Dhurva Sarja: ಅಪ್ಪ ಮಗಳ ಬಾಂಧವ್ಯದ C ಚಿತ್ರದ ಮೊದಲ ಹಾಡು ಬಿಡುಗಡೆ ಮಾಡಿದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ
C ಹೆಸರಿನ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ. ಚಂದನವನದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ಚಿತ್ರದ ಮೊದಲ ಹಾಡನ್ನು ರಿಲೀಸ್ ಮಾಡಿ ತಂಡಕ್ಕೆ ಶುಭ ಕೋರಿದ್ದಾರೆ.
Dhruva sarja: ಸ್ಯಾಂಡಲ್‌ವುಡ್ ನಟ ಧ್ರುವ ಸರ್ಜಾ, ಹೊಸಬರ ಸಿನಿಮಾಗಳಿಗೆ ಸಾಥ್ ನೀಡುತ್ತಲೇ ಬಂದಿದ್ದಾರೆ. ಸಾಧ್ಯವಾದ ಮಟ್ಟಿಗೆ ಹೊಸ ನಿರ್ದೇಶಕರು, ಹೊಸ ಕಲಾವಿದರು, ಹೊಸ ತಂಡದ ಸಿನಿಮಾಗಳನ್ನು ಬೆಂಬಲಿಸುತ್ತಿದ್ದಾರೆ. ಇದೀಗ ಸಿ ಹೆಸರಿನ ಚಿತ್ರದ ಹಾಡನ್ನು ಬಿಡುಗಡೆ ಮಾಡಿ ತಂಡದ ಉತ್ಸಾಹವನ್ನು ಹೆಚ್ಚಿಸಿದ್ದಾರೆ.
ಸಿ.. ಅಂದ್ರೆ ಇಲ್ನೋಡಿ ಅಂತಲ್ಲ, ಹಾಗಂತ ಸಮುದ್ರದ ಬಗ್ಗೆ ಹೇಳ್ತಾ ಇದೀವಿ ಅಂತಾನೂ ಅಂದ್ಕೊಬೇಡಿ. 'ಸಿ' ಸ್ಯಾಂಡಲ್ ವುಡ್‌ನಲ್ಲಿ ಬಿಡುಗಡೆಗೆ ಸಿದ್ಧವಾಗಿರುವ ಹೊಸ ಸಿನಿಮಾ. ಈಗಾಗಲೇ ಚಂದನವನದಲ್ಲಿ ಶ್, ಸೈ, ಎ, ಓಂ ಹೀಗೆ ಒಂದೇ ಅಕ್ಷರದ ಹೆಸರಿನ ಮೂವಿಗಳನ್ನು ನೋಡಿದ್ದೀರಾ. ಇದೀಗ ಅದೇ ಸಾಲಿಗೆ 'ಸಿ' ಎನ್ನುವ ಮತ್ತೊಂದು ಸಿನಿಮಾ ಕೂಡ ಸೇರಿಕೊಳ್ಳುತ್ತಿದೆ.
ಕಿರಣ್ ಸುಬ್ರಮಣಿ ಚೊಚ್ಚಲ ನಿರ್ದೇಶನದ 'ಸಿ' ಸಿನಿಮಾ ಶೂಟಿಂಗ್ ಮುಗಿಸಿ ಪ್ರಚಾರ ಕೆಲಸದಲ್ಲಿ ಬಿಜಿಯಾಗಿದೆ. ಎಲೆಕ್ಷನ್ ಬಿಸಿ ಕಮ್ಮಿಯಾಗುತ್ತಿದ್ದಂತೆ ಥಿಯೇಟರ್‌ಗೆ ಲಗ್ಗೆ ಇಡಲು ಸಜ್ಜಾಗಿರುವ 'ಸಿ' ಸಿನಿಮಾ ಇದೀಗ ಹಾಡಿನ ಮೂಲಕ ಅಭಿಮಾನಿಗಳ ಮುಂದೆ ಬಂದಿದೆ. 'ಸಿ' ಸಿನಿಮಾದ ಅಪ್ಪ ಮಗಳ ಬಾಂಧವ್ಯದ ಹಾಡು ಈಗ ಗಾನ ಪ್ರಿಯರ ಗಮನ ಸೆಳೆಯುತ್ತಿದೆ. ಕಿರಣ್ ಸುಬ್ರಮಣಿ ನಿರ್ದೇಶನದ ಜೊತೆಗೆ ನಾಯಕನಾಗಿಯೂ ಮಿಂಚಿದ್ದಾರೆ. ಅಪ್ಪ ಮಗಳ ಬಾಂಧವ್ಯದ ಹಾಡಿನಲ್ಲಿ ಕಿರಣ್ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡರೆ ಮಗಳಾಗಿ ಸಾನ್ವಿ ಮಿಂಚಿದ್ದಾಳೆ..
ಈ ಹಾಡನ್ನು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ರಿಲೀಸ್ ಮಾಡಿರುವುದು ವಿಶೇಷ. ಮುದ್ದು ಮಗಳ ಜೊತೆ ಸಂಭ್ರಮಿಸುತ್ತಿರುವ ಧ್ರುವ ಸಿ ಸಿನಿಮಾದ ಮೊದಲ ಹಾಡನ್ನು ರಿಲೀಸ್ ಮಾಡಿ ಸಿನಿಮಾ ತಂಡಕ್ಕೆ ಶುಭ ಹಾರೈಸಿದ್ದಾರೆ. ಕಂದಾ...ಕಂದಾ ಎನ್ನುವ ಸಾಲಿನಿಂದ ಪ್ರಾರಂಭವಾಗುವ ಈ ಹಾಡನ್ನು ಹೃದಯ ಶಿವ ಬರೆದಿದ್ದು, ಗಾಯಕ ವಾಸುಕಿ ವೈಭವ್ ಹಾಡಿದ್ದಾರೆ.
ನಿರ್ದೇಶಕ, ನಾಯಕ ಕಿರಣ್ ಅವರಿಗೆ ಇದು ಮೊದಲ ಸಿನಿಮಾ. ಹಾಗಂತ ಸಿನಿಮಾರಂಗ ಏನು ಹೊಸದೇನಲ್ಲ. ಈಗಾಗಲೇ ಅನೇಕ ಸಿನಿಮಾಗಳಲ್ಲಿ ಕೆಲಸ ಮಾಡಿ ಅನುಭವ ಹೊಂದಿದ್ದಾರೆ. ಇದೀಗ ಸಿ ಸಿನಿಮಾ ಮೂಲಕ ಮೊದಲ ಬಾರಿಗೆ ಸ್ವಾತಂತ್ರ ನಿರ್ದೇಶಕರಾಗಿ ಹೊರ ಹೊಮ್ಮುತ್ತಿದ್ದಾರೆ. ಸಿ ಸಿನಿಮಾ ತಂದೆ- ಮಗಳ ಬಾಂಧವ್ಯದ ಜೊತೆಗೆ ಮೆಡಿಕಲ್ ಮಾಫಿಯಾದ ಕಥೆಯನ್ನೂ ಹೇಳಲಿದೆ. ಎಜಿಎಸ್ ಪ್ರೊಡಕ್ಷನ್ ನಡಿ ನಿರ್ದೇಶಕ, ನಾಯಕ ಕಿರಣ್ ಅವರ ತಂದೆ ಸುಬ್ರಮಣಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ವಿಭಾಗ