ಕಿಚ್ಚ ಸುದೀಪ್‌ ಕಡೆಯಿಂದ ಸಿಕ್ತು ʻಬಿಲ್ಲ ರಂಗ ಬಾಷಾʼ ಚಿತ್ರದ ಬಿಗ್‌ ಅಪ್‌ಡೇಟ್‌; ʻಬಿಆರ್‌ಬಿʼ ಫಸ್ಟ್‌ ಲುಕ್‌ ರಿಲೀಸ್‌
ಕನ್ನಡ ಸುದ್ದಿ  /  ಮನರಂಜನೆ  /  ಕಿಚ್ಚ ಸುದೀಪ್‌ ಕಡೆಯಿಂದ ಸಿಕ್ತು ʻಬಿಲ್ಲ ರಂಗ ಬಾಷಾʼ ಚಿತ್ರದ ಬಿಗ್‌ ಅಪ್‌ಡೇಟ್‌; ʻಬಿಆರ್‌ಬಿʼ ಫಸ್ಟ್‌ ಲುಕ್‌ ರಿಲೀಸ್‌

ಕಿಚ್ಚ ಸುದೀಪ್‌ ಕಡೆಯಿಂದ ಸಿಕ್ತು ʻಬಿಲ್ಲ ರಂಗ ಬಾಷಾʼ ಚಿತ್ರದ ಬಿಗ್‌ ಅಪ್‌ಡೇಟ್‌; ʻಬಿಆರ್‌ಬಿʼ ಫಸ್ಟ್‌ ಲುಕ್‌ ರಿಲೀಸ್‌

ʻಮ್ಯಾಕ್ಸ್‌ʼ ಸಿನಿಮಾ ಯಶಸ್ಸಿನ ಬಳಿಕ ನಟ ಕಿಚ್ಚ ಸುದೀಪ್‌, ಇಂದಿನಿಂದ ಶುರುವಾಗುವ ʻಬಿಲ್ಲ ರಂಗ ಬಾಷಾʼ ಶೂಟಿಂಗ್‌ನಲ್ಲಿ ಭಾಗವಹಿಸಲಿದ್ದಾರೆ. ಜತೆಗೆ ಈ ಸಿನಿಮಾದಲ್ಲಿ ಸುದೀಪ್‌ ಹೇಗೆ ಕಾಣಿಸಲಿದ್ದಾರೆ ಎಂಬ ಕೌತುಕಕ್ಕೂ ತೆರೆಬಿದ್ದಿದೆ. ಚಿತ್ರದಲ್ಲಿನ ಸುದೀಪ್‌ ಅವರ ಲುಕ್‌ವೊಂದನ್ನು ಚಿತ್ರತಂಡ ರಿವೀಲ್‌ ಮಾಡಿದೆ.

ಕಿಚ್ಚ ಸುದೀಪ್‌ ಕಡೆಯಿಂದ ಸಿಕ್ತು ʻಬಿಲ್ಲ ರಂಗ ಬಾಷಾʼ ಚಿತ್ರದ ಬಿಗ್‌ ಅಪ್‌ಡೇಟ್‌
ಕಿಚ್ಚ ಸುದೀಪ್‌ ಕಡೆಯಿಂದ ಸಿಕ್ತು ʻಬಿಲ್ಲ ರಂಗ ಬಾಷಾʼ ಚಿತ್ರದ ಬಿಗ್‌ ಅಪ್‌ಡೇಟ್‌

ʻಮ್ಯಾಕ್ಸ್‌ʼ ಸಿನಿಮಾ ಬಳಿಕ ಕಿಚ್ಚ ಸುದೀಪ್‌ ಮುಂದಿನ ಸಿನಿಮಾ ಯಾವುದು, ಯಾವ ಚಿತ್ರವನ್ನು ಘೋಷಣೆ ಮಾಡುತ್ತಾರೆ ಎಂಬ ಪ್ರಶ್ನೆಗೆ ಅದಾಗಲೇ ಅವರ ಅಭಿಮಾನಿ ಬಳಗಕ್ಕೆ ಉತ್ತರ ಸಿಕ್ಕಿತ್ತು. ಅನೂಪ್‌ ಭಂಡಾರಿ ಜತೆಗೆ ʻಬಿಲ್ಲ ರಂಗ ಬಾಷಾʼ ಸಿನಿಮಾ ಸೆಟ್ಟೇರಲಿದೆ ಅನ್ನೋ ವಿಚಾರವನ್ನು ಕಿಚ್ಚನ ಬರ್ತ್‌ಡೇ ದಿನವೇ ಘೋಷಣೆ ಮಾಡಿ, ಫ್ಯಾನ್ಸ್‌ಗೆ ಬಿಗ್‌ ಸರ್ಪ್ರೈಸ್‌ ನೀಡಿತ್ತು ಚಿತ್ರತಂಡ. ಇದೀಗ ಇದೇ ʻಬಿಲ್ಲ ರಂಗ ಬಾಷಾʼ ಸಿನಿಮಾದಿಂದ ಹೊಸ ಅಪ್‌ಡೇಟ್‌ ಸುದ್ದಿಯೊಂದು ಹೊರಬಿದ್ದಿದೆ.

ಕಳೆದ ವರ್ಷದ ಸೆಪ್ಟೆಂಬರ್‌ 2ರಂದು ಕಿಚ್ಚನ ಬರ್ತ್‌ಡೇ ಪ್ರಯುಕ್ತ ʻಬಿಲ್ಲ ರಂಗ ಬಾಷಾʼ ಸಿನಿಮಾದ ಕಾನ್ಸೆಪ್ಟ್‌ ವಿಡಿಯೋ ತುಣುಕನ್ನು ಬಿಡುಗಡೆ ಮಾಡಿ ಕುತೂಹಲಕ್ಕೆ ಒಗ್ಗರಣೆ ಹಾಕಿದ್ದ ಚಿತ್ರತಂಡ, ಈ ಸಿನಿಮಾದ ನಿರ್ಮಾಪಕರು ಯಾರು ಎಂಬುದನ್ನೂ ರಿವೀಲ್‌ ಮಾಡಿತ್ತು. ಟಾಲಿವುಡ್‌ನಲ್ಲಿ ಕಳೆದ ವರ್ಷ ತೆರೆಕಂಡು ಹಿಟ್‌ ಆಗಿದ್ದ, ʻಹನುಮಾನ್‌ʼ ಸಿನಿಮಾ ನಿರ್ಮಾಣ ಮಾಡಿದ್ದ ಪ್ರೈಂ ಶೋ ಎಂಟರ್‌ಟೈನ್‌ಮೆಂಟ್‌ ಸಂಸ್ಥೆಯೇ ʻಬಿಲ್ಲ ರಂಗ ಬಾಷಾʼ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ಇದೀಗ ಇದೇ ಸಿನಿಮಾ ಶೂಟಿಂಗ್‌ ಅಖಾಡಕ್ಕೆ ಇಳಿದಿದೆ.

ʻರಂಗಿತರಂಗʼ, ʻರಾಜರಥʼ ಮತ್ತು ʻವಿಕ್ರಾಂತ್‌ ರೋಣʼ ಸಿನಿಮಾ ನಿರ್ದೇಶನ ಮಾಡಿದ್ದ ಅನೂಪ್‌ ಭಂಡಾರಿ, ʻಬಿಲ್ಲ ರಂಗ ಬಾಷಾʼ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಇತ್ತ ʻಮ್ಯಾಕ್ಸ್‌ʼ ಸಿನಿಮಾ ಯಶಸ್ಸಿನ ಬಳಿಕ ನಟ ಕಿಚ್ಚ ಸುದೀಪ್‌, ಇಂದಿನಿಂದ ಶುರುವಾಗುವ ʻಬಿಲ್ಲ ರಂಗ ಬಾಷಾʼ ಶೂಟಿಂಗ್‌ನಲ್ಲಿ ಭಾಗವಹಿಸಲಿದ್ದಾರೆ. ಜತೆಗೆ ಈ ಸಿನಿಮಾದಲ್ಲಿ ಸುದೀಪ್‌ ಹೇಗೆ ಕಾಣಿಸಲಿದ್ದಾರೆ ಎಂಬ ಕೌತುಕಕ್ಕೂ ತೆರೆಬಿದ್ದಿದೆ. ಚಿತ್ರದಲ್ಲಿನ ಸುದೀಪ್‌ ಅವರ ಲುಕ್‌ವೊಂದನ್ನು ಚಿತ್ರತಂಡ ರಿವೀಲ್‌ ಮಾಡಿದೆ.

ಪ್ಯಾನ್‌ ಇಂಡಿಯನ್‌ ಸಿನಿಮಾ

ಪ್ರೈಂ ಶೋ ಎಂಟರ್‌ಟೈನ್‌ಮೆಂಟ್‌ ಬ್ಯಾನರ್‌ನಲ್ಲಿ ಕೆ ನಿರಂಜನ್‌ ರೆಡ್ಡಿ ಮತ್ತು ಚೈತನ್ಯ ರೆಡ್ಡಿ ʻಬಿಲ್ಲ ರಂಗ ಬಾಷಾʼ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕನ್ನಡದ ಜತೆಗೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಮೂಡಿಬರಲಿದೆ. ಶೀರ್ಷಿಕೆಯಲ್ಲಿ ʻಬಿಲ್ಲ ರಂಗ ಬಾಷಾ- ಫಸ್ಟ್‌ ಬ್ಲಡ್‌ʼ ಎಂದಿದ್ದು, 2209 ಕಾಲಘಟ್ಟದಲ್ಲಿ ಈ ಸಿನಿಮಾ ಕಥೆ ಸಾಗಲಿದೆ ಎಂಬುದನ್ನು ಸೂಚ್ಯವಾಗಿ ಹೇಳಿದ್ದಾರೆ ನಿರ್ದೇಶಕರು. ಹಿಮಚ್ಛಾದಿತ ಪ್ರದೇಶದ ಹಿನ್ನೆಲೆಯಲ್ಲಿ ಸುದೀಪ್‌ ಅವರ ಫಸ್ಟ್‌ ಲುಕ್‌ ರಿವೀಲ್‌ ಆಗಿದೆ. ವಿಶೇಷ ವಿನ್ಯಾಸದ ಕನ್ನಡಕ ಧರಿಸಿ, ಗಂಭೀರ ವದನನಾಗಿ ಕಂಡಿದ್ದಾರೆ.

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.
Whats_app_banner