28 ತಿಂಗಳ ನರದೌರ್ಬಲ್ಯ ಪೀಡಿತ ಹೆಣ್ಣು ಹುಲಿಮರಿ ದತ್ತು ಪಡೆದ ಪ್ರಾಣಿ ಪ್ರಿಯೆ, ನಟಿ ಸಂಯುಕ್ತಾ ಹೊರನಾಡ್
ಕನ್ನಡ ಸುದ್ದಿ  /  ಮನರಂಜನೆ  /  28 ತಿಂಗಳ ನರದೌರ್ಬಲ್ಯ ಪೀಡಿತ ಹೆಣ್ಣು ಹುಲಿಮರಿ ದತ್ತು ಪಡೆದ ಪ್ರಾಣಿ ಪ್ರಿಯೆ, ನಟಿ ಸಂಯುಕ್ತಾ ಹೊರನಾಡ್

28 ತಿಂಗಳ ನರದೌರ್ಬಲ್ಯ ಪೀಡಿತ ಹೆಣ್ಣು ಹುಲಿಮರಿ ದತ್ತು ಪಡೆದ ಪ್ರಾಣಿ ಪ್ರಿಯೆ, ನಟಿ ಸಂಯುಕ್ತಾ ಹೊರನಾಡ್

Samyukta Hornad Adopts Tiger: 28 ತಿಂಗಳ ಸಿಂಚನ ಎಂಬ ಹೆಣ್ಣು ಹುಲಿ‌ ಮರಿಯನ್ನು ನಟಿ ಸಂಯುಕ್ತಾ ಹೊರನಾಡ್‌ ದತ್ತು ಪಡೆದಿದ್ದಾರೆ. ಈ ಹುಲಿ ನರದೌರ್ಬಲ್ಯ ಸಮಸ್ಯೆ ಎದುರಿಸುತ್ತಿರುವುದರಿಂದ ಕಾಡಿನಲ್ಲಿ ಸ್ವಾತಂತ್ರ್ಯವಾಗಿ ವಾಸಿಸಲು ಆಗದ ಹಿನ್ನೆಲೆಯಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಂರಕ್ಷಣಾ ಕೇಂದ್ರದಲ್ಲಿ ಆರೈಕೆ ಮಾಡಲಾಗುತ್ತಿದೆ.

ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿನ 28 ತಿಂಗಳ ಹೆಣ್ಣು ಹುಲಿಮರಿಯನ್ನು ನಟಿ ಸಂಯುಕ್ತಾ ಹೊರನಾಡ್‌ ದತ್ತು ಪಡೆದಿದ್ದಾರೆ.
ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿನ 28 ತಿಂಗಳ ಹೆಣ್ಣು ಹುಲಿಮರಿಯನ್ನು ನಟಿ ಸಂಯುಕ್ತಾ ಹೊರನಾಡ್‌ ದತ್ತು ಪಡೆದಿದ್ದಾರೆ.

Samyukta Hornad: ಸಿನಿಮಾ‌ ನಟನೆ ಹೊರತಾಗಿ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ನಟಿ ಸಂಯುಕ್ತಾ ಹೊರನಾಡು, ಇದೀಗ ಮತ್ತೊಂದು ಮೆಚ್ಚುವ ಕೆಲಸಕ್ಕೆ ಕೈ ಹಾಕಿದ್ದಾರೆ. ಪ್ರಾಣ ಅನಿಮಲ್ ಫೌಂಡೇಶನ್ ಅಡಿಯಲ್ಲಿ ಪ್ರಾಣಿಗಳ ರಕ್ಷಣೆಗೆ ಅಂಬುಲೆನ್ಸ್ ಸೇವೆ ಒದಗಿಸುವ ಮೂಲಕ ಪ್ರಾಣಿ ಪ್ರಿಯರ ಮೆಚ್ಚುಗೆ ಪಡೆದ ಈ ನಟಿ, ಪ್ರಾಣಿ ಪ್ರಿಯೆ ಕೂಡ ಹೌದು. ನಾಯಿ, ಮೊಲ ಎಂದರೆ ಸಂಯುಕ್ತಾಗೆ ಎಲ್ಲಿಲ್ಲದ ಪ್ರೀತಿ. ಇಂತಿಪ್ಪ ಸಂಯುಕ್ತ ಹೊರನಾಡು ತಮ್ಮದೇ ಪ್ರಾಣ ಹಾಗೂ ಟೆಕೆಯಾನ್ ಸಂಸ್ಥೆ ಸಹಯೋಗದಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಎರಡು ವರ್ಷದ ಹುಲಿ ಮರಿಯೊಂದನ್ನು ದತ್ತು ಪಡೆದಿದ್ದಾರೆ.

28 ತಿಂಗಳ ಸಿಂಚನ ಎಂಬ ಹೆಣ್ಣು ಹುಲಿ‌ ಮರಿಯನ್ನು ಸಂಯುಕ್ತಾ ದತ್ತು ಪಡೆದಿದ್ದಾರೆ. ಇದು ನರದೌರ್ಬಲ್ಯ ಸಮಸ್ಯೆ ಎದುರಿಸುತ್ತಿರುವುದರಿಂದ ಕಾಡಿನಲ್ಲಿ ಸ್ವಾತಂತ್ರ್ಯವಾಗಿ ವಾಸಿಸಲು ಕಷ್ಟ ಸಾಧ್ಯವಾಗಿರುವುದರಿಂದ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸಂರಕ್ಷಣಾ ಕೇಂದ್ರ ಕಾಳಜಿ ವಹಿಸಲಾಗುತ್ತಿದೆ. ದತ್ತು ಸ್ವೀಕೃತಿಯಲ್ಲಿ ಅದರ ದಿನನಿತ್ಯದ ಆಹಾರ, ನಿರ್ವಹಣೆ ಮತ್ತು ಪಶು ಚಿಕಿತ್ಸಾವನ್ನು ಭರಿಸಲಾಗುತ್ತದೆ.

ಈ ದತ್ತು ಸ್ವೀಕಾರದ ವೇಳೆ ಟೆಕೆಯಾನ್ ಸಂಸ್ಥೆ ಮುಖ್ಯಸ್ಥ ರಾಣಾ ರೊಬಿಲ್ಡ್ ಮಾತನಾಡಿದ್ದಾರೆ, ಪ್ರಾಣ ಅನಿಮಲ್ ಫೌಂಡೇಶನ್ ಹಾಗೂ ಬನ್ನೇರುಘಟ್ಟ ಜೈವಿಕ‌ ಉದ್ಯಾನದ ಅಧಿಕಾರಿಗಳಿಗೆ ಈ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು ಎಂದರು. ಟೆಕೆಯಾನ್ ಜೊತೆ ಕೈ ಜೋಡಿಸಿರುವುದು ಖುಷಿ ಕೊಟ್ಟಿದೆ. ತೊಂದರೆಗೆ ಒಳಗಾದ ಪ್ರಾಣಿಗಳನ್ನು ದತ್ತು ಸ್ವೀಕರಿಸದಕ್ಕೆ ಟೆಕೆಯಾನ್ ಗೆ ಧನ್ಯವಾದ ಎಂದರು ಸಂಯುಕ್ತ ಹೊರನಾಡು.

ಉಪ ಅರಣ್ಯಾಧಿಕಾರಿ ಎವಿ ಸೂರ್ಯಸೆನ್ ಮಾತನಾಡಿ, ಡೈಮ್ಯಾಂಡ್ ಕ್ಲಾಸ್ ವಿಭಾಗದಲ್ಲಿ ಟೆಕೆಯಾನ್ ಮತ್ತು ಪ್ರಾಣ ಸಂಸ್ಥೆ ಅತಿ ಹೆಚ್ಚು ವೆಚ್ಚದಲ್ಲಿ ಪ್ರಾಣಿಗಳನ್ನು ದತ್ತು ಪಡೆದಿದೆ. ಅವರ ಕೆಲಸ ಇತರರಿಗೂ ಮಾದರಿ ಎಂದು ತಿಳಿಸಿದರು. ಟೆಕೆಯಾನ್ ಹಾಗೂ ಪ್ರಾಣ ಸಂಸ್ಥೆ ಜೊತೆಗೂಡಿ ದಿನದ 24 ಘಂಟೆ ಪ್ರಾಣಿಗಳ ರಕ್ಷಣೆಗೆ ಆಂಬ್ಯುಲೆನ್ಸ್ ಸೇವೆ ಒದಗಿಸಿದೆ. ಇದೂವರೆಗೆ 500 ಪ್ರಾಣಿಗಳನ್ನು ಈ ಸಂಸ್ಥೆ ರಕ್ಷಣೆ ಮಾಡಿದೆ. ಕನಕಪುರ ರಸ್ತೆಯಲ್ಲಿ ಟೆಕೆಯಾನ್ ಸಂಸ್ಥೆ ಪ್ರಾಣಿ ರಕ್ಷಣೆಗೆ ಪುನರ್ ವಸತಿ ಕೇಂದ್ರ ಸ್ಥಾಪಿಸಿಕೊಟ್ಟಿದೆ.

Whats_app_banner