Explainer: ಆಗಿದ್ದು ಆಗೋಯ್ತು, ಇನ್ಮೇಲಿಂದ ಹೊಸ ಲೆಕ್ಕ; ಸ್ಯಾಂಡಲ್‌ವುಡ್‌ನಲ್ಲಿ ಮುಂದಿನ ದ್ವಿತೀಯಾರ್ಧ ಅಕ್ಷರಶಃ ಮಾರಿ ಹಬ್ಬ!
ಕನ್ನಡ ಸುದ್ದಿ  /  ಮನರಂಜನೆ  /  Explainer: ಆಗಿದ್ದು ಆಗೋಯ್ತು, ಇನ್ಮೇಲಿಂದ ಹೊಸ ಲೆಕ್ಕ; ಸ್ಯಾಂಡಲ್‌ವುಡ್‌ನಲ್ಲಿ ಮುಂದಿನ ದ್ವಿತೀಯಾರ್ಧ ಅಕ್ಷರಶಃ ಮಾರಿ ಹಬ್ಬ!

Explainer: ಆಗಿದ್ದು ಆಗೋಯ್ತು, ಇನ್ಮೇಲಿಂದ ಹೊಸ ಲೆಕ್ಕ; ಸ್ಯಾಂಡಲ್‌ವುಡ್‌ನಲ್ಲಿ ಮುಂದಿನ ದ್ವಿತೀಯಾರ್ಧ ಅಕ್ಷರಶಃ ಮಾರಿ ಹಬ್ಬ!

Upcoming Kannada Movies 2024: ಇನ್ನು ಮುಂದಿನ ನಾಲ್ಕೈದು ತಿಂಗಳು ಸ್ಯಾಂಡಲ್‌ವುಡ್‌ನಲ್ಲಿ ಹಬ್ಬದ ಕಳೆ. ತಿಂಗಳಿಗೊಂದರಂತೆ ಸ್ಟಾರ್‌ ನಟರ ಸಿನಿಮಾಗಳು ಬಿಡುಗಡೆ ಆಗಲಿದೆ. ಆ ಪೈಕಿ ಯಾವೆಲ್ಲ ಸಿನಿಮಾಗಳು ಈ ವರ್ಷ ಎಲ್ಲರನ್ನು ರಂಜಿಸಲಿವೆ? ಇಲ್ಲಿದೆ ನೋಡಿ ಮಾಹಿತಿ.

Explainer: ಆಗಿದ್ದು ಆಗೋಯ್ತು, ಇನ್ಮೇಲಿಂದ ಹೊಸ ಲೆಕ್ಕ; ಸ್ಯಾಂಡಲ್‌ವುಡ್‌ನಲ್ಲಿ ಮುಂದಿನ ದ್ವಿತೀಯಾರ್ಧ ಅಕ್ಷರಶಃ ಮಾರಿ ಹಬ್ಬ!
Explainer: ಆಗಿದ್ದು ಆಗೋಯ್ತು, ಇನ್ಮೇಲಿಂದ ಹೊಸ ಲೆಕ್ಕ; ಸ್ಯಾಂಡಲ್‌ವುಡ್‌ನಲ್ಲಿ ಮುಂದಿನ ದ್ವಿತೀಯಾರ್ಧ ಅಕ್ಷರಶಃ ಮಾರಿ ಹಬ್ಬ!

Sandalwood Upcoming Movies List: "ಏನ್ರಿ ಸ್ಟಾರ್‌ಗಳ ಸಿನಿಮಾಗಳಿಲ್ಲ, ಥಿಯೇಟರ್‌ ನಡಿಯೋದು ಹೇಗೆ? ಸ್ಟಾರ್‌ ನಟರಿಗೆ ವರ್ಷಕ್ಕೆ ಎರಡ್ಮೂರು ಸಿನಿಮಾ ಮಾಡೋಕೆ ಹೇಳಿ... ಇಂಡಸ್ಟ್ರಿ ನಡಿಯುವುದಾದ್ರೂ ಹೇಗೆ? ಅವ್ರು ಸಿನಿಮಾ ಮಾಡಿ ಬೇಗ ಬೇಗ ಬಿಡುಗಡೆ ಮಾಡಲಿಲ್ಲ ಅಂದ್ರೆ, ನಮ್ಮೆಲ್ಲರ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ!.. ಹೀಗೆ ಕಳೆದ ಕೆಲ ತಿಂಗಳ ಹಿಂದೆ ಕನ್ನಡ ಚಿತ್ರೋದ್ಯಮದ ಬಗ್ಗೆ ಒಳಗಿನವರಿಂದಲೇ ಅಪಸ್ವರಗಳು ಕೇಳಿಬಂದಿದ್ದವು. ಸಿನಿಮಾಗಳಿಲ್ಲದೆ, ಚಿತ್ರಮಂದಿರದ ಮಾಲೀಕರು ವಾಣಿಜ್ಯ ಮಂಡಳಿಯ ಮೆಟ್ಟಿಲೇರಿದ್ದರು. ಮುಂದುವರಿದು, ಸ್ಟಾರ್‌ ನಟರ ಜತೆಗೆ ಈ ಬಗ್ಗೆ ಚರ್ಚೆ ನಡೆಸುವುದಾಗಿ ಹೇಳಿತ್ತು ವಾಣಿಜ್ಯ ಮಂಡಳಿ. ಆದರೆ, ಅದು ಅಂದುಕೊಂಡಷ್ಟು ಸುಲಭದ ಕೆಲಸವಲ್ಲ!

ಕನ್ನಡದಲ್ಲಿ ಇರುವುದೇ ಬೆರಳೆಣಿಕೆ ಸ್ಟಾರ್‌ ನಟರು. ಆ ಪೈಕಿ ಕೆಲವರು ಇದೀಗ ಬರೀ ಕನ್ನಡಕ್ಕೆ ಮಾತ್ರ ಸೀಮಿತವಾಗಿಲ್ಲ. ಪ್ಯಾನ್‌ ಇಂಡಿಯಾ ಪರಿಕಲ್ಪನೆಗೆ ಮಾರುಹೋಗಿ, ದೊಡ್ಡ ಬಜೆಟ್‌, ದೊಡ್ಡ ಕ್ಯಾನ್ವಾಸ್‌, ದೊಡ್ಡ ದೊಡ್ಡ ಸೆಟ್‌, ನೂರಾರು ಕೋಟಿ ಬಂಡವಾಳದ ಸಿನಿಮಾ ಮಾಡುತ್ತಿದ್ದಾರೆ. ಹಾಗಾಗಿಯೇ ಸಿನಿಮಾಗಳು ತಡವಾಗುತ್ತಿವೆ. ವರ್ಷಾನುಗಟ್ಟಲೇ ಸಿನಿಮಾ ಶೂಟಿಂಗ್‌ಗಳು ನಡೆಯುತ್ತಿವೆ. ಈ ಒಂದು ಬೆಳವಣಿಗೆ ಕನ್ನಡ ಚಿತ್ರೋದ್ಯಮದ ಮೇಲೆ ಪರಿಣಾಮ ಬೀರಿದ್ದು ನಿಜವಾದರೂ, ವಾಸ್ತವದ ಜತೆ ಸಾಗಬೇಕಿರುವುದು, ಬೇರೆ ಸಿನಿಮಾಗಳ ಜತೆಗೆ ಸೆಣೆಸುವುದಕ್ಕೆ ಇವೆಲ್ಲ ಕೌಶಲಗಳು ನಮ್ಮ ಚಿತ್ರರಂಗಕ್ಕೂ ಅವಶ್ಯಕ ಅಲ್ಲವೇ?

ಚಂದನವನಕ್ಕೆ ಈ ದ್ವಿತೀಯಾರ್ಧ ಅಕ್ಷರಶಃ ಮಾರಿಹಬ್ಬ

ಇತ್ತೀಚಿನ ದಿನಗಳಲ್ಲಿ ನಾವ್ಯಾರಿಗೂ ಕಮ್ಮಿ ಇಲ್ಲ ಅನ್ನೋ ಮಟ್ಟಿಗೆ ಕನ್ನಡ ಚಿತ್ರೋದ್ಯಮ ಏರುಗತಿಯಲ್ಲಿ ಸಾಗಿದೆ. ಕಳೆದ ಎರಡ್ಮೂರು ವರ್ಷದಲ್ಲಿ ಅಂಥ ಒಂದಷ್ಟು ಸಿನಿಮಾಗಳು ಅದನ್ನು ಸಾಬೀತುಪಡಿಸಿವೆ. ಆ ಖದರ್‌, ಆ ಗತ್ತನ್ನು ಉಳಿಸಿಕೊಂಡು ಹೋಗಬೇಕಿರುವುದು ಸದ್ಯದ ತುರ್ತು! ಅದರಂತೆ, ಕಳೆದ ಆರು ತಿಂಗಳಿಂದ ಸ್ಟಾರ್‌ ನಟರ ಸಿನಿಮಾಗಳಿಲ್ಲದೆ ಬಾಡಿ ಬತ್ತಿ ಹೋಗಿದ್ದ ಕನ್ನಡ ಚಿತ್ರೋದ್ಯಮಕ್ಕೆ, ಇದೀಗ ಮುಂದಿನ ದ್ವಿತೀಯಾರ್ಧ ಅಕ್ಷರಶಃ ಮಾರಿಹಬ್ಬ. ಅಂದರೆ, ಸ್ಟಾರ್‌ ನಟರ ಸಾಲು ಸಾಲು ಸಿನಿಮಾಗಳು, ಮುಂದಿನ ನಾಲ್ಕೈದು ತಿಂಗಳು ಎಲ್ಲರನ್ನು ರಂಜಿಸಲಿರುವುದು ಖಾತರಿಯಾಗಿದೆ. ಹಾಗಾದ್ರೆ, ಅಖಾಡೆಕ್ಕೆ ಯಾರೆಲ್ಲ ಬರ್ತಿದ್ದಾರೆ? ಇಲ್ಲಿದೆ ನೋಡಿ.

ಇನ್ನೇನು ಶೀಘ್ರದಲ್ಲಿಯೇ ನಾವು ಚಿತ್ರಮಂದಿರಕ್ಕೆ ಬರ್ತೀವಿ ಅಂತ ಸ್ಟಾರ್‌ ನಟರು ತಮ್ಮ ಸಿನಿಮಾಗಳ ಅಧಿಕೃತ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದ್ದಾರೆ. ಈ ಬೆನ್ನಲ್ಲೇ ಸ್ಯಾಂಡಲ್‌ವುಡ್‌ನಲ್ಲೀಗ ಹಬ್ಬದ ಕಳೆ ಶುರುವಾಗಿದೆ. ಒಂದು ರೀತಿ ಬರದ ಸ್ಥಿತಿಯಲ್ಲಿದ್ದ ಕನ್ನಡ ಚಿತ್ರರಂಗಕ್ಕೀಗ ಸೋನೆ ಮಳೆ ಸುರಿಯುವ ಮುನ್ಸೂಚನೆ ಸಿಕ್ಕಿದೆ. ಹಾಗಾದರೆ, ಯಾವೆಲ್ಲ ಸ್ಟಾರ್‌ಗಳ ಸಿನಿಮಾಗಳು ಯಾವಾಗ ತೆರೆಗೆ ಬರಲಿವೆ?

ಯಾರೆಲ್ಲ ಸ್ಟಾರ್‌ ನಟರ ಆಗಮನವಾಗಲಿದೆ..

ಭೀಮ: ದುನಿಯಾ ವಿಜಯ್‌ ನಟನೆ ಮತ್ತು ನಿರ್ದೇಶನದ ಭೀಮ ಚಿತ್ರ ಇದೀಗ ಹಾಡುಗಳ ಮೂಲಕ ಪ್ರೇಕ್ಷಕರ ಎದೆ ಬಡಿತ ಹೆಚ್ಚಿಸಿದೆ. ಈಗಾಗಲೇ ಪ್ರಚಾರ ಕೆಲಸದಲ್ಲಿಯೂ ಮುಳುಗಿರುವ ಈ ಸಿನಿಮಾ, ಆಗಸ್ಟ್‌ 9ರಂದು ತೆರೆಗೆ ಬರಲಿದೆ. ಕೃಷ್ಣ ಸಾರ್ಥಕ್‌ ಮತ್ತು ಜಗದೀಶ್‌ ಗೌಡ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ಕೃಷ್ಣಂ ಪ್ರಣಯ ಸಖಿ: ಗೋಲ್ಡನ್‌ ಸ್ಟಾರ್‌ ಗಣೇಶ್‌ ನಾಯಕನಾಗಿ ನಟಿಸಿರುವ ಕೃಷ್ಣಂ ಪ್ರಣಯ ಸಖಿ ಸಿನಿಮಾ ಸಹ ಹಾಡುಗಳ ಮೂಲಕವೇ ಮೋಡಿ ಮಾಡುತ್ತಿದೆ. ತ್ರಿಶೂಲ್ ಎಂಟರ್ಟೈನ್ಮೆಂಟ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಪ್ರಶಾಂತ್ ಜಿ ರುದ್ರಪ್ಪ ಬಂಡವಾಳ ಹೂಡಿದ್ದಾರೆ. ಶ್ರೀನಿವಾಸರಾಜ್ ಈ ಚಿತ್ರ ನಿರ್ದೇಶಿಸಿದ್ದಾರೆ. ಈ ಸಿನಿಮಾ ಆಗಸ್ಟ್‌ 15ರಂದು ತೆರೆಗೆ ಬರಲಿದೆ.

ಮ್ಯಾಕ್ಸ್‌: ಕಿಚ್ಚ ಸುದೀಪ್‌ ನಟನೆಯ ಮ್ಯಾಕ್ಸ್‌ ಸಿನಿಮಾ ಸಹ ಬಹುತೇಕ ಕೆಲಸಗಳನ್ನು ಮುಗಿಸಿಕೊಂಡಿದೆ. ಇತ್ತೀಚೆಗಷ್ಟೇ ಕಿರು ಟೀಸರ್‌ ಬಿಡುಗಡೆ ಮಾಡಿ ಅಭಿಮಾನಿಗಳ ಎದೆಬಡಿತ ಹೆಚ್ಚಿಸಿದ್ದರು. ಹಾಗಾದರೆ ಕಿಚ್ಚನ ಮ್ಯಾಕ್ಸ್‌ ಸಿನಿಮಾ ಬಿಡುಗಡೆ ಯಾವಾಗ? ಸದ್ಯದ ಕೆಲ ಮೂಲಗಳ ಪ್ರಕಾರ ಸೆಪ್ಟೆಂಬರ್‌ ಇಲ್ಲವೇ ಅಕ್ಟೋಬರ್‌ನಲ್ಲಿ ಈ ಸಿನಿಮಾ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ.

ಮಾರ್ಟಿನ್‌: ಧ್ರುವ ಸರ್ಜಾ ನಟನೆಯ ಮಾರ್ಟಿನ್‌ ಸಿನಿಮಾ ಸಹ ಇದೇ ವರ್ಷ ತೆರೆಗೆ ಬರುವುದು ಅಧಿಕೃತವಾಗಿದೆ. ಎ.ಪಿ ಅರ್ಜುನ್‌ ನಿರ್ದೇಶನದ ಈ ಸಿನಿಮಾ ಅಕ್ಟೋಬರ್‌ 11ರಂದು ತೆರೆಗೆ ಬರಲಿದೆ. ಕಳೆದ ಮೇ ತಿಂಗಳಲ್ಲಿಯೇ ಈ ಸಿನಿಮಾದ ಅಧಿಕೃತವಾಗಿ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಣೆ ಮಾಡಿದೆ. ಉದಯ್‌ ಮೆಹ್ತಾ ನಿರ್ಮಾಣದ ಈ ಸಿನಿಮಾ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲಿದೆ.

ಭೈರತಿ ರಣಗಲ್‌: ಶಿವರಾಜ್‌ಕುಮಾರ್‌ ತಮ್ಮದೇ ಹೋಮ್‌ ಬ್ಯಾನರ್‌ ಗೂಈತಾ ಪಿಕ್ಚರ್ಸ್‌ ಅಡಿಯಲ್ಲಿ ನಿರ್ಮಿಸಿರುವ ಭೈರತಿ ರಣಗಲ್‌ ಸಿನಿಮಾ ಎಲ್ಲ ಅಂದುಕೊಂಡಂತೆ ಆದರೆ, ಆಗಸ್ಟ್‌ 15ರಂದು ತೆರೆಕಾಣಬೇಕಿತ್ತು. ಇದೀಗ ಈ ಸಿನಿಮಾ ಸೆಪ್ಟಂಬರ್‌ನಲ್ಲಿ ಬರುವುದು ಅಧಿಕೃತವಾಗಿದೆ. ನರ್ತನ್‌ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದೆ. ಮಫ್ತಿ ಚಿತ್ರದ ಪ್ರೀಕ್ವೆಲ್‌ ಇದಾಗಿದೆ.

ಬಘೀರ: ಶ್ರೀಮುರಳಿ ನಟನೆಯ ಹೊಂಬಾಳೆ ಫಿಲಂಸ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಬಘೀರ ಚಿತ್ರದ ಬಹುತೇಕ ಶೂಟಿಂಗ್‌ ಮುಗಿದಿದ್ದು, ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಲ್ಲಿ ಬಿಜಿಯಾಗಿದೆ. ಹಾಗಾಗಿ ಶತಾಯಗತಾಯ ಇದೇ ವರ್ಷ ಈ ಸಿನಿಮಾ ತೆರೆಗೆ ತರುವ ಪ್ಲಾನ್‌ ನಿರ್ಮಾಪಕರದ್ದು. ಇನ್ನೇನು ಶೀಘ್ರದಲ್ಲಿ ಬಿಡುಗಡೆ ದಿನಾಂಕ ಘೋಷಣೆ ಆಗುವ ಸಾಧ್ಯತೆ ಇದೆ.

ಲೈನಪ್‌ನಲ್ಲಿ ಇನ್ನು ಹಲವು ಸಿನಿಮಾ

ಉಪೇಂದ್ರ ನಟನೆ ಮತ್ತು ನಿರ್ದೇಶನದ UI ಸಿನಿಮಾ ಶೂಟಿಂಗ್‌ ಮುಗಿದಿದೆ. ಬಿಡುಗಡೆಗೆ ಒಂದೊಳ್ಳೆ ದಿನಾಂಕಕ್ಕಾಗಿ ಚಿತ್ರತಂಡ ಕಾದು ಕುಳಿತಿದೆ. ಮತ್ತೊಂದು ಕಡೆ, ಪ್ರೇಮ್‌ ಮತ್ತು ಧ್ರುವ ಸರ್ಜಾ ಕಾಂಬಿನೇಷನ್‌ನ ಕೆಡಿ ಸಹ ಇದೇ ವರ್ಷದ ಡಿಸೆಂಬರ್‌ನಲ್ಲಿ ಬರುವುದು ಖಚಿತವಾಗಿದೆ.

Whats_app_banner