ಬಿಗ್ ಬಾಸ್ ಬಳಿಕ ಸಂಗೀತಾ ಶೃಂಗೇರಿಗೆ ಬಂಪರ್; ರಿಲೀಸ್ ಆಯ್ತು ದಿಗಂತ್‌ ನಟನೆಯ ಮಾರಿಗೋಲ್ಡ್ ಟೀಸರ್
ಕನ್ನಡ ಸುದ್ದಿ  /  ಮನರಂಜನೆ  /  ಬಿಗ್ ಬಾಸ್ ಬಳಿಕ ಸಂಗೀತಾ ಶೃಂಗೇರಿಗೆ ಬಂಪರ್; ರಿಲೀಸ್ ಆಯ್ತು ದಿಗಂತ್‌ ನಟನೆಯ ಮಾರಿಗೋಲ್ಡ್ ಟೀಸರ್

ಬಿಗ್ ಬಾಸ್ ಬಳಿಕ ಸಂಗೀತಾ ಶೃಂಗೇರಿಗೆ ಬಂಪರ್; ರಿಲೀಸ್ ಆಯ್ತು ದಿಗಂತ್‌ ನಟನೆಯ ಮಾರಿಗೋಲ್ಡ್ ಟೀಸರ್

Marigold Kannada Movie Teaser: ಕನ್ನಡ ನಟ ದಿಗಂತ್‌ ಮತ್ತು ಬಿಗ್‌ಬಾಸ್‌ ಸ್ಪರ್ಧಿ ಸಂಗೀತಾ ಶೃಂಗೇರಿ ನಟನೆಯ ಮಾರಿಗೋಲ್ಡ್‌ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಮಾರಿಗೋಲ್ಡ್‌ ಎನ್ನುವುದು ಗೋಲ್ಡ್ ಬಿಸ್ಕಟ್ ಮಾರಲು ಹೋದವರ 4 ಜನರ ಹುಡುಗರ ಕಥೆಯಾಗಿದೆ.

ಬಿಗ್ ಬಾಸ್ ಬಳಿಕ ಸಂಗೀತಾ ಶೃಂಗೇರಿಗೆ ಬಂಪರ್; ರಿಲೀಸ್ ಆಯ್ತು ಮಾರಿಗೋಲ್ಡ್ ಟೀಸರ್
ಬಿಗ್ ಬಾಸ್ ಬಳಿಕ ಸಂಗೀತಾ ಶೃಂಗೇರಿಗೆ ಬಂಪರ್; ರಿಲೀಸ್ ಆಯ್ತು ಮಾರಿಗೋಲ್ಡ್ ಟೀಸರ್

ಬೆಂಗಳೂರು: ಆ‌ರ್.ವಿ. ಕ್ರಿಯೇಶನ್ಸ್ ಬ್ಯಾನರ್ ಅಡಿ‌ ರಘುವರ್ದನ್ ನಿರ್ಮಾಣ ಮಾಡಿ ರಾಘವೇಂದ್ರ ಎಂ. ನಾಯ್ಕ. ಆಕ್ಷನ್ ಕಟ್ ಹೇಳಿರುವ " ಮಾರಿ ಗೋಲ್ಡ್ " ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಈ ಚಿತ್ರದ ಕುರಿತು ಚಿತ್ರತಂಡ ಹೆಚ್ಚಿನ ವಿವರ ನೀಡಿದೆ. " ಗುಣವಂತ ಸೇರಿ ಹಲವು ಚಿತ್ರ ನಿರ್ದೇಶನ ಮಾಡಿದ್ದೇನೆ. ರಾಘವೇಂದ್ರ ನಾಯ್ಕ್ ಹೇಳಿದ ಕಥೆ ಇಷ್ಟವಾಯಿತು. ನಾನು ನಿರ್ಮಾಣ ಮಾಡುತ್ತೇನೆ. ನೀವೇ ನಿರ್ದೇಶನ ಮಾಡಿ ಎಂದು ಅವರಿಗೆ ಅವಕಾಶ ಮಾಡಿಕೊಟ್ಟಿದ್ದೇನೆ. ಚಿತ್ರ ಅಂದುಕೊಂಡದಕ್ಕಿಂತ ಚೆನ್ನಾಗಿ ಮೂಡಿ ಬಂದಿದೆ. ನಾಯಕ ದಿಗಂತ್, ನಾಯಕಿ ಸಂಗೀತ ಸಹಕಾರ ಅದ್ಬುವಾಗಿತ್ತು. ಎಲ್ಲಾ ಅಂದುಕೊಂಡಂತೆ ಆದರೆ ಮುಂದಿನ ತಿಂಗಳು ಎರಡನೇ ಅಥವಾ ಮೂರನೇ ವಾರ ಚಿತ್ರ ತೆರೆಗೆ ತರುವ ಉದ್ದೇಶವಿದೆ ಸಹಕಾರವಿರಲಿ" ಎಂದು ನಿರ್ಮಾಪಕ ರಘುವರ್ಧನ್ ಹೇಳಿದ್ದಾರೆ.

ಗೋಲ್ಡ್‌ ಬಿಸ್ಕಟ್‌ ಮಾರಾಟಗಾರರ ಕಥೆ

"ಮಾರಿ ಗೋಲ್ಡ್ ಗೋಲ್ಡ್ ಬಿಸ್ಕಟ್ ಮಾರಲು ಹೋದವರ 4 ಜನರ ಹುಡುಗರ ಕಥೆ, ಚಿತ್ರದುರ್ಗ, ಬೆಂಗಳೂರು ಸಕಲೇಶಪುರ ಮತ್ತಿತರ ಕಡೆ ಚಿತ್ರಿಕರಣ ಮಾಡಲಾಗಿದೆ. ಕೋವಿಡ್ ಆದ ಮೇಲೆ ಆ ನಂತರದ ಬೆಳವಣಿಗೆಗಳು ಸಿನಿಮಾ ತಡ ಆಗೋಕೆ ಕಾರಣವಾಯಿತು. ಈಗ ರಿಲೀಸ್ ಗೆ ರೆಡಿಯಾಗಿದೆ.. ಟೀಸರ್ ಮೂಲಕ ಪ್ರಚಾರ ಆರಂಬಿಸಿದ್ದೇವೆ ಎಂದು ಹೇಳಿದರು.

ಕಂಪ್ಲೀಟ್ ಎಂಟರ್ಟೇನ್ಮೆಂಟ್ ಗೆ ಮೊದಲ ಆದ್ಯತೆ ಕೊಟ್ಟು ಸಿನಿಮಾ ಮಾಡಲಾಗಿದೆ ಮಾಡಲಾಗಿದೆ. ಚಿತ್ರದ ಮೂಲಕ ದಿಗಂತ್‌ ಅವರನ್ನು ಬೇರೆ ರೀತಿ ತೋರಿಸುವ ಪ್ರಯತ್ನ ಮಾಡಲಾಗಿದೆ‌. ಚಿತ್ರೀಕರಣಕ್ಕೂ ಮುನ್ನ ದಿಗಂತ್ ಅವರಿಗೆ ರಿಹಸರ್ಲ್ ಮಾಡಲಾಗಿದೆ. ಮನರಂಜನೆ ಡ್ರಾಮ ಮತ್ತು ಥ್ರಿಲ್ಲರ್ ಕಥೆ ಹೊಂದಿದೆ" ಎಂದು ನಿರ್ದೇಶಕ ರಾಘವೇಂದ್ರ ಎಂ, ನಾಯ್ಕ್ ಮಾಹಿತಿ ನೀಡಿದ್ದಾರೆ.

ದಿಗಂತ್‌ಗೆ ಬುದ್ಧಿವಂತ ವಂಚಕನ ಪಾತ್ರ

ಕಥೆ ಇಷ್ಡವಾಯಿತು, ಯಶ್ ಶೆಟ್ಟಿ,ಸಂಗೀತ ಶೆಟ್ಟಿ, ಸಂಪತ್, ಕಾಕ್ರೋಚ್ ಸುಧಿ, ಟ್ರೈಲರ್ ಇಷ್ಟವಾದರೆ ಎಲ್ಲರಿಗೂ ಹೇಳಿ, ಸಿನಿಮಾ ಗೆದ್ದರೆ ಮತ್ತಷ್ಟು ಮಾಡೋಣ ಎಂದಿದ್ದಾರೆ. ಚಿತ್ರದಲ್ಲಿ ಬುದ್ದಿವಂತ ಸ್ಕಾಮರ್ ಪಾತ್ರ ಎಂದು ನಟ ದಿಗಂತ್‌ ಮಾಹಿತಿ ನೀಡಿದ್ದಾರೆ.

ದಿಗಂತ್‌ ನನ್ನ ಚೈಲ್ಡ್‌ವುಡ್‌ ಕ್ರಶ್‌ ಎಂದ ಸಂಗೀತ ಶೃಂಗೇರಿ

ನಟ ದಿಗಂತ್ ನನ್ನ ಚೇಲ್ಡ್ ವುಡ್ ಕ್ರಷ್, ಅದನ್ನು ಅವರಿಗೂ ಹೇಳಿದ್ದೇನೆ. ಎಲ್ಲವೂ ಊಹೆ ಮಾಡಿಕೊಂಡು ಸಿನಿಮಾ ಮಾಡಿದ್ಸಾರೆ, ಛಾಯಾಗ್ರಾಹಕ ಚಂದ್ರಶೇಖರ್ ಉತ್ತಮವಾಗಿ ತೋರಿಸಿದ್ದಾರೆ‌.ಚಿತ್ರದಿಂದ ಸುಮಾರು‌ ವರ್ಷದ ಕನಸು ಕನಸಾಗಿದೆ ಎಂದು ಸಂಗೀತಾ ಶೃಂಗೇರಿ ಹೇಳಿದ್ದಾರೆ.

ಕಲಾವಿದ ಭಜರಂಗ ಶೆಟ್ಟಿ ಮಾತನಾಡಿ, ಮಾರಿ ಗೋಲ್ಡ್ ನಲ್ಲಿ ನಟಿಸಲು ಗೆಳೆಯ ಯಶ್ ಶೆಟ್ಟಿ ಕಾರಣ ಕೋವಿಡ್ ಸಮಯದಲ್ಲಿ ಊರಲ್ಲಿ‌ಮೀನು ಹಿಡಿಯುತ್ತಿದ್ದೆ ಎಂದರು. ಸಂಭಾಷಣೆ ಬರೆದಿರುವ ರಘು ನಿಡವಳ್ಳಿ ವಿಭಿನ್ನ ಸಂಭಾಷಣೆ ಇದೆ ಎಂದರೆ ಸಂಗೀತ ನಿರ್ದೇಶಕ ವೀರ್ ಸಮರ್ಥ್ , ಚಿತ್ರದಲ್ಲಿ ಎರಡೆ ಹಾಡು ಇವೆ. ಇದೊಂದು ಥ್ರಿಲ್ಲರ್ ಸಿನಿಮಾ ಆಕ್ಷನ್ ಸಿನಿಮಾ, ಸಿನಿಮಾ‌ಹಿಟ್ ಆದರೆ ದಿಗಂತ್ ಆಕ್ಷನ್ ಹೀರೋ ಆಗಲಿದ್ಸಾರೆ. ಯೋಗರಾಜ್ ಭಟ್, ವಿಜಯ್ ಭರಮಸಾಗರ, ಕವಿರಾಜ್ ಹಾಡು ಬರೆದಿದ್ದಾರೆ, ಗೆಲವಿನ ಆಶಾಕಿರಣ ಇದೆ ಎಂದರು.

ಛಾಯಾಗ್ರಾಹಕ ಚಂದ್ರಶೇಖರ್ ಹೊಸ ಜಾನರ್ ಸಿನಿಮಾ , ಥ್ರಿಲ್ಲರ್ ಸಿನಿಮಾ ಮಾಡಿರಲಿಲ್ಲ. ನಿರ್ಮಾಪಕ ರಘುವರ್ಧನ್ ಜೊತೆ ಗುಣವಂತದಲ್ಲಿಬಕೆಲಸ ಮಾಡಿದ್ದೇ ಈಗ ಅವರ ನಿರ್ಮಾಣದಲ್ಲಿ ಕೆಲಸ ಮಾಡಿದ್ದೇವೆ ಎಂದರು. ಚಿತ್ರದಲ್ಲಿ ದಿಗಂತ್ ಮಂಚಾಲೆ, ಸಂಗೀತ ಶ್ರಂಗೇರಿ, ಸಂಪತ್ ಮೈತ್ರೇಯ, ಯಶ್ ಶೆಟ್ಟಿ , ಕಾಕ್ರೋಚ್ ಸುಧೀ, ವಜ್ರಾಂಗ್ ಶೆಟ್ಟಿ, ಬಾಲಾ ರಾಜವಾಡಿ, ಮಹಂತೇಶ್, ಸಂದೀಪ್ ಮಲಾನಿ ಮತ್ತಿತರರು ಚಿತ್ರದ ತಾರಾಬಳಗದಲ್ಲಿದ್ದಾರೆ. ಚಿತ್ರಕ್ಕೆ ವೀ‌ರ್ ಸಮರ್ಥ್ ಸಂಗೀತ, ರಘು ನಿಡುವಳ್ಳಿ ಸಂಭಾಷಣೆಣ , ಕೆ.ಎಸ್. ಚಂದ್ರಶೇಖರ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ಪ್ರಶಾಂತ್ ಗೌಡ ಕಲೆ, ನೃತ್ಯ ಕಲೈ, ಸಾಹಸ ಅರ್ಜುನ್ ರಾಜ್ ಹಾಗು ನಿರ್ಮಾಣ ನಿರ್ವಹಣೆ: ಜೇವಿಯ‌ರ್ ಫರ್ನಾಂಡಿಸ್‌ ಚಿತ್ರಕ್ಕಿದೆ.

Whats_app_banner