ಮತ್ತೆ ತಕದಿಮಿತ ಶುರುಮಾಡಿದ ಕಿಶನ್‌ ಬಿಳಗಲಿ ನಮ್ರತಾ ಗೌಡ; ಮಧ್ಯರಾತ್ರಿಲಿ ಕುಣಿದ ಬಳಿಕ ಪರವಶಗೊಳಿಸುವ ಡ್ಯಾನ್ಸ್‌ ನೋಡಿ
ಕನ್ನಡ ಸುದ್ದಿ  /  ಮನರಂಜನೆ  /  ಮತ್ತೆ ತಕದಿಮಿತ ಶುರುಮಾಡಿದ ಕಿಶನ್‌ ಬಿಳಗಲಿ ನಮ್ರತಾ ಗೌಡ; ಮಧ್ಯರಾತ್ರಿಲಿ ಕುಣಿದ ಬಳಿಕ ಪರವಶಗೊಳಿಸುವ ಡ್ಯಾನ್ಸ್‌ ನೋಡಿ

ಮತ್ತೆ ತಕದಿಮಿತ ಶುರುಮಾಡಿದ ಕಿಶನ್‌ ಬಿಳಗಲಿ ನಮ್ರತಾ ಗೌಡ; ಮಧ್ಯರಾತ್ರಿಲಿ ಕುಣಿದ ಬಳಿಕ ಪರವಶಗೊಳಿಸುವ ಡ್ಯಾನ್ಸ್‌ ನೋಡಿ

ಬಿಗ್‌ಬಾಸ್‌ ಕನ್ನಡ ಸೀಸನ್‌ 10ರ ಸ್ಪರ್ಧಿ ನಮ್ರತಾ ಗೌಡ ಮತ್ತು ಬಿಗ್‌ಬಾಸ್‌ ಕನ್ನಡ ಸೀಸನ್‌ 7ರ ಕಿಶನ್‌ ಬಿಳಗಲಿ ಹೊಸ ಡ್ಯಾನ್ಸ್‌ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಪರಮಾತ್ಮ ಸಿನಿಮಾದ ಪರವಶನಾದೆನು ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಕೆಲವು ದಿನಗಳ ಹಿಂದೆ ಶಾಂತಿಕ್ರಾಂತಿ ಸಿನಿಮಾದ "ಮಧ್ಯರಾತ್ರಿಲಿ ಹೈವೆ ರಸ್ತೇಲಿ" ಹಾಡಿಗೆ ಕುಣಿದಿದ್ದರು.

ಕಿಶನ್‌ ಬಿಳಗಲಿ ನಮ್ರತಾ ಗೌಡ ಡ್ಯಾನ್ಸ್‌ ವಿಡಿಯೋ
ಕಿಶನ್‌ ಬಿಳಗಲಿ ನಮ್ರತಾ ಗೌಡ ಡ್ಯಾನ್ಸ್‌ ವಿಡಿಯೋ (kishenbilagali instagram)

ಬಿಗ್‌ಬಾಸ್‌ ಕನ್ನಡ ಸೀಸನ್‌ 10ರ ಸ್ಪರ್ಧಿ ನಮ್ರತಾ ಗೌಡ ಮತ್ತು ಬಿಗ್‌ಬಾಸ್‌ ಕನ್ನಡ ಸೀಸನ್‌ 7ರ ಕಿಶನ್‌ ಬಿಳಗಲಿ ಹೊಸ ಡ್ಯಾನ್ಸ್‌ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ತಿಂಗಳ ಆರಂಭದಲ್ಲಿ ಇವರಿಬ್ಬರು ಕ್ರೇಜಿಸ್ಟಾರ್‌ ರವಿಚಂದ್ರನ್‌ ನಟನೆಯ ಶಾಂತಿಕ್ರಾಂತಿ ಸಿನಿಮಾದ "ಮಧ್ಯರಾತ್ರಿಲಿ ಹೈವೆ ರಸ್ತೇಲಿ" ಹಾಡಿಗೆ ಕುಣಿದಿದ್ದರು. ಇದೀಗ ಮತ್ತೆ ತಕದಿಮಿತ ಡ್ಯಾನ್ಸ್‌ ಮಾಡಿದ್ದಾರೆ. ಇವರಿಬ್ಬರು ಪರವಶನಾದೆನು ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಪರಮಾತ್ಮ ಸಿನಿಮಾದ "ನಿನ್ನ ಕಣ್ಣಿಗಂತೂ ನಾನು ನಿರುಪಯೋಗಿ ಈಗಲೂ.. ಇನ್ನೂ ಬೇರೆ ಏನು ಬೇಕು ಪ್ರೇಮಯೋಗಿಯಾಗಲು… ಹೂ ಅರಳುವ ಸದ್ದನು ನಿನ್ನ ನಗೆಯಲಿ ಕೇಳಬಲ್ಲೇ.. ನನ್ನ ಏಕಾಂತವನ್ನು ತಿದ್ದಿಕೊಡು ನೀನೀಗ ನಿಂತಲ್ಲೇ.. ನಾನೇನೆ ಅಂದರೂನು ನನಗಿಂತ ಚೂಟಿ ನೀನು.." ಎಂಬ ಹಾಡಿಗೆ ಇವರಿಬ್ಬರು ಡ್ಯಾನ್ಸ್‌ ಮಾಡಿದ್ದಾರೆ. ಕಿಶನ್‌ ಜತೆ ನಮ್ರತಾ ಗೌಡ ತನ್ನ ಡ್ಯಾನ್ಸಿಂಗ್‌ ಸ್ಕಿಲ್‌ ತೋರಿಸಿದ್ದಾರೆ.

ನಮ್ರತಾ ಗೌಡ ಮತ್ತು ಕಿಶನ್‌ ಬಿಳಗಲಿ ಸಹಭಾಗಿತ್ವದ ಈ ಡ್ಯಾನ್ಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಇಬ್ಬರೂ ತಮ್ಮ ಡ್ಯಾನ್ಸಿಂಗ್‌ ಸ್ಕಿಲ್‌ ಮೂಲಕ ಅದ್ಭುತವಾಗಿ, ರೋಮಾಂಚನಕಾರಿಯಾಗಿ ನೃತ್ಯ ಮಾಡಿದ್ದಾರೆ. ಇವರಿಬ್ಬರ ಡ್ಯಾನ್ಸ್‌ ವಿಡಿಯೋಗೆ ಎಂದಿನಂತೆ ಸಕಾರಾತ್ಮಕ ಮತ್ತು ನಕಾರಾತ್ಮಕ ಕಾಮೆಂಟ್‌ಗಳು ಬಂದಿವೆ. ಕೆಲವರು ಈ ವಿಡಿಯೋಗೆ ಬಿಗ್‌ಬಾಸ್‌ ಸ್ಪರ್ಧಿ "ಸ್ನೇಹಿತ್‌" ಹೆಸರನ್ನೂ ಎಳೆದುತಂದಿದ್ದಾರೆ.

ಪರಮಾತ್ಮ ಸಿನಿಮಾದ ಪರವಶನಾದೆನು ಹಾಡಿನ ಲಿರಿಕ್ಸ್‌

ನಿನ್ನ ಕಣ್ಣಿಗಂತೂ ನಾನು
ನಿರುಪಯೋಗಿ ಈಗಲೂ..
ಇನ್ನೂ ಬೇರೆ ಏನು ಬೇಕು
ಪ್ರೇಮಯೋಗಿಯಾಗಲು…

ಹೂ ಅರಳುವ ಸದ್ದನು
ನಿನ್ನ ನಗೆಯಲಿ ಕೇಳಬಲ್ಲೇ..
ನನ್ನ ಏಕಾಂತವನ್ನು
ತಿದ್ದಿಕೊಡು ನೀನೀಗ ನಿಂತಲ್ಲೇ..

ನಾನೇನೆ ಅಂದರೂನು
ನನಗಿಂತ ಚೂಟಿ ನೀನು..
ತುಟಿಯಲ್ಲಿಯೆ
ಮುಚ್ಚಿಟ್ಟುಕೊ


ಮುತ್ತೊಂದನೂ
ಕದಿಯುವ ಮುನ್ನವೇ…
ಪರವಶನಾದೆನು
ಅರಿಯುವ ಮುನ್ನವೇ
ಪರಿಚಿತನಾಗಲೀ ಹೇಗೆ
ಪ್ರಣಯಕು ಮುನ್ನವೇ…

ನಮ್ರತಾ ಗೌಡ ಪರಿಚಯ

ಇತ್ತೀಚೆಗೆ ಕೊನೆಗೊಂಡ ಬಿಗ್‌ಬಾಸ್‌ ಸೀಸನ್‌ 10ರಲ್ಲಿ ಮ್ರತಾ ಗೌಡ ಗಮನ ಸೆಳೆಯುವಂತಹ ಆಟವಾಡಿದ್ದರು. ಫಿನಾಲೆ ತಲುಪುವ ಕೊನೆಯ ವಾರ ಎಲಿಮಿನೇಟ್ ಆಗಿದ್ದರು. ನಮ್ರತಾ ಕನ್ನಡ ಕಿರುತೆರೆಯ ಜನಪ್ರಿಯ ನಟಿ. ಇವರು 1993ರ ಏಪ್ರಿಲ್‌ 15ರಂದು ಜನಿಸಿದರು. 2011ರಲ್ಲಿ ಸ್ಟಾರ್‌ ಸುವರ್ಣದ ಕೃಷ್ಣ ರುಕ್ಮಿಣಿ ಸೀರಿಯಲ್‌ ಮೂಲಕ ಮನರಂಜನಾ ಕ್ಷೇತ್ರಕ್ಕೆ ಎಂಟ್ರಿ ನೀಡಿದರು. ಬಳಿಕ ಪುಟ್ಟಗೌರಿ ಸೀರಿಯಲ್‌ನಲ್ಲಿ ನಟಿಸಿದ್ದರು. ಈ ಸೀರಿಯಲ್‌ನಲ್ಲಿ ಹಿಮಾ ಪಾತ್ರದಲ್ಲಿ ಮಿಂಚಿದ್ದರು. ತಕಮಿಧಿತ ಡ್ಯಾನ್ಸ್ ಶೋನಲ್ಲಿ ಭಾಗವಹಿಸಿ ಟಾಪ್ 5ಗೆ ಆಯ್ಕೆಯಾಗಿದ್ದರು. ಆ ಸಂದರ್ಭದಲ್ಲಿಯೇ ಕಿಶನ್‌ ಬಿಳಗಲಿ ಜತೆ ಡ್ಯಾನ್ಸ್‌ ಮಾಡಿದ್ದರು. ನಾಗಿಣಿ 2 ಸೀರಿಯಲ್‌ನಲ್ಲಿ ಶಿವಾನಿ ಪಾತ್ರದಲ್ಲಿ ನಟಿಸಿದ್ದರು.

ಕಿಶನ್‌ ಬಿಳಗಲಿ ಪರಿಚಯ

ಬಿಗ್‌ಬಾಸ್‌ ಕನ್ನಡ ಸೀಸನ್‌ 7ರ ಬಳಿಕ ಕಿಶನ್‌ ಬಿಳಗಲಿ ಹೆಚ್ಚಿನ ಜನಪ್ರಿಯತೆ ಪಡೆದಿದ್ದಾರೆ. ಮೂಲತಃ ಚಿಕ್ಕಮಗಳೂರಿನವರಾದ ಇವರು ಅದ್ಭುತ ಡ್ಯಾನ್ಸ್‌. 1989ರ ಏಪ್ರಿಲ್‌ನಲ್ಲಿ ಜನಿಸಿದರು. ಕಿಶನ್‌ ಕನ್ನಡ ಮಾತ್ರವಲ್ಲದೆ ಹಿಂದಿ ಕಿರುತೆರೆಯಲ್ಲೂ ಫೇಮಸ್‌. 2018 ರ ಹಿಂದಿ ರಿಯಾಲಿಟಿ ಶೋ ಡ್ಯಾನ್ಸ್ ದಿವಾನಿ ಶೋ ಕಾರ್ಯಕ್ರಮದಲ್ಲಿ ಗೆಲುವು ಪಡೆದಿದ್ದರು.

ಡ್ಯಾನ್ಸ್‌ ಮೂಲಕ ಜನಪ್ರಿಯತೆ ಪಡೆದಿರುವ ಕಿಶನ್‌ ಬೆಂಗಳೂರಿನಲ್ಲಿ ಬಿರಿಯಾನಿ ಪ್ಯಾಲೇಸ್‌ ಫ್ರಾಂಚೈಸಿ ಹೊಂದಿದ್ದಾರೆ. ಇವರು ಆಗಾಗ ತನ್ನ ಹೋಟೆಲ್‌ಗೆ ಭೇಟಿ ನೀಡುತ್ತಾರೆ. ಕಿಶನ್‌ ಬಿರಿಯಾನಿ ಮಾಡುತ್ತಿರುವ ವಿಡಿಯೋವೊಂದು ಈ ಹಿಂದೆ ವೈರಲ್‌ ಆಗಿತ್ತು. ಕಿಶನ್‌ ಬಿಳಗಲಿ ಅವರು ಇನ್‌ಸ್ಟಾಗ್ರಾಂನಲ್ಲಿ ಆಗಾಗ ಜನಪ್ರಿಯ ನಟಿಯರೊಂದಿಗೆ ಡ್ಯಾನ್ಸ್‌ ಮಾಡುವ ವಿಡಿಯೋ ಹಂಚಿಕೊಳ್ಳುತ್ತಾ ಇರುತ್ತಾರೆ. ಕೆಲವು ತಿಂಗಳ ಹಿಂದೆ ಸಂಯುಕ್ತ ಹೆಗ್ಡೆ ಜತೆ ಮಾದಕವಾಗಿ ಡ್ಯಾನ್ಸ್‌ ಮಾಡಿದ್ದು ವೈರಲ್‌ ಆಗಿತ್ತು.