ಕನ್ನಡ ಸುದ್ದಿ  /  ಮನರಂಜನೆ  /  Friday Release: ಮಾಲಾಶ್ರೀ ನೈಟ್‌ ಕರ್ಫ್ಯೂ, ನೆನಪಿರಲಿ ಪ್ರೇಮ್‌ ನಟನೆಯ ಅಪ್ಪ ಐ ಲವ್‌ ಯು; ಈ ವಾರ ಚಿತ್ರಮಂದಿರಗಳಲ್ಲಿ 18 ಸಿನಿಮಾ ರಿಲೀಸ್‌

Friday Release: ಮಾಲಾಶ್ರೀ ನೈಟ್‌ ಕರ್ಫ್ಯೂ, ನೆನಪಿರಲಿ ಪ್ರೇಮ್‌ ನಟನೆಯ ಅಪ್ಪ ಐ ಲವ್‌ ಯು; ಈ ವಾರ ಚಿತ್ರಮಂದಿರಗಳಲ್ಲಿ 18 ಸಿನಿಮಾ ರಿಲೀಸ್‌

This week release movies in theaters: ಈ ವಾರ ಚಿತ್ರಮಂದಿರಗಳಲ್ಲಿ ಮಾಲಾಶ್ರೀ ನಟನೆಯ ನೈಟ್‌ ಕರ್ಫ್ಯೂ, ಪ್ರೇಮ್‌ ನಟನೆಯ ಅಪ್ಪಾ ಐ ಲವ್‌ ಯು, ಅಜಯ್‌ ದೇವಗನ್‌ ನಟನೆಯ ಮೈದಾನ್‌, ಬಡೇ ಮಿಯಾನ್‌ ಚೋಟೆ ಮಿಯಾನ್‌ ಸೇರಿದಂತೆ 18 ಸಿನಿಮಾಗಳು ಬಿಡುಗಡೆಯಾಗಲಿವೆ.

ಈ ವಾರ ಚಿತ್ರಮಂದಿರಗಳಲ್ಲಿ 18 ಸಿನಿಮಾಗಳು ಬಿಡುಗಡೆ
ಈ ವಾರ ಚಿತ್ರಮಂದಿರಗಳಲ್ಲಿ 18 ಸಿನಿಮಾಗಳು ಬಿಡುಗಡೆ

ಬೆಂಗಳೂರು: ಈ ವಾರ ಚಿತ್ರಮಂದಿರಗಳಲ್ಲಿ ಹಲವು ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಸಿನಿಮಾಗಳು ಬಿಡುಗಡೆಯಾಗಲಿವೆ. ಕನ್ನಡದಲ್ಲಿ ಮಾಲಾಶ್ರೀ, ರಂಜನಿ ರಾಘವನ್‌ ನಟನೆಯ ನೈಟ್‌ ಕರ್ಫ್ಯೂ ಸಿನಿಮಾ ಬಿಡುಗಡೆಯಾಗುತ್ತಿದೆ. ಪ್ರೇಮ್‌ ನಟನೆಯ ಅಪ್ಪಾ ಐ ಲವ್‌ ಯು ಸಿನಿಮಾ ಕೂಡ ನಾಳೆ ರಿಲೀಸ್‌ ಆಗಲಿದೆ. ಈ ಸಿನಿಮಾದಲ್ಲಿ ಪ್ರೇಮ್‌ಗೆ ಮಾನ್ವಿತಾ ಹೀರೋಯಿನ್‌. ರಘು ಶಿವಮೊಗ್ಗ, ಬಿ ಸುರೇಶ್‌ ನಟನೆಯ ಸ್ಕ್ಯಾಮ್‌ 1770 ಎಂಬ ಕನ್ನಡ ಸಿನಿಮಾ ಕೂಡ ಬಿಡುಗಡೆಯಾಗಲಿದೆ. ಹಿಂದಿಯಲ್ಲಿ ಅಜಯ್‌ ದೇವಗನ್‌, ಪ್ರಿಯಾಮಣಿ ನಟನೆಯ ಮೈದಾನ್‌ ಸಿನಿಮಾ ರಿಲೀಸ್‌ ಆಗುತ್ತಿದೆ. ಈಗಾಗಲೇ ಈ ವಾರ ಬಡೇ ಮಿಯಾನ್‌ ಚೋಟೆ ಮಿಯಾನ್‌ ರಿಲೀಸ್‌ ಆಗಿದೆ. ಅಜಯ್‌ ದೇವಗನ್‌ ಜತೆಗೆ ಟೈಗರ್‌ ಶ್ರಾಫ್‌, ಪೃಥ್ವಿರಾಜ್‌ ಸುಕುಮಾರನ್‌ ಈ ಚಿತ್ರದಲ್ಲಿದ್ದಾರೆ. ಇವಿಷ್ಟು ಮಾತ್ರವಲ್ಲದೆ ಇನ್ನೂ ಹತ್ತು ಹಲವು ಸಿನಿಮಾಗಳು ಥಿಯೇಟರ್‌ನಲ್ಲಿ ಈ ವಾರ ರಿಲೀಸ್‌ ಆಗುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಈ ಶುಕ್ರವಾರ ಬಿಡುಗಡೆಯಾಗುವ ಕನ್ನಡ ಸಿನಿಮಾಗಳು

ನೈಟ್‌ ಕರ್ಫ್ಯೂ

ಕನ್ನಡ ಚಿತ್ರರಂಗದ ಲೇಡಿ ಸೂಪರ್‌ಸ್ಟಾರ್‌ ಮಾಲಾಶ್ರೀ ನಟನೆಯ ನೈಟ್‌ ಕರ್ಫ್ಯೂ ಸಿನಿಮಾ ಈ ವಾರ ಅಂದರೆ ನಾಳೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಏಪ್ರಿಲ್‌ 12ರಂದು ರಿಲೀಸ್‌ ಆಗಲಿರುವ ಈ ಚಿತ್ರವು ಕನ್ನಡ ಮಾತ್ರವಲ್ಲದೆ ತೆಲುಗಿನಲ್ಲೂ ರಿಲೀಸ್‌ ಆಗಲಿದೆ. ಸೇನೆಯ ವೈದ್ಯೆಯ ಪಾತ್ರದಲ್ಲಿ ಮಾಲಾಶ್ರೀ ಕಾಣಿಸಿಕೊಂಡಿದ್ದಾರೆ.

ಅಪ್ಪ ಐ ಲವ್‌ ಯು

ನೆನಪಿರಲಿ ಪ್ರೇಮ್‌ ನಟನೆಯ ಅಪ್ಪ ಐ ಲವ್‌ ಯು ಸಿನಿಮಾ ಏಪ್ರಿಲ್‌ 12ರಂದು ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿದೆ. ಟಗರು ಚಿತ್ರದಲ್ಲಿ ನಟಿಸಿದ್ದ ಮಾನ್ವಿತಾ ಹರೀಶ್‌ ಈ ಚಿತ್ರದಲ್ಲಿ ಹೀರೋಯಿನ್‌ ಆಗಿ ನಟಿಸಿದ್ದಾರೆ. ಅಥರ್ವ್ ಆರ್ಯ 'ಅಪ್ಪಾ ಐ ಲವ್ ಯೂ' ಸಿನಿಮಾಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

ಸ್ಕ್ಯಾಮ್‌ 1770

ವಿಕಾಸ್‌ ಪುಷ್ಪಗಿರಿ ನಿರ್ದೇಶನದ ಸ್ಕ್ಯಾಮ್‌ 1770 ಸಿನಿಮಾ ಏಪ್ರಿಲ್‌ 12ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಶಿಕ್ಷಣ ವ್ಯವಸ್ಥೆಗೆ ಸಂಬಂಧಪಟ್ಟ ಸಿನಿಮಾ ಇದಾಗಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರದ ಖ್ಯಾತಿಯ ರಂಜನ್ ಅಂದರೆ ದಡ್ಡ ಪ್ರವೀಣ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ನಿಶ್ವಿತಾ ಇದ್ದಾರೆ. ಅವಿನಾಶ್, ಶ್ರೀನಿವಾಸಪ್ರಭು, ರಮೇಶ್ ಪಂಡಿತ್, ರಾಘು ಶಿವಮೊಗ್ಗ ಮುಂತಾದವರು ತಾರಾ ಬಳಗದಲ್ಲಿದ್ದಾರೆ.

ಮುಕ್ತ ಮನಸು

ಹೊಸಬರ ಮುಕ್ತ ಮನಸು ಎಂಬ ಸಿನಿಮಾ ಏಪ್ರಿಲ್‌ 12ರಂದು ಬಿಡುಗಡೆಯಾಗುತ್ತಿದೆ. ಆರ್‌ಸಿ ರಂಗಶೇಖರ್‌ ನಿರ್ದೇಶನದ ಈ ಚಿತ್ರದಲ್ಲಿ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ಸೀಸನ್‌ 5ರ ಸ್ಪರ್ಧಿ ಮೈಸೂರಿನ ಮೋಹನ್‌ ರಂಗನಾಥ್‌ ನಾಯಕರಗಿ ನಟಿಸಿದ್ದಾರೆ.

ಈ ವಾರ ಬಿಡುಗಡೆಯಾಗುವ ಬಾಲಿವುಡ್‌ ಸಿನಿಮಾಗಳು

- ಮೈದಾನ್‌: ಅಜಯ್‌ ದೇವಗನ್‌, ಪ್ರಿಯಾಮಣಿ ನಟನೆಯ ಈ ಸಿನಿಮಾ ಏಪ್ರಿಲ್‌ 10ರಂದು ರಿಲೀಸ್‌ ಆಗಿದೆ.

- ಬಡೇ ಮಿಯಾನ್‌ ಚೋಟೆ ಮಿಯಾನ್‌: ಇಂದು ಅಂದರೆ ಏಪ್ರಿಲ್‌ 11ರಂದು ಬಿಡುಗಡೆಯಾಗುತ್ತಿದೆ. ಅಕ್ಷಯ್‌ ಕುಮಾರ್‌, ಟೈಗರ್‌ ಶ್ರಾಫ್‌, ಪೃಥ್ವಿರಾಜ್‌ ಸುಕುಮಾರನ್‌, ಸೋನಾಕ್ಷಿ ಸಿನ್ಹಾ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

- ಮಸೂಮ್‌ ಕಾಟಿಲ್‌

- 30 ಹರ್ಸ್‌ ಸರ್ವೈವಲ್‌ ಗೌರೈಯಾ ಲೈವ್‌

- ಅಮಿನಾ

- ಡಿಟೆಕ್ಟೀವ್‌ ನೈಸಾ

ತೆಲುಗು ಸಿನಿಮಾಗಳು

ರುದ್ರ ರುಪಾಯ

ಮೆರ್ಸಿ ಕಿಲ್ಲಿಂಗ್‌

ಗೀತಾಂಜಲಿ ಮಲ್ಲಿ ವಚ್ಚಿನಂಡಿ

ಶ್ರೀರಂಗ ನೀತುಲು

ಲವ್‌ ಗುರು

ನೈಟ್‌ ಕರ್ಫ್ಯೂ (ತೆಲುಗು)

ತಮಿಳು ಸಿನಿಮಾಗಳು

ರೋಮಿಯೊ

ಡಿಯರ್‌

ಮಲಯಾಳಂ ಸಿನಿಮಾಗಳು

- ಮಾರಿವಿಲಿನ್ ಗೋಪುರಂಗಲ್

IPL_Entry_Point