ದುನಿಯಾ ವಿಜಯ್‌ ನಟನೆಯ ಭೀಮ ಚಿತ್ರದ ಟ್ರೇಲರ್‌ ಬಿಡುಗಡೆ; ಯಾಕೆ ಈ ಭೀಮ ವಿಶೇಷ? ಇಲ್ಲಿವೆ 5 ಕಾರಣಗಳು-sandalwood news bheema trailer out why should you watch duniya vijays movie bheema here are 5 reasons mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ದುನಿಯಾ ವಿಜಯ್‌ ನಟನೆಯ ಭೀಮ ಚಿತ್ರದ ಟ್ರೇಲರ್‌ ಬಿಡುಗಡೆ; ಯಾಕೆ ಈ ಭೀಮ ವಿಶೇಷ? ಇಲ್ಲಿವೆ 5 ಕಾರಣಗಳು

ದುನಿಯಾ ವಿಜಯ್‌ ನಟನೆಯ ಭೀಮ ಚಿತ್ರದ ಟ್ರೇಲರ್‌ ಬಿಡುಗಡೆ; ಯಾಕೆ ಈ ಭೀಮ ವಿಶೇಷ? ಇಲ್ಲಿವೆ 5 ಕಾರಣಗಳು

ದುನಿಯಾ ವಿಜಯ್‌ ನಟನೆ ಮತ್ತು ನಿರ್ದೇಶನದ ಭೀಮ ಸಿನಿಮಾದ ಟ್ರೇಲರ್‌ ಸದ್ಯ ಎಲ್ಲರ ಗಮನಸೆಳೆಯುತ್ತಿದೆ. ಇನ್ನೇನು ಇದೇ ತಿಂಗಳ 9ರಂದು ಈ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.

ದುನಿಯಾ ವಿಜಯ್‌ ನಟನೆಯ ಭೀಮ ಚಿತ್ರದ ಟ್ರೇಲರ್‌ ಬಿಡುಗಡೆ; ಯಾಕೆ ಈ ಭೀಮ ವಿಶೇಷ? ಇಲ್ಲಿವೆ 5 ಕಾರಣಗಳು
ದುನಿಯಾ ವಿಜಯ್‌ ನಟನೆಯ ಭೀಮ ಚಿತ್ರದ ಟ್ರೇಲರ್‌ ಬಿಡುಗಡೆ; ಯಾಕೆ ಈ ಭೀಮ ವಿಶೇಷ? ಇಲ್ಲಿವೆ 5 ಕಾರಣಗಳು (Youtube/ Anand Audio)

Bheema Movie Trailer: ಸ್ಯಾಂಡಲ್‌ವುಡ್‌ನ ಕರಿಚಿರತೆ, ದುನಿಯಾ ವಿಜಯ್‌ ನಟಿಸಿ ನಿರ್ದೇಶಿಸಿರುವ ಭೀಮ ಸಿನಿಮಾ ಬಿಡುಗಡೆಯ ಹಂತಕ್ಕೆ ಬಂದು ನಿಂತಿದೆ. ಸಿನಿಮಾ ಘೋಷಣೆ ಆದಾಗಿನಿಂದ ಸುದ್ದಿಯಲ್ಲಿರುವ ಈ ಸಿನಿಮಾ, ಅದಾದ ಬಳಿಕ ಹಾಡು, ಟೀಸರ್‌ಗಳ ಮೂಲಕವೇ ನೋಡುಗರ ಕಣ್ಣರಳಿಸುವಂತೆ ಮಾಡಿತ್ತು. ಇದೀಗ ಆ ಕೌತುಕಕ್ಕೆ ಟ್ರೇಲರ್‌ ಮೂಲಕ ಒಗ್ಗರಣೆ ಹಾಕಿದೆ ಭೀಮ ಸಿನಿಮಾ. ಮಾಸ್‌ ಅವತಾರದಲ್ಲಿ ಎದುರಾದ ವಿಜಯ್‌, ಭೀಮನಾಗಿ ಅಬ್ಬರಿಸಿದ್ದಾರೆ. ಈ ಚಿತ್ರ ಆಗಸ್ಟ್‌ 9ರಂದು ರಾಜ್ಯಾದ್ಯಂತ ರಿಲೀಸ್‌ ಆಗಲಿದೆ. ಹಾಗಾದರೆ, ಈ ಸಿನಿಮಾ ಏಕೆ ವಿಶೇಷ? ಇಲ್ಲಿದೆ ನೋಡಿ.

ದುನಿಯಾ ವಿಜಯ್‌ ನಿರ್ದೇಶನದ ಚಿತ್ರ

ಭೀಮ ಸಿನಿಮಾ ಹೆಚ್ಚು ನಿರೀಕ್ಷೆ ಹುಟ್ಟುಹಾಕಲು ಕಾರಣ, ಇದು ಅವರದೇ ನಿರ್ದೇಶನದ ಸಿನಿಮಾ. 2021ರಲ್ಲಿ ತೆರೆಗೆ ಬಂದಿದ್ದ ಸಲಗ ಸಿನಿಮಾ ಮೂಲಕ ನಿರ್ದೇಶಕನ ಕ್ಯಾಪ್‌ ಧರಿಸಿ ಯಶಸ್ಸು ಕಂಡಿದ್ದ ದುನಿಯಾ ವಿಜಯ್‌, ಇದೀಗ ಅದೇ ಕಾಯಕವನ್ನು ಮುಂದುವರಿಸಿದ್ದಾರೆ. ಭೀಮ ಸಿನಿಮಾವನ್ನೂ ತಾವೇ ನಿರ್ದೇಶನ ಮಾಡಿ ಮತ್ತೊಂದು ಹಿಟ್‌ನ ನಿರೀಕ್ಷೆಯಲ್ಲಿದ್ದಾರೆ. ಕೃಷ್ಣ ಸಾರ್ಥಕ್‌ ಮತ್ತು ಜಗದೀಶ್‌ ಗೌಡ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

ಡ್ರಗ್‌ ವ್ಯಸನದ ಬಗ್ಗೆ ಮಾತಾಡ್ತಾನೆ ಭೀಮ

ಈ ಹಿಂದೆ ಹೇಳಿಕೊಂಡಿಂತೆ, ಈ ಸಿನಿಮಾ ಯುವ ಪೀಳಿಗೆಯನ್ನು ತಲೆಯಲ್ಲಿಟ್ಟುಕೊಂಡು ಮಾಡಿದ ಸಿನಿಮಾ ಎಂದು ವಿಜಯ್‌ ಹೇಳಿಕೊಂಡಿದ್ದರು. ಇದೀಗ ಟ್ರೇಲರ್‌ನಲ್ಲಿ ಆ ವಿಚಾರವನ್ನು ಎಲ್ಲರ ಮುಂದಿಟ್ಟಿದ್ದಾರೆ. ಡ್ರಗ್‌ ವ್ಯಸನವನ್ನೇ ಪ್ರಧಾನ ಕಥೆಯನ್ನಾಗಿ ಮಾಡಿಕೊಂಡು, ರೌಡಿಸಂ ಮೂಲಕ ರಕ್ತದೋಕುಳಿ ಹರಿಸುವ ಕೆಲಸವೂ ಈ ಚಿತ್ರದಲ್ಲಿ ಕಾಣಿಸುತ್ತದೆ. ಎಂದಿನಂತೆ, ನಟ ದುನಿಯಾ ವಿಜಯ್‌ ಆಕ್ಷನ್‌ ಮೂಲಕವೇ ಭೀಮ ಚಿತ್ರದಲ್ಲಿ ಅಬ್ಬರಿಸಿದ್ದಾರೆ. ಡ್ರಗ್ಸ್‌ ಮಾತ್ರವಲ್ಲದೆ, ವ್ಹೀಲಿಂಗ್‌ ಕ್ರೇಜ್‌ ಬಗ್ಗೆಯೂ ಸಿನಿಮಾ ಮಾತನಾಡುತ್ತದೆ.

ಹದಿಹರೆಯದ ಬದುಕಿನ ದುಸ್ಥಿತಿಯ ಅನಾವರಣ

ಈ ಹಿಂದೆ ನಟ ದುನಿಯಾ ವಿಜಯ್‌ ಹೇಳಿದಂತೆ, "ಈ ಚಿತ್ರದ ಮೂಲಕ ಒಂದು ಸೂಕ್ಷ್ಮ ವಿಚಾರವನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದೇನೆ. ಸಂದೇಶವಿರುವ ಈ ಚಿತ್ರ ಎಲ್ಲರಲ್ಲೂ ಜಾಗೃತಿ ಮೂಡಿಸುವಂತೆ ಆಗಬೇಕು. ವಿದ್ಯಾರ್ಥಿಗಳು, ಹರಿಹರಿಯದವರ ಬದುಕಿನ ದುಸ್ಥಿತಿಯ ವಿಚಾರವು ಸೇರಿದಂತೆ ನಾ ಕಂಡು ಕೇಳಿದಂತಹ ಒಂದಷ್ಟು ಸತ್ಯಗಳನ್ನು ಹೊರಹಾಕುವ ಪ್ರಯತ್ನ ಭೀಮ ಚಿತ್ರದಲ್ಲಿ ಮಾಡಿದ್ದೇನೆ" ಎಂದಿದ್ದರು.

ಮುಚ್ಚಿದ ಚಿತ್ರಮಂದಿರಗಳೇ ಭೀಮನ ಟಾರ್ಗೆಟ್‌

ಆಗಸ್ಟ್‌ 9ರಂದು ರಾಜ್ಯಾದ್ಯಂತ ಭೀಮ ಸಿನಿಮಾ ಬಿಡುಗಡೆ ಆಗಲಿದೆ. ದೊಡ್ಡ ಸಿನಿಮಾಗಳಿಲ್ಲದೇ ಬಸವಳಿದಿದ್ದ ಚಿತ್ರಮಂದಿಗಳು, ಭರ್ತಿಯಾಗಿಯೇ ಎಷ್ಟೋ ತಿಂಗಳುಗಳು ಕಳೆದಿವೆ. ಈ ನಡುವೆ ಒಂದಷ್ಟು ಥಿಯೇಟರ್‌ಗಳು ಮುಚ್ಚುವ ಹಂತದಲ್ಲಿವೆ. ಅಂಥ ಚಿತ್ರಮಂದಿರಗಳನ್ನು ಹುಡುಕಿ, ಆ ಥಿಯೇಟರ್‌ಗಳಲ್ಲಿ ಭೀಮ ಸಿನಿಮಾವನ್ನು ರಿಲೀಸ್‌ ಮಾಡಲು ಮುಂದಾಗಿದೆ ಚಿತ್ರತಂಡ. ಅದರಂತೆ ರಾಜ್ಯಾದ್ಯಂತ 18 ಚಿತ್ರಮಂದಿಗಳು ಮುಚ್ಚುವ ಹಂತದಲ್ಲಿವೆ. ಆ ಥಿಯೇಟರ್‌ಗಳನ್ನೇ ಟಾರ್ಗೆಟ್‌ ಮಾಡಿ, ಅವುಗಳ ಜತೆಗೆ ರಾಜ್ಯಾದ್ಯಂತ ಒಟ್ಟು 400 ಸ್ಕ್ರೀನ್‌ಗಳಲ್ಲಿ ಭೀಮ ಚಿತ್ರ ತೆರೆಗೆ ಬರಲಿದೆ. ಜತೆಗೆ ವಿದೇಶದಲ್ಲಿಯೂ ಈ ಸಿನಿಮಾ ರಿಲೀಸ್‌ ಆಗಲಿದೆ.

ತಾಂತ್ರಿಕವಾಗಿ ಬಲಿಷ್ಠ

ಭೀಮ ಸಿನಿಮಾವನ್ನು ಅವಸರಕ್ಕೆ ಬಿದ್ದು ಮಾಡಿದ ಚಿತ್ರವಲ್ಲ ಎಂದು ಈ ಹಿಂದೆ ಚಿತ್ರತಂಡ ಹೇಳಿಕೊಂಡಿತ್ತು. ಸಮಯ ತೆಗೆದುಕೊಂಡು, ಮೇಕಿಂಗ್‌ ವಿಚಾರದಲ್ಲಿ ಅಚ್ಚುಕಟ್ಟಾಗಿಯೇ ಮಾಡಿದ ಚಿತ್ರ ಈ ಭೀಮ ಎಂದಿತ್ತು. ಇದೀಗ ಬಿಡುಗಡೆ ಆಗಿರುವ ಟ್ರೇಲರ್‌ನಲ್ಲಿ ಇಡೀ ತಂಡದ ಶ್ರಮ ಕಾಣುತ್ತದೆ. ಇನ್ನೇನಿದ್ದರೂ, ಆಗಸ್ಟ್‌ 9ಕ್ಕೆ ಭೀಮನ ಅಸಲಿ ತಾಕತ್ತು ಪ್ರದರ್ಶನವಾಗಲಿದೆ. ಅಂದಹಾಗೆ ಈ ಚಿತ್ರಕ್ಕೆ ಛಾಯಾಗ್ರಹಕರಾಗಿ ಶಿವಸೇನಾ ದುಡಿದಿದ್ದಾರೆ. ಸಂಕಲನ ದೀಪು ಎಸ್. ಕುಮಾರ್, ಸಂಭಾಷಣೆ ಮಾಸ್ತಿ, ವಿನೋದ್ ಅವರ ಸಾಹಸ, ಚೇತನ್ ಡಿಸೋಜಾ, ಟೈಗರ್ ಶಿವ, ಗೌತಮ್ ಹಾಗೂ ಡ್ಯಾನ್ಸ್ ಕೋರಿಯೋಗ್ರಾಫಿ ಬಿ. ಧನಂಜಯ, ರಾಜು ಮಾಡಿದ್ದಾರೆ.