Ramarasa: ಬಿಗ್‌ಬಾಸ್‌ 11ರ ವಿಜೇತ ಕಾರ್ತಿಕ್ ಮಹೇಶ್ ಬರ್ತ್‌ಡೇಗೆ ‘ರಾಮರಸ’ ಚಿತ್ರದಿಂದ ವಿಶೇಷ ಉಡುಗೊರೆ
ಕನ್ನಡ ಸುದ್ದಿ  /  ಮನರಂಜನೆ  /  Ramarasa: ಬಿಗ್‌ಬಾಸ್‌ 11ರ ವಿಜೇತ ಕಾರ್ತಿಕ್ ಮಹೇಶ್ ಬರ್ತ್‌ಡೇಗೆ ‘ರಾಮರಸ’ ಚಿತ್ರದಿಂದ ವಿಶೇಷ ಉಡುಗೊರೆ

Ramarasa: ಬಿಗ್‌ಬಾಸ್‌ 11ರ ವಿಜೇತ ಕಾರ್ತಿಕ್ ಮಹೇಶ್ ಬರ್ತ್‌ಡೇಗೆ ‘ರಾಮರಸ’ ಚಿತ್ರದಿಂದ ವಿಶೇಷ ಉಡುಗೊರೆ

ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ವಿಜೇತ ಕಾರ್ತಿಕ್‌ ಮಹೇಶ್‌ ಈಗ ರಾಮರಸ ಸಿನಿಮಾ ಮೂಲಕ ಆಗಮಿಸುತ್ತಿದ್ದಾರೆ. ಗುರು ದೇಶಪಾಂಡೆ ನಿರ್ಮಾಣ ಮಾಡಿರುವ ಈ ಚಿತ್ರವನ್ನು ನಿರ್ದೇಶಕ ಜಟ್ಟ ಗುರುರಾಜ್‌ ನಿರ್ದೇಶನ ಮಾಡಿದ್ದು, ಇತ್ತೀಚೆಗಷ್ಟೇ ಈ ಚಿತ್ರದ ಕ್ಯಾರೆಕ್ಟರ್‌ ಪಂಚ್‌ ಬಿಡುಗಡೆ ಆಗಿದೆ.

ಬಿಗ್‌ಬಾಸ್‌ 11ರ ವಿಜೇತ ಕಾರ್ತಿಕ್ ಮಹೇಶ್ ಅಭಿನಯದ ರಾಮರಸ ಚಿತ್ರದ ಕ್ಯಾರೆಕ್ಟರ್‌ ಟೀಸರ್‌ ರಿಲೀಸ್‌
ಬಿಗ್‌ಬಾಸ್‌ 11ರ ವಿಜೇತ ಕಾರ್ತಿಕ್ ಮಹೇಶ್ ಅಭಿನಯದ ರಾಮರಸ ಚಿತ್ರದ ಕ್ಯಾರೆಕ್ಟರ್‌ ಟೀಸರ್‌ ರಿಲೀಸ್‌

Ramarasa kannada Movie: ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರ ವಿಜೇತ ಕಾರ್ತಿಕ್‌ ಮಹೇಶ್‌, ರಾಮರಸ ಸಿನಿಮಾ ಮೂಲಕ ಬೆಳ್ಳಿತೆರೆಗೆ ಆಗಮಿಸಲು ರೆಡಿಯಾಗಿದ್ದಾರೆ. ಗುರುದೇಶಪಾಂಡೆ ನಿರ್ಮಿಸುತ್ತಿರುವ ಈ ಚಿತ್ರವನ್ನು ‘ಜಟ್ಟ’ ಗಿರಿರಾಜ್‍ ನಿರ್ದೇಶನ ಮಾಡಿದ್ದಾರೆ. ಇತ್ತೀಚಿಗಷ್ಟೇ ಈ ಚಿತ್ರದ ನಾಯಕ ಕಾರ್ತಿಕ್‌ ಮಹೇಶ್‌ ಬರ್ತ್‌ಡೇ ನಿಮಿತ್ತ ವಿಶೇಷ ಕ್ಯಾರೆಕ್ಟರ್ ಟೀಸರ್‌ ರಿಲೀಸ್‌ ಮಾಡಿ, ಶುಭ ಕೋರಿದೆ ಚಿತ್ರತಂಡ. ಬರೀ ಚಿತ್ರತಂಡ ಮಾತ್ರವಲ್ಲದೆ, ಸೀಸನ್‌ 10ರ ಸ್ಪರ್ಧಿಗಳು ಆಗಮಿಸಿ, ಕಾರ್ತಿಕ್‌ಗೆ ಶುಭ ಕೋರಿದ್ದಾರೆ.

ಜಿ ಅಕಾಡೆಮಿಯಲ್ಲಿ ನಟನೆ ಕಲಿತಿರುವ ಹದಿನೈದು ಪ್ರತಿಭೆಗಳು ಈ ಚಿತ್ರದಲ್ಲಿ ನಟಿಸುತ್ತಿದ್ದು, ಇವರ ಜೊತೆಗೆ ನಾಯಕನ ಪಾತ್ರದಲ್ಲಿ ಕಾರ್ತಿಕ್ ಮಹೇಶ್ ಅಭಿನಯಿಸುತ್ತಿದ್ದಾರೆ. ಬಿಗ್ ಬಾಸ್‌ನಿಂದ ಬಂದ ಬಳಿಕ ಅವರನ್ನು ಭೇಟಿಯಾಗಿ ನಮ್ಮ ಚಿತ್ರದ ಕಥೆ ಹೇಳಲಾಯಿತು. ಅವರು ಒಪ್ಪಿಕೊಂಡರು. ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಕ್ಯಾರೆಕ್ಟರ್ ಟೀಸರ್ ಬಿಡುಗಡೆ ಮಾಡಿದ್ದೇವೆ‌. ಮೊದಲು ಸೀಮಿತ ಬಜೆಟ್ ನಲ್ಲಿ ಸಿನಿಮಾ ಮಾಡಬೇಕೆಂದುಕೊಂಡೆವು. ಈಗ ಬಜೆಟ್ ಹೆಚ್ಚಾಗುತ್ತಿದೆ. ನಿರ್ಮಾಣಕ್ಕೆ ನಮ್ಮ ಜೊತೆಗೆ ವಿಕ್ರಮಾದಿತ್ಯ ಅವರು ಜೊತೆಯಾಗಿದ್ದಾರೆ" ಎಂದರು ಗುರು ದೇಶಪಾಂಡೆ.

ಮುಂದುವರಿದು ಮಾತನಾಡಿದ ಅವರು, "ಗಿರಿರಾಜ್ ಅವರ ನಿರ್ದೇಶನ, ಕೆ.ಕೆ ಅವರ ಛಾಯಾಗ್ರಹಣ, ಬಿ.ಜೆ.ಭರತ್ ಅವರ ಸಂಗೀತ ನಿರ್ದೇಶನ‌ ನಮ್ಮ ಚಿತ್ರಕ್ಕಿದೆ. ಮುಂದೆ ಹಂತಹಂತವಾಗಿ ಸಿನಿಮಾ‌ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದಾಗಿ ತಿಳಿಸಿದ ನಿರ್ಮಾಪಕ ಗುರು ದೇಶಪಾಂಡೆ, ಕಾರ್ತಿಕ್ ಅವರಿಗೆ "ರಾಜಾಹುಲಿ"ಯ ಯಶ್ ಅವರ ಛಾಯೆ ಇದೆ. ಕಾರ್ತಿಕ್ ಸಹ ಯಶ್ ಅವರಂತೆ ಹೆಸರು ಮಾಡಲಿ ಎಂದು ಹಾರೈಸಿದರು.

"ನಾನು ಬೇಡ ಅಂದಿದ್ದೆ. ಆದರೂ ನನ್ನ ಹುಟ್ಟುಹಬ್ಬವನ್ನು ಇಷ್ಟು ಅದ್ದೂರಿಯಾಗಿ ಆಚರಿಸುತ್ತಿರುವ ನಿರ್ಮಾಪಕ ಗುರು ದೇಶಪಾಂಡೆ ಅವರಿಗೆ ಮೊದಲು ಧನ್ಯವಾದ ಹೇಳುತ್ತೇನೆ. ನನ್ನನ್ನು ಹಾರೈಸಲು ಬಂದಿರುವ ಬಿಗ್ ಬಾಸ್ ಸ್ನೇಹಿತರಿಗೆ ಹಾಗೂ ನಿರ್ದೇಶಕರಿಗೂ ಥ್ಯಾಂಕ್ಯೂ. ಇನ್ನು ನಿರ್ದೇಶಕರು ಹಾಗೂ ನಿರ್ಮಾಪಕರು ನನ್ನ ಬಗ್ಗೆ ತುಂಬಾ ನಂಬಿಕೆಯಿಟ್ಟಿದ್ದಾರೆ. ಅವರ ನಂಬಿಕೆಯನ್ನು ಖಂಡಿತವಾಗಿ ಉಳಿಸಿಕೊಳ್ಳುತ್ತೇನೆ" ಎಂದರು ನಾಯಕ ಕಾರ್ತಿಕ್ ಮಹೇಶ್.

ಪ್ರಸ್ತುತ ಸಂದರ್ಭದಲ್ಲಿ ಸಿನಿಮಾ ನಿರ್ಮಾಣ ಅಷ್ಟು ಸುಲಭವಲ್ಲ. ಚಿತ್ರ ನಿರ್ಮಾಣ ಮಾಡಲು ಹೆಚ್ಚಿನ ಧೈರ್ಯ ಬೇಕು. ಆ ಧೈರ್ಯವನ್ನು ಗುರು ದೇಶಪಾಂಡೆ ಅವರು ಮಾಡಿ ರಾಮರಸ ಚಿತ್ರ ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಕಥೆಗೆ ಹದಿನೈದು ಪ್ರತಿಭೆಗಳ ಜೊತೆಗೆ ಹೆಸರಾಂತ ನಟರೊಬ್ಬರು ಬೇಕಿತ್ತು. ಕಾರ್ತಿಕ್ ಮಹೇಶ್ ಬಿಗ್ ಬಾಸ್‌ನಿಂದ ಕನ್ನಡಿಗರ ಮನ ಗೆದ್ದಿದ್ದರು. ಈ ಚಿತ್ರದ ಕಥೆ ಕೇಳಿ, ಅಭಿನಯಿಸಲು ಓಕೆ ಎಂದರು. ನಂತರ ಕಾರ್ತಿಕ್, ನಮ್ಮನ್ನು ಆವರಿಸಿಕೊಳ್ಳಲು ಶುರುವಾದರು. ಈಗ ಚಿತ್ರ ಬಜೆಟ್ ನಿಂದ ಹಿಡಿದು ಎಲ್ಲಾ ವಿಷಯದಲ್ಲೂ ದೊಡ್ಡದಾಗುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗುವ ಎಲ್ಲಾ ಲಕ್ಷಣಗಳು ಇದೆ. ಈ ಸಂದರ್ಭದಲ್ಲಿ ಕಾರ್ತಿಕ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿ ಒಳಿತನ್ನು ಹಾರೈಸುತ್ತೇನೆ" ಎಂದರು ನಿರ್ದೇಶಕ ಬಿ.ಎಂ.ಗಿರಿರಾಜ್.

Whats_app_banner