Blink Movie: ಥಿಯೇಟರ್‌ನಲ್ಲಿ ನೋಡದ್ದಕ್ಕೆ ಕ್ಷಮಿಸಿ; ಒಟಿಟಿಯಲ್ಲಿ ಬ್ಲಿಂಕ್‌ ಸಿನಿಮಾ ಕಣ್ತುಂಬಿಕೊಂಡವರಿಂದ ಮೆಚ್ಚುಗೆಯ ಮಹಾಪೂರ
ಕನ್ನಡ ಸುದ್ದಿ  /  ಮನರಂಜನೆ  /  Blink Movie: ಥಿಯೇಟರ್‌ನಲ್ಲಿ ನೋಡದ್ದಕ್ಕೆ ಕ್ಷಮಿಸಿ; ಒಟಿಟಿಯಲ್ಲಿ ಬ್ಲಿಂಕ್‌ ಸಿನಿಮಾ ಕಣ್ತುಂಬಿಕೊಂಡವರಿಂದ ಮೆಚ್ಚುಗೆಯ ಮಹಾಪೂರ

Blink Movie: ಥಿಯೇಟರ್‌ನಲ್ಲಿ ನೋಡದ್ದಕ್ಕೆ ಕ್ಷಮಿಸಿ; ಒಟಿಟಿಯಲ್ಲಿ ಬ್ಲಿಂಕ್‌ ಸಿನಿಮಾ ಕಣ್ತುಂಬಿಕೊಂಡವರಿಂದ ಮೆಚ್ಚುಗೆಯ ಮಹಾಪೂರ

Blink Kannada Movie OTT: ಬ್ಲಿಂಕ್‌ ಕನ್ನಡ ಸಿನಿಮಾ ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ರಿಲೀಸ್‌ ಆಗುತ್ತಿದೆ. ಒಟಿಟಿಯಲ್ಲಿ ಬ್ಲಿಂಕ್‌ ನೋಡಿದ ಪ್ರೇಕ್ಷಕರಿಂದ ಶ್ರೀನಿಧಿ ಬೆಂಗಳೂರು ನಿರ್ದೇಶನದ, ದೀಕ್ಷಿತ್‌ ಶೆಟ್ಟಿ ನಟನೆಯ ಚಿತ್ರದ ಕುರಿತು ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ.

ಒಟಿಟಿಯಲ್ಲಿ ಬ್ಲಿಂಕ್‌ ಸಿನಿಮಾ ಕಣ್ತುಂಬಿಕೊಂಡವರಿಂದ ಮೆಚ್ಚುಗೆಯ ಮಹಾಪೂರ
ಒಟಿಟಿಯಲ್ಲಿ ಬ್ಲಿಂಕ್‌ ಸಿನಿಮಾ ಕಣ್ತುಂಬಿಕೊಂಡವರಿಂದ ಮೆಚ್ಚುಗೆಯ ಮಹಾಪೂರ

ಬೆಂಗಳೂರು: ಸ್ಯಾಂಡಲ್‌ವುಡ್‌ನ ಸಮಯದ ಪ್ರಯಾಣದ ಸೈನ್ಸ್‌ ಫಿಕ್ಷನ್‌ ಸಿನಿಮಾ ಬ್ಲಿಂಕ್‌ ಒಟಿಟಿಯಲ್ಲಿ ಬಿಡುಗಡೆಯಾಗಿದ್ದು, ವೀಕ್ಷಕರಿಂದ ಮೆಚ್ಚುಗೆ ಪಡೆಯುತ್ತಿದೆ. ಶ್ರೀನಿಧಿ ಬೆಂಗಳೂರು ನಿರ್ದೇಶನದ ಈ ಸಿನಿಮಾದಲ್ಲಿ ದೀಕ್ಷಿತ್‌ ಶೆಟ್ಟಿ ಮತ್ತು ಚೈತ್ರಾ ಜೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. "ಸಿನಿಮಾ ಚೆನ್ನಾಗಿದೆ ಥಿಯೇಟರ್‌ಗೆ ಬಂದು ನೋಡಿ" ಎಂದು ಸಾಕಷ್ಟು ಜನರು ಕೇಳಿಕೊಂಡರೂ ಬ್ಲಿಂಕ್‌ ನೋಡಲು ನಿರೀಕ್ಷೆಯಷ್ಟು ಜನರು ಚಿತ್ರಮಂದಿರತ್ತ ಸುಳಿದಿರಲಿಲ್ಲ. ಇದೇ ನೋವಲ್ಲಿ ಚಿತ್ರತಂಡ ಬ್ಲಿಂಕ್‌ ಸಿನಿಮಾವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಿದೆ. "ಒಟಿಟಿಯಲ್ಲಾದ್ರೂ ಬ್ಲಿಂಕ್‌ ಗೆಲ್ಲಿಸಿ" ಎಂದು ಚಿತ್ರತಂಡ ಮನವಿ ಮಾಡಿತ್ತು. ಬ್ಲಿಂಕ್‌ ತಂಡದ ನಿರೀಕ್ಷೆಯ ಫಲವೋ ಎಂಬಂತೆ ಒಟಿಟಿಯಲ್ಲಿ ಬ್ಲಿಂಕ್‌ ನೋಡಿದ ಪ್ರೇಕ್ಷಕರಿಂದ ಸಾಕಷ್ಟು ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ.

ಬ್ಲಿಂಕ್‌ ಸಿನಿಮಾ ವಿಮರ್ಶೆ

ಒಟಿಟಿಯಲ್ಲಿ ಬ್ಲಿಂಕ್‌ ಸಿನಿಮಾವನ್ನು ನೋಡಿ ಸಾಕಷ್ಟು ಪ್ರೇಕ್ಷಕರು ಒಳ್ಳೆಯ ವಿಮರ್ಶೆ ನೀಡುತ್ತಿದ್ದಾರೆ. "ಇಷ್ಟು ಒಳ್ಳೆಯ ಸಿನಿಮಾವನ್ನು ಥಿಯೇಟರ್‌ನಲ್ಲಿ ನೋಡದೆ ಇರುವುದಕ್ಕೆ ಖೇದವಾಗುತ್ತಿದೆ" ಎಂದೆಲ್ಲ ಕಾಮೆಂಟ್‌ ಮಾಡುತ್ತಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಬ್ಲಿಂಕ್‌ ಕುರಿತು ಪ್ರೇಕ್ಷಕರ ಅಭಿಪ್ರಾಯ ಹೇಗಿದೆ ತಿಳಿದುಕೊಳ್ಳೋಣ ಬನ್ನಿ.

"ಬ್ಲಿಂಕ್‌ ಸೈ-ಫಿ ಮಾಸ್ಟರ್‌ ಫೀಸ್‌. ಸ್ಯಾಂಡಲ್‌ವುಡ್‌ನ ಅದ್ಭುತ ಡ್ರೀಮ್ಸ್‌ಸ್ಕೇಪ್‌. ತುಂಬಾ ಚೆನ್ನಾಗಿದೆ. ಥಿಯೇಟರ್‌ನಲ್ಲಿ ಮಿಸ್‌ ಮಾಡಿರುವುದಕ್ಕೆ ಕ್ಷಮಿಸಿ" ಎಂದು ಚೇತನ್‌ ಕುಮಾರ್‌ ಎಂಬವರು ಟ್ವೀಟ್‌ ಮಾಡಿದ್ದಾರೆ. "ಥಿಯೇಟರ್‌ನಲ್ಲಿ ಸಿನಿಮಾ ನೋಡದೆ ಇರುವುದಕ್ಕೆ ಖೇದವಾಗುತ್ತಿದೆ. ಈ ಸಿನಿಮಾದ ಸಂಗೀತ, ನಟನೆ, ಚಿತ್ರಕತೆ ಸೇರಿದಂತೆ ಎಲ್ಲವೂ ಪರ್ಫೆಕ್ಟ್‌ ಆಗಿದೆ" ಎಂದು ಶ್ರೀಜಿತ್‌ ಎಂಬವರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

"ಕಡ್ಡಾಯವಾಗಿ ನೋಡಲೇಬೇಕಾದ ಸಿನಿಮಾ. ಬ್ಲಿಂಕ್‌ ಸೂಪರ್‌. ಈ ಸಿನಿಮಾ ಖಂಡಿತಾ ಗೆಲ್ಲಬೇಕು" ಎಂದು ಕಿರಣ್‌ ನಾಯ್ಕ್‌ ಹೇಳಿದ್ದಾರೆ. "ಎರಡು ತಿಂಗಳ ಹಿಂದೆ ಥಿಯೇಟರ್‌ನಲ್ಲಿ ನೋಡಿದ್ದೆ. ಈಗ ಒಟಿಟಿಗೆ ಬಂದಿದೆ. ಮಿಸ್‌ ಮಾಡದೆ ನೋಡಿ. ಬ್ಲಿಂಕ್‌ ನಿಮ್ಮನ್ನು ಥಿಂಕ್‌ ಮಾಡಿಸುವ ಸಿನಿಮಾ" ಎಂದು ಆದರ್ಶ್‌ ಪೋಸ್ಟ್‌ ಮಾಡಿದ್ದಾರೆ. "ಕ್ಲೈಮ್ಯಾಕ್ಸ್‌ ಇನ್ನೂ ಅರ್ಥ ಆಗಿಲ್ಲ" "ಕೊನೆಯ 20 ನಿಮಿಷ ಸ್ವಲ್ಪ ಓವರ್‌ ಡೋಸ್‌ ಆಯ್ತು" ಎಂದು ಕೆಲವರು ಚಿತ್ರದ ಕುರಿತು ತಮ್ಮ ಅಭಿಪ್ರಾಯಗಳನ್ನೂ ವ್ಯಕ್ತಪಡಿಸಿದ್ದಾರೆ.

"ಬ್ಲಿಂಕ್‌ ತುಂಬಾ ಸುಂದರವಾದ ಸಿನಿಮಾ. ಸುಂದರ ಕಥೆ ಮತ್ತು ನಿರೂಪಣೆಯಿದೆ. ಕನ್ನಡ ಸಾಹಿತ್ಯವನ್ನು ಬಹಳ ಚೆನ್ನಾಗಿ ಬಳಕೆ ಮಾಡಿದ್ದಾರೆ" ಎಂದು ಶಶಾಂಕ್‌ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. "ಬ್ಲಿಂಕ್‌ ಅತ್ಯುತ್ತಮ ಸೈನ್ಸ್‌ ಫಿಕ್ಷನ್‌ ಸಿನಿಮಾ. ಕನ್ನಡ ಸಂಸ್ಕೃತಿಯನ್ನೂ ಈ ಚಿತ್ರ ಪ್ರತಿಬಿಂಬಿಸುತ್ತದೆ" ಹರೀಶ್‌ ಇಟಗಿ ಹೇಳಿದ್ದಾರೆ.

"ಈ ಸಿನಿಮಾ ನಿರೀಕ್ಷಿತ ಯಶಸ್ಸು ಪಡೆಯದಿರುವುದು ಬೇಸರದ ಸಂಗತಿ. ಇದು ಎಲ್ಲರೂ ಇಷ್ಟುಪಡುವಂತಹ ಸಿನಿಮಾ. ಈ ಸಿನಿಮಾದ ಕಥೆ, ಚಿತ್ರಕತೆ, ಕಲಾವಿದರ ಪರ್ಫಾಮೆನ್ಸ್‌, ಸೌಂಡ್‌, ಎಡಿಟಿಂಗ್‌ ಎಲ್ಲವೂ ಉತ್ಕೃಷ್ಟವಾಗಿದೆ. ಇದು ಖಂಡಿತವಾಗಿಯೂ ನಾಲ್ಕು ಸ್ಟಾರ್‌ ಸಿನಿಮಾ" ಎಂದು ಸಿನಿಮಾ ಮ್ಯಾಡ್‌ನೆಸ್‌ ಟ್ವೀಟ್‌ ಮಾಡಿದೆ. "ಉತ್ತಮವಾದ ಟೈಮ್‌ ಟ್ರಾವೆಲ್‌ ಸಿನಿಮಾ. ಕೆಲವೊಂದು ಟ್ವಿಸ್ಟ್‌ಗಳು ಇವೆ. ಆನಂದಿಸಬಹುದಾದ ಚಿತ್ರ. ಈ ಚಿತ್ರವನ್ನು ಗಮನವಿಟ್ಟು ನೋಡಬೇಕು. ಇಲ್ಲವಾದರೆ ಸರಿಯಾಗಿ ಅರ್ಥವಾಗದೆ ಹೋಗಬಹುದು" ಎಂದು ಕೆಲವರು ಕಾಮೆಂಟ್‌ ಮಾಡಿದ್ದಾರೆ. "ಸಾಕಷ್ಟು ಟ್ವಿಸ್ಟ್‌ ಮತ್ತು ಟರ್ನ್‌ಗಳಿವೆ. ತಲೆ ಸ್ವಲ್ಪ ಕೆಟ್ಟೋಯ್ತು" "ಕಣ್ಣು ಬ್ಲಿಂಕ್‌ ಮಾಡದೆ ನೋಡ್ತಾ ಇದ್ದೀನಿ" "ಟೈಮ್‌ ಅಂದ್ರೆ ಪಕ್ಕಾ 420" ಎಂದೆಲ್ಲ ಎಕ್ಸ್‌ನಲ್ಲಿ ಸೋಷಿಯಲ್‌ ಮೀಡಿಯಾ ಬಳಕೆದಾರರು ಬ್ಲಿಂಕ್‌ ಸಿನಿಮಾದ ವಿಮರ್ಶೆ ಮಾಡಿದ್ದಾರೆ.

ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.

Whats_app_banner