ಟಾಂಗಾ ಕುದುರೆಯನ್ನ ತಂದು ರೇಸ್‌ಗಿಳಿಸಿದ್ರು, ಆಗ ರೇಸ್‌ನಲ್ಲಿ ದೊಡ್ಡ ದೊಡ್ಡ ಕುದುರೆಗಳಿದ್ವು! ಇದು ದರ್ಶನ್‌ ಹೇಳಿದ ಅವರದೇ ಕಥೆ
ಕನ್ನಡ ಸುದ್ದಿ  /  ಮನರಂಜನೆ  /  ಟಾಂಗಾ ಕುದುರೆಯನ್ನ ತಂದು ರೇಸ್‌ಗಿಳಿಸಿದ್ರು, ಆಗ ರೇಸ್‌ನಲ್ಲಿ ದೊಡ್ಡ ದೊಡ್ಡ ಕುದುರೆಗಳಿದ್ವು! ಇದು ದರ್ಶನ್‌ ಹೇಳಿದ ಅವರದೇ ಕಥೆ

ಟಾಂಗಾ ಕುದುರೆಯನ್ನ ತಂದು ರೇಸ್‌ಗಿಳಿಸಿದ್ರು, ಆಗ ರೇಸ್‌ನಲ್ಲಿ ದೊಡ್ಡ ದೊಡ್ಡ ಕುದುರೆಗಳಿದ್ವು! ಇದು ದರ್ಶನ್‌ ಹೇಳಿದ ಅವರದೇ ಕಥೆ

ಕನ್ನಡ ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ್ದಾರೆ ನಟ ದರ್ಶನ್. ‌ಈ ಈ ಸಾಧನೆಯ ಮೆಲುಕು ಹಾಕುವ ಉದ್ದೇಶಕ್ಕೆ ಬೆಳ್ಳಿ ಪರ್ವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶ್ರೀರಂಗಪಟ್ಟಣದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ದರ್ಶನ್‌ ಮತ್ತೆ ಹಳೇದನ್ನು ನೆನಪಿಸಿಕೊಂಡರು. ತಮ್ಮನ್ನು ತಾವು ಟಾಂಗಾ ಕುದುರೆ ಎಂದು ಸಂಬೋಧಿಸಿಕೊಂಡರು.

ಟಾಂಗಾ ಕುದುರೆಯನ್ನ ತಂದು ರೇಸ್‌ಗಿಳಿಸಿದ್ರು, ಆಗ ರೇಸ್‌ನಲ್ಲಿ ದೊಡ್ಡ ದೊಡ್ಡ ಕುದುರೆಗಳಿದ್ವು! ಇದು ದರ್ಶನ್‌ ಹೇಳಿದ ಅವರದೇ ಕಥೆ
ಟಾಂಗಾ ಕುದುರೆಯನ್ನ ತಂದು ರೇಸ್‌ಗಿಳಿಸಿದ್ರು, ಆಗ ರೇಸ್‌ನಲ್ಲಿ ದೊಡ್ಡ ದೊಡ್ಡ ಕುದುರೆಗಳಿದ್ವು! ಇದು ದರ್ಶನ್‌ ಹೇಳಿದ ಅವರದೇ ಕಥೆ

Darshan: ಸ್ಯಾಂಡಲ್‌ವುಡ್‌ನಲ್ಲಿ ಬರೋಬ್ಬರಿ 25 ವರ್ಷ ಪೂರೈಸಿದ್ದಾರೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್. ‌ಈ ಸುದೀರ್ಘ ಪಯಣದಲ್ಲಿ ಸಾಕಷ್ಟು ಏರಿಳಿತ ಕಂಡು, ಇದೀಗ ಬಾಕ್ಸ್‌ ಆಫೀಸ್‌ ಸುಲ್ತಾನನಾಗಿ, ಅಭಿಮಾನಿಗಳ ಪಾಲಿನ ಆರಾಧ್ಯ ದೈವವಾಗಿ ಬಹು ಎತ್ತರಕ್ಕೆ ಏರಿದ್ದಾರೆ. ಈ ಸಾಧನೆಯ ಮೆಲುಕು ಹಾಕುವ ಉದ್ದೇಶಕ್ಕೆ ಬೆಳ್ಳಿ ಪರ್ವ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾಜಕೀಯ ಗಣ್ಯರು, ಸಿನಿಮಾ ರಂಗದ ಆಪ್ತರು ಸೇರಿ ದರ್ಶನ್‌ ಬಗ್ಗೆ ಮಾತನಾಡಿದರು. ಸಾವಿರಾರು ಫ್ಯಾನ್ಸ್‌ ಸಮ್ಮುಖದಲ್ಲಿ ನಡೆದ ಈ ಅಭಿನಂದನಾ ಕಾರ್ಯಕ್ರಮದಲ್ಲಿ ದರ್ಶನ್‌ ಮತ್ತೆ ಹಳೇದನ್ನು ನೆನಪಿಸಿಕೊಂಡರು. ತಮ್ಮನ್ನು ತಾವು ಟಾಂಗಾ ಕುದುರೆ ಎಂದು ಸಂಬೋಧಿಸಿಕೊಂಡು, ಕಥೆಯೊಂದನ್ನು ಹೇಳಿದರು.

ಚಿತ್ರರಂಗದಲ್ಲಿ ತೂಗುದೀಪ ಶ್ರೀನಿವಾಸ್‌ ಪುತ್ರ ಎ ಹಿನ್ನೆಲೆ ಇದ್ದರೂ, ದರ್ಶನ್‌ ಅವರಿಗೆ ಆರಂಭದಲ್ಲಿ ಸಿಗಬೇಕಾದ ಒಂದಷ್ಟು ಅವಕಾಶಗಳು ಸಿಗಲಿಲ್ಲ. ಹಾಗಿದ್ದರೂ, ಸಿನಿಮಾದಲ್ಲೇ ಏನಾದರೂ ಮಾಡಬೇಕು ಎಂದು ಲೈಟ್‌ ಬಾಯ್‌ನಿಂದ ಕೆರಿಯರ್‌ ಆರಂಭಿಸಿ, ಅಲ್ಲಿಂದ ಸಣ್ಣ ಪುಟ್ಟ ಸೈಡ್‌ ರೋಲ್‌ ಮಾಡಿಕೊಂಡೇ, ಇದೀಗ ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೇ ಆದ ಸಾಮ್ರಾಜ್ಯವನ್ನೇ ಕಟ್ಟಿಕೊಂಡಿದ್ದಾರೆ ದರ್ಶನ್.‌ ಇದೀಗ ಹಾಗೇ ತಮ್ಮ ಈ ವೃತ್ತಿಬದುಕಿನ ಹಾದಿಯಲ್ಲಿ ಜತೆಯಾದ ಎಲ್ಲರನ್ನೂ ನೆನಪಿಸಿಕೊಂಡಿದ್ದಾರೆ ದರ್ಶನ್.‌

ತಮ್ಮನ್ನು ತಾವು ಟಾಂಗಾ ಕುದುರೆಗೆ ಹೋಲಿಸಿಕೊಂಡ ದರ್ಶನ್

"ಯಾವುದೋ ಟಾಂಗಾಗೆ ಕಟ್ಟಿದ ಕುದುರೆ, ಟಕು ಟಕು ಟಕು ಅಂತ ಹೋಗ್ತಾಯಿತ್ತು. ಆ ಕುದುರೆಯನ್ನ ಯಾರೋ ನೋಡಿದ್ರು. ಓಹ್‌ ಪರವಾಗಿಲ್ಲ, ಹೈಟ್‌ ಇದೆ. ಇದ್ಯಾಕೆ ಇಲ್ಲಿ ಓಡ್ತಿದೆ? ಅಂತ ಒಬ್ಬರು ಆ ಕುದುರೆಯನ್ನು ನೋಡಿದ್ರು. ಅವರಿಗೆ ಪಾಪ ರೇಸ್‌ಕೋರ್ಸ್‌ನ ಗಂಧ ಗಾಳಿಯೂ ಗೊತ್ತಿಲ್ಲ. ತಗೊಂಡು ಹೋಗೋಣ ಅಂತ ಹೇಳಿ ರೇಸ್‌ಕೋರ್ಸ್‌ನಲ್ಲಿ ನಿಲ್ಲಿಸಿಬಿಟ್ರು. ಆಗ ತುಂಬ ದೊಡ್ಡ ದೊಡ್ಡ ಕುದುರೆಗಳೆಲ್ಲ ಓಡ್ತಿದ್ವು. ಗೇಟಿಗೆ ಹಾಕಿದ್ರು. ಆ ಕುದುರೆ ಮಾಲೀಕರು ಬಂದು ನಿರ್ಮಾಪಕ ರಾಮಮೂರ್ತಿ ಅವ್ರು. ಆ ಕುದುರೆಗೆ ಹೇಳೋಕಾಗಲಿ, ಬೈಯೋಕಾಗಲಿ, ಅರ್ಹತೆ, ಯೋಗ್ಯತೆ, ಅಧಿಕಾರ ಇರೋದು ಅವರೊಬ್ಬರಿಗೆ ಎಂ ಜಿ ರಾಮಮೂರ್ತಿ ಅವರಿಗೆ ಮಾತ್ರ!" ಎಂದರು.‌

ಅಲ್ಲಿಂದ ಈಗಲೂ ಆ ಕುದುರೆ ಓಡ್ತಾನೆ ಇದೆ..

"ಆ ಕುದುರೆ ಮೇಲೆ ಪಿ.ಎನ್‌ ಸತ್ಯ ಅನ್ನೋ ನಿರ್ದೇಶಕ ಜಾಕಿಯನ್ನು ಕೂರಿಸಿಬಿಟ್ಟು, ಓಡಿಸಿ ಎಂದರು. ಆವತ್ತು ನಮ್ಮ ರಾಮಮೂರ್ತಿ ಅವರು ಬಿಟ್ಟಂಥ ಈ ಕುದುರೆ, ಕುಂಟ್ತಾಯಿತ್ತೋ, ಓಡ್ತಾಯಿತ್ತೋ ಗೊತ್ತಿಲ್ಲ. ಅಲ್ಲಿಂದ ಇಲ್ಲಿಯವರೆಗೂ ಓಡ್ತಾಯಿದೆ. ಇನ್ನು ಮುಂದೆಯೂ ಓಡಲಿದೆ. ಕೆಲಸ ಅಂತ ಬಂದಾಗ ಆ ಕುದುರೆ ಓಡ್ತಾನೇ ಇರುತ್ತೆ. ಆದರೆ, ಅದು ಆ ಕುದುರೆಗೆ ಗೊತ್ತಿರಲ್ಲ. ಆ ಕುದುರೆ ಮೇಲೆ ಯಾರೆಲ್ಲ ಕೂರುತ್ತಾರೋ ಆ ಜಾಕಿಗಳಿಗೆ ಗೊತ್ತಿರುತ್ತೆ" ಎಂದರು.

ನಿರ್ದೇಶಕರೇ ನನ್ನ ಜಾಕಿಗಳು, ಅವರು ಓಡಿಸಿದಂತೆ ಓಡ್ತಿದ್ದೇನೆ

ಜಾಕಿಗಳು ಎಂದರೆ ನಮ್ಮ ನಿರ್ದೇಶಕರುಗಳು. ಇಂದಿಗೂ ನಾನು ನನ್ನ ಮೊದಲ ನಿರ್ದೇಶಕರನ್ನು ನೆನಪಿಸಿಕೊಳ್ಳಲೇಬೇಕು. ನಮ್ಮ ಪಿ.ಎನ್‌ ಸತ್ಯ ಅವರಿಂದ ಹಿಡಿದು ಈಗಿನ ತರುಣ ಹಾಗೆ ನಮ್ಮ ಮಿಲನಾ ಪ್ರಕಾಶ್‌, ಅವರೆಲ್ಲೂ ನನ್ನ ಬೆನ್ನ ಮೇಲೆ ಕೂತ ಜಾಕಿಗಳು. ನಾನು ಮಾಡುವ ಸಿನಿಮಾ ಖಂಡಿತ ನಂದಲ್ಲ. ಅದು ನಿರ್ದೇಶಕರದ್ದು. ನಾನು ಕುದುರೆ ಮಾತ್ರ. ಕುದುರೆಗೆ ಯಾವಾಗ ಹೇಗೆ ನೋಡಿಕೊಳ್ಳಬೇಕು, ಯಾವಾಗ ಹೊಡಿಬೇಕು ಅದು ಆ ನಿರ್ದೇಶಕ ಅನ್ನೋ ಜಾಕಿಗಷ್ಟೇ ಗೊತ್ತಿರುತ್ತದೆ. ಅಲ್ಲಿಂದ ಇಲ್ಲಿಯವರೆಗೂ ನಾನು ಓಡಿಕೊಂಡೇ ಬಂದಿದ್ದೇನೆ. ಮುಂದೆಯೂ ನಾನು ರೇಸ್‌ನಲ್ಲಿರಲಿದ್ದೇನೆ" ಎಂದಿದ್ದಾರೆ ದರ್ಶನ್.

Whats_app_banner