‘ಪುಣ್ಯಾತ್ಮರೀಗ ಜಾಣ ಕಿವುಡರು, ನಾಚಿಕೆ ಆಗ್ಬೇಕು ನಿಮಗೆಲ್ಲ!’ ಅಶ್ವಿನಿ ಪುನೀತ್ ಬಗ್ಗೆ ಕೀಳು ಪದ ಬಳಸಿದವರ ವಿರುದ್ಧ ಪ್ರಥಮ್ ಕಿಡಿ
ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಪೋಸ್ಟ್‌ಗಳ ಮೂಲಕವೇ ಸುದ್ದಿಯಲ್ಲಿರುವ ಒಳ್ಳೇ ಹುಡುಗ ಪ್ರಥಮ್, ಈಗ ಅಶ್ವಿನಿ ಪುನೀತ್ ರಾಜ್‌ಕುಮಾರ್ ಬಗ್ಗೆ ಕೆಟ್ಟದಾಗಿ ನಿಂದಿಸಿದವರ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ. ಅಭಿಯಾನವೊಂದನ್ನೂ ಆರಂಭಿಸಿದ್ದಾರೆ. ಈ ಮೂಲಕ ನಾವು ಅಶ್ವಿನಿ ಮೇಡಂ ಅವರ ಬೆನ್ನಿಗೆ ನಿಲ್ಲೋಣ ಎಂದಿದ್ದಾರೆ.
Pratham on Ashwini Puneeth Rajkumar: ದೊಡ್ಮನೆ ಸೊಸೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಬಗ್ಗೆ ಕೆಟ್ಟ ಪದ ಬಳಕೆ ಮಾಡಿ ನಿಂದಿಸಿದ ಬೆನ್ನಲ್ಲೇ, ಅಪ್ಪು ಅಭಿಮಾನಿಗಳು ದೂರು ದಾಖಲಿಸಿದ್ದಾರೆ. ಈ ಕೂಡಲೇ ತುಚ್ಯ ಪದ ಬಳಕೆ ಮಾಡಿ ಮಾನಹಾನಿ ಮಾಡಿದ ವ್ಯಕ್ತಿಯನ್ನು ಬಂಧಿಸುವಂತೆಯೂ ದೂರಿನಲ್ಲಿ ಅವರು ಒತ್ತಾಯಿಸಿದ್ದಾರೆ. ಈ ನಡುವೆ ಸೋಷಿಯಲ್ ಮೀಡಿಯಾದಲ್ಲೂ ಹೆಣ್ಣುಮಗಳೊಬ್ಬಳ ಬಗ್ಗೆ ಈ ಮಟ್ಟದ ನಿಂದನೆ ಮಾಡಿದ್ದೂ ಸಹ ಟೀಕೆಗೆ ಗುರಿಯಾಗಿದೆ. ದರ್ಶನ್ ಅಭಿಮಾನಿ ಎಂದು ಹೇಳಿಕೊಳ್ಳುವ ಆ ವ್ಯಕ್ತಿಯ ಮನಸ್ಥತಿಯ ಬಗ್ಗೆಯೂ ನೆಟ್ಟಿಗರು ಮಾತನಾಡುತ್ತಿದ್ದಾರೆ.
ಇತ್ತ ಇನ್ನೊಂದು ಬದಿಯಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಜತೆಗೆ ನಾವಿದ್ದೇವೆ, ನಿಮ್ಮ ಬೆಂಬಲಕ್ಕೆ ಅಭಿಮಾನಿ ಬಳಗವಿದೆ ಎಂದೂ ಸಾಕಷ್ಟು ಮಂದಿ ಸೋಷಿಯಲ್ ಮೀಡಿಯಾದಲ್ಲಿ ಅವರ ಬೆನ್ನಿಗೆ ನಿಲ್ಲುತ್ತಿದ್ದಾರೆ. ಅದೇ ರೀತಿ ಬಿಗ್‌ಬಾಸ್ ವಿಜೇತ, ಸ್ಯಾಂಡಲ್ ವುಡ್ ಒಳ್ಳೇ ಹುಡುಗ ಪ್ರಥಮ್ ಸಹ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಜತೆ ನಿಂತಿದ್ದಾರೆ. X ವೇದಿಕೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಥಮ್, ಕೊಂಚ ಬಿರುಸಾಗಿಯೇ ಮಾತನಾಡಿದ್ದಾರೆ.
ಒಳ್ಳೆ ಹುಡುಗ ಪ್ರಥಮ್, ತಮ್ಮ ನೇರ ನಡೆ ನುಡಿಯಿಂದಲೇ ಫೇಮಸ್. ಅನಿಸಿದ್ದನ್ನು ನೇರವಾಗಿ ಹೇಳುವ ವ್ಯಕ್ತಿತ್ವ ಅವರದ್ದು. ಯಾರೇ ಇದ್ದರೂ ಸರಿ, ವಾಸ್ತವ ಅರಿತು ಮಾತನಾಡುವ ಮನಸ್ಥಿತಿ. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಪೋಸ್ಟ್‌ಗಳ ಮೂಲಕವೇ ಸುದ್ದಿಯಲ್ಲಿರುವ ಈ ನಟ ಈಗ ಅಶ್ವಿನಿ ಪುನೀತ್ ರಾಜ್‌ಕುಮಾರ್ ಬಗ್ಗೆ ಕೆಟ್ಟದಾಗಿ ನಿಂದಿಸಿದವರ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ. ಅಭಿಯಾನವೊಂದನ್ನೂ ಆರಂಭಿಸಿದ್ದಾರೆ.
ಒಳ್ಳೇ ಹುಡುಗ ಪ್ರಥಮ್ ಪೋಸ್ಟ್
"ಅಪ್ಪು sir ಸಹಾಯ ತಗೊಂಡು ಬೆಳೆದ ಬಹಳಷ್ಟು ಪುಣ್ಯಾತ್ಮರು ಇವತ್ತು ಜಾಣಕಿವುಡರಾಗಿದ್ದಾರೆ. ಅಶ್ವಿನಿ ಪುನೀತ್ ರಾಜ್‌ಕುಮಾರ್ ಮೇಡಂ ಅವರನ್ನ ಕರೆಸಿ ತಮ್ಮ ಸಿನಿಮಾ ಪ್ರಚಾರ ಮಾಡಿದವರು ಇವತ್ತು ಮೂಕರಾಗಿದ್ದರೆ.ನಾಚಿಕೆ ಆಗ್ಬೇಕು ನಿಮ್ಗೆಲ್ಲಾ;ಆತ್ಮಾವಲೋಕನ ಮಾಡಿಕೊಳ್ಳೋ ಸಮಯವಿದು;ಅವ್ರ ಬಗ್ಗೆ ನಮ್ಮ ಅಷ್ಟೇ ನಮ್ಮ ಮೌನ ಪ್ರತಿಭಟನೆ. ನಾವು ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇವೆ ಅಶ್ವಿನಿ ಮೇಡಂ" ಎಂದಿದ್ದಾರೆ.
ನಿಮ್ಮ ಜತೆ ನಾವಿದ್ದೇವೆ
ಇದಕ್ಕೂ ಮೊದಲು ಇನ್ನೊಂದು ಪೋಸ್ಟ್ ಶೇರ್ ಮಾಡಿದ್ದ ಅವರು, "ಅದ್ಭುತ ವ್ಯಕ್ತಿತ್ವದ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರಿಗೆ ನಮ್ಮ ಬೆಂಬಲ; ನೀವೇ ನಿಮ್ಮ ಶಕ್ತಿ; ಐಡೆಂಟಿಟಿ ಇಲ್ಲದೋರು ನಿಮ್ಮ ವ್ಯಕ್ತಿತ್ವವನ್ನ ಅವಮಾನಿಸಿದರೆ ಯಾರನ್ನ ಕೇಳೋದು? ಸೋಷಿಯಲ್ ಮೀಡಿಯಾದಲ್ಲಿ ಅಸಭ್ಯವಾಗಿ ಮಾತಾಡಿದ್ರೂ ಏನೂ ಮಾಡದ ಕಾನೂನು ವ್ಯವಸ್ಥೆಯ ವಿರುದ್ಧ ಮೌನ ಪ್ರತಿಭಟನೆ; ಎಲ್ಲರೂ ಅಶ್ವಿನಿ ಮೇಡಂ ಅವರ ಫೋಟೋ ಹಾಕಿ ಬೆಂಬಲಿಸೋಣ" ಎಂದಿದ್ದಾರೆ.
ಏನಿದು ಘಟನೆ?
ಈ ಸಲದ ಐಪಿಎಲ್‌ನಲ್ಲಿ ಆರ್‌ಸಿಬಿ ಸತತ ಸೋಲುಗಳಿಂದ ಕಂಗೆಟ್ಟಿದೆ. ಈ ಸೋಲಿಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರೇ ಕಾರಣ ಎಂದು ಗಜಪಡೆ X ಖಾತೆಯಿಂದ ಕೆಟ್ಟ ಪದಗಳಿಂದ ಕೂಡಿದ ಪೋಸ್ಟ್ ಶೇರ್ ಆಗಿತ್ತು. ಅದು ವೈರಲ್ ಆದ ಬೆನ್ನಲ್ಲೇ, ದರ್ಶನ್ ಮತ್ತು ಅವರ ಅಭಿಮಾನಿಗಳ ವಿರುದ್ಧ ವ್ಯಾಪಕ ಟೀಕೆ ಕೇಳಿಬಂದಿತ್ತು. ಈ ನಡುವೆ ರೊಚ್ಚಿಗೆದ್ದ ಅಪ್ಪು ಅಭಿಮಾನಿಗಳು ನಿಂದಿಸಿದ ವ್ಯಕ್ತಿಯ ವಿರುದ್ಧ ದೂರನ್ನೂ ನೀಡಿದ್ದಾರೆ.