುಂಬದವರು, ಸಿನಿಮಾ ಆಪ್ತರು ಅಂತಿಮ ಸಂಸ್ಕಾರದ ವೇಳೆ ಇದ್ದರು.

ಅಪರ್ಣಾ ವಸ್ತಾರೆ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಸೇರಿದಂತೆ ಸಿನಿಮಾ, ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ. ಸ್ಪಷ್ಟವಾಗಿ, ನಿರರ್ಗಳವಾಗಿ ಕನ್ನಡ ಮಾತನಾಡುತ್ತಿದ್ದ ಅಪರ್ಣಾ, ಕನ್ನಡಿಗರಿಗೆ ಮಾದರಿ ಎನಿಸಿಕೊಂಡಿದ್ದರು.

ಅಪರ್ಣಾ ಅವರಿಗೆ 58 ವರ್ಷ ಆದರೂ ಯುವತಿಯರೂ ನಾಚುವಂತೆ ನೋಡಲು ಸುಂದರಿಯಾಗಿದ್ದರು. ಅಚ್ಚ ಕನ್ನಡತಿ, ಖ್ಯಾತ ನಿರೂಪಕಿ, ನಟಿ ಅಪರ್ಣಾ ಅವರು ಬೆಂಗಳೂರು ಮೆಟ್ರೋಗೆ ಕೂಡಾ ದನಿಯಾಗಿದ್ದರು.

ಮಕ್ಕಳಿಲ್ಲದ ಕೊರಗೂ ಕಾಡಿತ್ತು ಅಪರ್ಣಾಗೆ

ಅಪರ್ಣಾ ಮೂಲತಃ ಚಿಕ್ಕಮಗಳೂರಿನ ಪಂಚನಹಳ್ಳಿಯವರು. ತಂದೆ ಕೆ. ಎಸ್.‌ ನಾರಾಯಣಸ್ವಾಮಿ ಸಿನಿಮಾ ಪತ್ರಕರ್ತ. ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಅಪರ್ಣಾ, ಚಿಕ್ಕಂದಿನಿಂದಲೇ ಓದಿನಲ್ಲಿ ಮುಂದು. ಶಾಲಾ ದಿನಗಳಲ್ಲಿಯೇ ವೇದಿಕೆ ಕಾರ್ಯಕ್ರಮಗಳನ್ನು ನಿಭಾಯಿಸುತ್ತಿದ್ದರು. ನಿರೂಪಣೆಯ ಜವಾಬ್ದಾರಿ ಹೊತ್ತಿದ್ದರು. ಅಂದಿನ ಆ ರೂಢಿಯೇ ಅವರ ಅನ್ನಕ್ಕೆ ದಾರಿ ಮಾಡಿಕೊಟ್ಟಿತ್ತು. ತಂದೆಯ ನಿಧನದ ಬಳಿಕ ಬೆಂಗಳೂರಿನ ಮಲ್ಲೇಶ್ವರಕ್ಕೆ ಬಂದು ನೆಲೆನಿಂತರು. ಅದಾದ ಮೇಲೆ ನಾಗರಾಜ್‌ ವಸ್ತಾರೆ ಜತೆಗೆ ವಿವಾಹವೂ ಆಯ್ತು. ಆದರೆ, ಈ ಜೋಡಿಗೆ ಮಕ್ಕಳಾಗಿಲ್ಲ. ಆ ಕೊರಗೂ ಅಪರ್ಣಾ ಅವರನ್ನು ಕಾಡಿತ್ತು.

Whats_app_banner