ಆಷಾಢ ಮಾಸದಲ್ಲಿ ಬರೋ ಒಂದೇ ಒಂದು ಹಬ್ಬ, ಶಿವಣ್ಣನ ಅಭಿಮಾನಿಗಳಲ್ಲಿ ಸಡಗರ ಶುರು, ಯಾವಾಗ ಹಬ್ಬ? ಇಲ್ಲಿದೆ ಮಾಹಿತಿ
ಕನ್ನಡ ಸುದ್ದಿ  /  ಮನರಂಜನೆ  /  ಆಷಾಢ ಮಾಸದಲ್ಲಿ ಬರೋ ಒಂದೇ ಒಂದು ಹಬ್ಬ, ಶಿವಣ್ಣನ ಅಭಿಮಾನಿಗಳಲ್ಲಿ ಸಡಗರ ಶುರು, ಯಾವಾಗ ಹಬ್ಬ? ಇಲ್ಲಿದೆ ಮಾಹಿತಿ

ಆಷಾಢ ಮಾಸದಲ್ಲಿ ಬರೋ ಒಂದೇ ಒಂದು ಹಬ್ಬ, ಶಿವಣ್ಣನ ಅಭಿಮಾನಿಗಳಲ್ಲಿ ಸಡಗರ ಶುರು, ಯಾವಾಗ ಹಬ್ಬ? ಇಲ್ಲಿದೆ ಮಾಹಿತಿ

Shivarajkumar Birthday: ಕನ್ನಡ ಸಿನಿಮಾರಂಗದ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಅಭಿಮಾನಿಗಳು "ಆಷಾಢ ಮಾಸದಲ್ಲಿ ಬರೋ ಒಂದೇ ಒಂದು ಹಬ್ಬ, ಅದು ಶಿವರಾಜ್‌ ಕುಮಾರ್‌ ಹುಟ್ಟುಹಬ್ಬ" ಎಂದು ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಮಾಡುತ್ತಿದ್ದಾರೆ.

ಆಷಾಢ ಮಾಸದಲ್ಲಿ ಬರೋ ಒಂದೇ ಒಂದು ಹಬ್ಬ, ಶಿವಣ್ಣನ ಅಭಿಮಾನಿಗಳಲ್ಲಿ ಸಡಗರ ಶುರು, ಯಾವಾಗ ಹಬ್ಬ?
ಆಷಾಢ ಮಾಸದಲ್ಲಿ ಬರೋ ಒಂದೇ ಒಂದು ಹಬ್ಬ, ಶಿವಣ್ಣನ ಅಭಿಮಾನಿಗಳಲ್ಲಿ ಸಡಗರ ಶುರು, ಯಾವಾಗ ಹಬ್ಬ?

ಬೆಂಗಳೂರು: ಆಷಾಢ ಮಾಸ 2024ರಲ್ಲಿ ಹಲವು ಹಬ್ಬಗಳು, ಆಚರಣೆಗಳು ನಡೆಯುತ್ತವೆ. ಗುರು ಪೂರ್ಣಿಮೆ/ ವ್ಯಾಸ ಪೂರ್ಣಿಮೆ, ಚಾತುರ್ಮಾಸರಾಂಭ,ಕಾಮಿಕಾ ಏಕಾದಶಿ, ಕರ್ಕ ಸಂಕ್ರಮಣ ಇತ್ಯಾದಿಗಳು ನಡೆಯುತ್ತವೆ. ಇದೇ ಸಮಯದಲ್ಲಿ ಕನ್ನಡ ಸಿನಿಮಾರಂಗದ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಅಭಿಮಾನಿಗಳು "ಆಷಾಢ ಮಾಸದಲ್ಲಿ ಬರೋ ಒಂದೇ ಒಂದು ಹಬ್ಬ, ಅದು ಶಿವರಾಜ್‌ ಕುಮಾರ್‌ ಹುಟ್ಟುಹಬ್ಬ" ಎಂದು ಟ್ರೆಂಡ್‌ ಮಾಡುತ್ತಿದ್ದಾರೆ.

ಆಷಾಡ ಮಾಸದಲ್ಲಿ ಬರೋ ಒಂದೇ ಒಂದು ಹಬ್ಬ. ಅದು ನಮ್ಮ ಕಿಂಗ್‌ ಶಿವಣ್ಣನ ಹುಟ್ಟಿದ ಹಬ್ಬ. ಇನ್ನೂ 11 ದಿನಗಳು ಮಾತ್ರ ಬಾಕಿಉಳಿದಿವೆ. ಇದು ಬಾಸ್‌ ಹುಟ್ಟುಹಬ್ಬದ ತಿಂಗಳು. ಕಿಂಗ್‌ ಶಿವಣ್ಣನಿಗೆ ಜೈ ಎಂದೆಲ್ಲ ಸೋಷಿಯಲ್‌ ಮೀಡಿಯಾದಲ್ಲಿ ಫ್ಯಾನ್ಸ್‌ಗಳು ಹುಟ್ಟುಹಬ್ಬದ ಸಂಭ್ರಮದ ಪೋಸ್ಟ್‌ಗಳನ್ನು ಶುರು ಮಾಡಿದ್ದಾರೆ. "ಹುಟ್ಟುಹಬ್ಬದಂದು ಮುಂದಿನ ಸಿನಿಮಾದ ಕುರಿತು ಅಪ್‌ಡೇಟ್‌ ನೀಡುವಿರಿ ಎಂದು ಕಾಯುತ್ತಿದ್ದೇವೆ" ಎಂದೆಲ್ಲ ಫ್ಯಾನ್ಸ್‌ ನಿರೀಕ್ಷೆ ಹೊರಹಾಕಿದ್ದಾರೆ.

ಶಿವರಾಜ್‌ ಕುಮಾರ್‌ ಹುಟ್ಟುಹಬ್ಬ ಯಾವಾಗ?

ಕನ್ನಡದ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಹುಟ್ಟುಹಬ್ಬ ಜುಲೈ 12. ಇವರು 1962ರ ಜುಲೈ 12ರಂದು ಜನಿಸಿದರು. ಇವರ ಮೂಲ ಹೆಸರು ನಾಗರಾಜು ಶಿವ ಪುಟ್ಟಸ್ವಾಮಿ. ಕನ್ನಡದಲ್ಲಿ 125ಕ್ಕೂ ಹೆಚ್ಚು ಸಿನಿಮಾ ಮಾಡಿರುವ ಶಿವಣ್ಣನಿಗೆ 61 ವರ್ಷ ವಯಸ್ಸು. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಸಿನಿಮಾಗಳಲ್ಲಿಯೂ ನಟಿಸಿ ಪ್ಯಾನ್‌ ಇಂಡಿಯಾ ಅಭಿಮಾನಿಗಳನ್ನು ಹೊಂದಿದ್ದಾರೆ.

ಶಿವರಾಜ್‌ ಕುಮಾರ್‌ ಅವರು ಟಗರು, ಮುಫ್ತಿ, ಸಂತೆಯಲ್ಲಿ ನಿಂತ ಕಬೀರ, ವಜ್ರಕಾಯ, ಭಜರಂಗಿ, ಜೋಗಿ, ತಮಸ್ಸು, ಎಕೆ 47, ನಮ್ಮೂರ ಮಂದಾರ ಹೂವೆ, ಓಂ ಸೇರಿದಂತೆ ನೂರೈವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾಗಳಲ್ಲಿ ಓಂ, ಎಕೆ 47, ತಮಸ್ಸು ಸಿನಿಮಾಗಳಿಗೆ ಫಿಲ್ಮ್‌ಫೇರ್‌ ಅವಾರ್ಡ್‌ ಸೌತ್‌ ದೊರಕಿದೆ. ಇದೇ ರೀತಿ ಜೋಗಿ, ಭಜರಂಗಿ, ವಜ್ರಕಾಯ, ಸಂತೆಯಲ್ಲಿ ನಿಂತ ಕಬೀರ ಮುಫ್ತಿ, ಟಗರು ಸಿನಿಮಾಗಳು ಫಿಲ್ಮ್‌ ಫೇರ್‌ ಅವಾರ್ಡ್‌ ಸೌತ್‌ಗೆ ನಾಮಿನೇಟ್‌ ಆಗಿದ್ದವು. ಓಂ, ಹೃದಯ ಹೃದಯ, ಚಿಗುರಿದ ಕನಸು, ಜೋಗಿ ಸಿನಿಮಾಗಳಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ದೊರಕಿವೆ.

1974ರಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣ ಸಿನಿಮಾದಲ್ಲಿ ಬಾಲ ಕಲಾವಿದ ಆಗಿ ಸಿನಿ ಜರ್ನಿ ಆರಂಭಿಸಿದ್ದ ಶಿವಣ್ಣನಿಗೆ ಈಗ 61 ವರ್ಷ. ಆದರೆ, ಯುವ ನಟರು ನಾಚುವಂತೆ ಅಮೋಘ ನಟನೆ ಮೂಲಕ ಎಲ್ಲರನ್ನೂ ಸೆಳೆಯುತ್ತಿದ್ದಾರೆ. ಇವರಿಗೆ ಕರ್ನಾಟಕ ಮಾತ್ರವಲ್ಲದೆ ಟಾಲಿವುಡ್‌, ಕಾಲಿವುಡ್‌ನಿಂದಲೂ ಬೇಡಿಕೆಯಿದೆ. ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಶಿವಣ್ಣನ ಹುಟ್ಟುಹಬ್ಬವನ್ನು ಸಡಗರದಿಂದ ಆಚರಿಸಲು ಫ್ಯಾನ್ಸ್‌ ಸಿದ್ಧತೆ ನಡೆಸುತ್ತಿದ್ದಾರೆ.

ಶಿವರಾಜ್‌ ಕುಮಾರ್‌ ಮುಂಬರುವ ಸಿನಿಮಾಗಳು

ಇತ್ತೀಚೆಗೆ ಶಿವರಾಜ್‌ ಕುಮಾರ್‌ ನಟನೆಯ ಪ್ರೊಡಕ್ಷನ್‌ ನಂಬರ್‌ 1 (ಇನ್ನೂ ಹೆಸರಿಡದ ಚಿತ್ರ) ಕುರಿತು ತೆಲುಗು ನಿರ್ದೇಶಕ ಕಾರ್ತಿಕ್‌ ಅದ್ವೈತ್‌ ಅವರು ಅಪ್‌ಡೇಟ್‌ ನೀಡಿದ್ದರು. ಶಿವರಾಜ್‌ ಕುಮಾರ್‌ ನಟನೆಯ ಭೈರತಿ ರಣಗಲ್‌ ಸಿನಿಮಾ ಇದೇ ಆಗಸ್ಟ್‌ 15ರಂದು ಬಿಡುಗಡೆಯಾಗಲಿದೆ. ಈ ಸಿನಿಮಾ ಬಿಡುಗಡೆ ವಿಳಂಬವಾಗುವ ಸೂಚನೆಯೂ ಇದೆ. ಡಾಲಿ ಧನಂಜಯ್‌ ಮತ್ತು ಶಿವಣ್ಣ ನಟನಯೆ ಉತ್ತರಕಾಂಡ ಸಿನಿಮಾವೂ ಈ ವರ್ಷ ಬಿಡುಗಡೆಯಾಗಲಿದೆ.

Whats_app_banner