ಕನ್ನಡ ಸುದ್ದಿ  /  ಮನರಂಜನೆ  /  ದರ್ಶನ್‌ ನಟನೆಯ ಡೆವಿಲ್‌ ಸಿನಿಮಾದಲ್ಲಿ ಬಾಲಿವುಡ್‌ ನಟ; ಎನ್‌ಕೌಂಟರ್‌ ಬಳಿಕ ಸ್ಯಾಂಡಲ್‌ವುಡ್‌ಗೆ ಮತ್ತೆ ಬಂದ ಮಹೇಶ್‌ ಮಂಜ್ರೇಕರ್‌

ದರ್ಶನ್‌ ನಟನೆಯ ಡೆವಿಲ್‌ ಸಿನಿಮಾದಲ್ಲಿ ಬಾಲಿವುಡ್‌ ನಟ; ಎನ್‌ಕೌಂಟರ್‌ ಬಳಿಕ ಸ್ಯಾಂಡಲ್‌ವುಡ್‌ಗೆ ಮತ್ತೆ ಬಂದ ಮಹೇಶ್‌ ಮಂಜ್ರೇಕರ್‌

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟನೆಯ ಡೆವಿಲ್‌ನಲ್ಲಿ ಬಾಲಿವುಡ್‌ ನಟ ಮಹೇಶ್‌ ಮಂಜ್ರೇಕರ್‌ ನಟಿಸಲಿದ್ದಾರೆ. ಈ ಹಿಂದೆ ಎನ್‌ಕೌಂಟರ್‌ ದಯಾನಾಯಕ ಸಿನಿಮಾದಲ್ಲಿ ಇವರು ನಟಿಸಿದ್ದರು. 19 ವರ್ಷಗಳ ಬಳಿಕ ಡೆವಿಲ್‌ನಲ್ಲಿ ನಟಿಸಲಿದ್ದಾರೆ.

ದರ್ಶನ್‌ ನಟನೆಯ ಡೆವಿಲ್‌ ಸಿನಿಮಾದಲ್ಲಿ ಬಾಲಿವುಡ್‌ ನಟ ಮಹೇಶ್‌ ಮಂಜ್ರೇಕರ್‌
ದರ್ಶನ್‌ ನಟನೆಯ ಡೆವಿಲ್‌ ಸಿನಿಮಾದಲ್ಲಿ ಬಾಲಿವುಡ್‌ ನಟ ಮಹೇಶ್‌ ಮಂಜ್ರೇಕರ್‌

ಬೆಂಗಳೂರು: ಕಾಟೇರ ಸಿನಿಮಾದ ಮೂಲಕ ಚಿತ್ರಪ್ರೇಮಿಗಳ ಗಮನ ಸೆಳೆದಿರುವ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟನೆಯ ಮುಂದಿನ "ಡೆವಿಲ್‌" ಸಿನಿಮಾದಲ್ಲಿ ಬಾಲಿವುಡ್‌ನ ಹಿರಿಯ ನಟ ಮಹೇಶ್‌ ಮಂಜ್ರೇಕರ್‌ ನಟಿಸಲಿದ್ದಾರೆ. ಎನ್‌ಕೌಂಟರ್‌ ದಯಾನಾಯಕ ಸಿನಿಮಾದ ಬಳಿಕ ಸುಮಾರು ಹತ್ತೊಂಬತ್ತು ವರ್ಷಗಳ ಬಳಿಕ ಇವರು ಸ್ಯಾಂಡಲ್‌ವುಡ್‌ಗೆ ಆಗಮಿಸುತ್ತಿದ್ದಾರೆ. ಡೆವಿಲ್‌ ಸಿನಿಮಾದಲ್ಲಿ ಮಹೇಶ್‌ ಮಂಜ್ರೇಕರ್‌ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಗಳು ತಿಳಿಸಿವೆ.

ಟ್ರೆಂಡಿಂಗ್​ ಸುದ್ದಿ

ಡೆವಿಲ್‌ ಸಿನಿಮಾ ಈ ವರ್ಷವೇ ರಿಲೀಸ್‌ ಆಗಲಿದೆ. ಕಾಟೇರ ಯಶಸ್ಸಿನ ಬಳಿಕ ಡೆವಿಲ್‌ ಸಿನಿಮಾದ ಮೇಲೆ ಪ್ರೇಕ್ಷಕರ ನಿರೀಕ್ಷೆ ಹೆಚ್ಚಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಡೆವಿಲ್‌ ಟೀಸರ್‌ ಕೂಡ ಕುತೂಹಲ ಹುಟ್ಟುಹಾಕಿತ್ತು. ನಮ್ಮ ಮನೆಯಲ್ಲೊಂದು ಪುಟ್ಟ ಪಾಪು ಇರುವುದು ಎಂಬ ಧ್ವನಿಯೊಂದಿಗೆ ವಿಭಿನ್ನವಾಗಿ ಕಾಣಿಸಿಕೊಂಡಿದ್ದರು. ದರ್ಶನ್‌ ಹುಟ್ಟುಹಬ್ಬಕ್ಕೆ ರಿಲೀಸ್‌ ಆದ ಈ ಫಸ್ಟ್‌ ಲುಕ್‌ ದಚ್ಚು ಅಭಿಮಾನಿಗಳಿಗೆ ಖುಷಿ ನೀಡಿತ್ತು.

ಇದೀಗ ಬಾಲಿವುಡ್‌ನ ಹಿರಿಯ ನಟ ಮಹೇಶ್‌ ಮಂಜ್ರೇಕರ್‌ ಅವರು ಡೆವಿಲ್‌ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಮಾಹಿತಿ ದೊರಕಿದೆ. ಈಗಾಗಲೇ ಡೆವಿಲ್‌ ಸಿನಿಮಾದ ಮೊದಲ ಹಂತದ ಶೂಟಿಂಗ್‌ ಮುಕ್ತಾಯವಾಗಿದೆ. ಈ ಶೂಟಿಂಗ್‌ ಸಮಯದಲ್ಲಿ ದರ್ಶನ್‌ ಕೈಗೆ ಏಟು ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಕೈಗೆ ಶಸ್ತ್ರಚಿಕಿತ್ಸೆ ಮಾಡಿಕೊಂಡಿದ್ದರು. ಒಂದು ತಿಂಗಳು ಇವರು ರೆಸ್ಟ್‌ ಮಾಡಬೇಕಿದೆ. ಯಾವುದೇ ಶೂಟಿಂಗ್‌ನಲ್ಲಿ ಪಾಲ್ಗೊಳ್ಳುವಂತೆ ಇಲ್ಲ. ದರ್ಶನ್‌ಗೆ ಏಟಾಗಿರುವ ಕಾರಣ ದರ್ಶನ್‌ ಪರದೆಯ ಮೇಲೆ ಕಾಣಿಸದ ಇತರೆ ದೃಶ್ಯಗಳ ಶೂಟಿಂಗ್‌ಗೆ ನಿರ್ದೇಶಕರು ಗಮನ ಹರಿಸಿದ್ದಾರೆ.

ಯಾರಿದು ಮಹೇಶ್‌ ಮಂಜ್ರೇಕರ್‌?

ಮಹೇಶ್‌ ವಾಮನ್‌ ಮಂಜ್ರೇಕರ್‌ ಅವರು ಭಾರತದ ನಟ, ಸಿನಿಮಾ ನಿರ್ದೇಶಕ, ಸಂಭಾಷಣೆ ಬರಹಗಾರ ಮತ್ತು ನಿರ್ಮಾಪಕರಾಗಿ ಜನಪ್ರಿಯತೆ ಪಡೆದಿದ್ದಾರೆ. ಇವರು ಹೆಚ್ಚಾಗಿ ಹಿಂದಿ ಚಿತ್ರರಂಗದಲ್ಲಿ ಜನಪ್ರಿಯತೆ ಪಡೆದಿದ್ದಾರೆ. ಮರಾಠಿ, ತೆಲುಗು, ಭೋಜಪುರಿ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಕನ್ನಡದಲ್ಲಿ ಈಗಾಗಲೇ ಎನ್‌ಕೌಂಟರ್‌ ದಯಾನಾಯಕ ಸಿನಿಮಾದಲ್ಲಿ ಮಿಂಚಿದ್ದಾರೆ. ದರ್ಶನ್‌ ನಟನೆಯ ಡೇವಿಲ್‌ ಸಿನಿಮಾ ಇವರಿಗೆ ಸ್ಯಾಂಡಲ್‌ವುಡ್‌ನಲ್ಲಿ ಎರಡನೇ ಸಿನಿಮಾವಾಗಿದೆ. ವಾಸ್ತವ್‌: ದಿ ರಿಯಾಲಿಟಿ, ಆಸ್ತಿತ್ವ, ವಿರುದ್ಧ್‌ ಮುಂತಾದ ಸಿನಿಮಾಗಳಿಗೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಅಸ್ತಿತ್ವ ಸಿನಿಮಾವು ಅತ್ಯುತ್ತಮ ಫೀಚರ್‌ ಫಿಲ್ಮ್‌ ವಿಭಾಗದಲ್ಲಿ ನ್ಯಾಷನಲ್‌ ಫಿಲ್ಮ್‌ ಅವಾರ್ಡ್‌ ಪಡೆದಿತ್ತು. ಬಿಗ್‌ಬಾಸ್‌ ಮರಾಠಿ ರಿಯಾಲಿಟಿ ಶೋ  2018ರಲ್ಲಿ ಹೋಸ್ಟ್‌ ಮಾಡಿದ್ದರು.

ಮಹೇಶ್‌ ಮಂಜ್ರೇಕರ್‌ ನಟನೆಯ ಸಿನಿಮಾಗಳು

ಕಳೆದ ವರ್ಷ ಮರಾಠಿಯಲ್ಲಿ ಬಟರ್‌ಫ್ಲೈ ಸಿನಿಮಾದಲ್ಲಿ ನಟಿಸಿದ್ದರು. ಇದಕ್ಕೂ ಮೊದಲು ಮಿಸ್ಟರ್‌ ಮಮ್ಮಿ, ದೆ ಧಕ್‌ 2, ಸರ್ಕಾರು ವಾರಿ ಪಾಟ, ಕಥಾ ಕಂಚಿಕಿ ಮನಮ್‌ ಇಂತಿಕಿ, ಅಂತಿಮ್‌: ದಿ ಫೈನಲ್‌ ಟ್ರುತ್‌, ಮುಂಬೈ ಸಾಗ, ಬಾಸ್‌, ದಿ ಪವರ್‌, ದಿ ವೈಟ್‌ ಟೈಗರ್‌, ಟ್ಯಾಕ್ಸಿ ನಂಬರ್‌ 24, ಕೇಸರಿ, ದಬಾಂಗ್‌ 3, ಸಾಹೋ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

IPL_Entry_Point