ನನ್ನ ನಿವೇದಿತಾ ಗೌಡ ದಾಂಪತ್ಯ ಹಳಸಲು ಮೂರನೇ ವ್ಯಕ್ತಿಯೇ ಕಾರಣ! ಚಂದನ್‌ ಶೆಟ್ಟಿ ಮಾತಿನ ಹಿಂದಿದೆ ನುಂಗಲಾರದ ನೋವು
ಕನ್ನಡ ಸುದ್ದಿ  /  ಮನರಂಜನೆ  /  ನನ್ನ ನಿವೇದಿತಾ ಗೌಡ ದಾಂಪತ್ಯ ಹಳಸಲು ಮೂರನೇ ವ್ಯಕ್ತಿಯೇ ಕಾರಣ! ಚಂದನ್‌ ಶೆಟ್ಟಿ ಮಾತಿನ ಹಿಂದಿದೆ ನುಂಗಲಾರದ ನೋವು

ನನ್ನ ನಿವೇದಿತಾ ಗೌಡ ದಾಂಪತ್ಯ ಹಳಸಲು ಮೂರನೇ ವ್ಯಕ್ತಿಯೇ ಕಾರಣ! ಚಂದನ್‌ ಶೆಟ್ಟಿ ಮಾತಿನ ಹಿಂದಿದೆ ನುಂಗಲಾರದ ನೋವು

ನನ್ನ ಮತ್ತು ನಿವೇದಿತಾ ನಡುವಿನ ಡಿವೋರ್ಸ್‌ ಕಳೆದ ತಿಂಗಳು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಬಗೆಬಗೆ ಗಾಸಿಪ್‌ಗಳೂ ಹರಿದಾಡಿದ್ದವು. ಇದೀಗ ವಿಚ್ಛೇದನಕ್ಕೆ ಮೂರನೇ ವ್ಯಕ್ತಿಯೇ ಕಾರಣ ಎಂದಿದ್ದಾರೆ ಚಂದನ್‌ ಶೆಟ್ಟಿ. ಹಾಗಾದರೆ ಯಾರು ಆ ಮೂರನೇ ವ್ಯಕ್ತಿ?

ನನ್ನ ನಿವೇದಿತಾ ದಾಂಪತ್ಯ ಹಳಸಲು ಮೂರನೇ ವ್ಯಕ್ತಿಯೇ ಕಾರಣ! ಚಂದನ್‌ ಶೆಟ್ಟಿ ಮಾತಿನ ಹಿಂದಿದೆ ನುಂಗಲಾರದ ನೋವು
ನನ್ನ ನಿವೇದಿತಾ ದಾಂಪತ್ಯ ಹಳಸಲು ಮೂರನೇ ವ್ಯಕ್ತಿಯೇ ಕಾರಣ! ಚಂದನ್‌ ಶೆಟ್ಟಿ ಮಾತಿನ ಹಿಂದಿದೆ ನುಂಗಲಾರದ ನೋವು

Chandan Shetty and Niveditha Gowda's divorce: ಸಂಗೀತ ನಿರ್ದೇಶಕ, ರ್ಯಾಪರ್‌ ಚಂದನ್‌ ಶೆಟ್ಟಿ ಮತ್ತು ನಿವೇದಿತಾ ಗೌಡ ಜೋಡಿ ಸದ್ದಿಲ್ಲದೆ, ಡಿವೋರ್ಸ್‌ ಪಡೆದುಕೊಂಡು ದೂರವಾಗಿದ್ದಾರೆ. ವೈಯಕ್ತಿಕ ಕಾರಣಗಳನ್ನು ನೀಡಿ ನಾಲ್ಕು ವರ್ಷದ ದಾಂಪತ್ಯವನ್ನು ಈ ಜೋಡಿ ಕಡಿದುಕೊಂಡಿದೆ. ಸೋಷಿಯಲ್‌ ಮೀಡಿಯಾದಲ್ಲಿ ಹೀಗೆ ಡಿವೋರ್ಸ್‌ ಪಡೆದ ವಿಚಾರ ಹೊರಬೀಳುತ್ತಿದ್ದಂತೆ, ತರಹೇವಾರಿ ಕಾಮೆಂಟ್‌ಗಳು ತೂರಿಬಂದವು. ಅದರಲ್ಲೂ ನಿವೇದಿತಾ ಗೌಡ ಅವರ ವಿರುದ್ಧವೂ ಸಾಕಷ್ಟು ಮಂದಿ ಕಾಮೆಂಟ್‌ ಮಾಡಿದರು. ಈ ನಡುವೆ ವಿಚ್ಛೇದನದ ಹಿಂದಿನ ಅಸಲಿ ವಿಚಾರವನ್ನು ಚಂದನ್‌ ಶೆಟ್ಟಿ ಬಹಿರಂಗವಾಗಿ ಹೇಳಿಕೊಂಡಿದ್ದರು. ನಮ್ಮಿಬ್ಬರ ನಡುವೆ ಹೊಂದಾಣಿಕೆ ಕೊರತೆ ಇದೆ. ಆ ಕಾರಣಕ್ಕೆ ಡಿವೋರ್ಸ್‌ ಪಡೆದಿದ್ದೇವೆ ಎಂದಿದ್ದರು. ಇದೀಗ ಡಿವೋರ್ಸ್‌ಗೆ ಮೂರನೇ ವ್ಯಕ್ತಿ ಕಾರಣ ಎನ್ನುತ್ತಿದ್ದಾರೆ!

ಚಂದನ್‌ ಶೆಟ್ಟಿ ಮತ್ತು ನಿವೇದಿತಾ ಗೌಡ 2020ರ ಫೆಬ್ರವರಿಯಲ್ಲಿ ಅದ್ಧೂರಿ ಮದುವೆಯಾಗಿದ್ದರು. ಬಿಗ್‌ಬಾಸ್‌ನಲ್ಲಿನ ಸ್ನೇಹ, ಪ್ರೀತಿಯಾಗಿ ಬದಲಾಗಿ ಮದುವೆಯಲ್ಲಿ ಒಂದಾಗಿತ್ತು. ಅದಾದ ಮೇಲೆ ಎಲ್ಲವೂ ಚೆನ್ನಾಗಿಯೇ ಹೋಗುತ್ತಿತ್ತು. ಆದರೆ, ಒಂದಷ್ಟು ಕಾರಣಗಳಿಂದ ಇಬ್ಬರ ನಡುವೆ ಮುನಿಸು, ಹೊಂದಾಣಿಕೆ ಸಮಸ್ಯೆಗಳು ಶುರುವಾದವು. ಇಬ್ಬರೂ ಒಟ್ಟಿಗೆ ಇರಲು ಆಗದ ಸ್ಥಿತಿಗೆ ಬಂದರು. ಎರಡೂ ಕುಟುಂಬಗಳ ಸಮ್ಮುಖದಲ್ಲಿ ಮಾತುಕತೆಯೂ ನಡೆಯಿತು. ಕೊನೆಗೆ ನಾವಿಬ್ಬರೂ ಬೇರೆ ಬೇರೆ ಆದರೆ, ಬದುಕಲು ಸಾಧ್ಯವೇ ಎಂದೂ ಪರಿಗಣಿಸಿ, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ದೂರವಾಗಿದ್ದರು.

ಹೊಂದಾಣಿಕೆ ಸಮಸ್ಯೆ

ಆದರೆ, ಹೀಗೆ ಡಿವೋರ್ಸ್‌ ಬಳಿಕ ಸೋಷಿಯಲ್‌ ಮೀಡಿಯಾದಲ್ಲಿ ವ್ಯಾಪಕ ಟೀಕೆಗಳು ಕೇಳಿಬಂದವು. ನಿವೇದಿತಾ ಗೌಡ ಅವರು ಪೋಸ್ಟ್‌ ಮಾಡುತ್ತಿದ್ದ ವಿಡಿಯೋಗಳು, ಅದಕ್ಕೆ ಬರುತ್ತಿದ್ದ ಕೆಟ್ಟ ಕಾಮೆಂಟ್‌ಗಳೇ ಚಂದನ್‌ ಶೆಟ್ಟಿ ಮನಸು ಕದಡಲು ಕಾರಣ ಎಂದು ಸಾಕಷ್ಟು ಮಂದಿ ಮಾತನಾಡಿಕೊಂಡರು. ಈ ನಡುವೆ ಚಂದನ್‌ ಶೆಟ್ಟಿ ಮನೆಯವರ ಮಗುವಿನ ಬೇಡಿಕೆ ಇಟ್ಟಿದ್ದರು. ಅದಕ್ಕೆ ನಿವೇದಿತಾ ಕಡೆಯಿಂದ ಸುತಾರಂ ಒಪ್ಪಿಗೆ ಇರಲಿಲ್ಲ ಎಂದೂ ಕೆಲವು ಗಾಸಿಪ್‌ಗಳು ಹರಿದಾಡಿದ್ದವು. ಇದೀಗ ಇದೇ ವಿಚ್ಛೇದನಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ ಚಂದನ್‌ ಶೆಟ್ಟಿ.

ಮೂರನೇ ವ್ಯಕ್ತಿನೇ ಕಾರಣ...

ನಿವೇದಿತಾ ನನ್ನ ನಡುವಿನ ಡಿವೋರ್ಸ್‌ಗೂ ಮೂರನೇ ವ್ಯಕ್ತಿ ಕಾರಣ ಎಂದು ಪರೋಕ್ಷವಾಗಿ ಹೇಳಿಕೊಂಡಿದ್ದಾರೆ ಚಂದನ್‌ ಶೆಟ್ಟಿ. ಆದರೆ, ಆ ಮೂರನೇ ವ್ಯಕ್ತಿ ಯಾರು ಎಂದು ಮಾತ್ರ ಹೇಳಿಲ್ಲ. "ಅದೇ ಕಾರಣಾನೇ.. ಫ್ಯಾಮಿಲಿ ಒಡೆದು ಹೋಗಲು ಮೂರನೇ ವ್ಯಕ್ತಿನೇ ಕಾರಣ ಆಗ್ತಾರೆ. ಆ ವ್ಯಕ್ತಿ ಯಾರು ಏನು ಅಂತ ನಮಗೂ ಕೆಲವೊಮ್ಮೆ ಗೊತ್ತಿರಲ್ಲ. ಮೂರನೇ ವ್ಯಕ್ತಿ ಕಾರಣ ಆಗ್ತಾರೆ. ಆ ಮೂರನೇ ವ್ಯಕ್ತಿ ನಮ್ಮ ಒಳಗೇ ಇರಬಹುದು. ಏಕೆಂದರೆ ಒಬ್ಬೊಬ್ಬರಿಗೆ ಎರಡೆರಡು ಶೇಡ್‌ಗಳಿರಬಹುದು. ಒಬ್ಬರು ಒಂದು ವಿಚಾರವನ್ನು ಮುಂದೆ ಒಂದು ರೀತಿ ಮಾತನಾಡುತ್ತಾರೆ. ಹಿಂದೆ ಇನ್ನೊಂದು ಮಾತನಾಡುತ್ತಾರೆ. ಆ ವ್ಯಕ್ತಿಗೆ ಎರಡೆರಡು ವ್ಯಕ್ತಿತ್ವಗಳು ಇರುತ್ತವೆ. ಅದು ಸಹಜ" ಎಂದಿದ್ದಾರೆ ಚಂದನ್‌ ಶೆಟ್ಟಿ. ಆದರೆ, ತಮ್ಮ ಜೀವನದಲ್ಲಿ ಬಂದ ಆ ಮೂರನೇ ವ್ಯಕ್ತಿ ಯಾರು ಎಂಬುದನ್ನು ಬಾಯಿ ಬಿಡಲಿಲ್ಲ ಚಂದನ್‌.

ಎರಡನೇ ಮದುವೆ ಬಗ್ಗೆ ಏನಂದ್ರು ಚಂದನ್‌?

ಇನ್ನು ಎರಡನೇ ಮದುವೆ ಬಗ್ಗೆ ಪ್ಲಾನ್‌ ಏನು ಎಂದು ಕೇಳಿದರೆ, "ಈಗ ತಾನೇ ನಾನು ಅದರಿಂದ ಹೊರಗೆ ಬಂದಿದ್ದೇನೆ. ಎರಡನೇ ಮದುವೆ ಎಂಬುದು ಸದ್ಯಕ್ಕೆ ಬೇಡದ ವಿಚಾರ. ಆ ಥರದ ಆಲೋಚನೆಗಳಿಲ್ಲ. ಆ ಝೋನ್‌ನಿಂದ ಆಚೆ ಬಂದಿದ್ದೇನೆ. ಅದರಿಂದ ಇನ್ನಷ್ಟು ಮನಸ್ಸು ತಿಳಿ ಆಗಬೇಕಿದೆ. ಅದಕ್ಕೆ ಸಾಕಷ್ಟು ಸಮಯ ಬೇಕು. ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಅನ್ನೋ ಗೊಂದಲದಲ್ಲಿದ್ದೇನೆ. ಅದರ ಬಗ್ಗೆ ಗಮನ ಹರಿಸುವುದಿಲ್ಲ. ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಸಿನಿಮಾ ಮಾಡಿದ್ದೇನೆ. 19ಕ್ಕೆ ರಿಲೀಸ್‌ ಆಗಲಿದೆ. ನನ್ನ ಭವಿಷ್ಯ ಅಂದು ಗೊತ್ತಾಗಲಿದೆ. ಅದಾದ ಮೇಲೆ ಸಿನಿಮಾ ಮಾಡ್ಲಾ, ಸಂಗೀತದ ಕಡೆಗೆ ಹೋಗಲಾ ಎಂಬುದನ್ನು ವಿಚಾರಿಸುತ್ತೇನೆ" ಎಂದಿದ್ದಾರೆ.

Whats_app_banner