ಬಿಲ್ಲ ರಂಗ ಭಾಷಾ ಸಿನಿಮಾದಲ್ಲಿ ಕಿಚ್ಚ ಸುದೀಪ್‌ ಜತೆ ಯಾರೆಲ್ಲ ನಟಿಸ್ತಾರೆ? ಲೇಟೆಸ್ಟ್‌ ಅಪ್‌ಡೇಟ್‌ ನೀಡಿದ್ರು ಅಭಿನಯ ಚಕ್ರವರ್ತಿ
ಕನ್ನಡ ಸುದ್ದಿ  /  ಮನರಂಜನೆ  /  ಬಿಲ್ಲ ರಂಗ ಭಾಷಾ ಸಿನಿಮಾದಲ್ಲಿ ಕಿಚ್ಚ ಸುದೀಪ್‌ ಜತೆ ಯಾರೆಲ್ಲ ನಟಿಸ್ತಾರೆ? ಲೇಟೆಸ್ಟ್‌ ಅಪ್‌ಡೇಟ್‌ ನೀಡಿದ್ರು ಅಭಿನಯ ಚಕ್ರವರ್ತಿ

ಬಿಲ್ಲ ರಂಗ ಭಾಷಾ ಸಿನಿಮಾದಲ್ಲಿ ಕಿಚ್ಚ ಸುದೀಪ್‌ ಜತೆ ಯಾರೆಲ್ಲ ನಟಿಸ್ತಾರೆ? ಲೇಟೆಸ್ಟ್‌ ಅಪ್‌ಡೇಟ್‌ ನೀಡಿದ್ರು ಅಭಿನಯ ಚಕ್ರವರ್ತಿ

Billa Ranga Baashaa Movie: ಕಿಚ್ಚ ಸುದೀಪ್‌ ನಟನೆಯ ಮುಂಬರುವ ಸಿನಿಮಾ "ಬಿಲ್ಲ ರಂಗ ಭಾಷಾ"ದ ಕುರಿತು ಅಪ್‌ಡೇಟ್‌ ಬಯಸಿದ್ದ ಅಭಿಮಾನಿಗಳಿಗೆ ಅಭಿನಯ ಚಕ್ರವರ್ತಿ ಕುತೂಹಲ ಹೆಚ್ಚಿಸಿದ್ದಾರೆ. ಬಿಲ್ಲಾ ರಂಗ ಭಾಷಾ ಸಿನಿಮಾಕ್ಕೆ ಸಂಬಂಧಪಟ್ಟಂತೆ ಹೊಸ ಮಾಹಿತಿಯೊಂದನ್ನು ಸುದೀಪ್‌ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಬಿಲ್ಲ ರಂಗ ಭಾಷಾ ಸಿನಿಮಾ: ಲೇಟೆಸ್ಟ್‌ ಅಪ್‌ಡೇಟ್‌ ನೀಡಿದ್ರು ಅಭಿನಯ ಚಕ್ರವರ್ತಿ
ಬಿಲ್ಲ ರಂಗ ಭಾಷಾ ಸಿನಿಮಾ: ಲೇಟೆಸ್ಟ್‌ ಅಪ್‌ಡೇಟ್‌ ನೀಡಿದ್ರು ಅಭಿನಯ ಚಕ್ರವರ್ತಿ

Billa Ranga Baashaa Movie: ಕಿಚ್ಚ ಸುದೀಪ್‌ ನಟನೆಯ ಮುಂಬರುವ ಸಿನಿಮಾ "ಬಿಲ್ಲ ರಂಗ ಭಾಷಾ"ದ ಕುರಿತು ಅಪ್‌ಡೇಟ್‌ ಬಯಸಿದ್ದ ಅಭಿಮಾನಿಗಳಿಗೆ ಅಭಿನಯ ಚಕ್ರವರ್ತಿ ಕುತೂಹಲ ಹೆಚ್ಚಿಸಿದ್ದಾರೆ. ಬಿಲ್ಲಾ ರಂಗ ಭಾಷಾ ಸಿನಿಮಾಕ್ಕೆ ಸಂಬಂಧಪಟ್ಟಂತೆ ಹೊಸ ಮಾಹಿತಿಯೊಂದನ್ನು ಸುದೀಪ್‌ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಬಿಲ್ಲ ರಂಗ ಭಾಷಾ ಸಿನಿಮಾದ ನಾಯಕ ಸುದೀಪ್‌ ಅನ್ನೋ ಸಂಗತಿ ಎಲ್ಲರಿಗೂ ಗೊತ್ತು. ಆದರೆ, ಸುದೀಪ್‌ಗೆ ನಾಯಕಿಯಾಗಿ ನಟಿಸುವವರು ಯಾರು? ಈ ಸಿನಿಮಾದಲ್ಲಿ ವಿಲನ್‌ ಪಾತ್ರದಲ್ಲಿ ಯಾರು ನಟಿಸಲಿದ್ದಾರೆ. ಇನ್ನು ಪ್ರಮುಖ ಪಾತ್ರಗಳಲ್ಲಿ ಯಾರೆಲ್ಲ ನಟಿಸಲಿದ್ದಾರೆ... ಹೀಗೆ ಅಭಿಮಾನಿಗಳಲ್ಲಿರುವ ಹಲವು ಕುತೂಹಲವನ್ನು ಸುದೀಪ್‌ ಇನ್ನಷ್ಟು ಹೆಚ್ಚಿಸಿದ್ದಾರೆ.

ಕಿಚ್ಚ ಸುದೀಪ್‌ ಸೋಷಿಯಲ್‌ ಮೀಡಿಯಾ ಅಪ್‌ಡೇಟ್‌

ಏಪ್ರಿಲ್‌ 16ರಂದು ಏನು ನಡೆಯಲಿದೆ ಗೊತ್ತೆ? ಬಿಲ್ಲಾ ರಂಗ ಭಾಷಾ ಸಿನಿಮಾದ ಶೂಟಿಂಗ್‌ ಆರಂಭವಾಗಲಿದೆ ಎಂದು ಕಿಚ್ಚ ಸುದೀಪ್‌ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಸಿನಿಮಾದ ಸೆಟ್‌, ತಾರಾಗಣ ಮತ್ತು ಇತರೆ ವಿಚಾರಗಳನ್ನು ನಂತರ ತಿಳಿಸಲಾಗುವುದು ಎಂದು ಸುದೀಪ್‌ ಪೋಸ್ಟ್‌ ಮಾಡಿದ್ದಾರೆ.

ವಿಕ್ರಾಂತ್‌ ರೋಣಾದ ಬಳಿಕ ನಿರ್ದೇಶಕ ಅನೂಪ್‌ ಭಂಡಾರಿ ಜತೆ ಸುದೀಪ್‌ ಈ ಸಿನಿಮಾ ಮಾಡುತ್ತಿದ್ದಾರೆ. ಇದು ಭವಿಷ್ಯದ ಕಥೆ ಹೇಳುವ ಸಿನಿಮಾ ಎಂದು ಹೇಳಲಾಗುತ್ತಿದೆ. 2209 ಎಡಿಯ ಕಥೆ ಇದರಲ್ಲಿ ಇರಲಿದೆ ಎಂದು ಈ ಹಿಂದೆ ವಿಡಿಯೋ ಮೂಲಕ ಗ್ಲಿಂಪ್ಸ್‌ ನೀಡಲಾಗಿತ್ತು. ಈ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ.

"ಬಿ ಗಿಯಾಗ್ ಕೂತ್ಕೋಳಿ, ರಂಪಾಟ ಶುರುವಾಗಕ್ ಸ್ವಲ್ಪ ಸಮಯ ಬೇಕು. ಬಾಡೂಟದ್ ಜೊತೆ ಬರ್ತೀವಿ. ಅಲ್ಲಿವರ್ಗು ಎಂದಿನ ಹಾಗೆ ತಾಳ್ಮೆ ಇರ್ಲಿ" ಎಂದು ಇತ್ತೀಚೆಗೆ ಅನೂಪ್‌ ಭಂಡಾರಿ ಅಪ್‌ಡೇಟ್‌ ನೀಡಿದ್ದರು. ಇದಾದ ಬಳಿಕ ಸುದೀಪ್‌ ತನ್ನ ಹುಟ್ಟುಹಬ್ಬದಂದು ಸಿನಿಮಾದ ಗ್ಲಿಂಪ್ಸ್‌ ಬಿಡುಗಡೆ ಮಾಡಿದ್ದರು. ಬಿಲ್ಲ ರಂಗ ಭಾಷಾ ಸಿನಿಮಾದ ಟೈಟಲ್‌ ಲೋಗೋ ಮತ್ತು ಪರಿಕಲ್ಪನೆಯ ವಿಡಿಯೋವನ್ನು ಅಂದು ಹಂಚಿಕೊಂಡಿದ್ದರು.

"ಎ ಟೇಲ್ ಫ್ರಮ್ ದಿ ಫ್ಯೂಚರ್". ಬಿಲ್ಲ ರಂಗ ಭಾಷಾ- ಫಸ್ಟ್‌ ಬ್ಲಡ್‌ ಸಿನಿಮಾದ ಆಫೀಶಿಯಲ್‌ ಟೈಟಲ್‌ ಲೋಗೊ ಮತ್ತು ಕಾನ್ಸೆಪ್ಟ್‌ ವಿಡಿಯೋ ಇಲ್ಲಿದೆ" ಎಂದು ಸುದೀಪ್‌ ತನ್ನ ಹುಟ್ಟುಹಬ್ಬದಂದು ಹೊಸ ವಿಡಿಯೋ ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ಸುದೀಪ್‌ ಪ್ರೊಫೈಲ್‌ನಡಿ ಅಭಿಮಾನಿಗಳು "ಅಪ್‌ಡೇಟ್‌ ಬೇಕು ಬಾಸ್‌" ಎಂದು ಹೇಳುತ್ತಿದ್ದಾರೆ. "ಬಾಸ್‌ ಅಪ್‌ಡೇಟ್‌ ಬಾಸ್‌" "ಅಪ್‌ಡೇಟ್‌ ಬೇಕು ಬಾಸ್‌" ಎಂದೆಲ್ಲ ಧ್ವನಿ ಕೇಳುತ್ತದೆ. "ಹನುಮಾನ್‌ ನಿರ್ಮಾಪಕರಿಂದ, ರಂಗಿತರಂಗ, ರಾಜರಥ ವಿಕ್ರಾಂತ್‌ ರೋಣ ನಿರ್ದೇಶಕರಿಂದ ಬಿಲ್ಲಾ ರಂಗ ಭಾಷಾ ಸಿನಿಮಾ" ಎಂಬ ಅಪ್‌ಡೇಟ್‌ ಅನ್ನು ಹಂಚಿಕೊಳ್ಳಲಾಗಿತ್ತು. ಒಂದಾನೊಂದು ಕಾಲದಲ್ಲಿ ಕ್ರಿ.ಶಕ 2209ರಲ್ಲಿ ಎಂದು ಆರಂಭವಾಗುವ ವಿಡಿಯೋದಲ್ಲಿ ಬಿಲ್ಲಾ ರಂಗ ಭಾಷಾ ಎಂಬ ಮೂವರ ಕಥೆಯನ್ನು ಹೊಂದಿರುವ ಸೂಚನೆಯನ್ನು ಈ ವಿಡಿಯೋ ನೀಡಿತ್ತು.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in
Whats_app_banner