ಗೋಪಿಲೋಲ ಚಿತ್ರದಲ್ಲಿ ಗಿಚ್ಚಿ ಗಿಲಿಗಿಲಿ, ನನ್ನಮ್ಮ ಸೂಪರ್‌ಸ್ಟಾರ್‌ ಶೋ ಖ್ಯಾತಿಯ ಜಾಹ್ನವಿ; ಕಿರುತೆರೆ ಜತೆಗೆ ಹಿರಿತೆರೆಯಲ್ಲೂ ಸಕ್ರಿಯ-sandalwood news anchor turned actress gicchi giligili fame jahnavi acted gopilola movie second song released mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಗೋಪಿಲೋಲ ಚಿತ್ರದಲ್ಲಿ ಗಿಚ್ಚಿ ಗಿಲಿಗಿಲಿ, ನನ್ನಮ್ಮ ಸೂಪರ್‌ಸ್ಟಾರ್‌ ಶೋ ಖ್ಯಾತಿಯ ಜಾಹ್ನವಿ; ಕಿರುತೆರೆ ಜತೆಗೆ ಹಿರಿತೆರೆಯಲ್ಲೂ ಸಕ್ರಿಯ

ಗೋಪಿಲೋಲ ಚಿತ್ರದಲ್ಲಿ ಗಿಚ್ಚಿ ಗಿಲಿಗಿಲಿ, ನನ್ನಮ್ಮ ಸೂಪರ್‌ಸ್ಟಾರ್‌ ಶೋ ಖ್ಯಾತಿಯ ಜಾಹ್ನವಿ; ಕಿರುತೆರೆ ಜತೆಗೆ ಹಿರಿತೆರೆಯಲ್ಲೂ ಸಕ್ರಿಯ

ಕನ್ನಡದಲ್ಲಿ ಛಲಗಾರ, ಸರ್ಕಾರಿ ಕೆಲಸ ದೇವರ ಕೆಲಸ, ಮನಸ್ಸಿನಾಟ, ಬಂಗಾರದ ಮಕ್ಕಳು, ಮರಾಠಿಯಲ್ಲಿ ಫೆಬ್ರವರಿ 14, ಮಿಷನ್ ಅಂಬ್ಯುಲೆನ್ಸ್ ಸಿನಿಮಾಗಳನ್ನು ನಿರ್ದೇಶಿಸಿದ್ದ ಆರ್ ರವೀಂದ್ರ ಈಗ ಗೋಪಿಲೋಲ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಎರಡನೇ ಹಾಡು ಬಿಡುಗಡೆ ಆಗಿದೆ.

ಗೋಪಿಲೋಲ ಚಿತ್ರದಲ್ಲಿ ಗಿಚ್ಚಿ ಗಿಲಿಗಿಲಿ, ನನ್ನಮ್ಮ ಸೂಪರ್‌ಸ್ಟಾರ್‌ ಖ್ಯಾತಿಯ ಜಾಹ್ನವಿ; ಕಿರುತೆರೆ ಜತೆಗೆ ಹಿರಿತೆರೆಯಲ್ಲೂ ಸಕ್ರಿಯ
ಗೋಪಿಲೋಲ ಚಿತ್ರದಲ್ಲಿ ಗಿಚ್ಚಿ ಗಿಲಿಗಿಲಿ, ನನ್ನಮ್ಮ ಸೂಪರ್‌ಸ್ಟಾರ್‌ ಖ್ಯಾತಿಯ ಜಾಹ್ನವಿ; ಕಿರುತೆರೆ ಜತೆಗೆ ಹಿರಿತೆರೆಯಲ್ಲೂ ಸಕ್ರಿಯ

Gopilola movie: ಕನ್ನಡ ಸುದ್ದಿವಾಹಿನಿಗಳಲ್ಲಿ ನಿರೂಪಕಿಯಾಗಿ ಗುರುತಿಸಿಕೊಂಡವರು ಜಾಹ್ನವಿ. ಸುದ್ದಿ ಆಂಕರಿಂಗ್‌ ಮೂಲಕವೇ ಗಿಚ್ಚಿ ಗಿಲಿಗಿಲಿ, ನನ್ನಮ್ಮ ಸೂಪರ್‌ಸ್ಟಾರ್‌ ಶೋ ಮೂಲಕ ಕನ್ನಡ ಕಿರುತೆರೆಯಲ್ಲಿಯೂ ಗಮನಸೆಳೆದಿದ್ದಾರೆ. ಇದೀಗ ಕಿರುತೆರೆಯ ಜತೆಗೆ ಸಿನಿಮಾರಂಗದಲ್ಲಿಯೂ ಸಕ್ರಿಯರಾಗಿದ್ದಾರೆ. ರೂಪೇಶ್‌ ಶೆಟ್ಟಿ ಜತೆ ಅಧಿಪತ್ರ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ನಡುವೆ ಮತ್ತೊಂದು ಸಿನಿಮಾ ಗೋಪಿಲೋಲ ಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಇದೀಗ ಇದೇ ಗೋಪಿಲೋಲ ಚಿತ್ರದ ಹಾಡು ಬಿಡುಗಡೆ ಆಗಿದೆ.

ಈ ಹಿಂದೆ ಕನ್ನಡದಲ್ಲಿ ಛಲಗಾರ, ಸರ್ಕಾರಿ ಕೆಲಸ ದೇವರ ಕೆಲಸ, ಮನಸ್ಸಿನಾಟ, ಬಂಗಾರದ ಮಕ್ಕಳು, ಮರಾಠಿಯಲ್ಲಿ ಫೆಬ್ರವರಿ 14, ಮಿಷನ್ ಅಂಬ್ಯುಲೆನ್ಸ್ ಸಿನಿಮಾಗಳನ್ನು ನಿರ್ದೇಶಿಸಿದ್ದ ಆರ್ ರವೀಂದ್ರ ಈಗ ಗೋಪಿಲೋಲ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಈ ಚಿತ್ರದ ಎರಡನೇ ಹಾಡು ಬಿಡುಗಡೆ ಕಾರ್ಯಕ್ರಮ ಇತ್ತೀಚೆಗಷ್ಟೇ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆಯಿತು. ಹಿರಿಯ ‌ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ನಿರ್ಮಾಪಕ ಉಮೇಶ್ ಬಣಕಾರ್ ನಿನ್ನೆ ನಿನ್ನೆ ನೆಚ್ಚಿಕೊಂಡೆ.. ಎಂಬ ಹಾಡನ್ನು ಅನಾವರಣ ಮಾಡಿ ತಂಡಕ್ಕೆ ಶುಭ ಕೋರಿದರು.

ರಾಜೇಂದ್ರ ಸಿಂಗ್ ಬಾಬು ಶುಭ ಹಾರೈಕೆ

ಒಂದು ಸಾಂಗ್ ನಾವು ನೋಡುತ್ತವೆ. ಆದರೆ ಆ ಹಾಡಿನ ಹಿಂದೆ ಎಷ್ಟು ಕೆಲಸ ಮಾಡಿರುತ್ತಾರೆ ಎಂದರೆ ಮೇಕಪ್, ಪ್ರೊಡಕ್ಷನ್, ಪ್ರೊಡಕ್ಷನ್ ಮ್ಯಾನೇಜರ್, ಕಾಸ್ಟ್ಯೂಮ್ ಡಿಸೈನ್.. ಈ ರೀತಿ ಹಲವರ ಪ್ರಯತ್ನ ಇರುತ್ತದೆ. ಈ ಹಾಡನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಲೋಕೇಷನ್, ನಟನೆ ಓವರ್ ಆಗಿ ಮಾಡದೇ ಹಾಡಿಗೆ ಎಷ್ಟು ಬೇಕೋ‌ ಅಷ್ಟೂ ಮಾಡಿದ್ದಾರೆ. ನಿರ್ದೇಶಕರು, ಕೊರಿಯೋಗ್ರಫರ್ ಎಲ್ಲರೂ ಅದ್ಭುತ ಕೆಲಸ ಮಾಡಿದ್ದಾರೆ. ಎಲ್ಲಿಯೂ ಹೊಸಬರು ಎನ್ನುವಂತೆ ಕಾಣುವುದಿಲ್ಲ. ಇವತ್ತಿನ ದಿನಗಳಲ್ಲಿ ಮೊದಲಿನ ಮ್ಯೂಸಿಕ್ ಅಂದಿನ ಮ್ಯೂಸಿಕ್ ವ್ಯತ್ಯಾಸ ಇದೆ. ಇಂಡಿಯನ್ ಸಿನಿಮಾಗಳಲ್ಲಿ ಹಾಡುಗಳು ಇಲ್ಲದೇ ಇದ್ದರೆ ಸಿನಿಮಾ ಪೂರ್ಣವಾಗಿ ಇರುವುದಿಲ್ಲ ಎಂದು ರಾಜೇಂದ್ರ ಸಿಂಗ್ ಬಾಬು ತಿಳಿಸಿದರು.

ನಿರ್ಮಾಪಕರಾದ ಎಸ್.ಆರ್. ಸನತ್ ಕುಮಾರ್ ಮಾತನಾಡಿ, ಇದು ನಮ್ಮ ನಾಲ್ಕನೇ ಸಿನಿಮಾ. ನಮಗೆ ಸಿನಿಮಾ ಫ್ಯಾಷನ್. ಪುನೀತ್ ಸರ್ ಬಳಿ ಹೋಗಿ ಈ ಕಥೆ ಹೇಳಿದರು. ನಾನು ಮಾಡುತ್ತೇನೆ. ಮೂರು ವರ್ಷ ಟೈಮ್ ಬೇಕು ಎಂದರು. ಇದೀಗ ಅವರಿಗೆ ಇಷ್ಟವಾದ ಸಿನಿಮಾ ಸಿದ್ಧವಾಗಿದೆ. ಒಂದಕ್ಕಿಂತ ಒಂದು ಹಾಡುಗಳು ಚೆನ್ನಾಗಿ ಇವೆ ಎಂದರು.

ಪಾತ್ರವರ್ಗದಲ್ಲಿ ಯಾರೆಲ್ಲ ಇದ್ದಾರೆ?

ಸಹಜ ಕೃಷಿ ಹಾಗೂ ಪ್ರೇಮ ಕಥಾ ಹಂದರ ಹೊಂದಿರುವ ಗೋಪಿಲೋಲ ಸಿನಿಮಾಗೆ ಎಸ್.ಆರ್. ಸನತ್ ಕುಮಾರ್ ಬಂಡವಾಳ ಹೂಡಿದ್ದಾರೆ. ಸಹ ನಿರ್ಮಾಪಕರಾಗಿ ಚಿತ್ರದ ನಾಯಕ ಮಂಜುನಾಥ್ ಸಾಥ್ ಕೊಟ್ಟಿದ್ದಾರೆ‌. ಮಂಜುನಾಥ್ ಅವರಿಗೆ ಜೋಡಿಯಾಗಿ ನಿಮಿಷಾ ಕೆ ಚಂದ್ರ ಅಭಿನಯಿಸ್ತಿದ್ದು, ನಟಿ ಜಾಹ್ನವಿ, ಎಸ್.ನಾರಾಯಣ್, ಪದ್ಮಾ ವಾಸಂತಿ, ಕೆಂಪೇಗೌಡ, ಡಿಗ್ರಿ ನಾಗರಾಜ್, ರೇಖಾ ದಾಸ್, ನಾಗೇಶ್ ಯಾದವ್, ಸ್ವಾತಿ, ಹಿರಿಯ ನಿರ್ದೇಶಕ ಜೋಸೈಮನ್ ಸೇರಿದಂತೆ ತೆಲುಗು ನಟ ಸಪ್ತಗಿರಿ ತಾರಾಬಳಗದಲ್ಲಿದ್ದಾರೆ.

ಹಾಡಿಗೆ ಜಯಂತ್‌ ಕಾಯ್ಕಿಣಿ ಸಾಹಿತ್ಯ

ನಿನ್ನೆ ನಿನ್ನೆ ನೆಚ್ಚಿಕೊಂಡೆ ಎಂಬ ಹಾಡಿಗೆ ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದು, ಅನುರಾಧ ಭಟ್ ಹಾಗೂ ರಾಜೇಶ್ ಕೃಷ್ಣನ್ ಧ್ವನಿಯಾಗಿದ್ದು, ಮಿದುನ್ ಅಸೋಕನ್ ಚೆನ್ನೈ ಟ್ಯೂನ್ ಹಾಕಿದ್ದಾರೆ. ನಾಯಕ ಮಂಜುನಾಥ್ ಅರಸು ನಾಯಕಿ ನಿಮಿಷಾ ಕೆ ಚಂದ್ರ ಮೆಲೋಡಿ ಗೀತೆಗೆ ಹೆಜ್ಜೆ ಹಾಕಿದ್ದಾರೆ. ಗೋಪಿಲೋಲ ಸಿನಿಮಾಗೆ ಕೇಶವಚಂದ್ರ ಚಿತ್ರಕಥೆ ಸಂಭಾಷಣೆ ಬರೆದಿದ್ದು, ಕೆಎಂ ಪ್ರಕಾಶ್ ಸಂಕಲನ, ಮಿದುನ್ ಅಶೋಕನ್ ಚೆನ್ನೈ ಸಂಗೀತ, ರಾಕೇಶ್ ಆಚಾರ್ಯ ಹಿನ್ನೆಲೆ ಸಂಗೀತ, ಸೂರ್ಯಕಾಂತ್ ಎಚ್ ಕ್ಯಾಮೆರಾ ವರ್ಕ್, ಥ್ರಿಲ್ಲರ್ ಮಂಜು, ಜಾನಿ ಮಾಸ್ಟರ್ ಸಾಹಸ ನಿರ್ದೇಶನ ಚಿತ್ರಕ್ಕಿದೆ.