ʻಅವನಿರಬೇಕಿತ್ತುʼ ಚಿತ್ರ ಬಿಡುಗಡೆಗೆ ರೆಡಿ; ಜೂನ್ 27ರಂದು ರಾಜ್ಯಾದ್ಯಂತ ತೆರೆಗೆ
ಕನ್ನಡ ಸುದ್ದಿ  /  ಮನರಂಜನೆ  /  ʻಅವನಿರಬೇಕಿತ್ತುʼ ಚಿತ್ರ ಬಿಡುಗಡೆಗೆ ರೆಡಿ; ಜೂನ್ 27ರಂದು ರಾಜ್ಯಾದ್ಯಂತ ತೆರೆಗೆ

ʻಅವನಿರಬೇಕಿತ್ತುʼ ಚಿತ್ರ ಬಿಡುಗಡೆಗೆ ರೆಡಿ; ಜೂನ್ 27ರಂದು ರಾಜ್ಯಾದ್ಯಂತ ತೆರೆಗೆ

ಕನ್ನಡ ಚಿತ್ರರಂಗದಲ್ಲಿ ಹಲವು ಚಿತ್ರಗಳಿಗೆ ಕೆಲಸ ಮಾಡಿದ ಅನುಭವವಿರೋ ಬಹುಮುಖ ಪ್ರತಿಭೆ ಅಶೋಕ್ ಸಾಮ್ರಾಟ್ ನಿರ್ದೇಶನದ ಚೊಚ್ಚಲ ಸಿನಿಮಾ ʻಅವನಿರಬೇಕಿತ್ತುʼ. ಈ ಸಿನಿಮಾ ಜೂನ್‌ 27ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ.

ʻಅವನಿರಬೇಕಿತ್ತುʼ ಚಿತ್ರ ಬಿಡುಗಡೆಗೆ ರೆಡಿ; ಜೂನ್ 27ರಂದು ರಾಜ್ಯಾದ್ಯಂತ ತೆರೆಗೆ
ʻಅವನಿರಬೇಕಿತ್ತುʼ ಚಿತ್ರ ಬಿಡುಗಡೆಗೆ ರೆಡಿ; ಜೂನ್ 27ರಂದು ರಾಜ್ಯಾದ್ಯಂತ ತೆರೆಗೆ

ಅವನಿರಬೇಕಿತ್ತು... ಕನ್ನಡ ಚಿತ್ರರಂಗಕ್ಕೆ ಅಚ್ಚರಿಯಾಗಿ ಕಾಣ್ತಿರೋ ಹೊಸಬರ ಹೊಸ ಬಗೆಯ ಸಿನಿಮಾ. ಅಂದಕಾಲತ್ತಿಲ್.. ಇಂದ ಕಾಲತ್ತಿಲ್ ಹಾಡಿನಿಂದ ಗಮನ ಸೆಳೆದಿದ್ದ ಅವನಿರಬೇಕಿತ್ತು.. ಓ ಹೃದಯ ಅನ್ನೋ ಹಾಡಿನಿಂದ ಮತ್ತೊಂದು ಪಟ್ಟು ಭರವಸೆಯನ್ನ ಹೆಚ್ಚಿಸಿತ್ತು. ಈ ನಡುವೆ ಟ್ರೈಲರ್ ರಿಲೀಸ್ ಮಾಡಿ, ಇಡೀ ಉದ್ಯಮಕ್ಕೆ ಮೆರಗು ತರೋ ಸೂಚನೆ ನೀಡಿದೆ ಚಿತ್ರತಂಡ. ಅದಕ್ಕೆ ಸಾಕ್ಷಿ ಎಂಬಂತೆ ಆರ್ಗ್ಯಾನಿಕ್ ಆಗಿ ಸೋಷಿಯಲ್ ಮಿಡಿಯಾದಲ್ಲಿ ಈ ಚಿತ್ರದ ಟ್ರೈಲರ್ ಹಾಗೂ ಹಾಡುಗಳಿಗೆ ಅಪ್ಪಟ ಕನ್ನಡ ಸಿನಿಪ್ರಿಯರಿಂದ ಪ್ರಶಂಸೆಗಳು ವ್ಯಕ್ತವಾಗ್ತಿವೆ.

ಕನ್ನಡ ಚಿತ್ರರಂಗದಲ್ಲಿ ಹಲವು ಚಿತ್ರಗಳಿಗೆ ಕೆಲಸ ಮಾಡಿದ ಅನುಭವವಿರೋ ಬಹುಮುಖ ಪ್ರತಿಭೆ ಅಶೋಕ್ ಸಾಮ್ರಾಟ್ ನಿರ್ದೇಶನದ ಚೊಚ್ಚಲ ಸಿನಿಮಾ ಅವನಿರಬೇಕಿತ್ತು.. ಗೆಳೆಯ ಮುರಳಿ ಬಿಟಿ ಅಶೋಕ್ ಸಿನಿಮಾ ಕನಸಿಗೆ ಬಂಡವಾಳ ಹೂಡಿದ್ದಾರೆ. ಹಂಸಲೇಖ ಶಿಷ್ಯ ಲೋಕಿ ತವಸ್ಯಾ ಸಂಗೀತ ಸಂಯೋಜಿಸಿದ್ದು, ದೇವರಾಜ್ ಪೂಜಾರಿ ಛಾಯಾಗ್ರಹಣ ಮಾಡಿದ್ದಾರೆ. ತಾಂತ್ರಿಕವಾಗಿ ನಿಪುಣರ ತಂಡವನ್ನ ಕಟ್ಟಿಕೊಂಡು, ಹೊಸ ಬಗೆಯ ಕಥೆಯನ್ನ ಹೆಣೆದು, ವಿನೂತನ ಸ್ಕ್ರೀನ್ ಪ್ಲೇ ಜೊತೆಗೆ ಗುಣ ಮಟ್ಟದ ಮೇಕಿಂಗ್ ಮಾಡಿರೋ ಸಿನಿಮಾ `ಅವನಿರಬೇಕಿತ್ತು'.

ಅವನಿರಬೇಕಿತ್ತು... ಸಿನಿಮಾ ಹಲವಾರು ವಿಶೇಷ ವಿಚಾರಗಳಿಗೆ ಹೆಸರಾಗುವಂತೆ ಕಾಣ್ತಿದೆ.. ಕನ್ನಡ ಪ್ರೇಕ್ಷಕರಿಗೆ ಹೊಸ ಅನುಭವ ಕೊಡುವ ಭರವಸೆಯನ್ನೂ ನೀಡಿದೆ.. ಚಿತ್ರದಲ್ಲಿ ನಾಯಕ ಭರತ್, ನಾಯಕಿ ಸೌಮ್ಯಾ ಹೊಸ ಮುಖಗಳೇ ಆದ್ರೂ ಟ್ರೈಲರ್ ನೋಡಿದಾಗ ಅನುಭವಸ್ಥ ಕಲಾವಿದರಿಗಿಂತ ಏನು ಕಡಿಮೆ ಕಾಣ್ತಿಲ್ಲ.. ಹಾಡುಗಳಲ್ಲಿ ಇವ್ರ ಡ್ಯಾನ್ಸ್ ಮತ್ತು ಅಭಿನಯ ವಿಶೇಷವಾಗಿ ಕಾಣ್ತಿದೆ.. ಚಿತ್ರದಲ್ಲಿ ಪ್ರಶಾಂತ್ ಸಿದ್ದಿ, ಕಿರಣ್ ನಾಯಕ್, ಹಿರಿಯ ನಟಿ ಲಕ್ಷ್ಮೀ ದೇವಮ್ಮ ಸೇರಿದಂತೆ ಹಲವು ಅನುಭವಸ್ಥ ಕಲಾವಿದರು ಅವನಿರಬೇಕಿತ್ತು ಚಿತ್ರಕ್ಕೆ ಶಕ್ತಿಯಾಗಿದ್ದಾರೆ.

ನಿರ್ಮಾಪಕ ಮುರಳಿ ನಿರ್ದೇಶಕ ಅಶೋಕ್ ಹೊಸಬರೇ ಆದ್ರೂ ಅಪಾರ ಸಿನಿಮಾಸಕ್ತಿ, ಸಿನಿಮಾನುಭವವನ್ನ ಹೊಂದಿರೋ ಸ್ನೇಹಿತರು.. ಹಾಗಾಗಿ ಈ ಸಿನಿಮಾ ಪ್ರೇಕ್ಷಕನೊಬ್ಬ ನಿರ್ಮಾಪಕ ನಿರ್ದೇಶಕನಾಗಿ ಮಾಡಿದಂತೆ ಭಾಸವಾಗ್ತಿದೆ. ಈಗಾಗ್ಲೇ ಪ್ರಚಾರ ಕಾರ್ಯದಲ್ಲಿ ತಲ್ಲೀನವಾಗಿದೆ. ಕೆ.ಆರ್.ಜಿ ಸ್ಟುಡಿಯೋಸ್ ಈ ಚಿತ್ರವನ್ನ ವಿತರಣೆ ಮಾಡಲು ಮುಂದಾಗಿರೋದು ಈ ಸಿನಿಮಾ ಮೇಲಿನ ನಿರೀಕ್ಷೆ ಮತ್ತೊಂದು ಪಟ್ಟು ಹೆಚ್ಚಾಗುವಂತೆ ಮಾಡಿದೆ. ಈ ನಡುವೆ ಅವನಿರಬೇಕಿತ್ತು ಚಿತ್ರದ ಟ್ರೈಲರ್ ನ ನೋಡಿ ಪಿ.ಆರ್.ಕೆ ಸಂಸ್ಥೆಯ ಅಶ್ವಿನಿ ಪುನೀತ್ ರಾಜ್ ಕುಮಾರ್ ಕೂಡ ಚಿತ್ರತಂಡವನ್ನ ಪ್ರಶಂಸಿಸಿದ್ದಾರೆ.

ಅವನಿರಬೇಕಿತ್ತು.. ಜೂನ್ 27ರಂದು ರಾಜ್ಯದಾದ್ಯಂತ ರಿಲೀಸ್ ಆಗ್ತಿದೆ. ಎಲ್ಲಾ ವರ್ಗದವರನ್ನೂ ಸೆಳೆಯುವಂತಹ ಅಂಶಗಳಿರೋ ಈ ಚಿತ್ರವನ್ನ ಕನ್ನಡ ಪ್ರೇಕ್ಷಕರು ಹೇಗೆ ಸ್ವೀಕರಿಸ್ತಾರೆ ಅನ್ನೋದೇ ಸದ್ಯದ ಕುತೂಹಲ.

ಹೀಗಿದೆ ತಾರಾಗಣ ಮತ್ತು ತಾಂತ್ರಿಕ ವರ್ಗ

ಭರತ್, ಸೌಮ್ಯಾ ಜಾನ್, ಜಯಸಿಂಹ, ಲಕ್ಷ್ಮೀದೇವಮ್ಮ, ಪ್ರಶಾಂತ್ ಸಿದ್ದಿ, ಕಿರಣ್ ನಾಯಕ್, ಮಂಜುನಾಥ್ ಎಜಿ, ತೀರ್ಥ ಪೊನ್ನಮ್ಮ, ರಂಗನಾಥ್, ಬಸವ ಮೇತ್ರಿ, ಆಚಾರ್ಯ, ವಿಶೇಷ್, ನಾಗರಾಜ್ ಮತ್ತಿತರರು ನಟಿಸಿದ್ದಾರೆ. ನೋವಿಕಾ ಸಿನಿಪ್ರೊಡಕ್ಷನ್ ಬ್ಯಾನರ್‌ನಲ್ಲಿ ನಿರ್ಮಾಣವಾದ ಈ ಸಿನಿಮಾವನ್ನು ಅಶೋಕ್ ಸಾಮ್ರಾಟ್ ನಿರ್ದೇಶನ ಮಾಡಿದ್ದಾರೆ. ಲೋಕಿ ತವಸ್ಯಾ ಸಂಗೀತ, ದೇವರಾಜ್ ಪೂಜಾರಿ ಛಾಯಾಗ್ರಹಣ, ಮುರಳಿ ಬಿಟಿ ನಿರ್ಮಾಣವಿದೆ.