ವರ್ಷಾಂತ್ಯಕ್ಕೆ ಡೆವಿಲ್‌ ದರ್ಬಾರ್‌; ಬಿಡುಗಡೆ ದಿನಾಂಕ ಘೋಷಣೆ ಮಾಡಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ದರ್ಶನ್‌
ಕನ್ನಡ ಸುದ್ದಿ  /  ಮನರಂಜನೆ  /  ವರ್ಷಾಂತ್ಯಕ್ಕೆ ಡೆವಿಲ್‌ ದರ್ಬಾರ್‌; ಬಿಡುಗಡೆ ದಿನಾಂಕ ಘೋಷಣೆ ಮಾಡಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ದರ್ಶನ್‌

ವರ್ಷಾಂತ್ಯಕ್ಕೆ ಡೆವಿಲ್‌ ದರ್ಬಾರ್‌; ಬಿಡುಗಡೆ ದಿನಾಂಕ ಘೋಷಣೆ ಮಾಡಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ದರ್ಶನ್‌

ಪ್ರಕಾಶ್‌ ವೀರ್‌ ನಿರ್ದೇಶನದಲ್ಲಿ, ನಟ ದರ್ಶನ್‌ ನಾಯಕನಾಗಿ ನಟಿಸುತ್ತಿರುವ ಡೆವಿಲ್‌ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಆಗಿದೆ. ಸೋಷಿಯಲ್‌ ಮೀಡಿಯಾದಲ್ಲಿ ಈ ವಿಚಾರವನ್ನು ನಟ ದರ್ಶನ್‌ ಹಂಚಿಕೊಂಡು, ಅಭಿಮಾನಿಗಳಿಗೆ ಸರ್ಪ್ರೈಸ್‌ ನೀಡಿದ್ದಾರೆ.

ವರ್ಷಾಂತ್ಯಕ್ಕೆ ಡೆವಿಲ್‌ ದರ್ಬಾರ್‌; ಬಿಡುಗಡೆ ದಿನಾಂಕ ಘೋಷಣೆ ಮಾಡಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ದರ್ಶನ್‌
ವರ್ಷಾಂತ್ಯಕ್ಕೆ ಡೆವಿಲ್‌ ದರ್ಬಾರ್‌; ಬಿಡುಗಡೆ ದಿನಾಂಕ ಘೋಷಣೆ ಮಾಡಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ದರ್ಶನ್‌

Devil Release date: ವರ್ಷಕ್ಕೆ ಒಂದು ಅಥವಾ ಎರಡು ಸಿನಿಮಾ ನೀಡಬೇಕು ಎಂದು ನಿರ್ಧರಿಸಿರುವ ಚಾಲೆಂಜಿಂಗ್‌ ಸ್ಟಾರ್ ದರ್ಶನ್‌ ಕಳೆದ ವರ್ಷ, ಕ್ರಾಂತಿ ಮತ್ತು ಕಾಟೇರ ಸಿನಿಮಾಗಳನ್ನು ಪ್ರೇಕ್ಷಕನ ಮಡಿಲಿಗೆ ಹಾಕಿದ್ದರು. ಕ್ರಾಂತಿ ಎವರೇಜ್‌ ಹಿಟ್‌ ಆದರೆ, ಕಾಟೇರ ಮಾತ್ರ ದೊಡ್ಡ ದಾಖಲೆಯನ್ನೇ ಬರೆದಿತ್ತು. ಕನ್ನಡದಲ್ಲಷ್ಟೇ ಬಿಡುಗಡೆಯಾಗಿದ್ದ ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಬರೋಬ್ಬರಿ 200 ಕೋಟಿ ರೂಪಾಯಿಯ ಭರ್ಜರಿ ಫಸಲನ್ನೇ ತೆಗೆದಿತ್ತು. ಇದೀಗ ಡೆವಿಲ್‌ ಸಿನಿಮಾದ ಮೇಲೆ ದರ್ಶನ್‌ ಫ್ಯಾನ್ಸ್‌ ದೃಷ್ಟಿ ನೆಟ್ಟಿದೆ. ಸದ್ದಿಲ್ಲದೆ, ಈ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಆಗಿದೆ.

ಶೂಟಿಂಗ್‌ನಿಂದ ವಿಶ್ರಾಂತಿ

ಮಿಲನಾ ಪ್ರಕಾಶ್‌ ನಿರ್ದೇಶನದಲ್ಲಿ ಡೆವಿಲ್‌ ಸಿನಿಮಾ ಮೂಡಿಬರುತ್ತಿದೆ. ರಗಡ್‌ ಲುಕ್‌ನಲ್ಲಿ ನಟ ದರ್ಶನ್‌ ಎದುರಾಗಿದ್ದಾರೆ. ಶೀರ್ಷಿಕೆ ಟೀಸರ್‌ ಮೂಲಕ ಕುತೂಹಲಕ್ಕೆ ಒಗ್ಗರಣೆ ಹಾಕಿದ್ದ ಈ ಸಿನಿಮಾ, ಸದ್ಯ ಶೂಟಿಂಗ್‌ ಹಂತದಲ್ಲಿದೆ. ಇತ್ತೀಚಿಗಷ್ಟೇ ಇದೇ ಸಿನಿಮಾದ ಶೂಟಿಂಗ್‌ ಸಮಯದಲ್ಲಿ ಕೈಗೆ ಒಳಪೆಟ್ಟು ಮಾಡಿಕೊಂಡಿದ್ದ ನಟ ದರ್ಶನ್‌, ಅದಕ್ಕಾಗಿ ವಿಶೇಷ ಚಿಕಿತ್ಸೆಯನ್ನೂ ಪಡೆದುಕೊಂಡಿದ್ದಾರೆ. ಆದರೆ ಶೂಟಿಂಗ್‌ಗೆ ಮಾತ್ರ ಇನ್ನೂ ಹಾಜರಾಗಿಲ್ಲ. ಸದ್ಯಕ್ಕೆ ಚಿತ್ರೀಕರಣದಲ್ಲಿಯೂ ಭಾಗವಹಿಸುವುದು ಡೌಟ್‌ ಎನ್ನಲಾಗುತ್ತಿದೆ.

ವರ್ಷಾಂತ್ಯಕ್ಕೆ ಡೆವಿಲ್‌ ದರ್ಬಾರ್‌ ಶುರು

ನಟ ದರ್ಶನ್‌ ಅವರ 47ನೇ ಬರ್ತ್‌ಡೇ ಪ್ರಯುಕ್ತ ಫೆ. 16ರಂದು ಡೆವಿಲ್‌ ಚಿತ್ರದ ಶೀರ್ಷಿಕೆ ಟೀಸರ್ ಬಿಡುಗಡೆ ಆಗಿತ್ತು. ಇದೀಗ ಇದೇ ಸಿನಿಮಾದ ಬಿಡುಗಡೆಯ ದಿನಾಂಕವನ್ನು ನಟ ದರ್ಶನ್‌ ಘೋಷಣೆ ಮಾಡಿದ್ದಾರೆ. ಈ ಮೂಲಕ ಈ ವರ್ಷಾಂತ್ಯಕ್ಕೆ ಮತ್ತೊಮ್ಮೆ ಚಿತ್ರಮಂದಿರಕ್ಕೆ ಬರಲು ದರ್ಶನ್‌ ರೆಡಿಯಾಗಿದ್ದಾರೆ. ಹಾಗಾದರೆ, ಬಿಡುಗಡೆಯ ದಿನ ಯಾವಾಗ? ಇದೇ ವರ್ಷದ ಕ್ರಿಸ್‌ಮಸ್‌ಗೆ ಡೆವಿಲ್‌ ಸಿನಿಮಾ ಬಿಡುಗಡೆ ಆಗಲಿದೆ ಎಂದು ದರ್ಶನ್‌ ಪೋಸ್ಟ್‌ ಹಾಕುತ್ತಿದ್ದಂತೆ, ಫ್ಯಾನ್ಸ್‌ ವಲಯದಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.

ಬಿಡುಗಡೆ ದಿನ ತಿಳಿಸಿದ ದರ್ಶನ್‌

"ನಮ್ಮ ನಲ್ಮೆಯ ಸೆಲೆಬ್ರಿಟಿಸ್ ಹಾಗೂ ಕನ್ನಡಾಭಿಮಾನಿಗಳಿಗೆ ವಿಶೇಷ ಪ್ರಕಟಣೆ - 'ಡೆವಿಲ್' ಚಿತ್ರವು ಇದೇ ಕ್ರಿಸ್ಮಸ್ 2024 ಬೆಳ್ಳಿತೆರೆಯ ಮೇಲೆ ಬರಲಿದೆ. ನಿಮ್ಮ ಪ್ರೀತಿ-ಹಾರೈಕೆ ಸದಾ ಕನ್ನಡ ಚಿತ್ರಗಳ ಮೇಲಿರಲಿ" ಎಂದು ಹೊಸ ಬಿಡುಗಡೆಯ ಪೋಸ್ಟರ್‌ ಶೇರ್‌ ಮಾಡಿಕೊಂಡಿದ್ದಾರೆ. ಶ್ರೀ ಜೈಮಾತಾ ಕಂಬೈನ್ಸ್‌ ಮತ್ತು ವೈಷ್ಣೋ ಸ್ಟುಡಿಯೋ ಬ್ಯಾನರ್‌ನಲ್ಲಿ ಜೆ ಜಯಮ್ಮ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಪ್ರಕಾಶ್‌ ವೀರ್‌ (ಮಿಲನಾ ಪ್ರಕಾಶ್)‌ ಈ ಸಿನಿಮಾಕ್ಕೆ ನಿರ್ದೇಶನ ಮಾಡುತ್ತಿದ್ದರೆ, ಅಜನೀಶ್‌ ಲೋಕನಾಥ್‌ ಅವರ ಸಂಗೀತ, ಸುಧಾಕರ್‌ ಎಸ್‌ ರಾಜ್‌ ಅವರ ಛಾಯಾಗ್ರಹಣ, ಮೋಹನ್‌ ಬಿ ಕೆರೆ ಅವರ ಕಲಾ ನಿರ್ದೇಶನ ಈ ಸಿನಿಮಾಕ್ಕಿದೆ.

ತಾರಕ್‌ ಬಳಿಕ ಮತ್ತೆ ಒಂದಾಯ್ತು ಜೋಡಿ

2017ರಲ್ಲಿ ತಾರಕ್‌ ಸಿನಿಮಾ ತೆರೆಗೆ ಬಂದಿತ್ತು. ಆ ಫ್ಯಾಮಿಲಿ ಡ್ರಾಮಾ ಶೈಲಿಯ ಸಿನಿಮಾವನ್ನು ಇದೇ ಪ್ರಕಾಶ್‌ ವೀರ್‌ ನಿರ್ದೇಶನ ಮಾಡಿದ್ದರು. ಇದೀಗ ಸುದೀರ್ಘ ಏಳು ವರ್ಷಗಳ ಬಳಿಕ ಈ ನಟ ಮತತು ನಿರ್ದೇಶಕ ಜೋಡಿ, ಡೆವಿಲ್‌ ಸಿನಿಮಾ ಮೂಲಕ ಮತ್ತೆ ಒಂದಾಗಿದೆ. ಈಗಾಗಲೇ ಒಂದಷ್ಟು ಭಾಗದ ಚಿತ್ರೀಕರಣವನ್ನೂ ಈ ಸಿನಿಮಾ ತಂಡ ಮುಗಿಸಿಕೊಂಡಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner