Friday Release: ಪೌಡರ್‌, ಹಗ್ಗ, ಕಪಟಿ, ಸಿ, ತಾಜ್‌, ದಿ ಜರ್ನಲಿಸ್ಟ್‌ ... ಈ ವಾರ ಚಿತ್ರಮಂದಿರಗಳಲ್ಲಿ ಎಷ್ಟು ಕನ್ನಡ ಸಿನಿಮಾ ಬಿಡುಗಡೆ-sandalwood news august 23 friday release kannada movies list powder kapati hagga c taj movies in theater pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Friday Release: ಪೌಡರ್‌, ಹಗ್ಗ, ಕಪಟಿ, ಸಿ, ತಾಜ್‌, ದಿ ಜರ್ನಲಿಸ್ಟ್‌ ... ಈ ವಾರ ಚಿತ್ರಮಂದಿರಗಳಲ್ಲಿ ಎಷ್ಟು ಕನ್ನಡ ಸಿನಿಮಾ ಬಿಡುಗಡೆ

Friday Release: ಪೌಡರ್‌, ಹಗ್ಗ, ಕಪಟಿ, ಸಿ, ತಾಜ್‌, ದಿ ಜರ್ನಲಿಸ್ಟ್‌ ... ಈ ವಾರ ಚಿತ್ರಮಂದಿರಗಳಲ್ಲಿ ಎಷ್ಟು ಕನ್ನಡ ಸಿನಿಮಾ ಬಿಡುಗಡೆ

Kannada Movies Release August 23: ಈ ವಾರ ಚಿತ್ರಮಂದಿರಗಳಲ್ಲಿ ಪೌಡರ್‌, ಕಪಟಿ, ಹಗ್ಗ, ಸಿ, ತಾಜ್‌, ದಿ ಜರ್ನಲಿಸ್ಟ್‌ ಎಂಬ 6 ಕನ್ನಡ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಕೃಷ್ಣಂ ಪ್ರಣಯ ಸಖಿ, ಗೌರಿ, ಭೀಮ ಯಶಸ್ವಿಯಾಗಿ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿವೆ. ಮಾಫಿಯಾ, ಪೆಪೆ, ಲಾಫಿಂಗ್‌ ಬುದ್ಧ ಮುಂತಾದ ಸಿನಿಮಾಗಳು ಮುಂದಿನ ವಾರ ಬಿಡುಗಡೆಯಾಗಲಿವೆ.

ಆಗಸ್ಟ್‌ 23ರಂದು ಬಿಡುಗಡೆಯಾಗುವ ಕನ್ನಡ ಸಿನಿಮಾಗಳು
ಆಗಸ್ಟ್‌ 23ರಂದು ಬಿಡುಗಡೆಯಾಗುವ ಕನ್ನಡ ಸಿನಿಮಾಗಳು

Friday Release Kannada Movies: ಕಳೆದ ವಾರ ಕೃಷ್ಣಂ ಪ್ರಣಯ ಸಖಿ, ಗೌರಿ, ಅದಕ್ಕೂ ಮೊದಲು ಭೀಮ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ ಚಿತ್ರಮಂದಿರಗಳಲ್ಲಿ ಜನದಟ್ಟಣೆ ಉಂಟಾಗಿದೆ. ಈ ವಾರ ಗುಳ್ಟು ಸಿನಿಮಾ ನಿರ್ದೇಶಕರ ಪೌಡರ್‌ ಎಂಬ ಸಿನಿಮಾ ಚಿತ್ರಮಂದಿರಗಳಲ್ಲಿ ರಿಲೀಸ್‌ ಆಗಲಿದೆ. ಪೌಡರ್‌ ಮಾತ್ರವಲ್ಲದೆ ಕಪಟಿ, ಹಗ್ಗ, ಸಿ, ದಿ ಜರ್ನಲಿಸ್ಟ್‌ ಮತ್ತು ತಾಜ್‌ ಎಂಬ ಇತರೆ ಕನ್ನಡ ಸಿನಿಮಾಗಳು ರಿಲೀಸ್‌ ಆಗುತ್ತಿವೆ.

ಪೌಡರ್‌ ಸಿನಿಮಾ ಈ ವಾರ ಬಿಡುಗಡೆ

"ಇಬ್ಬರು ಯುವಕರು ಒಂದು ನಿಗೂಢವಾದ "ಪೌಡರ್"‌ಪ್ರಭಾವದಿಂದಾಗಿ ಧಿಡೀರನೇ ಸಿರಿವಂತರಾಗಲು ಮಾಡುವ ಪ್ರಯತ್ನಗಳು, ಅವರಿಗೆ ಎದುರಾಗುವ ಸಮಸ್ಯೆಗಳು ಇವೆಲ್ಲವನ್ನೂ ಎಳೆಯಾಗಿ ಬಿಚ್ಚಿಡುವ ಕಥೆಯೇ ಪೌಡರ್.‌ಆ ಯುವಕರು ಎಲ್ಲಾ ಸಮಸ್ಯೆಗಳನ್ನು ಮೀರಿ ನಿಲ್ಲುವರೇ? ಅವರ ಎಲ್ಲಾ ಕನಸುಗಳು ನನಸಾಗುವುದೇ? ಪೌಡರ್ ‌ಹಿಂದಿನ ಪವರ್ ‌ಅವರಿಗೆ ತಿಳಿಯುವುದೇ?" ಇದು ಪೌಡರ್‌ ಸಿನಿಮಾದ ಕಥೆ. ಹಾಗಾದರೆ ಈ ಸಿನಿಮಾದಲ್ಲಿ ಯಾರು ನಟಿಸಿದ್ದಾರೆ. ಈ ಸಿನಿಮಾ ನಿರ್ದೇಶಕರು ಯಾರು ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು.

ದಿಗಂತ್ ಮಂಚಾಲೆ, ಧನ್ಯ ರಾಮ್ ಕುಮಾರ್, ಶರ್ಮಿಳಾ ಮಾಂಡ್ರೆ, ಅನಿರುದ್ಧ್ ಆಚಾರ್ಯ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾಕ್ಕೆ ಜನಾರ್ದನ್ ಚಿಕ್ಕಣ್ಣ ಆಕ್ಷನ್‌ ಕಟ್‌ ಹೇಳಿದ್ದಾರೆ. ಈ ಹಿಂದೆ ಇವರ ಗುಳ್ಟು ಸಿನಿಮಾ ಸಾಕಷ್ಟು ಫೇಮಸ್‌ ಆಗಿತ್ತು. ಇದೇ ಕಾರಣಕ್ಕೆ ಪೌಡರ್‌ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಈ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ಸಂಯೋಜನೆ, ಅದ್ವೈತ ಗುರುಮೂರ್ತಿ ಕ್ಯಾಮೆರಾ ಹಾಗೂ ವಿಶ್ವಾಸ್ ಕಶ್ಯಪ್ ಪ್ರೊಡಕ್ಷನ್ ವಿನ್ಯಾಸವಿದೆ. ಕೆ‌.ಆರ್.ಜಿ. ಸ್ಟೂಡಿಯೋಸ್ ಮತ್ತು ಟಿ.ವಿ.ಎಫ್ ಮೋಷನ್ ಪಿಕ್ಚರ್ಸ್ ನ ಚೊಚ್ಚಲ ಸಹಯೋಗದ ಚಿತ್ರ ಇದಾಗಿದೆ.

ಸಿ ಸಿನಿಮಾ

ಸಿ ಎಂಬ ಕನ್ನಡ ಸಿನಿಮಾವು ಈ ವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಕಿರಣ್‌ ಸುಬ್ರಹ್ಮಣಿ, ಶ್ರೀಧರ್‌ ರಾಮ್‌, ಪ್ರಶಾಂತ್‌ ನಟನಾ, ರೂಪೇಶ್‌ ಆರ್ಯ ಮುಂತಾದವರು ನಟಿಸಿದ್ದಾರೆ.

ತಾಜ್‌

ರಾಜ್‌ ರತ್ನ ಬಿ ಆಕ್ಷನ್‌ ಕಟ್‌ ಹೇಳಿರುವ ತಾಜ್‌ ಎಂಬ ಸಿನಿಮಾವು ಈ ವಾರ ಬಿಡುಗಡೆಯಾಗಲಿದೆ. ಶನ್ಮುಕ್ತ ಜೈ, ಅಪರ್ಣಾ ರಾಮಕೃಷ್ಣ, ಪದ್ಮ ವಸಂತಿ, ಶೋಭರಾಜ್‌, ಬಾಲರಾಜವಾಡಿ, ಪಟ್ರೆ ನಾಗರಾಜ್‌, ವರ್ಧನ್‌, ಕಡ್ಡಿ ವಿಶ್ವ, ಸೂರಜ್‌ ಕಾಮಿಡಿ ಕಿಲಾಡಿಗಳು ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಹಗ್ಗ

ಆಗಸ್ಟ್‌ 23ರಂದು ಕನ್ನಡ ಸಿನಿಮಾವು ಬಿಡುಗಡೆಯಾಗುತ್ತಿದೆ. ಅನುಪ್ರಭಾಕರ್‌, ಹರ್ಷಿಕಾ ಪೂಣಚ್ಚ, ಸಿ ವೇಣು, ಅವಿನಾಶ್‌, ತಬಲಾ ನಾಣಿ, ಸುಧಾ ಬೆಳವಾಡಿ, ಪ್ರಿಯಾ ಹೆಗಡೆ, ಭವಾನಿ ಪರಕಾಶ್‌, ಬಸತ್‌ ನಗರ್‌ ರವಿ, ಸದಾನಂದ ಕಾಲಿ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಅವಿನಾಶ್‌ ಎನ್‌ ನಿರ್ದೇಶಕರು.

ಕಪಟಿ

ಸುಕ್ರತ್‌ ವಾಗ್ಲೆ, ದೇವ್‌ ದೇವಯ್ಯ, ಸಾತ್ವಿಕ್‌ ಕೃಷ್ಣನ್‌, ಪವನ್‌ ವೇಣುಗೋಪಲ್‌, ನಂದಗೋಪಾಲ್‌ ಮುಂತಾದವರು ನಟಿಸಿದ ರವಿಕಿರಣ್‌ ಡಿ, ಚೇತನ್‌ ಎಸ್‌ಪಿ ನಿರ್ದೇಶನದ ಕಪಟಿ ಎಂಬ ಸಿನಿಮಾವು ಆಗಸ್ಟ್‌ 23ರಂದು ಬಿಡುಗಡೆಯಾಗುತ್ತಿದೆ.

ದಿ ಜರ್ನಲಿಸ್ಟ್‌

ಈ ವಾರ ದಿ ಜರ್ನಲಿಸ್ಟ್‌ ಎಂಬ ಸಿನಿಮಾವು ಬಿಡುಗಡೆಯಾಗುತ್ತಿದೆ. ಆರ್ಯನ್‌ ಹರೀಶ್‌, ರಂಜಿತಾ ಮೂರ್ತಿ, ನಾಗೇಂದ್ರ ಕೋಟೆ ಮುಂತಾದವರು ನಟಿಸಿದ ಚಿತ್ರಕ್ಕೆ ವೇದಾಂತ ಹರ್ಷ್‌ ಆಕ್ಷನ್‌ ಕಟ್‌ ಹೇಳಿದ್ದಾರೆ.

ಈ ಚಿತ್ರಗಳೊಂದಿಗೆ ಕೃಷ್ಣಂ ಪ್ರಣಯ ಸಖಿ, ಗೌರಿ, ಭೀಮ ಸಿನಿಮಾಗಳು ಯಶಸ್ವಿಯಾಗಿ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿವೆ. ಈ ತಿಂಗಳ ಕೊನೆಗೆ ಮಾಫಿಯಾ, ಪೆಪೆ, ಲಾಫಿಂಗ್‌ ಬುದ್ಧ ಮುಂತಾದ ಸಿನಿಮಾಗಳು ಬಿಡುಗಡೆಯಾಗಲಿದ್ದು, ನಿರೀಕ್ಷೆ ಹೆಚ್ಚಿಸಿವೆ.