‘ಯಾರೂ ಒರಿಜಿನಲ್‌ ಫ್ರೋಫೈಲ್‌ನಿಂದ ಕೆಟ್ಟ ಕಾಮೆಂಟ್‌ ಹಾಕಲ್ಲ, ಯಾಕಂದ್ರೆ ಅವರಿಗೆ *** ಅದಿಲ್ಲ ಅಂಥ ಅರ್ಥ!’ ರಕ್ಷಕ್‌ ಬುಲೆಟ್‌-sandalwood news bigg boss kannada seasin 10 contestant rakshak bullet reacts to bad commenters on social media mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ‘ಯಾರೂ ಒರಿಜಿನಲ್‌ ಫ್ರೋಫೈಲ್‌ನಿಂದ ಕೆಟ್ಟ ಕಾಮೆಂಟ್‌ ಹಾಕಲ್ಲ, ಯಾಕಂದ್ರೆ ಅವರಿಗೆ *** ಅದಿಲ್ಲ ಅಂಥ ಅರ್ಥ!’ ರಕ್ಷಕ್‌ ಬುಲೆಟ್‌

‘ಯಾರೂ ಒರಿಜಿನಲ್‌ ಫ್ರೋಫೈಲ್‌ನಿಂದ ಕೆಟ್ಟ ಕಾಮೆಂಟ್‌ ಹಾಕಲ್ಲ, ಯಾಕಂದ್ರೆ ಅವರಿಗೆ *** ಅದಿಲ್ಲ ಅಂಥ ಅರ್ಥ!’ ರಕ್ಷಕ್‌ ಬುಲೆಟ್‌

Rakshak Bullet: ಸೋಷಿಯಲ್‌ ಮೀಡಿಯಾದಲ್ಲಿ ಸದಾ ಒಂದಿಲ್ಲೊಂದು ವಿಚಾರಕ್ಕೆ ಟ್ರೋಲ್‌ ಆಗುವ ಮೂಲಕವೇ ಸುದ್ದಿಯಲ್ಲಿರ್ತಾರೆ ಬುಲೆಟ್‌ ಪ್ರಕಾಶ್‌ ಪುತ್ರ ರಕ್ಷಕ್‌ ಬುಲೆಟ್.‌ ಇದೀಗ ಇದೇ ರಕ್ಷಕ್‌, ಕೆಟ್ಟ ಕಾಮೆಂಟ್‌ ಪಾಸ್‌ ಮಾಡುವವರ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ನೆಗೆಟಿವ್‌ ಕಾಮೆಂಟ್‌ ಹಾಕುವವರ ಬಗ್ಗೆ ಪ್ರತಿಕ್ರಿಯೆ ನೀಡಿದ ರಕ್ಷಕ್‌ ಬುಲೆಟ್‌.
ಸೋಷಿಯಲ್‌ ಮೀಡಿಯಾದಲ್ಲಿ ನೆಗೆಟಿವ್‌ ಕಾಮೆಂಟ್‌ ಹಾಕುವವರ ಬಗ್ಗೆ ಪ್ರತಿಕ್ರಿಯೆ ನೀಡಿದ ರಕ್ಷಕ್‌ ಬುಲೆಟ್‌.

Rakshak Bullet on Commentators: ಸೋಷಿಯಲ್‌ ಮೀಡಿಯಾದಲ್ಲಿ ಒಂದಿಲ್ಲೊಂದು ವಿಚಾರಕ್ಕೆ ಹಾಸ್ಯ ನಟ ಬುಲೆಟ್‌ ಪ್ರಕಾಶ್‌ ಅವರ ಮಗ ರಕ್ಷಕ್‌ ಬುಲೆಟ್‌ ಟ್ರೋಲ್‌ಗೆ ಆಹಾರವಾಗುತ್ತಲೇ ಇರುತ್ತಾರೆ. ರೋಸ್ಟ್‌ ಅನ್ನೋ ಹೆಸರಲ್ಲಿ ಬಗೆಬಗೆ ವಿಡಿಯೋಗಳನ್ನು ಮಾಡಿ, ಸೋಷಿಯಲ್‌ ಮೀಡಿಯಾದಲ್ಲಿ ಅವರನ್ನು ವೈರಲ್‌ ಮಾಡುತ್ತಲೇ ಇರುತ್ತಾರೆ. ಅದರಲ್ಲೂ ಬಿಗ್‌ಬಾಸ್‌ಗೆ ಹೋಗಿ ಬಂದ ಬಳಿಕವಂತೂ ಅದು ತುಸು ಜಾಸ್ತಿನೇ ಆಗಿದೆ. ರಕ್ಷಕ್‌ ಬುಲೆಟ್‌ ಅವರ ಸೋಷಿಯಲ್‌ ಮೀಡಿಯಾ ಪೋಸ್ಟ್‌ಗಳಿಗೆ ತರಹೇವಾರಿ ಕಾಮೆಂಟ್‌ ಮೂಲಕ ಕಾಲೆಳೆಯುವವರ ಸಂಖ್ಯೆಯೂ ಜಾಸ್ತಿನೇ ಇದೆ. ಆದರೆ, ನಾನು ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳಲ್ಲ ಅಂತಾರೆ ರಕ್ಷಕ್‌ ಬುಲೆಟ್‌.

ಸದಾ ಟ್ರೋಲ್‌ಗೆ ಆಹಾರವಾಗುವ ರಕ್ಷಕ್

ಕಳೆದ ವರ್ಷ ಬಿಗ್‌ಬಾಸ್‌ ಕನ್ನಡ ಸೀಸನ್‌ 10ಕ್ಕೆ ಎಂಟ್ರಿಕೊಟ್ಟಿದ್ದ ರಕ್ಷಕ್‌ ಬುಲೆಟ್‌, ಹೆಚ್ಚು ದಿನಗಳ ಕಾಲ ಬಿಗ್‌ ಮನೆಯಲ್ಲಿ ನಿಲ್ಲಲಿಲ್ಲ. ಅವರ ವರ್ತನೆ, ಸಹ ಸ್ಪರ್ಧಿಗಳ ಜತೆಗೆ ನಡೆದುಕೊಳ್ಳುತ್ತಿದ್ದ ರೀತಿ, ಮಾತನಾಡುವ ರೀತಿ ರಿವಾಜುಗಳಿಂದಲೇ ಹೆಚ್ಚು ಚರ್ಚೆಗೆ ಕಾರಣರಾಗಿದ್ದರು. ವೀಕ್ಷಕ ವಲಯದಿಂದಲೂ ಕಟು ಟೀಕೆಗಳು ವ್ಯಕ್ತವಾಗಿದ್ದವು. ಡ್ರೋಣ್‌ ಪ್ರತಾಪ್‌ ಮೇಲೆ ಎಗರಿ ರೋಷಾವೇಷ ತೋರಿಸಿದ್ದು ಅವರ ಎಲಿಮಿನೇಷನ್‌ಗೆ ಕಾರಣವಾಗಿತ್ತು. ಕಿಚ್ಚನ ಪಂಚಾಯ್ತಿಯಲ್ಲಿಯೂ ಸುದೀಪ್‌ ಕೆಂಗೆಣ್ಣಿಗೆ ಗುರಿಯಾಗಿದ್ದರು. ಇದೀಗ ಇದೇ ರಕ್ಷಕ್‌, ಸೋಷಿಯಲ್‌ ಮೀಡಿಯಾ ಟ್ರೋಲ್‌ ಮತ್ತು ಕೆಟ್ಟ ಕಾಮೆಂಟ್‌ಗಳ ಬಗ್ಗೆ ಮಾತನಾಡಿದ್ದಾರೆ.

ಬಿಗ್‌ ಬಾಸ್‌ ಖ್ಯಾತಿಯ ಐಶಾನಿ ಇತ್ತೀಚೆಗಷ್ಟೇ ಆಲ್ಬಂ ಹಾಡೊಂದನ್ನು ಬಿಡುಗಡೆ ಮಾಡಿದ್ದಾರೆ. ಆ ಕಾರ್ಯಕ್ರಮಕ್ಕೆ ಬಿಗ್‌ಬಾಸ್‌ ಸ್ಪರ್ಧಿಗಳು ಗೆಸ್ಟ್‌ಗಳಾಗಿ ಆಗಮಿಸಿದ್ದರು. ರಕ್ಷಕ್‌ ಬುಲೆಟ್‌ ಸಹ ಆಗಮಿಸಿ, ಕೆಟ್ಟ ಕಾಮೆಂಟ್‌ ಪಾಸ್‌ ಮಾಡೋರಿಗೆ ತಮ್ಮದೇ ಸ್ಟೈಲ್‌ನಲ್ಲಿ ಉತ್ತರ ನೀಡಿದ್ದಾರೆ. ಅವರು ಮಾತು ಈ ರೀತಿ ಇದೆ.

ಅವರಿಗೆ ***ಅದಿಲ್ಲ ಅಂತ ಅರ್ಥ

"ಈ ಕಾಮೆಂಟ್‌ ಪಾಸ್‌ ಮಾಡೋದು, ಸ್ಪ್ರೆಡ್‌ ಆಗೋದರ ಬಗ್ಗೆ ನಾವು ಜಾಸ್ತಿ ತಲೆ ಕೆಡಿಸಿಕೊಳ್ಳಬಾರದು. ನಾನಂತೂ ಮೊದಲೇ ತಲೆ ಕೆಡಿಸಿಕೊಳ್ಳಲ್ಲ. ಸಖತ್ತಾಗಿಯೇ ನಾನು ಎಂಜಾಯ್‌ ಮಾಡ್ತಿನಿ. ಓದ್ತಿನಿ. ನೀಟಾಗಿ ಅದನ್ನು ನೋಡಿ ಮಜಾ ತಗೋತಿನಿ. ಯಾರೂ ಬಂದು ಒರಿಜಿನಲ್‌ ಫ್ರೊಫೈಲ್‌ನಿಂದ ಕಾಮೆಂಟ್‌ ಹಾಕಲ್ಲ. ಯಾಕಂದ್ರೆ ಅವರಿಗೆ *** ಅದಿಲ್ಲ ಅಂತ ಅರ್ಥ. ನೇರವಾಗಿ ಬಂದು ಕಾಮೆಂಟ್ರ ಹಾಕ್ರಪ್ಪ. ನಾವೂ, ಓಹ್‌ ನೀವೇನಾ ಕಾಮೆಂಟ್‌ ಹಾಕಿದ್ದು ಅಂತ ನೋಡಿ ಖುಷಿ ಪಡ್ತೀವಿ ಎಂದಿದ್ದಾರೆ.

ನಿಮ್‌ ಮನೆಲೂ ಒಂದು ಕುಟುಂಬ ಇರುತ್ತೆ…

"ನೀವು ನಮ್ಮನ್ನು ನೋಡಿಯೇ ಕಾಮೆಂಟ್‌ ಹಾಕಿರ್ತೀರಾ ಅಂದ ಮೇಲೆ, ನಾವೂ ನಿಮ್ಮನ್ನು ನೋಡಬೇಕಲ್ಲವೇ. ಆದರೆ, ನಿಮಗೆ ಯಾವುದೇ ಐಡೆಂಟಿಟಿ ಇರಲ್ಲ. ಜೀರೋ ಫಾಲೋವರ್ಸ್‌ ಇರ್ತಾರೆ. ಬಂದು ಕಾಮೆಂಟ್‌ ಪಾಸ್‌ ಮಾಡ್ತೀರಾ. ಒಬ್ಬರಿಗೆ ಮನೆ ಇರುತ್ತೆ, ಫ್ಯಾಮಿಲಿ ಇರುತ್ತೆ. ಮನೆಯಲ್ಲಿ ಅಪ್ಪ ಅಮ್ಮ ಇರ್ತಾರೆ. ಸಾವಿರ ಜನ ಇರ್ತಾರೆ. ಅವ್ರಿಗೆ ಅಂತ ಪ್ರೀತ್ಸೋ ಮನಸ್ಸುಗಳು ಇರ್ತಾವೆ. ಒಂದಷ್ಟು ಜನರನ್ನು ಸಂಪಾದನೆ ಮಾಡಿರ್ತಾರೆ. ನೀವು ಬಂದು ಕಾಮೆಂಟ್‌ ಮಾಡಿದಾಗ, ಅದಕ್ಕೆ ಇನ್ನೊಬ್ಬ ಬಂದು ಕಾಮೆಂಟ್‌ ಮಾಡ್ತಾನೆ.

ಒಳ್ಳೇ ಕಾಮೆಂಟ್‌ ಹಾಕಿ, ಎಲ್ಲರಿಗೂ ಒಳ್ಳೆಯದಾಗಲಿ..

ದಯವಿಟ್ಟು ಹೀಗೆ ಮಾಡೋದು ಬೇಡ. ನಾವು ಒಳ್ಳೆಯ ರೀತಿಯಲ್ಲ ಹೋಗ್ತಿದ್ದೀವಿ. ಅದೇ ರೀತಿ ಹೋಗೋಣ. ನಮಗೇನಾದರೂ ಒಳ್ಳೆಯದಾಗುತ್ತೆ ಎಂದರೆ ಎಲ್ಲರೂ ಬಂದು ಸಪೋರ್ಟ್‌ ಮಾಡ್ತಾರೆ. ಅದೇ ರೀತಿ ನೀವು ಸಹ ಸಪೋರ್ಟ್‌ ಮಾಡಿ, ಒಳ್ಳೆಯ ಕಾಮೆಂಟ್‌ ಪಾಸ್‌ ಮಾಡಿ. ಎಲ್ಲರಿಗೂ ಒಳ್ಳೆಯದಾಗಲಿ, ಥ್ಯಾಂಕ್ಯು ಸೋ ಮಚ್"‌ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಕೆಟ್ಟ ಕಾಮೆಂಟ್‌ ಹಾಕುವವರಿಗೆ ತಮ್ಮದೇ ಶೈಲಿಯಲ್ಲಿ ಮನವಿ ಮಾಡಿದ್ದಾರೆ.

mysore-dasara_Entry_Point