ಕನ್ನಡ ಸುದ್ದಿ  /  ಮನರಂಜನೆ  /  ಅನುಶ್ರೀ ತಮ್ಮ ಯಾರು?, ಸುದೀಪ್‌ ಅಕ್ಕ ಯಾರು? ಸ್ಯಾಂಡಲ್‌ವುಡ್‌ನ ಅಕ್ಕ ತಮ್ಮ ಅಣ್ಣ ತಮ್ಮಂದಿರಿಗೆ ಜೈಹೋ, ಇಲ್ಲಿದೆ ಲಿಸ್ಟ್‌

ಅನುಶ್ರೀ ತಮ್ಮ ಯಾರು?, ಸುದೀಪ್‌ ಅಕ್ಕ ಯಾರು? ಸ್ಯಾಂಡಲ್‌ವುಡ್‌ನ ಅಕ್ಕ ತಮ್ಮ ಅಣ್ಣ ತಮ್ಮಂದಿರಿಗೆ ಜೈಹೋ, ಇಲ್ಲಿದೆ ಲಿಸ್ಟ್‌

ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳ ಸಹೋದರರು, ಸಹೋದರಿಯರರ ಪರಿಚಯ ಇಲ್ಲಿದೆ. ಸುದೀಪ್‌ ಅಕ್ಕ, ಅನುಶ್ರೀ ತಮ್ಮ, ಅಮೃತಾ ಪ್ರೇಮ್‌ ತಮ್ಮ, ಪ್ರೇಮ ತಮ್ಮ, ಪೂಜಾ ಲೋಕೇಶ್‌ ಅಕ್ಕ, ರಾಧಿಕಾ ಪಂಡಿತ್‌ ತಮ್ಮ, ರಿಷಿ ಅಕ್ಕ, ವಶಿಷ್ಠ ಸಿಂಹ ಸೇರಿದಂತೆ ಹಲವು ಕಲಾವಿದರ ಅಕ್ಕ ಅಣ್ಣ, ತಮ್ಮ ತಂಗಿಯರ ಮಾಹಿತಿ ಇಲ್ಲಿದೆ.

ಅನುಶ್ರೀ ತಮ್ಮ ಯಾರು?, ಸುದೀಪ್‌ ಅಕ್ಕ ಯಾರು? ಸ್ಯಾಂಡಲ್‌ವುಡ್‌ನ ಅಕ್ಕ ತಮ್ಮಂದಿರು
ಅನುಶ್ರೀ ತಮ್ಮ ಯಾರು?, ಸುದೀಪ್‌ ಅಕ್ಕ ಯಾರು? ಸ್ಯಾಂಡಲ್‌ವುಡ್‌ನ ಅಕ್ಕ ತಮ್ಮಂದಿರು

ಬೆಂಗಳೂರು: ಕನ್ನಡ ಚಿತ್ರರಂಗದ ಹಲವು ನಟಿಯರು, ನಟರ ಸಹೋದರ ಸಹೋದರಿಯರ ಕುರಿತು ಹೆಚ್ಚಿನವರಿಗೆ ತಿಳಿದಿರಬಹುದು. ಇನ್ನು ಕೆಲವರಿಗೆ "ಅಯ್ಯೋ ಇವರು ಅವರ ಅಕ್ಕನ, ಇವರು ಅವರ ತಮ್ಮನಾ? ಎಂದು ಅಚ್ಚರಿಯಾಗಬಹುದು. ಸ್ಯಾಂಡಲ್‌ವುಡ್‌ನ ಸಾಕಷ್ಟು ಸಹೋದರ ಸಹೋದರಿಯರು ನಟನಾ ಕ್ಷೇತ್ರದಲ್ಲಿ ಅಥವಾ ಮನರಂಜನಾ ಕ್ಷೇತ್ರದ ಇನ್ಯಾವುದೋ ವಿಭಾಗದಲ್ಲಿ ಕೆಲಸ ಮಾಡುತ್ತ ಇದ್ದಾರೆ. ಸುದೀಪ್‌ ಅಕ್ಕ, ಅನುಶ್ರೀ ತಮ್ಮ, ಅಮೃತಾ ಪ್ರೇಮ್‌ ತಮ್ಮ, ಪ್ರೇಮ ತಮ್ಮ, ಪೂಜಾ ಲೋಕೇಶ್‌ ಅಕ್ಕ, ರಾಧಿಕಾ ಪಂಡಿತ್‌ ತಮ್ಮ, ರಿಷಿ ಅಕ್ಕ, ವಶಿಷ್ಠ ಸಿಂಹ ಸೇರಿದಂತೆ ಹಲವು ಕಲಾವಿದರ ಅಕ್ಕ ಅಣ್ಣ, ತಮ್ಮ ತಂಗಿಯರ ಮಾಹಿತಿ ಪಡೆಯೋಣ ಬನ್ನಿ.

ಟ್ರೆಂಡಿಂಗ್​ ಸುದ್ದಿ

ಸುದೀಪ್‌ ಅಕ್ಕ ಯಾರು?

ಕಿಚ್ಚ ಸುದೀಪ್‌ ಅಕ್ಕನ ಹೆಸರು ಸುಜಾತಾ ಸಂಜೀವ್‌. ಅಕ್ಕನೆಂದರೆ ಸುದೀಪ್‌ಗೆ ಎಲ್ಲಿಲ್ಲದ ಅಕ್ಕರೆ. ಅಂದಹಾಗೆ ಸುಜಾತಾ ಸಂಜೀವ್‌ ಪುತ್ರ ಕೂಡ ಕನ್ನಡ ಸಿನಿರಂಗಕ್ಕೆ ಪ್ರವೇಶಿಸಿದ್ದಾರೆ. ಸಂಚಿತ್‌ ಸಂಜೀವ್‌ ಅವರು ತನ್ನ ಸಿನಿಮಾಕ್ಕೆ ತಾನೇ ನಿರ್ದೇಶನ ಮಾಡಿದ್ದಾರೆ.

ನಟಿ ಪ್ರೇಮಾರ ತಮ್ಮ ಅಯ್ಯಪ್ಪ

ನಟಿ ಪ್ರೇಮಾರ ತಮ್ಮ ಅಯ್ಯಪ್ಪ ಎಂದು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ನಟಿ ಪ್ರೇಮಾ ಸದ್ಯ ಕನ್ನಡದ ರಿಯಾಲಿಟಿ ಶೋ ಮಹಾ ನಟಿಯಲ್ಲಿ ಜಡ್ಜ್‌ ಸ್ಥಾನದಲ್ಲಿ ಕುಳಿತಿದ್ದಾರೆ. ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿ ಪ್ರೇಮಾ ಖ್ಯಾತಿ ಪಡೆದಿದ್ದಾರೆ. ಕ್ರಿಕೆಟಿಗ ಎನ್‌ಸಿ ಅಯ್ಯಪ್ಪ ಅವರು ಬಿಗ್‌ಬಾಸ್‌ ಕನ್ನಡ ರಿಯಾಲಿಟಿ ಶೋಗೂ ಎಂಟ್ರಿ ನೀಡಿದ್ದರು. ಇವರು ಕ್ರಿಕೆಟ್‌ ಕೋಚ್‌ ಜತೆಗೆ ಬ್ಯಾಂಕ್‌ವೊಂದರಲ್ಲಿ ಕೆಲಸವನ್ನೂ ಮಾಡುತ್ತಿದ್ದಾರೆ. ಅಯ್ಯಪ್ಪ ಅವರು ನಟಿ ಅನು ಪೂವಮ್ಮ ಅವರನ್ನು ವಿವಾಹವಾಗಿದ್ದಾರೆ.

ಇನ್ನುಳಿದ ಸಹೋದರ-ಸಹೋದರಿಯರು

ಕನ್ನಡದ ಚಿಟ್ಟೆ ಖ್ಯಾತಿಯ ವಸಿಷ್ಠ ಸಿಂಹ ಅವರ ಅಕ್ಕನ ಹೆಸರು ವಿಂದ್ಯಾ ಸಿಂಹ. ಪ್ರೇಮ್‌ ಪುತ್ರಿ ಅಮೃತಾ ಪ್ರೇಮ್‌ಗೆ ಏಕಾಂತ ಪ್ರೇಮ್‌ ಎಂಬ ಸಹೋದರ ಇದ್ದಾನೆ. ಕನ್ನಡದ ಜನಪ್ರಿಯ ನಿರೂಪಕಿ ಅನುಶ್ರೀಗೆ ಅಭಿಜಿತ್‌ ಹೆಸರಿನ ತಮ್ಮ ಇದ್ದಾನೆ. ನಟಿ ರಕ್ಷಿತಾಗೆ ರಾಣಾ ಹೆಸರಿನ ತಮ್ಮ ಇದ್ದಾನೆ. ಗಿಚ್ಚಿ ಗಿಲಿಗಿಲಿ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೃಜನ್‌ ಲೋಕೇಶ್‌ ಅಕ್ಕನ ಹೆಸರು ಪೂಜಾ ಲೋಕೇಶ್‌. ಯಶ್‌ ಪತ್ನಿ ರಾಧಿಕಾ ಪಂಡಿತ್‌ರ ಸಹೋದರನ ಹೆಸರು ಗೌತಮ್‌ ಪಂಡಿತ್‌. ಪವಿತ್ರಾ ಲೋಕೇಶ್‌ ಸಹೋದರನ ಹೆಸರು ಆದಿ. ಇಬ್ಬರೂ ಸಿನಿಮಾ ಕ್ಷೇತ್ರದಲ್ಲಿದ್ದಾರೆ. ರಿಷಿ ಅಕ್ಕ ಆರ್‌ಜೆ ನೇತ್ರಾ ಎಂದು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ.

ಸ್ಯಾಂಡಲ್‌ವುಡ್‌ ಸಹೋದರ ಸಹೋದರಿಯರ ಪಟ್ಟಿ

ಸುದೀಪ್‌ (ತಮ್ಮ) - ಸುಜತಾ ಸಂಜೀವ್‌ (ಅಕ್ಕ)

ಪ್ರೇಮಾ (ಅಕ್ಕ)- ಅಯ್ಯಪ್ಪ (ತಮ್ಮ)

ಅನುಶ್ರೀ (ಅಕ್ಕ)- ಅಭಿಜಿತ್‌ (ತಮ್ಮ)

ವಸಿಷ್ಠ ಸಿಂಹ (ತಮ್ಮ)- ವಿಂದ್ಯಾ ಸಿಂಹ (ಅಕ್ಕ)

ಅಮೃತಾ ಪ್ರೇಮ್‌ (ಅಕ್ಕ)- ಏಕಾಂತ ಪ್ರೇಮ್‌ (ತಮ್ಮ)

ರಕ್ಷಿತಾ (ಅಕ್ಕ)- ರಾಣಾ (ತಮ್ಮ)

ಸೃಜನ್‌ ಲೋಕೇಶ್‌ (ತಮ್ಮ)- ಪೂಜಾ ಲೋಕೇಶ್‌ (ಅಕ್ಕ)

ರಾಧಿಕಾ ಪಂಡಿತ್‌ (ಅಕ್ಕ)- ಗೌತಮ್‌ ಪಂಡಿತ್‌ (ತಮ್ಮ)

ಪವಿತ್ರಾ ಲೋಕೇಶ್‌ (ಅಕ್ಕ)- ಆದಿ (ತಮ್ಮ)

ರಿಷಿ (ತಮ್ಮ)- ಆರ್‌ಜೆ ನೇತ್ರಾ (ಅಕ್ಕ)