ಕನ್ನಡ ಸುದ್ದಿ  /  ಮನರಂಜನೆ  /  Just Married: ಶೈನ್‌ ಶೆಟ್ಟಿ -ಅಂಕಿತಾ ಅಮರ್‌ ‘ಜಸ್ಟ್‌ ಮ್ಯಾರೀಡ್’;‌ ತುಂಬ ದಿನಗಳ ಬಳಿಕ ಸಿಹಿ ಸುದ್ದಿ ನೀಡಿದ ಬಿಗ್‌ ಬಾಸ್‌ ವಿಜೇತ

Just Married: ಶೈನ್‌ ಶೆಟ್ಟಿ -ಅಂಕಿತಾ ಅಮರ್‌ ‘ಜಸ್ಟ್‌ ಮ್ಯಾರೀಡ್’;‌ ತುಂಬ ದಿನಗಳ ಬಳಿಕ ಸಿಹಿ ಸುದ್ದಿ ನೀಡಿದ ಬಿಗ್‌ ಬಾಸ್‌ ವಿಜೇತ

ಬಿಗ್‌ ಬಾಸ್‌ ವಿಜೇತ ಶೈನ್‌ ಶೆಟ್ಟಿ ಮತ್ತು ಅಂಕಿತಾ ಅಮರ್‌ ಒಟ್ಟಿಗೆ ನಟಿಸಿರುವ ಜಸ್ಟ್‌ ಮ್ಯಾರೀಡ್‌ ಸಿನಿಮಾ ತಂಡ ತನ್ನ ಶೂಟಿಂಗ್‌ ಮುಗಿಸಿಕೊಂಡಿದೆ. ಈ ಮೂಲಕ ಇನ್ನೇನು ಶೀಘ್ರದಲ್ಲಿ ಚಿತ್ರಮಂದಿರಕ್ಕೂ ಆಗಮಿಸಲಿದ್ದೇವೆ ಎಂಬ ಸುಳಿವು ರವಾನಿಸಿದೆ.

Just Married: ಶೈನ್‌ ಶೆಟ್ಟಿ -ಅಂಕಿತಾ ಅಮರ್‌ ‘ಜಸ್ಟ್‌ ಮ್ಯಾರೀಡ್’;‌ ತುಂಬ ದಿನಗಳ ಬಳಿಕ ಸಿಹಿ ಸುದ್ದಿ ನೀಡಿದ ಬಿಗ್‌ ಬಾಸ್‌ ವಿಜೇತ
Just Married: ಶೈನ್‌ ಶೆಟ್ಟಿ -ಅಂಕಿತಾ ಅಮರ್‌ ‘ಜಸ್ಟ್‌ ಮ್ಯಾರೀಡ್’;‌ ತುಂಬ ದಿನಗಳ ಬಳಿಕ ಸಿಹಿ ಸುದ್ದಿ ನೀಡಿದ ಬಿಗ್‌ ಬಾಸ್‌ ವಿಜೇತ

Just Married: abbs studios ಬ್ಯಾನರ್‌ನಲ್ಲಿ ಅಜನೀಶ್ ಲೋಕನಾಥ್ ಹಾಗೂ ಸಿ.ಆರ್ ಬಾಬಿ ನಿರ್ಮಿಸುತ್ತಿರುವ, ಸಿ.ಆರ್. ಬಾಬಿ ನಿರ್ದೇಶನದ ಜಸ್ಟ್‌ ಮ್ಯಾರೀಡ್‌ ಸಿನಿಮಾದಿಂದ ಹೊಸ ಅಪ್‌ಡೇಟ್‌ ಹೊರಬಿದ್ದಿದೆ. ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಹಾಗೂ ಅಂಕಿತಾ ಅಮರ್ ನಾಯಕ- ನಾಯಕಿಯಾಗಿ ನಟಿಸಿರುವ ಈ ಸಿನಿಮಾದ ಚಿತ್ರೀಕರಣ ಈಗಷ್ಟೇ ಮುಕ್ತಾಯವಾಗಿದ್ದು, ಪೋಸ್ಟ್‌ ಪ್ರೊಡಕ್ಷನ್‌ ಕೆಲಸಕ್ಕೂ ಚಿತ್ರತಂಡ ಚಾಲನೆ ನೀಡಿದೆ. 

ಟ್ರೆಂಡಿಂಗ್​ ಸುದ್ದಿ

ಬೆಂಗಳೂರು, ಮೈಸೂರು ಮತ್ತು ಚಿಕ್ಕಮಗಳೂರಿನಲ್ಲಿ ಸುಮಾರು ನಲವತ್ತೈದು ದಿನಗಳಲ್ಲಿ ಜಸ್ಟ್‌ ಮ್ಯಾರೀಡ್‌ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ. ಈಗ ಚಿತ್ರೀಕರಣ ನಂತರದ ಕೆಲಸಗಳು ಬಿರುಸಿನಿಂದ ಸಾಗಿದೆ. ವಿಶೇಷ ಏನೆಂದರೆ ಸಾಕಷ್ಟು ಚಿತ್ರಗಳಿಗೆ ಸಂಗೀತ ನೀಡಿ ಮನಸೂರೆಗೊಂಡಿರುವ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಈ ಚಿತ್ರದ ಮೂಲಕ ನಿರ್ಮಾಪಕರಾಗಿದ್ದಾರೆ.

ಮಹಿಲಾ ನಿರ್ದೇಶಕಿ ಸಿ.ಆರ್‌ ಬಾಬಿ ಈ ಸಿನಿಮಾ ಮೂಲಕ ನಿರ್ದೇಶಕಿಯಾಗಿದ್ದಾರೆ. ಇವರ ಈ ಪ್ರಯತ್ನಕ್ಕೆ ಅಜನೀಶ್ ಸಾಥ್ ನೀಡಿದ್ದಾರೆ. ಇಷ್ಟು ದಿನ ಸಂಗೀತ ಕ್ಷೇತ್ರದಲ್ಲಿ ಹೆಸರು‌ ಮಾಡಿದ್ದ ಸಿ.ಆರ್ ಬಾಬಿ ಈ ಚಿತ್ರದ ಮೂಲಕ ನಿರ್ದೇಶಕಿಯಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದಾರೆ.

ಚಿತ್ರದಲ್ಲಿ ಆರು ಹಾಡುಗಳಿದ್ದು ಅಜನೀಶ್ ಲೋಕನಾಥ್ ಅವರೇ ಸಂಗೀತ ಸಂಯೋಜನೆ ಮಾಡಿದ್ದಾರೆ. ಪ್ರಮೋದ್ ಮರವಂತೆ ಬರೆದ ಹಾಡು, ವಿಜಯ್ ಪ್ರಕಾಶ್ ಧ್ವನಿಯಲ್ಲಿ ಬಂದ "ಅಭಿಮಾನಿಯಾಗಿ ಹೋದೆ" ಸಾಂಗ್ ಇತ್ತೀಚಿಗೆ ಬಿಡುಗಡೆಯಾಗಿ ಮೆಚ್ಚುಗೆ ಪಡೆದುಕೊಂಡಿದೆ. ‌

ಅಂದಹಾಗೆ,  ಜಸ್ಟ್ ಮ್ಯಾರೀಡ್ ಪ್ರೇಮಕಥೆಯ ಚಿತ್ರವಾಗಿದ್ದರೂ, ಪ್ರೇಕ್ಷಕರಿಗೆ ಬೇಕಾದ ಎಲ್ಲಾ ಅಂಶಗಳು ಈ ಸಿನಿಮಾದಲ್ಲಿವೆ. ನಿರ್ದೇಶಕಿ ಬಾಬಿ ಅವರೇ ಈ ಚಿತ್ರಕ್ಕೆ ಕಥೆ ಬರೆದರೆ, ಚಿತ್ರಕಥೆಯಲ್ಲಿ ಬಾಬಿ ಅವರಿಗೆ ಸಾಥ್ಗೂ‌ ನೀಡಿದ್ದಾರೆ ಧನಂಜಯ್ ರಂಜನ್. ರಘು ನಿಡವಳ್ಳಿ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. 

ಪಿ ಜಿ ಛಾಯಾಗ್ರಹಣ, ಶ್ರೀಕಾಂತ್ ಮತ್ತು ಅಶಿಕ್ ಕುಸುಗೊಳ್ಳಿ (ಗಣೇಶ ಸಾಂಗ್) ಸಂಕಲನ, ಅಮರ್ ಕಲಾ ನಿರ್ದೇಶನ, ವಿಕ್ರಮ್ ಮೋರ್ ಸಾಹಸ ನಿರ್ದೇಶನ ಹಾಗೂ ಬಾಬಾ ಭಾಸ್ಕರ್, ಶಾಂತಿ ಅರವಿಂದ್ ಅವರ ನೃತ್ಯ ನಿರ್ದೇಶನ ಜಸ್ಟ್ ಮ್ಯಾರೀಡ್ ಚಿತ್ರಕ್ಕಿದೆ. 

ಶೈನ್ ಶೆಟ್ಟಿ, ಅಂಕಿತ ಅಮರ್, ದೇವರಾಜ್, ಅಚ್ಯುತಕುಮಾರ್, ಮಾಳವಿಕ ಅವಿನಾಶ್, ಅನೂಪ್ ಭಂಡಾರಿ, ಶ್ರುತಿ ಹರಿಹರನ್, ಶ್ರುತಿ ಕೃಷ್ಣ, ಸಾಕ್ಷಿ ಅಗರವಾಲ್, ಶ್ರೀಮಾನ್, ರವಿಶಂಕರ್ ಗೌಡ, ರವಿ ಭಟ್, ವಾಣಿ ಹರಿಕೃಷ್ಣ, ಸಂಗೀತ ಅನಿಲ್, ಕುಮುದಾ, ಜಯರಾಮ್, ವೇದಿಕಾ ಕಾರ್ಕಳ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

IPL_Entry_Point