ಕನ್ನಡ ಸುದ್ದಿ  /  Entertainment  /  Sandalwood News Challenging Star Darshan Son Vineesh Horse Ride Video Viral Dboss Fans Pcp

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಪುತ್ರ ವಿನೀಶ್‌ ಕುದುರೆ ಸವಾರಿ; ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡಲು ದಚ್ಚು ಸುಪುತ್ರನ ತಯಾರಿ

Challenging Star Darshan Son Vineesh: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಮಗ ವಿನೀಶ್‌ ಕುದುರೆ ಸವಾರಿ ಮಾಡುತ್ತಿರುವ ವಿಡಿಯೋ ವೈರಲ್‌ ಆಗಿದೆ. ಭವಿಷ್ಯದಲ್ಲಿ ವಿನೀಶ್‌ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡುವ ಸೂಚನೆ ಇದೆ. 'ಮೊದಲು ಮಣ್ಣು ಹೊರುವುದು ಕಲಿಯಲಿ. ಆಮೇಲೆ ನೋಡೋಣ' ಎಂದು ದರ್ಶನ್‌ ತನ್ನ ಮಗನ ಸಿನಿಮಾ ಎಂಟ್ರಿ ಕುರಿತು ಹೇಳಿದ್ದರು.

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಪುತ್ರ ವಿನೀಶ್‌ ಕುದುರೆ ಸವಾರಿ
ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಪುತ್ರ ವಿನೀಶ್‌ ಕುದುರೆ ಸವಾರಿ

ಬೆಂಗಳೂರು: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ಗೆ ಇರುವ ಪ್ರಾಣಿ, ಪಕ್ಷಿ ಕಾಳಜಿ ಎಲ್ಲರಿಗೂ ಗೊತ್ತಿದೆ. ಬೇಸಿಗೆಯಲ್ಲಿ ಪಕ್ಷಿಗಳಿಗೆ ನೀರು ಇಡಿ ಅಂತ ದರ್ಶನ್ ಹೇಳಿದ ಮಾತಿಗೆ ಅವರ ಸಾವಿರಾರು ಜನ ಅಭಿಮಾನಿಗಳು ಆ ಕೆಲಸವನ್ನ ಮಾಡಿದ್ರು . ಇನ್ನು ದರ್ಶನ್ ಅವರಿಗೆ ಕುದುರೆ ಅಂದ್ರೆ ಬಹಳ ಅಚ್ಚುಮೆಚ್ಚು ಜೊತೆಗೆ ಅವರು ಅದ್ಬತ ಕುದುರೆ ಸವಾರ ಕೂಡ ಹೌದು. ತಮ್ಮ ಫಾರ್ಮ್‌ಹೌಸ್‌ನಲ್ಲಿ ಕುದುರೆಗಳನ್ನ ಸಾಕ್ತಾಯಿರೋದು ಆಗಾಗ ಅವುಗಳ ಜತೆ ರಿಲ್ಯಾಕ್ಸ್ ಮೂಡ್ ಗೆ ಜಾರುತ್ತಾಯಿರೋದು ಕೂಡ ಗೊತ್ತೆಯಿದೆ. ಇದೀಗ ತಂದೆಯ ಹಾಗೆ ಡಿ ಬಾಸ್ ಪುತ್ರ ಕೂಡ ರೆಡಿಯಾಗುತ್ತಿದ್ದಾರೆ.‌ ದರ್ಶನ್ ಅವರ ಪುತ್ರ ವಿನೀಶ್ ಕುದುರೆ ಸವಾರಿ ಮಾಡುತ್ತಿರುವ ವಿಡಿಯೋ ಈಗ ಸಖತ್ ವೈರಲ್ ಆಗ್ತಾಯಿದೆ.

ಇತ್ತೀಚೆಗೆ ದಚ್ಚು ದುಬೈ ಪ್ರವಾಸದಲ್ಲಿದ್ರು.. ಈ ಪ್ರವಾಸದಲ್ಲಿ ವಿನೀಶ್ ತಂದೆ ಜತೆ ಭಾಗಿಯಾಗಿದ್ರು... ಈ ಸಮಯದಲ್ಲಿ ಕುದುರೆ ಸವಾರಿ ಮಾಡಿದ್ದಾರೆ. ಇನ್ನು ಕೆಲ ದಿನಗಳ ಹಿಂದೆ ಚಕ್ಕಡಿ ಏರಿ ವಿನೀಶ್ ತಂದೆ ಜೊತೆ ನೈಟ್ ಔಟ್ ಕೂಡ ಹೋಗಿದ್ದ ವಿಡಿಯೋಗಳು ಕೂಡ ಸೌಂಡ್ ಮಾಡಿದ್ವು. ಸದ್ಯ ಮರುಭೂಮಿಯಲ್ಲಿ ವಿನೀಶ್ ಕುದುರೆ ಸವಾರಿ ಮಾಡಿರುವ ವಿಡಿಯೋವನ್ಬ ದರ್ಶನ್ ಅಭಿಮಾನಿಗಳು ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡ್ತಾಯಿದ್ದಾರೆ.

ಸದ್ಯದಲ್ಲೇ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡ್ತಾರಾ ಜ್ಯೂ.ಡಿ ಬಾಸ್

ಇನ್ನೂ ತಮ್ನ ಮಗನನ್ನು ಚಿತ್ರರಂಗಕ್ಕೆ ಪರಿಚಯಿಸುವ ಬಗ್ಗೆ ನಟ ದರ್ಶನ್ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಮುಂದೊಂದು ದಿನ ವಿನೀಶ್ ಕೂಡ ಹೀರೊ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಾರೆ ಅನ್ನೋದನ್ನ ಖಚಿತ ಪಡಿಸಿದ್ದಾರೆ.‌ ಆ ಸಮಯ ಯಾವಾಗ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

ಇತ್ತೀಚೆಗೆ ಹುಟ್ಟುಹಬ್ಬದ ಸಂಧರ್ಭದಲ್ಲೂ ದರ್ಶನ್ ಮಗನ ಬಗ್ಗೆ ಮಾತಾಡಿ 'ಮೊದಲು ಮಣ್ಣು ಹೊರುವುದು ಕಲಿಯಲಿ. ಆಮೇಲೆ ನೋಡೋಣ' ಎಂದು ಹೇಳಿದ್ದರು. ಅಂದರೆ ಡೈರೆಕ್ಟ್ ಆಗಿ ಬಂದು ಕ್ಯಾಮರಾ ಮುಂದೆ ನಿಲ್ಲುವುದಲ್ಲ. ಅದಕ್ಕೂ ಮುನ್ನ ತರಬೇತಿ ಪಡೆದು ಕೆಲವು ವಿಚಾರಗಳನ್ನ ಕಲಿಯಬೇಕು. ಕ್ಯಾಮರಾ ಹಿಂದೆ ಎಷ್ಟೆಲ್ಲಾ ಶ್ರಮ ಇರುತ್ತದೆ ಎನ್ನುವುದು ಗೊತ್ತಾಗಬೇಕು. ಎಲ್ಲವನ್ನು ಕಲಿತುಕೊಂಡು ಚಿತ್ರರಂಗಕ್ಕೆ ಬರಬೇಕು ಎನ್ನುವ ಅರ್ಥದಲ್ಲಿ ಹೇಳಿದ್ದರು. ಈಗ ವಿನೀಶ್ ಸಖತ್ತಾಗಿಯೇ ಕುದುರೆ ಸವಾರಿ ಮಾಡ್ತಾಯಿರೋ ವಿಡಿಯೋ ನೋಡಿದ್ರೇ ಚಿತ್ರರಂಗಕ್ಕೆ ಎಂಟ್ರಿ ಕೊಡೊದರ ಸಿಗ್ನಲ್ ಕೊಟ್ಟಿದ್ದಾರೆ ಅಂದ್ರೇ ತಪ್ಪಾಗೋದಿಲ್ಲ..

'ಮಿ. ಐರಾವತ' ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ಮೊದಲಿಗೆ ವಿನೀಶ್ ಕ್ಯಾಮರಾ ಎದುರಿಸಿದ್ದು. ಬಳಿಕ 'ಯಜಮಾನ' ಸಿನಿಮಾ ಕಾಣಿಸಿಕೊಂಡಿದ್ದ. ಅಭಿಮಾನಿಗಳು ಆಗಲೇ ಥಿಯೇಟರ್ ಮುಂದೆ ವಿನೀಶ್ ಕಟೌಟ್‌ ನಿಲ್ಲಿಸಿ ಸಂಭ್ರಮಿಸಿದ್ದರು. ಇತ್ತೀಚೆಗೆ ರಿಲೀಸ್ ಆದ 'ಕಾಟೇರ' ಸಿನಿಮಾದಲ್ಲಿ ದರ್ಶನ್ ಅಕ್ಕನ ಮಗ ಚಂದು ಕೂಡ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 'ಕಾಟೇರ'ನ ಬಾಲ್ಯದ ಎಪಿಸೋಡ್‌ನಲ್ಲಿ ಮಿಂಚಿದ್ದರು.

ವಿನೀಶ್ ಹಾಗೂ ಚಂದು ಇಬ್ಬರು ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ನಟಿಸುವ ಸಾಧ್ಯತೆಯನ್ನ ತಳ್ಳಿ ಹಾಕುವಂತಿಲ್ಲ. ಸದ್ಯ ದರ್ಶನ್ 'ಡೆವಿಲ್' ಸಿನಿಮಾ ಶೂಟಿಂಗ್ ನಲ್ಲಿ ಬ್ಯೂಸಿಯಾಗಿದ್ದಾರೆ... ಮೋಹನ್‌ ಬಿ ಕೆರೆ ಸ್ಟುಡಿಯೋದಲ್ಲಿ ಆಕ್ಷನ್ ಸೀಕ್ವೆನ್ಸ್ ಶೂಟಿಂಗ್ ನಡೀತಿದೆ. ಅಕ್ಟೋಬರ್ ವೇಳೆಗೆ 'ಡೆವಿಲ್' ಸಿನಿಮಾ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ಪ್ರಕಾಶ್ ವೀರ್ ಚಿತ್ರವನ್ನು ನಿರ್ದೇಶಿಸಿ ನಟಿಸುತ್ತಿದ್ದಾರೆ.

ವರದಿ: ಮನೋಜ್ ವಿಜಯೀಂದ್ರ