Friday Release: ಬಾರೋ ಸಿನಿಮಾಕ್ಕೆ ಹೋಗೋಣ ಬಾ; ಚಿತ್ರಮಂದಿರಗಳಲ್ಲಿ ಇಂದು ಬಿಡುಗಡೆಯಾಗುವ ಸಿನಿಮಾಗಳ ಲಿಸ್ಟ್‌-sandalwood news august 2 release movies list kannada telugu hindi adavikate ishq ulajh bardovi movies ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Friday Release: ಬಾರೋ ಸಿನಿಮಾಕ್ಕೆ ಹೋಗೋಣ ಬಾ; ಚಿತ್ರಮಂದಿರಗಳಲ್ಲಿ ಇಂದು ಬಿಡುಗಡೆಯಾಗುವ ಸಿನಿಮಾಗಳ ಲಿಸ್ಟ್‌

Friday Release: ಬಾರೋ ಸಿನಿಮಾಕ್ಕೆ ಹೋಗೋಣ ಬಾ; ಚಿತ್ರಮಂದಿರಗಳಲ್ಲಿ ಇಂದು ಬಿಡುಗಡೆಯಾಗುವ ಸಿನಿಮಾಗಳ ಲಿಸ್ಟ್‌

Movies released today: ಬಾಲಿವುಡ್‌, ಸ್ಯಾಂಡಲ್‌ವುಡ್‌, ಟಾಲಿವುಡ್‌ ಸೇರಿದಂತೆ ಭಾರತದಲ್ಲಿ ಇಂದು ಬಿಡುಗಡೆಯಾಗುತ್ತಿರುವ ಸಿನಿಮಾಗಳ ವಿವರ ಇಲ್ಲಿದೆ. ಕನ್ನಡದಲ್ಲಿ ಅಡವಿಕಟ್ಟೆ, ಇಷ್ಕ್‌ ಬಿಡುಗಡೆಯಾದರೆ ಬಾಲಿವುಡ್‌ನಲ್ಲಿ ಉಲಾಜ್‌, ಬಾರ್ಡೋವಿ ಮುಂತಾದ ಚಿತ್ರಗಳು ರಿಲೀಸ್‌ ಆಗಿವೆ.

ಚಿತ್ರಮಂದಿರಗಳಲ್ಲಿ ಇಂದು ಬಿಡುಗಡೆಯಾಗುವ ಸಿನಿಮಾಗಳ ಲಿಸ್ಟ್‌
ಚಿತ್ರಮಂದಿರಗಳಲ್ಲಿ ಇಂದು ಬಿಡುಗಡೆಯಾಗುವ ಸಿನಿಮಾಗಳ ಲಿಸ್ಟ್‌

ಬೆಂಗಳೂರು: ಆಗಸ್ಟ್‌ ತಿಂಗಳಲ್ಲಿ ದೊಡ್ಡದೊಡ್ಡ ಸಿನಿಮಾಗಳು ಬಿಡುಗಡೆಯಾಗುತ್ತಿದ್ದು, ಚಿತ್ರಮಂದಿರಗಳು ನವವಧುವನ್ನು ಸ್ವಾಗತಿಸಲು ರೆಡಿಯಾಗಿರುವಂತೆ ಚಿತ್ರಗಳನ್ನು ಮತ್ತು ಪ್ರೇಕ್ಷಕರನ್ನು ಸ್ವಾಗತಿಸಲು ರೆಡಿಯಾಗಿವೆ. ದುನಿಯಾ ವಿಜಯ್‌ ನಟನೆಯ ಭೀಮ, ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ ಕೃಷ್ಣಂ ಪ್ರಣಯ ಸಖಿ, ಹಿಂದಿಯಲ್ಲಿ ಉಲಾಜ್‌, ತಮಿಳಿನಲ್ಲಿ ಕೆಜಿಎಫ್‌ ಕಥೆಯಿರುವ ತಂಗಲಾನ್‌, ಟಾಲಿವುಡ್‌ನಲ್ಲಿ ಡಬಲ್‌ ಐಸ್ಮಾರ್ಟ್‌ ಹೀಗೆ ಈ ತಿಂಗಳು ತುಂಬಾ ಸಿನಿಮಾಗಳು ರಿಲೀಸ್‌ ಆಗುತ್ತಿವೆ. ಆದರೆ, ಈ ವಾರ ಯಾವ ಸಿನಿಮಾ ರಿಲೀಸ್‌ ಆಗುತ್ತಿದೆ ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ಇಂದು ಅಂದರೆ ಆಗಸ್ಟ್‌ 2ರಂದು ಬಿಡುಗಡೆಯಾಗುವ ಸಿನಿಮಾಗಳ ವಿವರ ಇಲ್ಲಿದೆ.

ಅಗಸ್ಟ್‌ 2ರಂದು ಬಿಡುಗಡೆಯಾದ ಕನ್ನಡ ಸಿನಿಮಾಗಳು (Movies released today)

ಅಡವಿಕಟ್ಟೆ (ಕನ್ನಡ ಸಿನಿಮಾ)

ಹಿರಿಯನಟ ಅಭಿಜಿತ್ ಹಾಗೂ ನಾಗರಾಜು ಪ್ರಮುಖಪಾತ್ರದಲ್ಲಿ ನಟಿಸಿರುವ "ಅಡವಿಕಟ್ಟೆ" ಸಿನಿಮಾ ಇಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಉಮಾ ಎಸ್ ನಿರ್ಮಿಸಿರುವ ಈ ಚಿತ್ರಕ್ಕೆ ಸಂಜೀವ್ ಗಾವಂಡಿ ಆಕ್ಷನ್‌ ಕಟ್‌ ಹೇಳಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಜತೆಗೆ ಹಾರರ್ ಜಾನರ್‌ನ ಚಿತ್ರ. ಕನ್ನಡದಲ್ಲಿ ಸಾಕಷ್ಟು ಈ ಜಾನರ್ ನ ಚಿತ್ರ ಬಂದಿದೆಯಾದರೂ ಇದು ವಿಭಿನ್ನ. ಚಿತ್ರದ ಹೆಸರೆ ಹೇಳುವಂತೆ ಇದೊಂದು ಇದು ಅಡವಿ ಅಂದರೆ ಕಾಡಿನಲ್ಲಿ ನಡೆಯುವ ಕಥೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

ಇಷ್ಕ್‌ (ಕನ್ನಡ ಸಿನಿಮಾ)

ಇಂದು ಇಷ್ಕ್‌ ಎಂಬ ಇನ್ನೊಂದು ಸಿನಿಮಾವೂ ಬಿಡುಗಡೆಯಾಗುತ್ತಿದೆ. ಈ ಚಿತ್ರಕ್ಕೆ ವಿನಯ್ ರಾಘವೇಂದ್ರ ವಿ ಆಕ್ಷನ್‌ ಕಟ್‌ ಹೇಳಿದ್ದು, ರಾಜು ತ್ಯಾಗರಾಜು ಮತ್ತು ಶ್ವೇತಾ ಭಟ್ ಕಾರವಾರ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಯೂತ್‌ಫುಲ್‌ ಸಿನಿಮಾದಲ್ಲಿ ಚೇತನ್ ದುರ್ಗಾ, ಶಿಲ್ಪಶ್ರೀ ಶಾಂತಕುಮಾರ್, ಸೃಜನ್ ಬೆಳ್ಮಣ್ಣು, ಶಶಾಂಕ್ ರಾಘವೇಂದ್ರ ಮುಂತಾದವರು ನಟಿಸಿದ್ದಾರೆ.

ಇಂದು ಬಿಡುಗಡೆಯಾಗುತ್ತಿರುವ ಪರಭಾಷಾ ಸಿನಿಮಾಗಳು

  1. ಔರೋ ಮೇ ಕಹಾ ಧಮ್ ತಾ: ಅಜಯ್​ ದೇವಗನ್​, ಟಬು ನಟನೆಯ ‘ಔರೋ ಮೇ ಕಹಾ ಧಮ್ ತಾ’ ಸಿನಿಮಾ ಇಂದು ಬಿಡುಗಡೆಯಾಗಿದೆ.
  2. ಉಲಾಜ್: ಜಾಹ್ನವಿ ಕಪೂರ್‌ ನಟನೆಯ ಉಲಾಜ್‌ ಸಿನಿಮಾ ಕೂಡ ಆಗಸ್ಟ್‌ 2ರಂದು ಬಿಡುಗಡೆಯಾಗಿದೆ.
  3. ಬಾರ್ಡೋವಿ: ಛಾಯಾ ಕದಮ್ ನಟನೆಯ ಬಾರ್ಡೋವಿ ಸಿನಿಮಾ ಕೂಡ ಆಗಸ್ಟ್‌ 2ರಂದು ಬಿಡುಗಡೆಯಾಗಿದೆ.
  4. ಟಾಲಿವುಡ್‌ನಲ್ಲಿ ಕೃಷ್ಣ ವಂಶಿ ನಟನೆಯ ಅಲನಾಟಿ ರಾಮಚಂದ್ರುಡು ರಿಲೀಸ್‌ ಆಗುತ್ತಿದೆ.
  5. ಪವನ್​ ಕುಮಾರ್​ ಕೆ. ನಟನೆಯ ಅರ್ವೇಜ್‌​ ಸ್ಟುಡೆಂಟ್​ ನಾನಿ ಕೂಡ ಇಂದು ರಿಲೀಸ್‌ ಆಗುತ್ತಿದೆ.
  6. ಅಲ್ಲಿ ಸಿರೀಶ್​ ಮುಖ್ಯ ಪಾತ್ರ ಮಾಡಿರುವ ‘ಬಡ್ಡಿ’ ಕೂಡ ಇಂದು ರಿಲೀಸ್‌ ಆಗುತ್ತಿದೆ.
  7. ತೆಲುಗಿನಲ್ಲಿ ಶಿವಂ ಭಜೆ, ತಿರಗಬದರಸಾಮಿ, ಉಷಾ ಪರಿಣಯಂ, ವಿರಾಜ್‌ ಮುಂತಾದ ಸಿನಿಮಾಗಳು ಬಿಡುಗಡೆಯಾಗುತ್ತಿವೆ.

ಹೀಗೆ ಈ ವೀಕೆಂಡ್‌ನಲ್ಲಿ ಹೊಸ ಸಿನಿಮಾಗಳನ್ನು ನೋಡುವವರಿಗೆ ಕೆಲವೊಂದು ಸಿನಿಮಾಗಳು ಕಾಯುತ್ತಿವೆ. ಹೊಸಬರ ಸಿನಿಮಾಗಳು ಕೆಲವೊಮ್ಮೆ ಒಳ್ಳೆಯ ಕಥೆ, ವಿನೂತನ ಪರಿಕಲ್ಪನೆಗಳಿಂದ ಗಮನ ಸೆಳೆಯುತ್ತಿವೆ. ದೊಡ್ಡ ಸಿನಿಮಾಗಳ ನಡುವೆ ಚಿಕ್ಕ ಸಿನಿಮಾಗಳೂ ಪ್ರೇಕ್ಷಕರ ಮನ ಗೆಲ್ಲುತ್ತವೆ. ಹೀಗಾಗಿ, ಈ ವಾರ ಅಡವಿಕಟ್ಟೆ, ಇಷ್ಕ್‌ ಮುಂತಾದ ಸಿನಿಮಾಗಳೂ ನಿರೀಕ್ಷೆ ಹುಟ್ಟಿಸಿವೆ.