ಕನ್ನಡ ಸುದ್ದಿ  /  ಮನರಂಜನೆ  /  Blink Movie: ಕನ್ನಡದಲ್ಲಿ ಇಂಥ ಸಿನಿಮಾ ನೋಡಿದ್ದು ಇದೇ ಮೊದಲು, ಕಥೆಗೆ ಅದೆಷ್ಟು ತಲೆ ಖರ್ಚು ಮಾಡಿದ್ದಾರಪ್ಪ

Blink Movie: ಕನ್ನಡದಲ್ಲಿ ಇಂಥ ಸಿನಿಮಾ ನೋಡಿದ್ದು ಇದೇ ಮೊದಲು, ಕಥೆಗೆ ಅದೆಷ್ಟು ತಲೆ ಖರ್ಚು ಮಾಡಿದ್ದಾರಪ್ಪ

Blink Kannada Movie: ಅಮೆಜಾನ್‌ ಪ್ರೈಮ್‌ನಲ್ಲಿ ಬಿಡುಗಡೆಯಾದ ಬ್ಲಿಂಕ್‌ ಕನ್ನಡ ಸಿನಿಮಾದ ಕುರಿತು ಸಾಕಷ್ಟು ಜನರು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಬ್ಲಿಂಕ್‌ ಸಿನಿಮಾವನ್ನು ನೋಡಿರುವ ಪ್ರೇಕ್ಷಕರು ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ವಿಮರ್ಶೆಗಳನ್ನು ಬರೆಯುತ್ತಿದ್ದಾರೆ.

Blink Movie: ಕನ್ನಡದಲ್ಲಿ ಇಂಥ ಸಿನಿಮಾ ನೋಡಿದ್ದು ಇದೇ ಮೊದಲು
Blink Movie: ಕನ್ನಡದಲ್ಲಿ ಇಂಥ ಸಿನಿಮಾ ನೋಡಿದ್ದು ಇದೇ ಮೊದಲು

Blink Kannada Movie: ಶ್ರೀನಿಧಿ ಬೆಂಗಳೂರು ನಿರ್ದೇಶನದ ಟೈಮ್‌ ಟ್ರಾವೆಲ್‌ ಸಿನಿಮಾ "ಬ್ಲಿಂಕ್‌" ಇದೀಗ ಒಟಿಟಿಯಲ್ಲಿ ಬಿಡುಗಡೆಯಾಗಿದ್ದು, ಎಲ್ಲರ ಮೆಚ್ಚುಗೆ ಪಡೆಯುತ್ತಿದೆ. ಈ ಸಿನಿಮಾದ ಕುರಿತು ಸಾಕಷ್ಟು ಜನರು ತಮ್ಮ ಅಭಿಪ್ರಾಯಗಳನ್ನು ಫೇಸ್‌ಬುಕ್‌, ಟ್ವಿಟ್ಟರ್‌, ಇನ್‌ಸ್ಟಾಗ್ರಾಂನಲ್ಲಿ ಬರೆಯುತ್ತಿದ್ದಾರೆ. ಈ ಚಿತ್ರದ ಎಡಿಟಿಂಗ್‌ ಕುರಿತು ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಬ್ಲಿಂಕ್‌ ಸಿನಿಮಾದಲ್ಲಿ ದೀಕ್ಷಿತ್‌ ಶೆಟ್ಟಿ, ಚೈತ್ರಾ ಜೆ ಆಚಾರ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರದ ತಾರಾಗಣದಲ್ಲಿ ವಜ್ರದೀರ್ ಜೈನ್, ಸುರೇಶ್ ಆನಗಳ್ಳಿ, ಮಂದಾರ ಬಟ್ಟಲಹಳ್ಳಿ, ಗೋಪಾಲಕೃಷ್ಣ ದೇಶಪಾಂಡೆ, ಕಿರಣ್ ನಾಯ್ಕ್, ಯಶಸ್ವಿನಿ ರಾವ್ ಹಾಗೂ ಮುರಳಿ ಶೃಂಗೇರಿ ಇದ್ದಾರೆ.

ಟ್ರೆಂಡಿಂಗ್​ ಸುದ್ದಿ

ಕನ್ನಡದಲ್ಲಿ ಇಂಥ ಸಿನಿಮಾ ನೋಡಿದ್ದು ಇದೇ ಮೊದಲು

ಫೇಸ್‌ಬುಕ್‌ನಲ್ಲಿ ಪ್ರತಿಭಾ ಕುಂಡಡ್ಕ ಹೀಗೆ ಬರೆದಿದ್ದಾರೆ. "ಬ್ರಿಲ್ಲಿಯಂಟ್ ಮೂವಿ. ಹ್ಯಾಟ್ಸಪ್‌ ಶ್ರೀನಿಧಿ ಬೆಂಗಳೂರು. ಕಥೆ ಅರ್ಥ ಮಾಡ್ಕೊಳ್ಳೋಕೇ ನಾವಿಷ್ಟು ಹೆಣಗಾಡ್ತಿರ್ಬೇಕಾದ್ರೆ, ಕಥೆ ಹೆಣೆಯುವುದಕ್ಕೆ ನಿಜಕ್ಕೂ ಅದೆಷ್ಟು ಬುದ್ಧಿವಂತಿಕೆ ಬೇಕು. ಬಹಳ ವಿಧಾನಕ್ಕೆ ಡಾಟ್ಸ್ ಕನೆಕ್ಟ್ ಮಾಡ್ತಾ ನೋಡದಿದ್ರೆ ಟೈಮ್‌ ಟ್ರಾವೆಲ್‌ ಸಿನಿಮಾಗಳು ಸುಲಭಕ್ಕೆ ಅರ್ಥ ಆಗಲ್ಲ. ಇಂಥ ಸಿನಿಮಾಗಳಿಗೆ ನಾವಿನ್ನೂ ಬಹಳ ಹಿಂದೆ ಇದ್ದೇವೆ. ಅಲ್ಲಲ್ಲಿ pause ಮಾಡ್ತಾ C drama, K drama ಗಳಲ್ಲಿ ಮುಳುಗೆದ್ದಿರುವ ಟಿನೇಜರ್ ಮಗಳಿಂದ ವಿವರಣೆ ಕೇಳ್ತಾ ನೋಡಿದ್ರಿಂದ ಒಂದು ಹಂತಕ್ಕೆ ಅರ್ಥ ಆಯ್ತು, ಬಚಾವ್.

ಕೊನೆಗೆ ಕೊಲ್ಲುವ ಅನಿವಾರ್ಯತೆ ಇತ್ತಾ? ಅನೂಪ್ ಮತ್ತು ಸ್ವಪ್ನಾರನ್ನು ಒಂದಾಗಿಸುವ ಮೂಲಕವೂ time loop break ಮಾಡ್ಬಹುದಿತ್ತಲ್ವಾ? ಎಂಬ ಮಗಳ ಪ್ರಶ್ನೆಗಳಿಗೆ ಉತ್ತರಿಸಲು ಇನ್ನಷ್ಟು ಮಂಡೆ ಖರ್ಚು ಮಾಡ್ಬೇಕಾದೀತು ಸಿನಿಮಾ ಮುಗಿದ ಈ ಕ್ಷಣಕ್ಕೆ ಹೊಳೀತಿಲ್ಲ. 2022ರಲ್ಲಿ ತೆರೆ ಕಂಡಿದ್ದ "ದೇಜಾವು" ತಮಿಳು ಸಿನಿಮಾದ ಕಥೆಯಲ್ಲಿ ಇಷ್ಟು ಟ್ವಿಸ್ಟ್ ಗಳಿರಲಿಲ್ಲ. ಕನ್ನಡದಲ್ಲಿ ಇಂಥದ್ದೊಂದು ಸಿನಿಮಾ ನಾನು ನೋಡಿದ್ದು ಇದೇ ಮೊದಲು. ಟೈಮ್‌ ಟ್ರಾವೆಲ್‌ ಮಾಡಿ‌ ಟೈಮ್‌ ಲೂಪ್‌ ಒಳಗೆ ಸಿಕ್ಕಿ ಹಾಕಿಕೊಳ್ಳುವ ಕಥಾಹಂದರದ ಕನ್ನಡ ಸಿನಿಮಾ ಈ ಹಿಂದೆ ಬಂದಿದೆಯಾ ಗೊತ್ತಿಲ್ಲ. ಬಂದಿದ್ದರೆ ದಯವಿಟ್ಟು ಮಾಹಿತಿ ಕೊಡಿ.‌ ಈ ಕಾನ್ಸೆಪ್ಟ್ ನ ಕಥೆಗಳು ಬಹಳ ಇಷ್ಟ ನಂಗೆ ಮತ್ತು ಮಗಳಿಗೂ. ಹಾಗಾಗಿ ಅಯ್ಯೋ ನೋಡ್ಬೇಡಿ, ಟೈಮ್ ವೇಸ್ಟು ಅಂತ ಯಾರೆಷ್ಟೇ ಅಂದ್ರೂ ನಿದ್ದೆಗೆಟ್ಟು ನೋಡಿದ್ವಿ" ಎಂದು ಪ್ರತಿಭಾ ಕುಂಡಡ್ಕ ಬರೆದಿದ್ದಾರೆ.

ಇವರ ಈ ವಿಮರ್ಶೆಗೆ "ನಾನೂ ನಿನ್ನೆ ನೋಡಿದೆ.. ತುಂಬಾ ಗೋಜಲು ಗೋಜಲಾಗಿದೆ.. ಇನ್ನೊಮ್ಮೆ ನೋಡಬೇಕು ಆಗಲಾದರೂ Clarity ಸಿಗಬಹುದಾ ಅಂತಾ. ಇದೇ ತರದ Netflix ಲಿ DARK ಅಂತಾ ಒಂದು ಜನಪ್ರಿಯ Web series ಇದೆ..‌ ಪ್ರಯತ್ನಿಸಿ..‌ನಾನೂ ಅದನ್ನೂ ಒಂದು ಸಿರಿಸ್ ಮಾತ್ರ ನೋಡಿ ಮುಂದೆ ಆಗದೆ ಕೈ ಬಿಟ್ಟೆ" ಎಂದು ಸಂತೋಷ್‌ ಕುಮಾರ್‌ ಪಾಟೀಲ್‌ ಪ್ರತಿಕ್ರಿಯೆ ನೀಡಿದ್ದಾರೆ. "ಟೈಮ್ ಟ್ರಾವೆಲ್ ಅನ್ನೋದು ಗೊತ್ತಾಯ್ತು ಅಷ್ಟೇ. ಸಿನಿಮಾ ಅರ್ಥ ಆಗಿಲ್ಲ. ಮನರಂಜನೆಗಾಗಿ ಬರೋ‌ ಸಾಮಾನ್ಯ ಜನರಿಗೆ ಅರ್ಥವೇ ಅಗಲ್ಲ" ಎಂದು ರಿಯಾಜ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಇನ್ನೂ ಅನೇಕ ಜನರು ಬ್ಲಿಂಕ್‌ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಬ್ಲಿಂಕ್' ಇದು ಒಮ್ಮೆಯೂ ಕಣ್ಣು ಮಿಟುಕಿಸದೇ ನೋಡಬೇಕಾದ ಚಿತ್ರ...! ಚಿತ್ರದ ಜಾನ್ರಾ ಹೇಳಿದ್ರೂ ಸ್ಪಾಯ್ಲರ್ ಆಗ್ಬಿಡುತ್ತೋ ಏನೋ ಅನ್ನಿಸೋ ಚಿತ್ರ...! ಸಿನಿಮಾ ಹಾಗೂ ಸಾಹಿತ್ಯವೆರೆಡರಲ್ಲೂ ಒಲವಿರುವವರಿಗೆ ಮಾತ್ರ ಇಂತಹ ಸಿನಿಮಾ ತಯಾರಿಸಲು ಸಾಧ್ಯ....!!! ನಾವೊಂದಿಷ್ಟು ಹುಡುಗರೆಲ್ಲಾ ಈ ಸಿನಿಮಾ ಥಿಯೇಟರ್‌ನಲ್ಲೇ ನೋಡಬೇಕೆಂದು ಹೊರಟಿದ್ವಿ. ಆದರೆ ಹತ್ತಿರದೆಲ್ಲೆಲ್ಲೂ ಷೋ ಇಲ್ಲದ ಕಾರಣ ಮಿಸ್ ಆಗಿ ಬಿಟ್ಟಿತ್ತು...!" ಎಂದು ಅನುರಾಗ್‌ ಆರ್‌ ಗೌಡ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

ಪ್ರಿಡೆಸ್ಟಿನೇಷನ್‌ ಹೋಲಿಕೆ

"ಬ್ಲಿಂಕ್ ನೋಡಿದೆ. ಶುರು ಅದಾಗಲೇ ಯಾವ್ದೋ ಸಿನೆಮಾ ಮೊದಲೇ ನೋಡಿದ ಹಾಗಿತ್ತು. ಬರ್ತಾ ಬರ್ತಾ ಮುಂದೆ ಎಂತ ಆಗುತ್ತೆ ಅಂತ ಗೆಸ್ಸ್ ಮಾಡಿದ್ದೆ ಆಯ್ತು. Climax ಸಹ ಅಂದುಕೊಂಡ ಹಾಗೆ ಇತ್ತು. ಹತ್ತಿರ ಹತ್ತಿರ ಬಹಳ ಹತ್ತಿರ Predestination ಸಿನೆಮಾವನ್ನೇ ಹೋಲುವಂತಹ ಈ ಸಿನೆಮಾದ ಕತೆ ಬರೆದೋರು Predestination ನೋಡಿದ್ರೆ ಅನುಮಾನ ಇಲ್ಲ. ಆದ್ರೂ ನಮ್ ಭಾಷೆ, ನಮ್ ಜನ, ನಮ್ ಕಡೆಯೋರ್ದು ಅಂತಾ ಸಪೋರ್ಟು ಮಾಡಲೇಬೇಕು ಬೇಕು ಅಂತ ನೋಡಿದ್ರೂ ಸಿನೆಮಾ ಚೆನ್ನಾಗೇ ಇದೆ. Predestination ಸಹ ಸೈಕ್ ಮೂವೀ. ಇದನ್ನ ನೋಡಿ ಅದನ್ನ ನೋಡ್ತೀರೋ, ಇಲ್ಲಾ ಅದನ್ನ ನೋಡಿ ಇದನ್ನ ನೋಡ್ತೀರೋ ಎರಡೂ ಇಷ್ಟವಾಗಬಹುದು." ಎಂದು ಪುಸ್ತಕಮರೆ ಪ್ರಸಾದ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಬ್ಲಿಂಕ್‌ ಚೆನ್ನಾಗಿದೆಯಾ? ಇಲ್ವಾ? ಗೊಂದಲ

"ಈ ಬ್ಲಿಂಕ್ ನೋಡಿ ಸುಮ್ಮನೆ ಕೂತಿದ್ದೇನೆ. ಈ ಸಿನಿಮಾ ಚೆನ್ನಾಗಿದೆಯಾ? ಚೆನ್ನಾಗಿಲ್ವ ಅಂತ ಗೊಂದಲ ಆಗ್ತಿದೆ. ಸಿನಿಮಾ ನೋಡಿದ ಮೇಲೆ, ಏನೊ ಬಲವಾದ ಅನುಭವ ಆಗಿದೆ. ಅದೇನಂತ ಗುರುತಿಸಿಕೊಳ್ಳೋಕು ಆಗ್ತಿಲ್ಲ. ಸಿನಿಮಾದಲ್ಲಿ ಇರೊ ಹೈಲೈಟ್ಸ್ ಹೇಳಲೆಬೇಕು. ಇದು ಕೊನೆತನಕ ನೋಡಿಸಿತು. ಇದರ ಸಂಗೀತ ತುಂಬಾ ಇಷ್ಟ ಆಯ್ತು. ಹಾಡುಗಳು ಇಂಪೆನಿಸುತ್ತವೆ. ಭಯ ಮೂಡಿಸುವ ಹಿನ್ನೆಲೆ ಸಂಗೀತ ಹೊಸದೆನಿಸಿತು. ತುಂಬಾ ಕ್ರಿಯೇಟಿವ್ ಸಿನಿಮಾ ಇದು. ರಂಗದ ಹಿನ್ನೆಲೆ ಇರುವ ಗುಂಪಿನ ಪ್ರಯತ್ನ ಎಂದು ಗೊತ್ತಾಗುತ್ತದೆ. ಕಥೆಯನ್ನು ಇಷ್ಟೊಂದು ಕಷ್ಟ ಪಟ್ಟು ಹೇಳಬೇಕ? ಎಂಬ ಪ್ರಶ್ನೆ ನನ್ನಲ್ಲಿ ಉಳಿದಿದೆ. ಕೆಲವೊಮ್ಮೆ ನನ್ನ ಭೂತಕ್ಕೆ ಹೋಗಿ ಬಂದೆ, ಕಣ್ಣೀರು ಬರುವಂತಾಯ್ತು ಆ ಕ್ಷಣ. ಸಿನಿಮಾ ಒಂದು ಫೀಲ್ ಮಾಡಿಸಿತು. ಸಿನಿಮಾ ಮೇಕಿಂಗ್ ದೃಷ್ಟಿಯಿಂದ ವೃತ್ತಿಪರತೆ ಎದ್ದು ಕಾಣುತ್ತಿದೆ. ಹೊಸ ಗುಂಪಿನ ಪ್ರಯತ್ನವಂತೆ, ಕನ್ನಡದಲ್ಲಿ ಇಂತಹ ಪ್ರಯತ್ನ ಮಾಡಿದ್ದಕ್ಕಾಗಿ ಅಭಿನಂದನೆಗಳು. ಯಶಸ್ಸು ಸಿಗಲಿ. ಸಿನಿಮಾ ನೋಡಿ ಪ್ರೈಮ್ ನಲ್ಲಿ" ಎಂದು ಅಣೇಕಟ್ಟೆ ವಿಶ್ವನಾಥ್‌ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024