ಕನ್ನಡ ಸುದ್ದಿ  /  ಮನರಂಜನೆ  /  Soundarya Jagadish: ಜೆಟ್‌ಲಾಗ್‌ ಪಬ್‌ ಮಾಲೀಕ, ಸ್ಯಾಂಡಲ್‌ವುಡ್‌ ಚಿತ್ರ ನಿರ್ಮಾಪಕ ಸೌಂದರ್ಯ ಜಗದೀಶ್‌ ಆತ್ಮಹತ್ಯೆ

Soundarya Jagadish: ಜೆಟ್‌ಲಾಗ್‌ ಪಬ್‌ ಮಾಲೀಕ, ಸ್ಯಾಂಡಲ್‌ವುಡ್‌ ಚಿತ್ರ ನಿರ್ಮಾಪಕ ಸೌಂದರ್ಯ ಜಗದೀಶ್‌ ಆತ್ಮಹತ್ಯೆ

ಸ್ಯಾಂಡಲ್‌ವುಡ್‌ ಚಿತ್ರ ನಿರ್ಮಾಪಕ, ಉದ್ಯಮಿ ಸೌಂದರ್ಯ ಜಗದೀಶ್‌ ನಿಧನರಾಗಿದ್ದಾರೆ. ಆರ್ಥಿಕ ನಷ್ಟದ ಹಿನ್ನೆಲೆಯಲ್ಲಿ ಮಹಾಲಕ್ಷ್ಮೀ ಲೇಔಟ್‌ನ ಮನೆಯಲ್ಲಿ ನೇಣಿಗೆ ಶರನಾಗಿದ್ದಾರೆ ಎನ್ನಲಾಗಿದೆ.

Soundarya Jagadish: ಜೆಟ್‌ಲಾಗ್‌ ಪಬ್‌ ಮಾಲೀಕ, ಸ್ಯಾಂಡಲ್‌ವುಡ್‌ ಚಿತ್ರ ನಿರ್ಮಾಪಕ ಸೌಂದರ್ಯ ಜಗದೀಶ್‌ ಆತ್ಮಹತ್ಯೆ
Soundarya Jagadish: ಜೆಟ್‌ಲಾಗ್‌ ಪಬ್‌ ಮಾಲೀಕ, ಸ್ಯಾಂಡಲ್‌ವುಡ್‌ ಚಿತ್ರ ನಿರ್ಮಾಪಕ ಸೌಂದರ್ಯ ಜಗದೀಶ್‌ ಆತ್ಮಹತ್ಯೆ

Soundarya Jagadish Death: ಕನ್ನಡದಲ್ಲಿ ಹತ್ತು ಹಲವು ಸಿನಿಮಾ ನಿರ್ಮಾಣ ಮಾಡಿದ್ದ ನಿರ್ಮಾಪಕ, ಉದ್ಯಮಿಯಾಗಿಯೂ ಗುರುತಿಸಿಕೊಂಡಿದ್ದ ಸೌಂದರ್ಯ ಜಗದೀಶ್‌ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ನಿರ್ಮಾಪಕನ ಈ ಸಾವಿಗೆ ಕುಟುಂಬದವರು, ಆಪ್ತರು ಮತ್ತು ಚಿತ್ರೋದ್ಯಮದ ಹಲವರು ಕಂಬನಿ ಮಿಡಿದಿದ್ದಾರೆ. ಅಷ್ಟಕ್ಕೂ ಈ ಆತ್ಮಹತ್ಯೆಗೆ ನಿಖರ ಕಾರಣ ಮಾತ್ರ ಇನ್ನೂ ತಿಳಿದು ಬಂದಿಲ್ಲ. ಮೃತರಿಗೆ ಪತ್ನಿ ರೇಖಾ, ಪುತ್ರ ಸ್ನೇಹಿತ್‌ ಮತ್ತು ಓರ್ವ ಮಗಳಿದ್ದಾಳೆ.

ಟ್ರೆಂಡಿಂಗ್​ ಸುದ್ದಿ

ನೇಣಿಗೆ ಶರಣಾದ ಹಿನ್ನೆಲೆಯಲ್ಲಿ ತಕ್ಷಣ ಅವರನ್ನು ರಾಜಾಜಿನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಅಷ್ಟರಲ್ಲಾಗಲೇ ಅವರು ನಿಧನರಾಗಿದ್ದರು. ಇತ್ತೀಚಿನ ಕೆಲ ವರ್ಷಗಳಿಂದ ಹಣಕಾಸಿನ ವಿಚಾರವಾಗಿ ಸೌಂದರ್ಯ ಜಗದೀಶ್‌ ಸಂಕಷ್ಟದಲ್ಲಿದ್ದರು. ಆರ್ಥಿಕವಾಗಿಯೂ ನಷ್ಟ ಅನುಭವಿಸಿದ್ದರು. ಸಾಲವೂ ವಿಪರೀತವಾಗಿದ್ದರಿಂದ ಈ ಆತ್ಮಹತ್ಯೆ ನಿರ್ಧಾರಕ್ಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಮಸ್ತ್‌ ಮಜಾ ಮಾಡಿ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ನಿರ್ಮಾಪಕರಾಗಿ ಬಂದ ಸೌಂದರ್ಯ ಜಗದೀಶ್‌, ಅದಾದ ಬಳಿಕ ಪುತ್ರನಿಗಾಗಿ ಅಪ್ಪು ಪಪ್ಪು ಚಿತ್ರ ನಿರ್ಮಿಸಿದ್ದರು. ಸ್ನೇಹಿತರು, ರಾಮ್‌ ಲೀಲಾ ಸೇರಿ ಹಲವು ಸಿನಿಮಾಗಳಿಗೆ ಬಂಡವಾಳ ಹೂಡಿದ್ದರು. ಈ ನಡುವೆ ಉದ್ಯಮದಲ್ಲೂ ತೊಡಗಿಸಿಕೊಂಡಿದ್ದರು. ಕೆಲ ತಿಂಗಳ ಹಿಂದಷ್ಟೇ ಕಾಟೇರ ಸಿನಿಮಾದ ತಡರಾತ್ರಿ ಪಾರ್ಟಿ ನಡೆದಿದ್ದೂ ಸಹ ಸೌಂದರ್ಯ ಜಗದೀಶ್‌ ಒಡೆತನದ ಪಬ್‌ ಮೇಲೆ. ಈ ಘಟನೆ ಬಳಿಕ ಕೆಲ ದಿನಗಳ ಕಾಲ ಜೆಟ್‌ಲಾಗ್‌ ಪಬ್‌ಗೆ ಬೀಗ ಜಡಿಯಲಾಗಿತ್ತು.

ತಡರಾತ್ರಿ ಪಾರ್ಟಿಗೆ ದಂಡ ತೆತ್ತಿದ್ದರು..

ಕಾಟೇರ ಸಿನಿಮಾದ ನೂರನೇ ದಿನದ ಸಂಭ್ರಮಾಚರಣೆಯ ಸಂದರ್ಭದಲ್ಲಿ ತಡರಾತ್ರಿ 3 ಗಂಟೆವರೆಗೂ ಪಾರ್ಟಿ ನಡೆದಿತ್ತು ಎಂಬ ದೂರಿನ ಮೇಲೆ ಹೊಟೇಲ್‌ ಮೇಲೆ ಕೇಸ್‌ ದಾಖಲಾಗಿತ್ತು. ಕಾಟೇರ ವಿಚಾರವಾಗಿಯೂ ಈ ಹೊಟೇಲ್‌ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ನಟ ದರ್ಶನ್‌, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಸೇರಿ ಹಲವರು ವಿರುದ್ಧ ಕೇಸ್‌ ದಾಖಲಾಗಿತ್ತು. ಇದೆಲ್ಲದರ ನಡುವೆ ಆರ್ಥಿಕವಾಗಿಯೂ ಸೌಂದರ್ಯ ಜಗದೀಶ್ ನಷ್ಟ ಅನುಭವಿಸಿದ್ದರು. ಸಾಲ ಮರುಪಾವತಿಗೆ ಬ್ಯಾಂಕ್‌ನವರಿಂದ ಮನೆ ಸೀಜ್‌ ಮಾಡಲಾಗಿತ್ತು. ಇದೆಲ್ಲದರಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ.

ಕಳೆದ ತಿಂಗಳಷ್ಟೇ ನೆರವೇರಿತ್ತು ಮಗಳ ಮದುವೆ

ಇತ್ತೀಚಿನ ದಿನಗಳಲ್ಲಿ ಸಿನಿಮಾ ನಿರ್ಮಾಣದಿಂದ ದೂರವೇ ಉಳಿದಿದ್ದರು, ಸ್ಯಾಂಡಲ್‌ವುಡ್‌ನ ಸಿನಿಮಾ ಮಂದಿಯ ಜತೆಗೆ ಅತ್ಯಾಪ್ತರಾಗಿ ಸೌಂದರ್ಯ ಜಗದೀಶ್‌ ಗುರುತಿಸಿಕೊಂಡಿದ್ದರು. ಕಳೆದ ತಿಂಗಳಷ್ಟೇ ಬೆಂಗಳೂರಿನ ಆರ್‌ಆರ್‌ ನಗರದ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ಮಗಳ ಮದುವೆ ನೆರವೇರಿಸಿದ್ದರು. ದರ್ಶನ್‌, ಅಭಿಷೇಕ್‌ ಅಂಬರೀಶ್‌ ಸೇರಿ ಸಾಕಷ್ಟು ಸಿನಿಮಾ ಆಪ್ತರು ಆಗಮಿಸಿ ನವ ಜೋಡಿಗೆ ಹರಸಿದ್ದರು.

 

 

IPL_Entry_Point