ಸಿನಿಮಾ ಹೀರೋ ಆದ ಜೂನಿಯರ್‌ ದರ್ಶನ್‌; ಪುನೀತ್‌ ಪಝಲ್‌ನಲ್ಲಿ ಮೂಡಿದ ‘ದಂಡತೀರ್ಥ’ ಚಿತ್ರದ ಶೀರ್ಷಿಕೆ
ಕನ್ನಡ ಸುದ್ದಿ  /  ಮನರಂಜನೆ  /  ಸಿನಿಮಾ ಹೀರೋ ಆದ ಜೂನಿಯರ್‌ ದರ್ಶನ್‌; ಪುನೀತ್‌ ಪಝಲ್‌ನಲ್ಲಿ ಮೂಡಿದ ‘ದಂಡತೀರ್ಥ’ ಚಿತ್ರದ ಶೀರ್ಷಿಕೆ

ಸಿನಿಮಾ ಹೀರೋ ಆದ ಜೂನಿಯರ್‌ ದರ್ಶನ್‌; ಪುನೀತ್‌ ಪಝಲ್‌ನಲ್ಲಿ ಮೂಡಿದ ‘ದಂಡತೀರ್ಥ’ ಚಿತ್ರದ ಶೀರ್ಷಿಕೆ

ಕನ್ನಡದ ಹಲವು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡು, ಜೂನಿಯರ್‌ ದರ್ಶನ್‌ ಎಂದೇ ಖ್ಯಾತಿ ಪಡೆದ ಅವಿನಾಶ್‌ ಇದೀಗ ದಂಡತೀರ್ಥ ಹೆಸರಿನ ಚಿತ್ರಕ್ಕೆ ನಾಯಕನಾಗಿ ಆಯ್ಕೆಯಾಗಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಫಸ್ಟ್‌ ಲುಕ್‌ ಸಹ ರಿಲೀಸ್‌ ಆಗಿದೆ.

ಸಿನಿಮಾ ಹೀರೋ ಆದ ಜೂನಿಯರ್‌ ದರ್ಶನ್‌; ಪುನೀತ್‌ ಪಝಲ್‌ನಲ್ಲಿ ಮೂಡಿದ ‘ದಂಡತೀರ್ಥ’ ಚಿತ್ರದ ಶೀರ್ಷಿಕೆ
ಸಿನಿಮಾ ಹೀರೋ ಆದ ಜೂನಿಯರ್‌ ದರ್ಶನ್‌; ಪುನೀತ್‌ ಪಝಲ್‌ನಲ್ಲಿ ಮೂಡಿದ ‘ದಂಡತೀರ್ಥ’ ಚಿತ್ರದ ಶೀರ್ಷಿಕೆ

Danda Theertha: ಪಝಲ್ ಆಟದಂತೆ ಕಲಾವಿದರು ಎಲ್ಲವನ್ನು ಜೋಡಿಸಿದಾಗ ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್‌ ಭಾವಚಿತ್ರ ಮೂಡಿಬಂತು. ನಂತರ ಅದನ್ನು ತಿರುಗಿಸಿದಾಗ ’ದಂಡತೀರ್ಥ’ ಚಿತ್ರದ ಶೀರ್ಷಿಕೆ ಅನಾವರಣಗೊಂಡಿತು. ಇತ್ತೀಚೆಗೆ ಕಲಾವಿದರ ಸಂಘದಲ್ಲಿ ಅದ್ದೂರಿಯಾಗಿ ಈ ಸಿನಿಮಾದ ಶೀರ್ಷಿಕೆ ಅನಾವರಣ ಕಾರ್ಯಕ್ರಮ ನಡೆಯಿತು. ಈ ಹಿಂದೆ ಕಾಮಿಡಿ ಶೋಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದ ಅವಿನಾಶ್‌ (ಜೂನಿಯರ್‌ ದರ್ಶನ್)‌ ಈ ಸಿನಿಮಾ ಮೂಲಕ ಹೀರೋ ಆಗುತ್ತಿದ್ದಾರೆ.

ಸುಮಾರು 78 ಚಿತ್ರಗಳಿಗೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿರುವ ಹರಿಪ್ರಾಣ ಮೊದಲ ಅನುಭವ ಎನ್ನುವಂತೆ ಪ್ರಾಣ ಪ್ರೊಡಕ್ಷನ್ ಸಂಸ್ಥೆ ಹುಟ್ಟುಹಾಕಿ ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡುತ್ತಿದ್ದಾರೆ. ಇದರ ಸಲುವಾಗಿ ಸಿನಿಮಾಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇವರ ಶ್ರಮಕ್ಕೆ ಉಮೇಶ್ ಬಂಡವಾಳ ಹೂಡುತ್ತಿದ್ದಾರೆ.

ದಂಡ ಎಂದರೆ ಶಿಕ್ಷೆ. ತೀರ್ಥಕ್ಕೆ ಪ್ರಸಾದ ಎನ್ನುವುದುಂಟು. ಆಂಜನೇಯನ ಭಕ್ತನಿಗೆ ಮತ್ತು ಮಾರುತಿಗೆ ಮತ್ತೊಂದು ಹೆಸರು ಇದೇ ಆಗಿರುತ್ತದೆ. ಮೊದಲರ್ಧ ನೈಜ ಘಟನೆಯಲ್ಲಿ ಕಾಮಿಡಿ, ಉಳಿದದ್ದು ಕಾಲ್ಪನಿಕವಾಗಿ ರಿವೆಂಜ್ ಸ್ಟೋರಿಯಲ್ಲಿ ಸಾಗುತ್ತದೆ. ಸ್ಟಿಂಗ್ ಆಪರೇಶನ್ ನಡೆಸುವಂತೆ, ಸಿನಿಮಾದಲ್ಲೂ ಇದೇ ರೀತಿಯ ಹೋಲಿಕೆ ಇರುತ್ತದೆ. ನಾಲ್ಕು ಹಾಸ್ಯ ನಟರಿಗೆ ಗಂಭೀರವಾದ ಪಾತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಬೆಂಗಳೂರು, ಮೈಸೂರು ಕಡೆಗಳಲ್ಲಿ ಚಿತ್ರೀಕರಣವನ್ನು ನಡೆಸಲು ಯೋಜನೆ ಹಾಕಲಾಗಿದೆ ಎಂದರು ನಿರ್ದೇಶಕರು.

ಅಲ್ಲದೆ ’ಪ್ರಾಣ ಆಡಿಯೋ’ ಮುಂದಿನ ದಿನಗಳಲ್ಲಿ ಶುರು ಮಾಡಲಾಗುತ್ತಿದೆ. ಹಾಗೂ ’ಪ್ರಾಣ ಎಂಟರ್ಟೈನ್ಮೆಂಟ್’ ಮೂಲಕ ರಾಜ್ಯದಾದ್ಯಂತ ಡ್ಯಾನ್ಸರ್, ಗಾಯಕರುಗಳಿಗೆ ವೇದಿಕೆ ಕಲ್ಪಿಸಲು ರಿಯಾಲಿಟಿ ಷೋ ನಡೆಸಲಾಗುವುದು. ಇದರಲ್ಲಿ ಗೆದ್ದ ಮೂವರಿಗೆ ಬಹುಮಾನ ನೀಡಿ, ಚಿತ್ರಗಳಿಗೆ ಇವರುಗಳ ಹೆಸರುಗಳನ್ನು ಶಿಫಾರಸ್ಸು ಮಾಡಲಾಗುತ್ತದೆ ಎಂದರು.

ಈ ಚಿತ್ರದಲ್ಲಿ ಅವಿನಾಶ್ (ಜೂನಿಯರ್‌ ದರ್ಶನ್), ರಜನಿಕಾಂತ್, ರೇಣುಕಪ್ರಸಾದ್, ಕುರಿಪ್ರತಾಪ್, ಚಂದ್ರಪ್ರಭ, ಜ್ಯೋತಿ, ದೇವು ಸಕಲೇಶಪುರ, ಖಳನಾಗಿ ಪುನೀತ್ ಮತ್ತು ಶರಣ್, ಬೇಬಿ ಶಾನ್ವಿ ನಾಯಕಿಯರಾಗಿ ಮಾನಸಗೌಡ, ಪೂಜಾ ರಾಮಚಂದ್ರ ಮುಂತಾದವರು ನಟಿಸುತ್ತಿದ್ದಾರೆ. ಛಾಯಾಗ್ರಹಣ ಜಿ. ರಂಗಸ್ವಾಮಿ, ನೃತ್ಯ ಜಿ.ಪಿ. ಆರಾಧ್ಯ, ಕಾರ್ಯಕಾರಿ ನಿರ್ಮಾಪಕ ವಿಜಯ್, ವಸ್ತ್ರ ವಿನ್ಯಾಸ ಲೇಖನ ಅವರದಾಗಿದೆ.

Whats_app_banner