ಕನ್ನಡ ಸುದ್ದಿ  /  ಮನರಂಜನೆ  /  Amruthadhaare: ಎಲ್ಲರ ಖರ್ಚಿಗೆ ತಲಾ 10 ಸಾವಿರ ಕೊಡ್ತಿನಿ ಎಂದ ಮನೆ ಯುಜಮಾನಿ ಭೂಮಿಕಾ; 5 ಕೋಟಿ ರೂ ಕೇಳಿದ ಅಶ್ವಿನಿ ಪರಿಸ್ಥಿತಿ ನೋಡಿ

Amruthadhaare: ಎಲ್ಲರ ಖರ್ಚಿಗೆ ತಲಾ 10 ಸಾವಿರ ಕೊಡ್ತಿನಿ ಎಂದ ಮನೆ ಯುಜಮಾನಿ ಭೂಮಿಕಾ; 5 ಕೋಟಿ ರೂ ಕೇಳಿದ ಅಶ್ವಿನಿ ಪರಿಸ್ಥಿತಿ ನೋಡಿ

Amruthadhaare serial Yesterday episode: ಅಮೃತಧಾರೆ ಸೀರಿಯಲ್‌ನಲ್ಲಿ ಭೂಮಿಕಾ ಈಗ ಮನೆಯೊಡತಿಯಾಗಿದ್ದಾರೆ. ಬೇಕಾಬಿಟ್ಟಿ ಹಣ ಖರ್ಚು ಮಾಡುತ್ತಿದ್ದ ಮನೆಯವರಿಗೆ ತೊಂದರೆಯಾಗಿದೆ. ಅಶ್ವಿನಿ 5 ಕೋಟಿ ರೂಪಾಯಿ ಚೆಕ್‌ ಕೇಳಿದ ಬಳಿಕ ಆತಂಕ ಹೆಚ್ಚಾಗಿದೆ.

Amruthadhaare: ಎಲ್ಲರ ಖರ್ಚಿಗೆ ತಲಾ 10 ಸಾವಿರ ಕೊಡ್ತಿನಿ ಎಂದ ಮನೆ ಯುಜಮಾನಿ ಭೂಮಿಕಾ
Amruthadhaare: ಎಲ್ಲರ ಖರ್ಚಿಗೆ ತಲಾ 10 ಸಾವಿರ ಕೊಡ್ತಿನಿ ಎಂದ ಮನೆ ಯುಜಮಾನಿ ಭೂಮಿಕಾ

ಝೀ ಕನ್ನಡ ವಾಹಿನಿಯ ಅಮೃತಧಾರೆ ಸೀರಿಯಲ್‌ನಲ್ಲಿ ಭೂಮಿಕಾ ಈಗ ಮನೆಯೊಡತಿಯಾಗಿದ್ದಾರೆ. ಗೌತಮ್‌ ಕೊನೆಗೂ ಭೂಮಿಕಾಳನ್ನು ಹೊಗಳುತ್ತಾನೆ. ಇಷ್ಟು ದಿನ ನನ್ನ ಮನದ ಅರಸಿಯಾಗಿದ್ದೀರಿ. ಈಗ ಈ ಮನೆಗೂ ಅರಸಿಯಾಗಿದ್ದೀರಿ ಎನ್ನುತ್ತಾರೆ ಗೌತಮ್‌. ಈ ಸಮಯದಲ್ಲಿ ಗೌತಮ್‌ ಅವರು ಭೂಮಿಕಾರನ್ನು ಸಾಕಷ್ಟು ಹೊಗಳುತ್ತಾರೆ. "ನಿಮ್ಮ ಆಳ್ವಿಕೆಯಲ್ಲಿ ನಾವು ಸುಖ ನೆಮ್ಮದಿಯಿಂದ ಇರುವ ನಿರೀಕ್ಷೆಯಿದೆ" ಎಂದು ಗೌತಮ್‌ ನಾಟಕೀಯವಾಗಿ ಹೇಳುತ್ತಾರೆ. "ನಾನು ನಿಮ್ಮ ಭರವಸೆ ಈಡೇರಿಸುವ ಪ್ರಯತ್ನ ಮಾಡುವೆ" ಎಂದು ಭೂಮಿಕಾ ಹೇಳುತ್ತಾರೆ.

ಅಶ್ವಿನಿ ಕೋಪದಲ್ಲಿದ್ದಾಳೆ. ಅಲ್ಲಿಗೆ ಬಂದ ಅರುಣ್‌ "ಸೀನಿಯರಿಯಾಟಿ ಮೇಲೆ ನಿನ್ನ ಅತ್ತೆ ಯುಜಮಾನಿಯಾಗಬೇಕಿತ್ತು. ಈಗ ಅತ್ತಿಗೆ ಯುಜಮಾನಿ. ನನಗೆ ಹಣ ಅರೆಂಜ್‌ ಆಗದು. ಹೀಗಾಗಿ ದುಡ್ಡು ಕೇಳುವ ಪ್ಲಾನ್‌ ಬೇಡ ಅನಿಸುತ್ತದೆ" ಎಂದು ಅರುಣ್‌ ಹೇಳುತ್ತಾನೆ. "ನಾನು ಬಿಡೋಲ್ಲ. ನಾನು ಅಣ್ಣನಲ್ಲಿ ಕೇಳುವೆ. ನಾನು ಏನು ಅಂತ ಅವನಿಗೆ ಗೊತ್ತು. ನಾನು ಕೇಳಿದ್ರೆ ಇಲ್ಲ ಅನ್ನೋಲ್ಲ" ಎಂದು ಅಶ್ವಿನಿ ಹೇಳುತ್ತಾಳೆ. "ನೀನು ಹೋಗಿ ಗೌತಮ್‌ ಭಾವನ ಕೇಳ್ತಿಯಾ. ಅದು ಸಾಧ್ಯನಾ?" ಎಂದು ಪ್ರಶ್ನಿಸುತ್ತಾನೆ. "ನಾನು ಟ್ರೈ ಮಾಡುವೆ" ಎನ್ನುತ್ತಾಳೆ ಅಶ್ವಿನಿ. "ಸದ್ಯ ಅಷ್ಟಾದರೆ ಸಾಕು" ಎಂದು ಅರುಣ್‌ ಅಂದುಕೊಳ್ಳುತ್ತಾನೆ.

ಮಲ್ಲಿ ಪಾಯಸ ಮಾಡಿ ಜೈದೇವ್‌ಗೆ ನೀಡುತ್ತಾಳೆ. ಭೂಮಿಕಾಗೆ ಯುಜಮಾನಿ ಪಟ್ಟ ದೊರಕಿದ್ದಕ್ಕೆ ಪಾಯಸ ಮಾಡಿರುತ್ತಾಳೆ. ಜೈದೇವ್‌ ನಾಟಕೀಯವಾಗಿ ನನಗೂ ಖುಷಿಯಾಯ್ತು ಎನ್ನುತ್ತಾನೆ. ಭೂಮಿಕಾ ಪಟ್ಟಕ್ಕೆ ಏರಿದ್ಲು ಅಂದ್ರೆ ನಮಗೆ ಚಟ್ಟ ರೆಡಿ ಎಂದುಕೊಳ್ಳುತ್ತಾನೆ.

ಟ್ರೆಂಡಿಂಗ್​ ಸುದ್ದಿ

ಅಶ್ವಿನಿ ಗೌತಮ್‌ನನ್ನು ಭೇಟಿಯಾಗುತ್ತಾಳೆ. ಅರುಣ್‌ ಬಂದ ಮೇಲೆ ನಮಗೆ ಟೈಮೇ ನೀಡುತ್ತಿಲ್ಲ ಎನ್ನುತ್ತಾಳೆ. ಸಾರಿ ಪುಟ್ಟ ಸ್ವಲ್ಪ ಬಿಝಿಯಾಗಿಬಿಟ್ಟೆ ಎನ್ನುತ್ತಾನೆ. ಅಣ್ಣ ಇನ್ನೊಂದು ವಿಷ್ಯ, ನನಗೆ ಸ್ವಲ್ಪ ಅಮೌಂಟ್‌ ಬೇಕಿತ್ತು ಎನ್ನುತ್ತಾಳೆ. ಅಷ್ಟೇನಾ ಅದನ್ನು ಕೇಳಲು ಹಿಂಜರಿಕೆ ಏಕೆ. ಅತ್ತಿಗೆನ ಕೇಳು, ಚೆಕ್‌ ನೀಡ್ತಾರೆ ಎನ್ನುತ್ತಾರೆ. ಅವರನ್ನ ಕೇಳಿ ನನಗೆ ಅಭ್ಯಾಸ ಇಲ್ಲ. ನೀನೇ ಕೇಳ್ತಿಯಾ ಎನ್ನುತ್ತಾಳೆ. "ಅವರು ಬೇರೆ ಅಲ್ಲ, ನಾನು ಬೇರೆ ಅಲ್ಲ, ನೀನು ಕೇಳು" ಎನ್ನುತ್ತಾರೆ ಗೌತಮ್‌. ಬೇಕಿದ್ರೆ ನಾನೂ ಒಂದು ಮಾತು ಹೇಳ್ತಿನಿ, ಚೆಕ್‌ ತೆಗೋ ಎನ್ನುತ್ತಾರೆ. ಆದರೆ, ಗೌತಮ್‌ಗೆ ಇದು ಕೋಟ್ಯಂತರ ರೂಪಾಯಿಯ ವಿಷಯ ಎಂದು ತಿಳಿದಿರುವುದಿಲ್ಲ. ಈ ಮಾತು ಕೇಳಿಸಿಕೊಂಡ ಅರುಣ್‌ "ದುಡ್ಡು ಯಾರು ಕೊಟ್ರೆ ಏನು, ದುಡ್ಡು ಸಿಗೋದಷ್ಟೇ ಮುಖ್ಯ" ಎನ್ನುತ್ತಾನೆ.

ಮನೆಗೆ ಜೈದೇವ್‌ ಪ್ರೇಯಸಿ ಬರುತ್ತಾಳೆ. ಮಲ್ಲಿ ಇರುವಾಗಲೇ ಅಶ್ವಿನಿ ಗೆಳತಿ ಜತೆಗೆ ಸ್ನೇಹ ಬೆಳೆಸುವ ಪ್ರಯತ್ನದಲ್ಲಿದ್ದಾನೆ ಜೈದೇವ್‌. ಅಲ್ಲಿ ಕುಳಿತು ಮಾತನಾಡುತ್ತಾರೆ. ಈತನ ಕೈ ಗಾಯ ನೋಡಿ "ಅಯ್ಯೋ ಏನಾಯ್ತು" ಎಂದು ಕೇರ್‌ ತೋರುತ್ತಾಳೆ. ಈ ನೆಪದಲ್ಲಿ ಕೈ ಸವರುವ ಪ್ರಯತ್ನವೂ ಕಾಣುತ್ತದೆ. ನಾನು ಅಶ್ವಿನಿಗಾಗಿ ಬಂದಿಲ್ಲ, ನಿಮಗಾಗಿಯೇ ಬಂದೆ ಎನ್ನುತ್ತಾಳೆ. ಇವತ್ತು ನಾನು ಒಂದು ಪಾರ್ಟಿ ಅರೆಂಜ್‌ ಮಾಡಿದ್ದೀನಿ, ನೀವು ಬರಲೇಬೇಕು ಎನ್ನುತ್ತಾಳೆ. ದುಡ್ಡು, ಫ್ರೆಂಡ್ಸ್‌ ಇದ್ರೆ ಪಾರ್ಟಿ ಮಾಡಬಹುದು ಅನ್ನುತ್ತಾಳೆ. ಜತೆಗೆ ಬಾಯ್‌ ಫ್ರೆಂಡ್‌ ಇರಬೇಕು ಅನ್ನುತ್ತಾನೆ ಜೈದೇವ್‌. ಹೀಗೆ ಆಕೆಯ ಜತೆ ಪಾರ್ಟಿ ಮಾಡಲು ರೆಡಿಯಾಗುತ್ತಾನೆ.

ಇನ್ನೊಂದೆಡೆ ಶಕುಂತಲಾ ಮತ್ತು ಸಹೋದರ ಮಾತನಾಡುತ್ತ ಇರುತ್ತಾರೆ. ಅಲ್ಲಿಗೆ ಭೂಮಿಕಾ ಬರುತ್ತಾಳೆ. "ಅತ್ತೆ ಇಷ್ಟು ದಿನ ಅಜ್ಜಿ ಯುಜಮಾನಿಯಾಗಿದ್ದರು. ಈ ಮನೆಯ ಖರ್ಚು ವೆಚ್ಚ ನೀವೇ ನೋಡ್ತಾ ಇದ್ರಿ. ನನಗೆ ಅಷ್ಟು ಐಡಿಯಾ ಇಲ್ಲ. ಒಂದು ಮಿಡಲ್‌ ಕ್ಲಾಸ್‌ ಮನೆಯನ್ನ ಹೇಗೆ ನಡೆಸಬೇಕು ಎಂದು ಗೊತ್ತು. ಈ ಮನೆಯ ಲೈಫ್‌ಸ್ಟೈಲ್‌ಗೆ ಎಲ್ಲಿಂದ ಎಷ್ಟು ತರಿಸಬೇಕು, ತಿಂಗಳಿಗೆ ಎಷ್ಟು ಖರ್ಚಾಗುತ್ತೆ ಎಲ್ಲ ನನಗೆ ಗೊತ್ತಿಲ್ಲ. ಪ್ಲೀಸ್‌ ನನಗೆ ಗೈಡ್‌ ಮಾಡಿ" ಎನ್ನುತ್ತಾಳೆ.

ಎಲ್ಲರಿಗೂ ಖರ್ಚಿಗೆ ತಲಾ 10 ಸಾವಿರ ರೂಪಾಯಿ

"ದಿನಕ್ಕೆ ಎಷ್ಟು ದಿನಸಿ ತರಿಸ್ತಿವಿ. ಚಿಕನ್‌, ಮೊಟ್ಟೆ, ಹಾಲು ಎಷ್ಟು ಖರ್ಚಾಗುತ್ತದೆ" ಎಂದು ಕೇಳುತ್ತಾಳೆ ಭೂಮಿಕಾ. "ನಮಗೆ ಇಷ್ಟೇ ಇಂದು ಲೆಕ್ಕ ಇಟ್ಟು ಅಭ್ಯಾಸ ಇಲ್ಲ. ಬೇಕಾದ್ದಷ್ಟು ತರಿಸ್ತಿವಿ ಅಷ್ಟೇ. ಊಟ ತಿಂಡಿಯಲ್ಲಿ ಲೆಕ್ಕ ಹಾಕಲು ಆಗುವುದಿಲ್ಲ" ಎನ್ನುತ್ತಾಳೆ ಶಕುಂತಲಾ. "ಈ ಮಿಡಲ್‌ ಕ್ಲಾಸ್‌ ವಿಚಾರಗಳು ಇಲ್ಲಿ ಅಪ್ಲೈ ಆಗುವುದಿಲ್ಲ" ಎಂದು ಟಾಂಗ್‌ ನೀಡುತ್ತಾಳೆ. ಅಡುಗೆಯವರು, ಡ್ರೈವರ್‌ ಇವರಿಗೆಲ್ಲ ಎಷ್ಟು ಸ್ಯಾಲರಿ ನೀಡಬೇಕು ಎಂದಾಗಲೂ ಶಕುಂತಲಾ ಬಳಿ ಲೆಕ್ಕ ಇರುವುದಿಲ್ಲ. ಪೆಟ್ರೋಲ್‌, ಡೀಸೆಲ್‌, ಎಲೆಕ್ಟ್ರಿಸಿಟಿ ಬಿಲ್‌ ಲೆಕ್ಕವೂ ಇರುವುದಿಲ್ಲ. "ಇಲ್ಲಿ ಲೆಕ್ಕ ಹಾಕುವ ಸಿಸ್ಟಮೇ ಇಲ್ಲ" ಎಂದು ಕೇಳುತ್ತಾಳೆ ಭೂಮಿಕಾ. "ವರ್ಷಕ್ಕೆ ಸಾವಿರಾರು ಕೋಟಿ ಟರ್ನೊವರ್‌ ಇದೆ, ಇದೆಲ್ಲ ಒಂದು ಲೆಕ್ಕನಾ. ನನಗೆ ಹಣ ಬೇಕಿದ್ದಾಗ ಗೌತಮ್‌ನನ್ನು ಕೇಳ್ತಾ ಇದ್ದೆ. ಅದನ್ನ ಮನೆಗೆ ಖರ್ಚು ಮಾಡ್ತಾ ಇದ್ದೆ. ಮುಗಿದಾಗ ಮತ್ತೆ ಕೇಳ್ತಾ ಇದ್ದೆ" ಎಂದು ಶಕುಂತಲಾ ಹೇಳುತ್ತಾರೆ. "ಪರ್ಸನಲ್‌ ಖರ್ಚಿಗೆ ಎಲ್ಲರಿಗೂ ಎಷ್ಟು ಕೊಡಬೇಕು. ಗೌತಮ್‌ ಹೇಳಿದ್ರು, ಅದನ್ನೂ ನಾನೇ ಕೊಡಬೇಕು ಅಂತ. ಎಲ್ಲರಿಗೂ ಅಂದಾಜು ಎಷ್ಟು ಕೊಡಬಹುದು" ಎಂದಾಗಲೂ ಶಕುಂತಲಾ "ಇಟ್‌ ಡಿಪೆಂಡ್ಸ್‌, ಎಷ್ಟು ಅಂತ ಹೇಳಲಾಗುವುದಿಲ್ಲ" ಎನ್ನುತ್ತಾಳೆ. ಹಾಗಾದ್ರೆ ಎಲ್ಲರ ಅಕೌಂಟ್‌ಗೂ ಒಂದು ಹತ್ತು ಹತ್ತು ಸಾವಿರ ಹಾಕ್ತಿನಿ ಅಷ್ಟು ಸಾಕಲ್ವ? ಎಂದು ಭೂಮಿಕಾ ಕೇಳಿದಾಗ ಶಕುಂತಲಾಗೆ ದಿಗಿಲಾಗುತ್ತದೆ. ಹತ್ತು ಸಾವಿರನಾ? ಹತ್ತು ಸಾವಿರ ನಾವು ಟಿಪ್ಸ್‌ ನೀಡ್ತಿವಿ, ಪರ್ಸನಲ್‌ ಎಕ್ಸ್‌ಪೆನ್ಸ್‌ಗೆ ಅಷ್ಟು ಸಾಕಾಗುತ್ತ ಎಂದು ಶಕುಂತಲಾ ಹೇಳುತ್ತಾಳೆ. ಯಾರಿಗೆ ಏನೇನೋ ಬೇಕೋ ಅದನ್ನು ತಗೋತಾರೆ, ಅದನ್ನು ನಾನು ಲೆಕ್ಕ ಇಟ್ಟಿಲ್ಲ ಎನ್ನುತ್ತಾಳೆ. ಇದನ್ನು ಬಿಟ್ಟು ಇನ್ನೆನೂ ಖರ್ಚು ಇರುತ್ತೆ ಎಂದು ಭೂಮಿಕಾ ಕೇಳಿದಾಗ ಶಕುಂತಲಾ ಫರ್ನಿಚರ್‌ ರಿಪೇರಿ ಅದು ಇದೂ ಅಂತಾರೆ. ಬ್ಯಾಲೆನ್ಸ್‌ ಶೀಟ್‌ ಇಟ್ಟುಕೊಂಡು ಮನೆ ನಡೆಸಲಾಗುತ್ತ, ಇಲ್ಲಿ ಯಾವುದೂ ಕೌಂಟ್‌ ಆಗೋಲ್ಲ, ಸಂಬಂಧ ಮಾತ್ರ ಮುಖ್ಯ ಎನ್ನುತ್ತಾರೆ. ಅವರಿಗೆ ಧನ್ಯವಾದ ತಿಳಿಸಿ ಭೂಮಿಕಾ ಹೋಗುತ್ತಾಳೆ. ಶಕುಂತಲಾ ಮತ್ತು ಮನೆಹಾಳ ಮಾವನ ಟೆನ್ಷನ್‌ ಹೆಚ್ಚಾಗುತ್ತದೆ. "ಹೀಗೆ ಮುಂದುವರೆದರೆ ನಮ್ಮ ಮೇಲೆ ಐಟಿ ರೈಡ್‌ ಮಾಡಿಸ್ತಾಳೆ" ಎಂದು ರಮಾಕಾಂತ್‌ ಹೇಳುತ್ತಾರೆ.

ಅಶ್ವಿನಿ ಕೇಳಿದ್ಲು ಜಸ್ಟ್‌ 5 ಕೋಟಿ ರೂಪಾಯ

ಅಶ್ವಿನಿ ಭೂಮಿಕಾಳ ಬಳಿಗೆ ಬರುತ್ತಾಳೆ. ನನಗೆ ಸ್ವಲ್ಪ ಹಣ ಬೇಕಿತ್ತು. ಅಣ್ಣನಲ್ಲಿ ಕೇಳಿದೆ. ಚೆಕ್‌ ಕೊಡ್ತಿರಾ ಎನ್ನುತ್ತಾಳೆ. "ಅವರು ನನಗೆ ಹೇಳೇ ಇಲ್ಲ" ಎಂದುಕೊಂಡು ಗೌತಮ್‌ಗೆ ಕಾಲ್‌ ಮಾಡುತ್ತಾಳೆ. "ಹೌದು ಚೆಕ್‌ ಕೊಡು" ಎನ್ನುತ್ತಾರೆ. ಅಶ್ವಿನಿ ಖುಷಿಯಿಂದ ಚೆಕ್‌ ತೆಗೆದುಕೊಂಡು ಹೋಗಬೇಕೆನ್ನುವಷ್ಟರಲ್ಲಿ "ಎಷ್ಟು ಹಣ ಡ್ರಾ ಮಾಡ್ತಿ ಹೇಳು, ನಾನಿಲ್ಲಿ ಬರೆದಿಟ್ಟುಕೊಳ್ಳಬೇಕು" ಎಂದು ಭೂಮಿಕಾ ಹೇಳುತ್ತಾರೆ. "ಅದನ್ನ ನಾನೇ ಫಿಲ್‌ ಮಾಡಿಕೊಳ್ತಿನಿ" ಎನ್ನುತ್ತಾಳೆ. ಅದನ್ನು ಕೇಳದ ಭೂಮಿಕಾ ನಾನೇ ಫಿಲ್‌ ಮಾಡ್ತಿನಿ ಅಂತ ಚೆಕ್‌ನಲ್ಲಿ ಬರೆಯಲು ಮುಂದಾಗುತ್ತಾಳೆ. "ಒಂದು ಲಕ್ಷನಾ" ಎಂದು ಕೇಳುತ್ತಾಳೆ. ಅದಕ್ಕಿಂತ ಸ್ವಲ್ಪ ಜಾಸ್ತಿ ಅನ್ತಾಳೆ. ಐದು ಲಕ್ಷನಾ ಎಂದು ಕೇಳುತ್ತಾಳೆ. ಅದಕ್ಕಿಂತಲೂ ಜಾಸ್ತಿ ಅನ್ತಾಳೆ. ಅದಕ್ಕೆ ಎರಡು ಸೊನ್ನೆ ಸೇರಿಸಿಕೊಳ್ಳಿ ಎನ್ನುತ್ತಾಳೆ ಅಶ್ವಿನಿ. "ಐದು ಕೋಟಿನಾ?" ಎಂದು ಭೂಮಿಕಾ ಆಶ್ಚರ್ಯಗೊಳ್ಳುತ್ತಾಳೆ. "ಹೌದು ಅತ್ತಿಗೆ, ಐದು ಕೋಟಿ ಅಷ್ಟೇ" ಎನ್ನುತ್ತಾಳೆ. "ಅಲ್ಲ ಐದು ಕೋಟಿ ನಿನಗ್ಯಾಕೆ ಬೇಕು" ಎಂದು ಭೂಮಿಕಾ ಪ್ರೀತಿಯಿಂದ ಕೇಳಿದಾಗ "ದಿಸ್‌ ಇಸ್‌ ಟೂ ಮಚ್‌ ಅತ್ತಿಗೆ. ಈ ಮನೆಯಲ್ಲಿ ಯಾರೂ ಎಷ್ಟೇ ಖರ್ಚು ಮಾಡಿದ್ರೂ ಯಾರೂ ಕೇಳಿಲ್ಲ" ಎನ್ನುತ್ತಾಳೆ. ನಿಮಗೆ ಇನ್ನೂ ಡಿಟೈಲ್‌ ಬೇಕೆಂದ್ರೆ ನನಗೆ ಈ ಚೆಕ್‌ ಬೇಕಾಗಿಲ್ಲ ಎಂದು ಅಶ್ವಿನಿ ಅಲ್ಲಿಂದ ಹೋಗುತ್ತಾಳೆ. ಅಲ್ಲಿಂದ ಶಕುಂತಲಾ ಬಳಿಗೆ ಬಂದು "ನನಗೆ ಇದನ್ನೆಲ್ಲ ಸಹಿಸಿಕೊಳ್ಳಲು ಆಗುತ್ತಿಲ್ಲ. ನಾನು ಅರುಣ್‌ನನ್ನು ಕರೆದುಕೊಂಡು ಈಗಲೇ ಮನೆಯಿಂದ ಹೋಗ್ತಿನಿ" ಎನ್ನುತ್ತಾಳೆ.

ನಿನಗೆ ಎಷ್ಟು ಹಣ ಬೇಕು ಎಂದು ಶಕುಂತಲಾ ಕೇಳಿದಾಗ "ಜಾಸ್ತಿ ಇಲ್ಲ ಅಮ್ಮ. ಜಸ್ಟ್‌ ಫೈವ್‌ ಕ್ರೋರ್‌" ಎಂದಾಗ ಶಕುಂತಲಾಗೂ ಅಚ್ಚರಿಯಾಗುತ್ತದೆ. ಐದು ಕೋಟಿ ಚಿಕ್ಕ ಅಮೌಂಟ್‌ ಅಲ್ಲ. ಅದು ದೊಡ್ಡ ಅಮೌಂಟ್.‌ ಅಷ್ಟು ಹಣ ನಿನಗ್ಯಾಕೆ ಬೇಕು" ಎಂದು ಶಕುಂತಲಾ ಕೇಳುತ್ತಾರೆ. ಅಶ್ವಿನಿ ಅಲ್ಲಿಂದಲೂ ಕೋಪದಿಂದ ಹೋಗುತ್ತಾಳೆ. ಸೀರಿಯಲ್‌ ಮುಂದುವರೆಯುತ್ತದೆ.

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)

ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)

ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)

ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)

ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)

ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)

ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)

ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)

ರಣವ್‌: ಜೈದೇವ್‌

ಚಂದನ್‌: ಅಶ್ವಿನಿ

ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)

ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)