ಕನ್ನಡ ಸುದ್ದಿ  /  ಮನರಂಜನೆ  /  ಆಶಿಕಾ ರಂಗನಾಥ್‌ O2 ಸಿನಿಮಾಕ್ಕೆ ಪೈರಸಿ ಕಾಟ, ಒಟಿಟಿಯಲ್ಲಿ ಬಿಡುಗಡೆಯಾದ ಗಂಟೆಯಲ್ಲೇ ಆನ್‌ಲೈನ್‌ನಲ್ಲಿ ಲೀಕ್‌

ಆಶಿಕಾ ರಂಗನಾಥ್‌ O2 ಸಿನಿಮಾಕ್ಕೆ ಪೈರಸಿ ಕಾಟ, ಒಟಿಟಿಯಲ್ಲಿ ಬಿಡುಗಡೆಯಾದ ಗಂಟೆಯಲ್ಲೇ ಆನ್‌ಲೈನ್‌ನಲ್ಲಿ ಲೀಕ್‌

O2 OTT Release: ಕನ್ನಡ ಒ2 ಸಿನಿಮಾ ಈಗಾಗಲೇ ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಬಿಡುಗಡೆಯಾಗಿದೆ. ರಾಘವ್‌ ನಾಯಕ್‌ ಮತ್ತು ಪ್ರಶಾಂತ್‌ ರಾಜ್‌ ನಿರ್ದೇಶನದ ಈ ಸಿನಿಮಾವನ್ನು ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರು ಪಿಆರ್‌ಕೆ ಪ್ರೊಡಕ್ಷನ್ಸ್‌ ಮೂಲಕ ನಿರ್ಮಿಸಿದ್ದಾರೆ.

ಆಶಿಕಾ ರಂಗನಾಥ್‌ O2 ಸಿನಿಮಾಕ್ಕೆ ಪೈರಸಿ ಕಾಟ, ಒಟಿಟಿಯಲ್ಲಿ ಬಿಡುಗಡೆಯಾದ ಗಂಟೆಯಲ್ಲೇ ಆನ್‌ಲೈನ್‌ನಲ್ಲಿ ಲೀಕ್‌
ಆಶಿಕಾ ರಂಗನಾಥ್‌ O2 ಸಿನಿಮಾಕ್ಕೆ ಪೈರಸಿ ಕಾಟ, ಒಟಿಟಿಯಲ್ಲಿ ಬಿಡುಗಡೆಯಾದ ಗಂಟೆಯಲ್ಲೇ ಆನ್‌ಲೈನ್‌ನಲ್ಲಿ ಲೀಕ್‌

O2 OTT Release: ಕನ್ನಡ ಒ2 ಸಿನಿಮಾ ಈಗಾಗಲೇ ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಬಿಡುಗಡೆಯಾಗಿದೆ. ರಾಘವ್‌ ನಾಯಕ್‌ ಮತ್ತು ಪ್ರಶಾಂತ್‌ ರಾಜ್‌ ನಿರ್ದೇಶನದ ಈ ಸಿನಿಮಾವನ್ನು ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರು ಪಿಆರ್‌ಕೆ ಪ್ರೊಡಕ್ಷನ್ಸ್‌ ಮೂಲಕ ನಿರ್ಮಿಸಿದ್ದಾರೆ. ಈ ಸಿನಿಮಾಕ್ಕೆ ವಿವನ್‌ ರಾಧಕೃಷ್ಣನ್‌ ಮ್ಯೂಸಿಕ್‌ ಮತ್ತು ನವೀನ್‌ ಕುಮಾರ್‌ ಎಸ್‌ ಅವರ ಸಿನಿಮಾಟ್ರೊಗ್ರಫಿ ಇರುವ ಈ ಸಿನಿಮಾ ಏಪ್ರಿಲ್‌ 19, 2024ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಅಮೆಜಾನ್‌ ಪ್ರೈಮ್‌ ವಿಡಿಯೋ ವೀಕ್ಷಕರ ಗಮನ ಸೆಳೆದ ಈ ಸಿನಿಮಾಕ್ಕೆ ಪೈರೇಸಿ ಹೊಡೆತ ನೀಡಿದೆ. ಒಟಿಟಿಯಲ್ಲಿ ಬಿಡುಗಡೆಯಾದ ಒಂದೇ ಗಂಟೆಯಲ್ಲಿ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ.

ಟ್ರೆಂಡಿಂಗ್​ ಸುದ್ದಿ

ಮೆಚ್ಚುಗೆ ಪಡೆದ ಆಶಿಕಾ ರಂಗನಾಥ್‌ ಸಿನಿಮಾ

ಕನ್ನಡದಲ್ಲಿ ಬಿಡುಗಡೆಯಾದ ಈ ಮೆಡಿಕಲ್‌ ಥ್ರಿಲ್ಲರ್‌ ಸಿನಿಮಾದ ಕುರಿತು ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆಶಿಕಾ ರಂಗನಾಥ್‌ ಈ ಸಿನಿಮಾದಲ್ಲಿ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಇದೇ ಶುಕ್ರವಾರ ಅಂದರೆ ಮೇ 31, 2024ರಂದು ಬಿಡುಗಡೆಯಾಗಿತ್ತು. ಸದ್ಯ ಈ ಸಿನಿಮಾ ಕನ್ನಡದಲ್ಲಿ ಮಾತ್ರ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. ತೆಲುಗು, ತಮಿಳು ಮತ್ತು ಮಲಯಾಳಂ ಆಡಿಯೋ ಬೆಂಬಲದೊಂದಿಗೆ ಈ ಸಿನಿಮಾ ರಿಲೀಸ್‌ ಆಗಲು ಸಿದ್ಧತೆ ನಡೆಯುತ್ತಿದೆ ಎನ್ನಲಾಗಿದೆ. ಆದರೆ, ಈ ಸಮಯದಲ್ಲಿ ಆನ್‌ಲೈನ್‌ನಲ್ಲಿ ಸೋರಿಕೆಯಾಗಿರುವುದು ಚಿತ್ರತಂಡಕ್ಕೆ ಹೊಸ ತಲೆನೋವಾಗಿದೆ.

ಒ2 ಸಿನಿಮಾದಲ್ಲಿ ಪ್ರತಿಭಾನ್ವಿತರ ದಂಡು

ಸ್ಯಾಂಡಲ್‌ವುಡ್‌ ಮೂಲದ ಆಶಿಕಾ ರಂಗನಾಥ್‌ ಟಾಲಿವುಡ್‌ನಲ್ಲಿ ಈಗ ಜನಪ್ರಿಯ ನಟಿ. ಇದೀಗ ಇವರು ಒ2 ಮೂಲಕ ಕನ್ನಡಕ್ಕೆ ವಾಪಸ್‌ ಬಂದಿದ್ದಾರೆ. ಈ ಸಿನಿಮಾದಲ್ಲಿ ಪ್ರತಿಭಾನ್ವಿತ ಕಲಾವಿದರ ದಂಡೇ ಇದೆ ಎಂದರೆ ತಪ್ಪಾಗದು. ಶ್ರದ್ಧಾ ಡಾಕ್ಟರ್‌ ಪಾತ್ರದಲ್ಲಿ ಆಶಿಕಾ ರಂಗನಾಥ್‌ ನಟಿಸಿದ್ದಾರೆ. ಶ್ರದ್ಧಾ ಡಾಕ್ಟರ್‌ನ ಬಾಲ್ಯದ ಪಾತ್ರದಲ್ಲಿ ಶ್ರಾವರಿ ನಟಿಸಿದ್ದಾಳೆ. ಪ್ರವೀಣ್‌ ತೇಜ್‌ ಅವರು ದೇವ್‌ ಪಾತ್ರದಲ್ಲಿ ನಟಿಸಿದ್ದಾರೆ. ರಾಘವ್‌ ನಾಯಕ್‌ ಓಶೋ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಕಾಶ್‌ ಬೆಳವಾಡಿ ಮತ್ತು ಶ್ರೀಧರ್‌ ಅವರು ಡಾಕ್ಟರ್‌ ಮೃತ್ಯುಂಜಯ್‌ ಮತ್ತು ಡಾಕ್ಟರ್‌ ರಾಯ್‌ ಪಾತ್ರದಲ್ಲಿ ನಟಿಸಿದ್ದಾರೆ. ಗೋಪಾಲ್‌ ಕೃಷ್ಣ ದೇಶ್‌ಪಾಂಡೆ ಅವರು ನಾಯಕ್‌ ಪಾತ್ರದಲ್ಲಿ ನಟಿಸಿದ್ದಾರೆ. ವೆಂಕಿಯಾಗಿ ಪುನೀತ್‌ ಬಿಎ ನಟಿಸಿದ್ದಾರೆ. ಅರುಣಾ ಬಾಲರಾಜ್‌, ಕೆಜಿ ಪವನ್‌, ಶರಣ್ಯ, ಸುಮಾ ರಾವ್‌ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಆನ್‌ಲೈನ್‌ ಲೀಕ್‌

ಸದ್ಯ ಟೆಲಿಗ್ರಾಂ ಸೇರಿದಂತೆ ವಿವಿಧೆಡೆ ಒ2 ಸಿನಿಮಾ ಲೀಕ್‌ ಆಗಿದೆ. ಇದರಿಂದ ಒಟಿಟಿಯಲ್ಲಿ ವೀಕ್ಷಕರ ಸಂಖ್ಯೆ ಕಡಿಮೆಯಾಗಬಹುದು, ಬೇರೆ ಭಾಷೆಗಳಿಗೆ ಡಬ್‌ ಮಾಡಲು ತೊಂದರೆಯಾಗಬಹುದು ಎಂಬ ಆತಂಕ ಚಿತ್ರತಂಡಕ್ಕಿದೆ.

ಒ2 ಸಿನಿಮಾ ವಿಮರ್ಶೆ

ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಈಗಾಗಲೇ ಒ2 ಸಿನಿಮಾ ವಿಮರ್ಶೆ ಮಾಡಿದೆ. "ಕಾಲಮಾನ ಬದಲಾಗಿದೆ. ಆಧುನಿಕತೆಯಲ್ಲಿ ವೈದ್ಯಕೀಯ ವಿಜ್ಞಾನವೂ ಆಕಾಶಕ್ಕೆ ಮುಟ್ಟಿದೆ. ದಿನದಿಂದ ದಿನಕ್ಕೆ ಹೊಸ ಹೊಸ ಆವಿಷ್ಕಾರಗಳು ಸೃಷ್ಟಿಯಾಗುತ್ತವೆ. ಇದೀಗ ಓ2 ಸಿನಿಮಾದಲ್ಲೂ ಇಂಥದ್ದೇ ವೈದ್ಯಕೀಯ ರಂಗದಲ್ಲಿನ ಬೆಳವಣಿಗೆ ಸುತ್ತ ನಡೆಯುವ ಕಥೆಯಾಗಿದೆ. ತ್ತ ವ್ಯಕ್ತಿಯನ್ನು ಬದುಕಿಸಬಹುದೇ? ಇಂಥದ್ದೊಂದು ಎಳೆಯ ನಡುವೆ ಸಾಗುವ ಈ ಸಿನಿಮಾದಲ್ಲಿ, ವೈದ್ಯಕೀಯ ಕ್ಷೇತ್ರದ ರೋಚಕ ಸಂಗತಿಗಳನ್ನೂ ನೋಡುಗರ ಎದೆಗಿಳಿಸುವ ಸಾಹಸಕ್ಕೆ ಕೈ ಹಾಕಿದ್ದಾರೆ ನವ ನಿರ್ದೇಶಕರಾದ ಪ್ರಶಾಂತ್ ರಾಜ್ ಮತ್ತು ರಾಘವ ನಾಯಕ್" ಎಂದು ವಿಮರ್ಶೆ ಮಾಡಲಾಗಿದೆ. ಪೂರ್ತಿ ವಿಮರ್ಶೆ ಓದಲು ಇಲ್ಲಿ ಕ್ಲಿಕ್‌ ಮಾಡಿ.

ಟಿ20 ವರ್ಲ್ಡ್‌ಕಪ್ 2024