ಹುಟ್ಟುಹಬ್ಬದಂದು ಡ್ರೋನ್‌ ಪ್ರತಾಪ್‌ ಕಡೆಯಿಂದ ಬಡವರಿಗೆ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ; ನಮ್ಮ ಬಿಗ್‌ಬಾಸ್‌ ಓಟು ಸಾರ್ಥಕ ಅಂದ್ರು ಫ್ಯಾನ್ಸ್‌
ಕನ್ನಡ ಸುದ್ದಿ  /  ಮನರಂಜನೆ  /  ಹುಟ್ಟುಹಬ್ಬದಂದು ಡ್ರೋನ್‌ ಪ್ರತಾಪ್‌ ಕಡೆಯಿಂದ ಬಡವರಿಗೆ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ; ನಮ್ಮ ಬಿಗ್‌ಬಾಸ್‌ ಓಟು ಸಾರ್ಥಕ ಅಂದ್ರು ಫ್ಯಾನ್ಸ್‌

ಹುಟ್ಟುಹಬ್ಬದಂದು ಡ್ರೋನ್‌ ಪ್ರತಾಪ್‌ ಕಡೆಯಿಂದ ಬಡವರಿಗೆ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ; ನಮ್ಮ ಬಿಗ್‌ಬಾಸ್‌ ಓಟು ಸಾರ್ಥಕ ಅಂದ್ರು ಫ್ಯಾನ್ಸ್‌

ಜೂನ್ 11 ರಂದು ನನ್ನ ಜನ್ಮದಿನದಂದು ಅವಶ್ಯಕತೆ ಇರುವ ಬಡ ಜನರಿಗೆ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಲಾಗುವುದು ಎಂದು ಬಿಗ್‌ಬಾಸ್‌ ಮಾಜಿ ಸ್ಪರ್ಧಿ ಡ್ರೋನ್‌ ಪ್ರತಾಪ್‌ ಸೋಷಿಯಲ್‌ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ. ಸುಮಾರು ಐದು ಜನರ ಕಣ್ಣಿನ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.

ಹುಟ್ಟುಹಬ್ಬದಂದು ಡ್ರೋನ್‌ ಪ್ರತಾಪ್‌ ಕಡೆಯಿಂದ ಬಡವರಿಗೆ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ
ಹುಟ್ಟುಹಬ್ಬದಂದು ಡ್ರೋನ್‌ ಪ್ರತಾಪ್‌ ಕಡೆಯಿಂದ ಬಡವರಿಗೆ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ

ಬೆಂಗಳೂರು: ಜೂನ್ 11 ರಂದು ನನ್ನ ಜನ್ಮದಿನದಂದು ಅವಶ್ಯಕತೆ ಇರುವ ಬಡ ಜನರಿಗೆ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಲಾಗುವುದು ಎಂದು ಬಿಗ್‌ಬಾಸ್‌ ಮಾಜಿ ಸ್ಪರ್ಧಿ ಡ್ರೋನ್‌ ಪ್ರತಾಪ್‌ ಸೋಷಿಯಲ್‌ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ. ಸುಮಾರು ಐದು ಜನರ ಕಣ್ಣಿನ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.

ಡ್ರೋನ್‌ ಪ್ರತಾಪ್‌ ಹುಟ್ಟುಹಬ್ಬದ ಕೊಡುಗೆ

"ಡಾ. ರಾಜ್‌ಕುಮಾರ್‌ ಹೇಳ್ತಾರೆ, ನೇತ್ರದಾನ ಮಹಾದಾನ ಅಂತ. ಮುಂಬರುವ ಜೂನ್‌ 11ಕ್ಕೆ ನನ್ನ ಹುಟ್ಟುಹಬ್ಬವಿದೆ. ನನ್ನ ಹುಟ್ಟುಹಬ್ಬವನ್ನು ಈ ಬಾರಿ ವಿಶೇಷವಾಗಿ ಆಯೋಜಿಸಬೇಕೆಂದುಕೊಂಡಿದ್ದೇನೆ. ಅದಕೋಸ್ಕರ ಯಾರಾದರೂ ಬಡವರಿಗೆ, ಐದು ಜನರಿಗೆ ಉಚಿತವಾಗಿ ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಲು ಸಹಾಯ ಮಾಡಬೇಕೆಂದುಕೊಂಡಿದ್ದೇನೆ. ನಿಮ್ಮಲ್ಲಿ ಯಾರಿಗಾದರೂ ಅವಶ್ಯಕತೆ ಇದ್ದರೆ, ನಿಮ್ಮ ಅಕ್ಕಂದಿರಿಗೆ, ಅಣ್ಣಂದಿರಿಗೆ, ತಾಯಿಗೆ ಅವಶ್ಯಕತೆ ಇದ್ದರೆ ನನ್ನನ್ನು ಸಂಪರ್ಕಿಸಬಹುದು. ಕಣ್ಣಿನ ಸಮಸ್ಯೆ ಇದ್ದು, ಹಣವನ್ನು ಭರಿಸಲಾಗದೆ ಇದ್ದವರು ಇದರ ಪ್ರಯೋಜನ ಪಡೆಯಬಹುದು. ಅವಶ್ಯಕತೆ ಇರುವವರು ನನ್ನ ಇನ್‌ಸ್ಟಾಗ್ರಾಂನಲ್ಲಿ ಮೆಸೆಜ್‌ ಮಾಡಬಹುದು, ಕಾಮೆಂಟ್‌ ಸೆಕ್ಷನ್‌ನಲ್ಲಿ ಮೆನ್ಷನ್‌ ಮಾಡಬಹುದು" ಎಂದು ಡ್ರೋನ್‌ ಪ್ರತಾಪ್‌ ಇನ್‌ಸ್ಟಾಗ್ರಾಂ ವಿಡಿಯೋದಲ್ಲಿ ಹೇಳಿದ್ದಾರೆ.

ನೆಟ್ಟಿಗರಿಂದ ವ್ಯಾಪಕ ಪ್ರಶಂಸೆ

ಡ್ರೋನ್‌ ಪ್ರತಾಪ್‌ ಅವರ ಈ ಕೈಂಕರ್ಯಕ್ಕೆ ನೆಟ್ಟಿಗರಿಂದ ಪ್ರಶಂಸೆ ವ್ಯಕ್ತವಾಗಿದೆ. ನಿಮ್ಮನ್ನು ಬಿಗ್‌ಬಾಸ್‌ನಲ್ಲಿ ಓಟ್‌ ಹಾಕಿದ್ದು ಸಾರ್ಥಕ ಆಯ್ತು ಎಂದಿದ್ದಾರೆ. "ನಿಮ್ಮ ಇನಿಶಿಯೇಟಿವ್ ತುಂಬ ಇಷ್ಟ ಆಯಿತು ಸರ್. ನಿಮಗೆ ಇದರಲ್ಲಿ ಸಪೋರ್ಟ್ ಮಾಡಬೇಕೆಂದ್ರೆ ಹೆಂಗೆ ಕಾಂಟಾಕ್ಟ್ ಮಾಡೋದ್ ಸರ್?" ಎಂದು ಒಬ್ಬರು ಕೇಳಿದ್ದಾರೆ. ಈ ಮೂಲಕ ಇವರ ಒಳ್ಳೆಯ ಕೆಲಸಕ್ಕೆ ಇತರರೂ ಬೆಂಬಲ ನೀಡುವ ಸೂಚನೆ ನೀಡಿದ್ದಾರೆ. "ಬಿಗ್ ಬಾಸ್ ಅಲ್ಲಿ ನಿಂಗೆ ವೋಟ್ ಮಾಡಿದ್ದಕ್ಕೂ ಸಾರ್ಥಕ ಆಯ್ತು" "ನಿಮಗೆ ಮಾಡಿದ ಆ ಒಂದು ವೋಟಿಗೆ ನಿಜವಾಗ್ಲು ಬೆಲೆ ಸಿಗೋದು ಇಂತಹ ಕ್ಷಣಗಳನ್ನ ಕಣ್ಣಿಂದ ನೋಡಿದಾಗ ಮಾತ್ರ" "ದ್ವೇಷ ಮಾಡ್ತಿನಿ ಅನ್ನೋ ಜನರ ಜತೆ ಪ್ರೀತಿ ತೋರಿಸ್ತಾ ಇದ್ದೀಯಾ" "ನಿಮ್ಮ ಈ ಗುಣವೇ ನಮಗೆ ತುಂಬಾ ಇಷ್ಟ ಆಯ್ತು. ಯಾರು ಎಷ್ಟೇ ನಿಮ್ಮ ಬಗ್ಗೆ ಅಪಪ್ರಚಾರ ಮಾಡಿದರೂ, ನಿಮ್ಮ ಸತ್ಯ , ನಿಯತ್ತು, ವ್ಯಕ್ತಿತ್ವ ಇವುಗಳೇ ಸಾಕು, ನಿಮ್ಮನ್ನು ತುಳಿಯಲು ಕೆಲವು ಜನ ಇದ್ದರು ಪರವಾಗಿಲ್ಲ ನಿಮ್ಮನ್ನು ಪ್ರೀತಿಸಲು ಸಾವಿರಾರು ಜನರಿದ್ದಾರೆ" ಎಂದೆಲ್ಲ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಡ್ರೋನ್‌ ಪ್ರತಾಪ್‌ ಅವರು ಸಂಗೀತಾ ಶೃಂಗೇರಿ ಹುಟ್ಟುಹಬ್ಬದ ಕಾರ್ಯಕ್ರಮದಲ್ಲೂ ಭಾಗಿಯಾಗಿದ್ದರು. ಸಂಗೀತಾ ಶೃಂಗೇರಿ ಮನೆಗೆ ಹುಟ್ಟುಹಬ್ಬದಂದು ಆಗಮಿಸಿದ ಡ್ರೋನ್‌ ಪ್ರತಾಪ್‌ಗೆ ಸಂಗೀತ ವಿಶೇಷವಾದ ಸ್ವಾಗತ ನೀಡಿದ್ದರು. ಅಕ್ಕ ತಮ್ಮನಂತೆ ಬಿಗ್‌ಬಾಸ್‌ನಲ್ಲಿ ಸ್ಪರ್ಧಿಸಿದ್ದ ಇವರಿಬ್ಬರು ಈಗಲೂ ಇದೇ ರೀತಿಯ ಸಂಬಂಧ ಮುಂದುವರೆಸಿದ್ದಾರೆ. ಮನೆಗೆ ತಮ್ಮ ಬಂದ ಖುಷಿಯಲ್ಲಿ ಸಂಗೀತಾ ಶೃಂಗೇರಿ ಆರತಿ ಬೆಳಗಿ ಸ್ವಾಗತಿಸಿದ್ದಾರೆ. ಕೈಗೆ ರಾಖಿಯನ್ನೂ ಕಟ್ಟಿ ಸಂಭ್ರಮಿಸಿದ್ದಾರೆ. ಈ ಸಮಯದಲ್ಲಿ ಸಹೋದರನ ಕಾಲಿಗೆ ಬಿದ್ದು ನಮಸ್ಕರಿಸಿ ಆಶೀರ್ವದ ಪಡೆಯುವ ವ್ಯರ್ಥ ಪ್ರಯತ್ನವನ್ನೂ ಮಾಡಿದ್ದರು.

ಬಿಗ್‌ಬಾಸ್‌ ಕನ್ನಡ ಸೀಸನ್‌ 10ರ ವಿನ್ನರ್‌ ಆಗಿ ಕಾರ್ತಿಕ್‌ ಗೌಡ ಮತ್ತು ರನ್ನರ್‌ ಅಪ್‌ ಆಗಿ ಡ್ರೋನ್‌ ಪ್ರತಾಪ್‌ ಹೊರಹೊಮ್ಮಿದ್ದರು. ಅಂತಿಮ ಹಂತದಲ್ಲಿ ಕಾರ್ತಿಕ್‌ ಗೌಡ, ಡ್ರೋನ್‌ ಪ್ರತಾಪ್‌, ಸಂಗೀತಾ ಶೃಂಗೇರಿ ಅವರು ಟಾಪ್‌ 3 ಸ್ಥಾನದಲ್ಲಿದ್ದರು. ಬಳಿಕ ಸಂಗೀತಾ ಶೃಂಗೇರಿ ಅವರು ಎರಡನೇ ರನ್ನರ್‌ಅಪ್‌ ಆಗಿ ಹೊರನಡೆದರು. ಅಂತಿಮವಾಗಿ ಕಾರ್ತಿಕ್‌ ಗೌಡ ಮತ್ತು ಡ್ರೋನ್‌ ಪ್ರತಾಪ್‌ ವೇದಿಕೆಯಲ್ಲಿದ್ದರು.

Whats_app_banner