Bheema movie collection: 5 ದಿನದಲ್ಲಿ ಭೀಮನ ಕಲೆಕ್ಷನ್ ಎಷ್ಟು? ಬಾಕ್ಸ್ ಆಫೀಸ್ ಧೂಳೆಬ್ಬಿಸುತ್ತಿರುವುದೇ ದುನಿಯಾ ವಿಜಯ್ ಸಿನಿಮಾ
Bheema movie collection Day 5: ಸಕ್‌ನಿಲ್ಕ್.ಕಾಂ ಪ್ರಕಾರ ದುನಿಯಾ ವಿಜಯ್ ನಟನೆಯ, ಡ್ರಗ್ಸ್ ವಿರುದ್ಧ ಹೋರಾಟವಿರುವ ಭೀಮ ಸಿನಿಮಾ ಐದನೇ ದಿನ ಅಂದರೆ, ಮಂಗಳವಾರ ಸುಮಾರು 1.30 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದು ಆರಂಭಿಕ ಅಂದಾಜು. ದಿನ 4 ಸೋಮವಾರ 1.65 ಕೋಟಿ ರೂಪಾಯಿ ಗಳಿಕೆ ಮಾಡಿತ್ತು.
ಬೆಂಗಳೂರು: ದುನಿಯಾ ವಿಜಯ್ ನಟನೆಯ ಭೀಮ ಸಿನಿಮಾ ಕಳೆದ ವಾರ ಬಿಡುಗಡೆಯಾಗಿದ್ದು, ಬಾಕ್ಸ್ ಆಫೀಸ್‌ನಲ್ಲಿ ಉತ್ತಮವಾಗಿಯೇ ಗಳಿಕೆ ಮಾಡುತ್ತಿದೆ. ಪ್ರಮುಖವಾಗಿ ಆನ್‌ಲೈನ್ ಟಿಕೆಟ್ ಖರೀದಿ ಆಧರಿಸಿ ಬಾಕ್ಸ್ ಆಫೀಸ್ ವರದಿ ನೀಡುವ ಸಕ್‌ನಿಲ್ಕ್.ಕಾಂ ಪ್ರಕಾರ ಭೀಮ ಕಳೆದ ಐದು ದಿನಗಳಲ್ಲಿ ಒಟ್ಟು 14.30 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಭೀಮ ಸಿನಿಮಾವನ್ನು ನೇರವಾಗಿ ಟಿಕೆಟ್ ಖರೀದಿಸಿ ನೋಡುವವರು ಸಾಕಷ್ಟು ಜನರು ಇರುವ ಕಾರಣ ಭೀಮ ಸಿನಿಮಾದ ಗಳಿಕೆ ಇನ್ನಷ್ಟು ಹೆಚ್ಚಿರುವ ಸಾಧ್ಯತೆ ಇದೆ. ನಿನ್ನೆ ಭೀಮ ಸಿನಿಮಾ ಎಷ್ಟು ಗಳಿಕೆ ಮಾಡಿದೆ ಎಂದು ನೋಡೋಣ.
ಭೀಮ ಸಿನಿಮಾ ಗಳಿಕೆ- ದಿನ 5
ಸಕ್‌ನಿಲ್ಕ್.ಕಾಂ ಪ್ರಕಾರ ಭೀಮ ಸಿನಿಮಾ ಐದನೇ ದಿನ ಅಂದರೆ, ಮಂಗಳವಾರ ಸುಮಾರು 1.30 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದು ಆರಂಭಿಕ ಅಂದಾಜು. ದಿನ 4 ಸೋಮವಾರ 1.65 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಭಾನುವಾರದ 4 ಕೋಟಿ ರೂಪಾಯಿ ಗಳಿಕೆಗೆ ಹೋಲಿಸಿದರೆ ಇದು ಶೇಕಡ 58ರಷ್ಟು ಇಳಿಕೆಯಾಗಿದೆ. ಶನಿವಾರ ಭೀಮ ಸಿನಿಮಾ 3.4 ಕೋಟಿ ರೂಪಾಯಿ, ಶುಕ್ರವಾರ ಅಂದ್ರೆ ಮೊದಲ ದಿನ 3.95 ರೂಪಾಯಿ ಗಳಿಕೆ ಮಾಡಿತ್ತು.
ಭೀಮ ಸಿನಿಮಾದ ಒಟ್ಟು ಕಲೆಕ್ಷನ್
ಈ ಐದು ದಿನಗಳಲ್ಲಿ ಭೀಮ ಸಿನಿಮಾ ಒಟ್ಟಾರೆ 14.30 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಸಿಂಗಲ್ ಥಿಯೇಟರ್ ಸೇರಿದಂತೆ ಎಲ್ಲಾ ಚಿತ್ರಮಂದಿರಗಳಲ್ಲಿ ಒಟ್ಟು ಎಷ್ಟು ಗಳಿಕೆಯಾಗಿದೆ ಎಂಬ ಲೆಕ್ಕವನ್ನು ಚಿತ್ರತಂಡ ಅಧಿಕೃತವಾಗಿ ನೀಡಿಲ್ಲ. ನಾಳೆಯಿಂದ ಮತ್ತೆ ಚಿತ್ರಮಂದಿರಗಳಲ್ಲಿ ಭೀಮ ಸಿನಿಮಾದ ಗಳಿಕೆ ಹೆಚ್ಚುವ ನಿರೀಕ್ಷೆಯಿದೆ. ಸ್ವಾತಂತ್ರ್ಯ ದಿನಾಚರಣೆ, ವೀಕೆಂಡ್‌ನಲ್ಲಿ ಹೆಚ್ಚು ಜನರು ಥಿಯೇಟರ್‌ಗೆ ಆಗಮಿಸುವ ಸೂಚನೆಯಿದೆ. ಇದೇ ಸಮಯದಲ್ಲಿ ಗೌರಿ ಮತ್ತು ಕೃಷ್ಣಂ ಪ್ರಣಯ ಸಖಿ ಸಿನಿಮಾಗಳು ರಿಲೀಸ್ ಆಗುತ್ತಿದ್ದು, ಚಿತ್ರಮಂದಿರಗಳಲ್ಲಿ ಜನದಟ್ಟಣೆ ಹೆಚ್ಚುವ ಸಾಧ್ಯತೆ ಇದೆ. ಕೃಷ್ಣಂ ಪ್ರಣಯ ಸಖಿ ಸಿನಿಮಾದ ಪ್ರೀಮಿಯರ್ ಶೋ ಇಂದು ನಡೆಯಲಿದ್ದು, ನಾಳೆ ಭೀಮನ ಜತೆಗೆ ಕೃಷ್ಣನೂ ಸೇರಲಿದ್ದಾನೆ.
ಭೀಮ ಸಿನಿಮಾದ ವಿಮರ್ಶೆ
ದುನಿಯಾ ವಿಜಯ್ ನಟನೆಯ ಭೀಮ ಸಿನಿಮಾದ ವಿಮರ್ಶೆಯನ್ನು ಈಗಾಗಲೇ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರಕಟಿಸಿದೆ. "ಸಿನಿಮಾಕ್ಕಾಗಿ ಆಯ್ಕೆ ಮಾಡಿಕೊಂಡ ವಿಷಯ ಮತ್ತು ಅದನ್ನು ಪ್ರಸ್ತುತಪಡಿಸಿದ ರೀತಿ ಇಷ್ಟವಾಗುತ್ತದೆ. ಡ್ರಗ್ಸ್ ಜಾಲದ ಕುರಿತು ಸಾಕಷ್ಟು ಹೋಂವರ್ಕ್ ಮಾಡಿರುವುದು ಕಾಣಿಸುತ್ತದೆ. ಇಂತಹ ವ್ಯಸನಗಳಿಗೆ ಬಲಿಬೀಳುವ ಜನತೆಗೆ ಯಾವ ರೀತಿಯಲ್ಲಿ ಬುದ್ಧಿ ಹೇಳಿದರೆ ಸರಿಯಾಗುತ್ತೋ ಅದೇ ದಾಟಿಯಲ್ಲಿ ಬುದ್ಧಿ ಹೇಳಿದ್ದಾರೆ. ಅಮಲು ಹಿಡಿಸಿ ಅಮಲು ಬಿಡಿಸೋ ಭೀಮ ಇದು ಎಂದರೂ ತಪ್ಪಾಗದು. ರಕ್ತಪಾತ ತುಸು ಕಡಿಮೆ ಇದ್ದರೆ ಫ್ಯಾಮಿಲಿ ಸಮೇತ ಹೋಗಿ ನೋಡಿಬನ್ನಿ ಎನ್ನಬಹುದಿತ್ತು. ಹದಿಹರೆಯದವರೂ ನೋಡಬೇಕಾದ ಸಿನಿಮಾವಿದು. ಆದರೆ, ಎ ಸರ್ಟಿಫಿಕೇಟ್ ದೊರಕದಂತೆ ಚಿತ್ರತಂಡ ಎಚ್ಚರಿಕೆ ವಹಿಸಬೇಕಿತ್ತು. ಈ ಸಿನಿಮಾ ನೋಡಿದ ಯುವಜನತೆ ಇಂತಹ ವ್ಯಸನಗಳಿಂದ ದೂರವಾದರೆ ಸಿನಿಮಾದ ಪರಿಶ್ರಮ ಸಾರ್ಥಕವಾಗಬಹುದು" ಎಂದು ವಿಮರ್ಶೆ ತಿಳಿಸಿದೆ. ಈ ವಿಮರ್ಶೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ವಿಭಾಗ