ತಮಿಳು ನಟ ಸಿದ್ಧಾರ್ಥ್‌ಗೆ ಮುಖಭಂಗ; ಸುದ್ದಿಗೋಷ್ಠಿಯಿಂದಲೇ ಹೊರಕ್ಕೆ ಕಳಿಸಿದ ಕನ್ನಡಪರ ಹೋರಾಟಗಾರರು VIDEO
ಕನ್ನಡ ಸುದ್ದಿ  /  ಮನರಂಜನೆ  /  ತಮಿಳು ನಟ ಸಿದ್ಧಾರ್ಥ್‌ಗೆ ಮುಖಭಂಗ; ಸುದ್ದಿಗೋಷ್ಠಿಯಿಂದಲೇ ಹೊರಕ್ಕೆ ಕಳಿಸಿದ ಕನ್ನಡಪರ ಹೋರಾಟಗಾರರು Video

ತಮಿಳು ನಟ ಸಿದ್ಧಾರ್ಥ್‌ಗೆ ಮುಖಭಂಗ; ಸುದ್ದಿಗೋಷ್ಠಿಯಿಂದಲೇ ಹೊರಕ್ಕೆ ಕಳಿಸಿದ ಕನ್ನಡಪರ ಹೋರಾಟಗಾರರು VIDEO

ತಮಿಳು ನಟ ಸಿದ್ಧಾರ್ಥ್‌ ತಮ್ಮ ಚಿಕ್ಕು ಸಿನಿಮಾ ಬಗ್ಗೆ ಬೆಂಗಳೂರಿನಲ್ಲಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ವೇಳೆ, ಕನ್ನಡಪರ ಹೋರಾಟಗಾರರು ಸುದ್ದಿಗೋಷ್ಠಿಗೆ ಅಡ್ಡಿಪಡಿಸಿ ಸಿದ್ದಾರ್ಥ್‌ ಅವರನ್ನು ಅಲ್ಲಿಂದ ಹೊರಕ್ಕೆ ಕಳುಹಿಸಿವೆ.

ತಮಿಳು ನಟ ಸಿದ್ಧಾರ್ಥ್‌ಗೆ ಮುಖಭಂಗ; ಸುದ್ದಿಗೋಷ್ಠಿಯಿಂದಲೇ ಹೊರಕ್ಕೆ ಕಳಿಸಿದ ಕನ್ನಡಪರ ಹೋರಾಟಗಾರರು
ತಮಿಳು ನಟ ಸಿದ್ಧಾರ್ಥ್‌ಗೆ ಮುಖಭಂಗ; ಸುದ್ದಿಗೋಷ್ಠಿಯಿಂದಲೇ ಹೊರಕ್ಕೆ ಕಳಿಸಿದ ಕನ್ನಡಪರ ಹೋರಾಟಗಾರರು

Cauvery Water Dispute: ಕರುನಾಡಲ್ಲಿ ಅದರಲ್ಲೂ ಮಂಡ್ಯ, ಮೈಸೂರು, ಬೆಂಗಳೂರು ಭಾಗದಲ್ಲಿ ಕಾವೇರಿ ಗಲಾಟೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಅದೇ ರೀತಿ ಶುಕ್ರವಾರ ಕರ್ನಾಟಕ ಬಂದ್‌ಗೂ ಕರೆ ನೀಡಿದ್ದರಿಂದ ಸಿನಿಮಾ ಚಟುವಟಿಕೆಗಳೂ ಸ್ಥಗಿತಗೊಂಡಿವೆ. ಬೆಂಗಳೂರಿನಲ್ಲಿ ನಡೆಯಬೇಕಿದ್ದ ಕಿರುತೆರೆ, ಸಿನಿಮಾಗಳ ಶೂಟಿಂಗ್‌ಗೂ ತಡೆ ನೀಡಲಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೂ ಬಂದ್‌ಗೆ ಬೆಂಬಲ ನೀಡಿದೆ. ಈ ನಡುವೆಯೇ ತಮ್ಮ ಸಿನಿಮಾದ ಪ್ರಚಾರಕ್ಕೆಂದು ಬೆಂಗಳೂರಿಗೆ ಬಂದಿದ್ದ ಖ್ಯಾತ ನಟ ಸಿದ್ಧಾರ್ಥ್‌ಗೂ ಕಾವೇರಿ ಬಿಸಿ ತಟ್ಟಿದೆ.

ಮೂಲ ತಮಿಳಿನಲ್ಲಿ ನಿರ್ಮಾಣವಾಗಿರುವ ಚಿತ್ತ ಹೆಸರಿನ ಸಿನಿಮಾ ಕನ್ನಡದಲ್ಲಿ ಚಿಕ್ಕು ಶೀರ್ಷಿಕೆಯಡಿ ಇಂದು (ಸೆ. 28) ರಿಲೀಸ್‌ ಆಗಿದೆ. ನಟ ಸಿದ್ಧಾರ್ಥ್‌ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಇದೊಂದು ವಿಶೇಷ ಸಿನಿಮಾ ಎಂಬ ಕಾರಣಕ್ಕೆ ಸೌತ್‌ನ ಇತರ ಭಾಷೆಗಳಲ್ಲೂ ಈ ಚಿತ್ರವನ್ನು ಡಬ್‌ ಮಾಡಿ ರಿಲೀಸ್‌ ಮಾಡುತ್ತಿದ್ದಾರೆ ಈ ಸಿನಿಮಾದ ನಿರ್ಮಾಪಕರು. ಈಗಾಗಲೇ ಈ ಸಿನಿಮಾದ ಟ್ರೇಲರ್‌ಅನ್ನು ಕಿಚ್ಚ ಸುದೀಪ್‌ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ.

ಈ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಳ್ಳುವ ಉದ್ದೇಶದಿಂದಲೇ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಎಸ್‌ಆರ್‌ವಿ ಥಿಯೇಟರ್‌ನಲ್ಲಿ ಇಂದು (ಸೆ. 28) ಪತ್ರಿಕಾಗೋಷ್ಠಿ ಸಹ ಆಯೋಜನೆಯಾಗಿತ್ತು. ತಾವೊಬ್ಬರೇ ಆಗಮಿಸಿ ಚಿಕ್ಕು ಕನ್ನಡ ಅವತರಣಿಕೆ ಬಗ್ಗೆ ಸಿದ್ಧಾರ್ಥ್‌ ಮಾತನಾಡಲು ಆರಂಭಿಸಿದ್ದರು. ಏಕಾಏಕಿ ಆಗಮಿಸಿದ ಕನ್ನಡಪರ ಹೋರಾಟಗಾರರು, ಸುದ್ದಿಗೋಷ್ಠಿ ನಿಲ್ಲಿಸುವಂತೆ ಆಗ್ರಹಿಸಿದರು.

"ಕಾವೇರಿ ನೀರಿಗಾಗಿ ಕರ್ನಾಟಕದಲ್ಲಿ ಹೋರಾಟ ನಡೆಯುತ್ತಿದೆ. ಈ ಸಮಯದಲ್ಲಿ ತಮಿಳು ಸಿನಿಮಾದ ಪ್ರಚಾರ ಬೇಕಿತ್ತಾ? ತಮಿಳುನಾಡಿಗೆ ಹೆಚ್ಚುವರಿ ನೀರು ಹರಿಯುತ್ತಿದೆ. ಇಂಥ ಸಮಯದಲ್ಲಿ ಈ ಸಿನಿಮಾ ಬಿಡುಗಡೆ ಬೇಕಾ? ಎಂದ ಹೋರಾಟಗಾರರು, ವೇದಿಕೆ ಮೇಲಿದ್ದ ಸಿದ್ಧಾರ್ಥ್‌ ಅವರನ್ನು ಕೆಳಕ್ಕಿಳಿಸಿ ಕಳುಹಿಸಿದೆ.

ಏನಿದು ಸಿನಿಮಾ?

ಏತಕಿ ಎಂಟರ್ಟೈನ್ಮೆಂಟ್‍ ಬ್ಯಾನರ್‌ನಡಿ ಚಿಕ್ಕು ಸಿನಿಮಾ ನಿರ್ಮಾಣವಾಗಿದೆ. ಕೆ.ಆರ್.ಜಿ. ಸ್ಟುಡಿಯೋಸ್ ಈ ಸಿನಿಮಾದ ವಿತರಣೆ ಹಕ್ಕನ್ನು ಪಡೆದುಕೊಂಡಿದ್ದು, ಚಿತ್ರವನ್ನು ಸೆ. 28ರಂದು ಬಿಡುಗಡೆ ಆಗಿದೆ. ‘ಚಿಕ್ಕು’ ಚಿತ್ರದಲ್ಲಿ ಸಿದ್ಧಾರ್ಥ್ ಒಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ವೃತ್ತಿಜೀವನದಲ್ಲೇ ಇದೊಂದು ವಿಭಿನ್ನ ಚಿತ್ರವಷ್ಟೇ ಅಲ್ಲ, ಇದೊಂದು ಮೈಲಿಗಲ್ಲು ಎಂದು ಹೇಳಲಾಗುತ್ತಿದೆ. ಈ ಹಿಂದೆ ತಮಿಳಿನಲ್ಲಿ ‘ಪನ್ನೈಯಾರುಂ ಪದ್ಮಿನಿಯುಂ’ ನಂತಹ ವಿಭಿನ್ನ ಚಿತ್ರವನ್ನು ನಿರ್ದೇಶಿಸಿದ್ದ ಎಸ್‍.ಯು. ಅರುಣ್‍ ಕುಮಾರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸಿದ್ಧಾರ್ಥ್, ನಿಮಿಷಾ ಸಜಯನ್‍ ಮುಂತಾದವರು ನಟಿಸಿರುವ ಈ ಚಿತ್ರಕ್ಕೆ ದಿಬು ನಿನಾನ್‍ ಥಾಮಸ್‍ ಸಂಗೀತ ನಿರ್ದೇಶನ ಮಾಡಿದ್ದು, ಬಾಲಾಜಿ ಸುಬ್ರಹ್ಮಣ್ಯಂ ಅವರ ಛಾಯಾಗ್ರಹಣವಿದೆ.

ಮನರಂಜನೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

Whats_app_banner