ಕನ್ನಡ ಸುದ್ದಿ  /  Entertainment  /  Sandalwood News Bullet Prakash Son Rakshak Bullet New Movie Update Ra 01 Poster Released Pcp

RB 01 Movie: ಹೊಸ ಸಿನಿಮಾ ಘೋಷಿಸಿದ ಬಿಗ್‌ಬಾಸ್‌ ಸೀಸನ್‌ 10ರ ಸ್ಪರ್ಧಿ ರಕ್ಷಕ್‌ ಬುಲೆಟ್‌; ಇನ್ಮುಂದೆ ನಂದೇ ರೌಂಡು, ನಂದೇ ಸೌಂಡು

ದಿವಂಗತ ಬುಲೆಟ್‌ ಪ್ರಕಾಶ್‌ ಪುತ್ರ ರಕ್ಷಕ್‌ ಬುಲೆಟ್‌ ತನ್ನ ಹೊಸ ಸಿನಿಮಾದ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಡೇಟ್‌ ನೀಡಿದ್ದಾರೆ. ತನ್ನ ಮುಂಬರುವ ಸಿನಿಮಾ ಆರ್‌ಎ 01 ಪೋಸ್ಟರ್‌ ಲಾಂಚ್‌ ಮಾಡಿದ್ದಾರೆ.

RB 01 Movie: ಹೊಸ ಸಿನಿಮಾ ಘೋಷಿಸಿದ ಬಿಗ್‌ಬಾಸ್‌ ಸೀಸನ್‌ 10ರ ಸ್ಪರ್ಧಿ ರಕ್ಷಕ್‌ ಬುಲೆಟ್‌
RB 01 Movie: ಹೊಸ ಸಿನಿಮಾ ಘೋಷಿಸಿದ ಬಿಗ್‌ಬಾಸ್‌ ಸೀಸನ್‌ 10ರ ಸ್ಪರ್ಧಿ ರಕ್ಷಕ್‌ ಬುಲೆಟ್‌

ಬೆಂಗಳೂರು: ದಿವಂಗತ ಬುಲೆಟ್‌ ಪ್ರಕಾಶ್‌ ಪುತ್ರ ರಕ್ಷಕ್‌ ಬುಲೆಟ್‌ ತನ್ನ ಹೊಸ ಸಿನಿಮಾದ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಡೇಟ್‌ ನೀಡಿದ್ದಾರೆ. ಗುರು ಶಿಷ್ಯರು ಸಿನಿಮಾದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಇವರು ಇದೀಗ ಇನ್ನೂ ಹೆಸರಿಡದ ಚಿತ್ರದ "ಆರ್‌ಎ 01" ಪೋಸ್ಟರ್‌ ಲಾಂಚ್‌ ಮಾಡಿದ್ದಾರೆ. ಇನ್ಮುಂದೆ ನನ್ನದೇ ರೌಂಡು, ನನ್ನದೇ ಸೌಂಡು ಎಂದು ಈ ಮೂಲಕ ಅಪ್‌ಡೇಟ್‌ ನೀಡಿದ್ದಾರೆ.

ಹೊಸ ಸಿನಿಮಾದ ಅಪ್‌ಡೇಟ್‌ ನೀಡಿದ ರಕ್ಷಕ್‌ ಬುಲೆಟ್‌

ಸೋಷಿಯಲ್‌ ಮೀಡಿಯಾದಲ್ಲಿ ನಿನ್ನೆ ರಕ್ಷಕ್‌ ಬುಲೆಟ್‌ ಹೊಸ ಸಿನಿಮಾದ ಅಪ್‌ಡೇಟ್‌ ನೀಡಿದ್ದಾರೆ. "ಎಲ್ಲಾ ‌ನನ್ನ‌ ಆತ್ಮೀಯರೆ , ಇಂದು‌ ನನ್ನ ಪೂಜ್ಯ ತಂದೆ ದಿವಂಗತ “ಬುಲೆಟ್ ಪ್ರಕಾಶ್” ರವರ 47ನೇ ಜನ್ಮದಿನ. ಇಂದಿನ ವಿಶೇಷವೇನೆಂದರೆ, ನಾನು ನಾಯಕ ನಟನಾಗಿ ನಟಿಸುತ್ತಿರುವ, ನನ್ನ ಚೊಚ್ಚಲ ಚಿತ್ರದ ಪೋಸ್ಟರ್ ಬಿಡುಗಡೆ ಮಾಡುತ್ತಿರುವುದು ನಿಜಕ್ಕೂ ನನಗೆ ಸಂತಸ ತಂದಿದೆ. ನನ್ನ ತಂದೆಯ ಆಶೀರ್ವಾದದೊಂದಿಗೆ ನಿಮ್ಮೆಲ್ಲರ ಆಶೀರ್ವಾದ ಕೂಡ ಸದಾ ನನ್ನ ಮೇಲಿರಲಿ ಎಂದು ಬಯಸುತ್ತೇನೆ. ನನಗೂ ಹಾಗೂ ನನ್ನ ಇಡೀ ಚಿತ್ರತಂಡಕ್ಕು ಹರಸಿ ಹಾರೈಸಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ" ಎಂದು ರಕ್ಷಕ್‌ ಬುಲೆಟ್‌ ಪೋಸ್ಟ್‌ ಮಾಡಿದ್ದಾರೆ.

ಪೋಸ್ಟರ್‌ನಲ್ಲಿ ಏನಿದೆ?

ರಕ್ಷಕ್‌ ಬುಲೆಟ್‌ ಹಂಚಿಕೊಂಡ ಪೋಸ್ಟರ್‌ನಲ್ಲಿ ಆರ್‌ಬಿ 01 ಸಿನಿಮಾದ ಕುರಿತು ಸಾಕಷ್ಟು ವಿವರ ನೀಡಲಾಗಿದೆ. ಚಿತ್ರಕ್ಕೆ ತಾತ್ಕಾಲಿಕ ಟೈಟಲ್‌ "ಆರ್‌ಬಿ 01" ಎಂದು ಇಡಲಾಗಿದೆ. ಮಚ್ಚಾ ಏರಿಯಾದಲ್ಲಿ ಕಣ್ಮುಂದೆ ಬೇಜಾನ್‌ ಗಾಡಿಗಳು ಸೌಂಡ್‌ ಮಾಡ್ತವೆ. ಆದ್ರೆ ಸೌಂಡ್‌ ಕೇಳ್ದಿದ್ದಂಗೆ ಇದೇ ಗಾಡಿ ಅಂತ ಹೇಳೋದು ಒಂದನ್ನೆ. ಬುಲೆಟ್‌. ಇನ್ಮುಂದೆ ನಂದೆ ರೌಂಡು, ನಂದೇ ಸಂಡ್‌ ಎಂಬ ಟ್ಯಾಗ್‌ಲೈನ್‌ಗಳೂ ಈ ಪೋಸ್ಟರ್‌ನಲ್ಲಿವೆ.

ಬುಲೆಟ್‌ ಪ್ರಕಾಶ್‌ ಪುತ್ರ ರಕ್ಷಕ್‌ ಬುಲೆಟ್‌ ಅವರ ಈ ಸಿನಿಮಾವನ್ನು ಕ್ರಿಶ್‌ ನಿರ್ದೇಶನ ಮಾಡಲಿದ್ದಾರೆ. ಚಿತ್ರಕಥೆ, ಸಂಭಾಷಣೆಯನ್ನು ಶ್ರೀಹರಿ ಬರೆದಿದ್ದಾರೆ. ಶ್ರೀಧರ್‌ ಕಶ್ಯಪ್‌ ಸಂಗೀತ ನಿರ್ದೇಶನ ಇರಲಿದೆ.

ರಕ್ಷಕ್‌ ಬುಲೆಟ್‌ ಬಿಗ್‌ಬಾಸ್‌ ಕನ್ನಡ ಸೀಸನ್‌ 10ರ ಸ್ಪರ್ಧಿಯಾಗಿದ್ದರು. ಕೆಲವು ವಾರ ಮನೆಯಲ್ಲಿದ್ದ ಇವರು ಹಲವು ಕಾರಣಗಳಿಂದ ಸುದ್ದಿಯಲ್ಲಿದ್ದಾರೆ. ಬಿಗ್‌ಬಾಸ್‌ನಿಂದ ಹೊರನಡೆದ ಬಳಿಕವೂ ಕೆಲವೊಂದು ಕಾರಣಗಳಿಂದ ಸುದ್ದಿಯಲ್ಲಿದ್ದರು. ಇದೇ ಸಮಯದಲ್ಲಿ ಹೊಸ ಸಿನಿಮಾದ ಕುರಿತು ಶೀಘ್ರದಲ್ಲಿ ಅಪ್‌ಡೇಟ್‌ ನೀಡುವ ಸೂಚನೆ ನೀಡಿದ್ದರು.