ಕನ್ನಡ ಸುದ್ದಿ  /  ಮನರಂಜನೆ  /  ಕೋಟಿ ಕೋಟಿ ಬಾಚಿದ್ದ ದರ್ಶನ್‌ ನಟನೆಯ ಸಿನಿಮಾ ಮರು ಬಿಡುಗಡೆ; ಈ ವಾರ ಮತ್ಯಾವ ಚಿತ್ರಗಳು ರಿಲೀಸ್‌ ಆಗ್ತಿವೆ?

ಕೋಟಿ ಕೋಟಿ ಬಾಚಿದ್ದ ದರ್ಶನ್‌ ನಟನೆಯ ಸಿನಿಮಾ ಮರು ಬಿಡುಗಡೆ; ಈ ವಾರ ಮತ್ಯಾವ ಚಿತ್ರಗಳು ರಿಲೀಸ್‌ ಆಗ್ತಿವೆ?

ದರ್ಶನ್‌ ನಾಯಕನಾಗಿ ನಟಿಸಿದ 2021ರಲ್ಲಿ ಬಿಡುಗಡೆಯಾಗಿ ದಾಖಲೆಯ ಕಲೆಕ್ಷನ್‌ ಮಾಡಿದ್ದ ಚಿತ್ರವೀಗ ಈ ಶುಕ್ರವಾರ (ಜೂನ್‌ 07) ಮರು ಬಿಡುಗಡೆ ಆಗುತ್ತಿದೆ. ಜತೆಗೆ ಇನ್ನೂ ಹಲವು ಹೊಸಬರ ಸಿನಿಮಾಗಳೂ ತೆರೆಗೆ ಬರುತ್ತಿವೆ.

ಕೋಟಿ ಕೋಟಿ ಬಾಚಿದ್ದ ದರ್ಶನ್‌ ನಟನೆಯ ಸಿನಿಮಾ ಮರು ಬಿಡುಗಡೆ; ಈ ವಾರ ಮತ್ಯಾವ ಚಿತ್ರಗಳು ರಿಲೀಸ್‌ ಆಗ್ತಿವೆ?
ಕೋಟಿ ಕೋಟಿ ಬಾಚಿದ್ದ ದರ್ಶನ್‌ ನಟನೆಯ ಸಿನಿಮಾ ಮರು ಬಿಡುಗಡೆ; ಈ ವಾರ ಮತ್ಯಾವ ಚಿತ್ರಗಳು ರಿಲೀಸ್‌ ಆಗ್ತಿವೆ?

Roberrt Movie Re Releasing: ಕನ್ನಡ ಚಿತ್ರೋದ್ಯಮದಲ್ಲಿ ಇತ್ತೀಚಿನ ಕೆಲ ತಿಂಗಳಿಂದ ಹೊಸ ಸಿನಿಮಾಗಳು ಸದ್ದು ಮಾಡುತ್ತಿರಲಿಲ್ಲ. ಸ್ಟಾರ್‌ ನಟರ ಸಿನಿಮಾಗಳಂತೂ ಇಲ್ಲವೇ ಇಲ್ಲ. ಚುನಾವಣೆ, ಐಪಿಎಲ್‌ ಹೀಗೆ ಒಂದಲ್ಲ ಒಂದು ಕಾರಣಕ್ಕೆ ಸಿನಿಮಾಗಳು ಮುಂದೂಡಲ್ಪಟ್ಟಿದ್ದವು. ಇದೀಗ ಚುನಾವಣೆ ಮುಗಿದು, ಫಲಿತಾಂಶವೂ ಹೊರಬಿದ್ದಿದೆ. ಐಪಿಎಲ್‌ ಕ್ರಿಕೆಟ್‌ ಮುಗಿದು, ‌ಟಿ20 ವಿಶ್ವಕಪ್ ಕಡೆ ವೀಕ್ಷಕರು ಚಿತ್ರನೆಟ್ಟಿದ್ದಾರೆ. ಜೂನ್‌ ತಿಂಗಳಲ್ಲಿ ಬಹುನಿರೀಕ್ಷಿತ ಸಿನಿಮಾಗಳ ಆಗಮನವಾಗಲಿದ್ದು, ಇನ್ನೊಂದೆಡೆ ಖಾಲಿ ಖಾಲಿ ಭಣಗುಡುತ್ತಿದ್ದ ಚಿತ್ರಮಂದಿರಗಳು ಈ ವಾರದಿಂದ ಕಳೆಗಟ್ಟಲಿವೆ.

ಟ್ರೆಂಡಿಂಗ್​ ಸುದ್ದಿ

ಕಳೆದ ಎರಡು ವಾರಗಳ ಹಿಂದಷ್ಟೇ ಸ್ಯಾಂಡಲ್‌ವುಡ್‌ನ ಬಹು ನಿರೀಕ್ಷಿತ ಸಿನಿಮಾಗಳ ಬಿಡುಗಡೆ ದಿನಾಂಕಗಳು ಘೋಷಣೆ ಆಗಿವೆ. ಮಾರ್ಟಿನ್‌, ಡೆವಿಲ್‌, ಕೆಡಿ ಸಿನಿಮಾಗಳು ತಮ್ಮ ಅಧಿಕೃತ ರಿಲೀಸ್‌ ದಿನಾಂಕವನ್ನು ಅನೌನ್ಸ್‌ ಮಾಡಿವೆ. ಈ ನಡುವೆ ಈ ತಿಂಗಳಲ್ಲಿ ಸಾಲು ಸಾಲು ಕನ್ನಡ ಸಿನಿಮಾಗಳು ತೆರೆಗೆ ಬರುತ್ತಿವೆ. ಡಾಲಿ ಧನಂಜಯ್‌ ನಟನೆಯ ಕೋಟಿ ಚಿತ್ರ ಈಗಾಗಲೇ ಹಲವು ಕಾರಣಗಳಿಂದ ಸದ್ದು ಮಾಡುತ್ತಿದೆ. ಅದೇ ರೀತಿ ವಸಿಷ್ಠ ಸಿಂಹ ನಟನೆಯ ಲವ್‌ಲೀ ಚಿತ್ರವೂ ಜೂನ್‌ 14ರಂದು ಬಿಡುಗಡೆ ಆಗಲಿವೆ.

ರಾಬರ್ಟ್‌ ಮರು ಬಿಡುಗಡೆ

ಈ ನಡುವೆ ಈ ವಾರ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟನೆಯ ರಾಬರ್ಟ್‌ ಸಿನಿಮಾ ಸಹ ಮರು ಬಿಡುಗಡೆ ಆಗುತ್ತಿದೆ. ತರುಣ್‌ ಸುಧೀರ್‌ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಸಿನಿಮಾ, 2021ರ ಮಾರ್ಚ್‌ 11ರಂದು ಬಿಡುಗಡೆ ಆಗಿತ್ತು. ಆವತ್ತು ಬಾಕ್ಸ್‌ ಆಫೀಸ್‌ನಲ್ಲಿ ಒಳ್ಳೆಯ ಕಮಾಯಿ ಮಾಡಿದ್ದ ಈ ಸಿನಿಮಾ ಕೋಟಿ ಕೋಟಿ ಹಣವನ್ನು ಬಾಚಿಕೊಂಡಿತ್ತು. ಉಮಾಪತಿ ಶ್ರೀನಿವಾಸ ಗೌಡ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದರು. ಇದೀಗ ಇದೇ ಸಿನಿಮಾ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಮರು ಬಿಡುಗಡೆ ಆಗುತ್ತಿದೆ.

ಕನ್ನಡದಲ್ಲೀಗ ರೀ ರಿಲೀಸ್‌ ಮೇನಿಯಾ..

ಬೆಂಗಳೂರಿನಲ್ಲಿ 70ಕ್ಕೂ ಅಧಿಕ ಶೋಗಳು ರಾಬರ್ಟ್‌ ಸಿನಿಮಾಕ್ಕೆ ಸಿಕ್ಕಿವೆ. ಈ ಮೂಲಕ ಚಿತ್ರಮಂದಿರಕ್ಕೆ ಪ್ರೇಕ್ಷಕನನ್ನು ಮತ್ತೆ ಕರೆತರುವ ಪ್ರಯತ್ನಗಳು ನಡೆಯುತ್ತಿವೆ. ಇತ್ತೀಚಿನ ಕೆಲ ದಿನಗಳಿಂದ ಕನ್ನಡದ ಕೆಲ ಮಾಸ್ಟರ್‌ಪೀಸ್‌ ಸಿನಿಮಾಗಳು ಮರು ಬಿಡುಗಡೆಯಾಗಿ ಮತ್ತೆ ಪ್ರೇಕ್ಷಕನ ಮನ ಗೆದ್ದ ಉದಾಹರಣೆ ಇವೆ. ಇತ್ತೀಚೆಗಷ್ಟೇ ಪುನೀತ್‌ ರಾಜ್‌ಕುಮಾರ್‌ ಅಭಿನಯದ ಪವರ್‌, ಅಂಜನಿಪುತ್ರ ಸಿನಿಮಾಗಳು ಮರು ಬಿಡುಗಡೆ ಆಗಿದ್ದವು. ಉಪೇಂದ್ರ ಅವರ A ಚಿತ್ರ ಸಹ ರಿಲೀಸ್‌ ಆಗಿ ಸದ್ದು ಮಾಡಿತ್ತು. ವಿಷ್ಣುವರ್ಧನ್‌ ಅವರ ಕೃಷ್ಣ ನೀ ಬೇಗನೇ ಬಾರೋ ಚಿತ್ರವೂ ಹೊಸ ತಂತ್ರಜ್ಞಾನದ ಜತೆ ಆಗಮಿಸಿತ್ತು. ಈಗ ರಾಬರ್ಟ್‌ ಸಿನಿಮಾ ಸರದಿ.

ಜೂನ್‌ 7ರಂದು ಯಾವೆಲ್ಲ ಸಿನಿಮಾಗಳು ರಿಲೀಸ್‌?

ಬೆಂಗಳೂರಿನ ಹಲವು ಪ್ರಮುಖ ಚಿತ್ರಮಂದಿರಗಳಲ್ಲಿ ಜೂನ್‌ 7ರಂದು ರಾಬರ್ಟ್‌ ಸಿನಿಮಾ ಮರು ಬಿಡುಗಡೆ ಆಗುತ್ತಿದೆ. ಇದರ ಜತೆಗೆ ಒಂದಷ್ಟು ಹೊಸ ಸಿನಿಮಾಗಳೂ ರಿಲೀಸ್‌ ಆಗಲಿವೆ. ಅನರ್ಥ, ಕಂಡೋರ್‌ ಮನೆ ಕಥೆ, ಯಂಗ್‌ ಮ್ಯಾನ್‌ ಸೇರಿ ಕ್ರಿಕೆಟ್‌ ಹಿನ್ನೆಲೆಯ ಸಹಾರಾ ಚಿತ್ರಗಳೂ ಬಿಡುಗಡೆ ಆಗಲಿವೆ. ತೆಲುಗಿನಲ್ಲಿ ಭಾರತೀಯುಡು, ಲವ್‌ ಮೌಲಿ, ಮನ್ಮೇಯ್‌, ಸತ್ಯಭಾಮ, ವೆಪನ್‌ ಸಿನಿಮಾಗಳು ಬಿಡುಗಡೆ ಆಗಲಿವೆ. ತಮಿಳಿನಲ್ಲಿ ಹರಾ, ಹಿಂದಿಯಲ್ಲಿ ಮಿಸ್ಟರ್‌ ಅಂಡ ಮಿಸೆಸ್‌ ಮಹಿ ಸಿನಿಮಾಗಳು ಬಿಡುಗಡೆ ಆಗುತ್ತಿವೆ.

ಇದೇ ವರ್ಷ ಡೆವಿಲ್‌

ಮಿಲನಾ ಪ್ರಕಾಶ್‌ ನಿರ್ದೇಶನದಲ್ಲಿ ಮೂಡಿಬರುತ್ತಿರುವ ದರ್ಶನ್‌ ನಟನೆಯ ಡೆವಿಲ್‌ ಚಿತ್ರವೂ ಇದೇ ವರ್ಷದ ಕ್ರಿಸ್‌ಮಸ್‌ಗೆ ರಿಲೀಸ್‌ ಆಗಲಿದೆ. ಈಗಾಗಲೇ ಒಂದಷ್ಟು ಭಾಗದ ಶೂಟಿಂಗ್‌ ಮುಗಿಸಿಕೊಂಡಿರುವ ಈ ಸಿನಿಮಾ, ಶೀರ್ಷಿಕೆ ಟೀಸರ್‌ ಮೂಲಕವೇ ಪ್ರೇಕ್ಷಕರ ಗಮನ ಸೆಳೆದಿತ್ತು.

ಟಿ20 ವರ್ಲ್ಡ್‌ಕಪ್ 2024