ನಟ ದರ್ಶನ್ ಆಚೆ ಬಂದೇ ಬರ್ತಾನೆ, ಇಷ್ಟಾದ ಮೇಲೂ ಆತ ಬದಲಾಗದಿದ್ರೆ ಹಂದಿಗಿಂತ ಕಡೆಯಾಗ್ತಾನೆ: ಹಿರಿಯ ಪತ್ರಕರ್ತ
ಕನ್ನಡ ಸುದ್ದಿ  /  ಮನರಂಜನೆ  /  ನಟ ದರ್ಶನ್ ಆಚೆ ಬಂದೇ ಬರ್ತಾನೆ, ಇಷ್ಟಾದ ಮೇಲೂ ಆತ ಬದಲಾಗದಿದ್ರೆ ಹಂದಿಗಿಂತ ಕಡೆಯಾಗ್ತಾನೆ: ಹಿರಿಯ ಪತ್ರಕರ್ತ

ನಟ ದರ್ಶನ್ ಆಚೆ ಬಂದೇ ಬರ್ತಾನೆ, ಇಷ್ಟಾದ ಮೇಲೂ ಆತ ಬದಲಾಗದಿದ್ರೆ ಹಂದಿಗಿಂತ ಕಡೆಯಾಗ್ತಾನೆ: ಹಿರಿಯ ಪತ್ರಕರ್ತ

ದರ್ಶನ್‌ ಮತ್ತವರ ಗ್ಯಾಂಗ್‌ನ ಕೃತ್ಯಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಸೆಲೆಬ್ರಿಟಿ ವಲಯದಲ್ಲೂ ಸಾಕಷ್ಟು ಮಂದಿ ಮಾತನಾಡಿದ್ದಾರೆ. ಹೀಗಿರುವಾಗಲೇ ಈ ಮೊದಲು ದರ್ಶನ್‌ ಬಗ್ಗೆ ಕೊಂಚ ಕಟುವಾಗಿಯೇ ಮಾತನಾಡಿದ್ದ ಹಿರಿಯ ಪತ್ರಕರ್ತ ಅಗ್ನಿ ಶ್ರೀಧರ್‌, ಇದೀಗ ಈ ಘಟನೆ ಬಗ್ಗೆಯೂ ಕೊಂಚ ಗರಂ ಆಗಿದ್ದಾರೆ.

ನಟ ದರ್ಶನ್ ಆಚೆ ಬಂದೇ ಬರ್ತಾನೆ, ಇಷ್ಟಾದ ಮೇಲೂ ಆತ ಬದಲಾಗದಿದ್ರೆ ಹಂದಿಗಿಂತ ಕಡೆಯಾಗ್ತಾನೆ: ಹಿರಿಯ ಪತ್ರಕರ್ತ
ನಟ ದರ್ಶನ್ ಆಚೆ ಬಂದೇ ಬರ್ತಾನೆ, ಇಷ್ಟಾದ ಮೇಲೂ ಆತ ಬದಲಾಗದಿದ್ರೆ ಹಂದಿಗಿಂತ ಕಡೆಯಾಗ್ತಾನೆ: ಹಿರಿಯ ಪತ್ರಕರ್ತ

Agni shridhar angry on Actor Darshan: ಆಪ್ತೆ ಪವಿತ್ರಾ ಗೌಡ ಅವರಿಗೆ ಅಸಭ್ಯ ಸಂದೇಶ ಕಳುಹಿಸಿದ್ದಾನೆ ಎಂಬ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಮಾಡಿದ ಆರೋಪದಲ್ಲಿ ನಟ ದರ್ಶನ್‌ ಅಂಡ್ ಗ್ಯಾಂಗ್‌ ಅಂದರ್‌ ಆಗಿದ್ದಾರೆ. ನಟ ದರ್ಶನ್‌ ಸೇರಿ 13ಕ್ಕೂ ಅಧಿಕ ಮಂದಿ ಕೊಲೆ ಕೇಸ್‌ನಲ್ಲಿ ಕಸ್ಟಡಿ ಸೇರಿದ್ದಾರೆ. ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಯಲ್ಲಿ ಕಳೆದ ಮೂರು ದಿನಗಳಿಂದ ವಿಚಾರಣೆ ಎದುರಿಸುತ್ತಿದ್ದಾರೆ. ಈ ನಡುವೆಯೇ ಕೊಲೆಯ ವಿಕೃತಿ ಎಷ್ಟರ ಮಟ್ಟಿಗೆ ಇತ್ತೆಂಬುದರ ಬಗ್ಗೆ ಒಂದಷ್ಟು ಶಾಕಿಂಗ್‌ ವಿಚಾರಗಳು ಹೊರಬಿದ್ದಿವೆ.

ಇದೀಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಪತ್ರಕರ್ತ ಅಗ್ನಿ ಶ್ರೀಧರ್‌ ಮಾತನಾಡಿದ್ದಾರೆ. ಖಂಡಿತ ದರ್ಶನ್‌ ಆಚೆ ಬಂದೇ ಬರ್ತಾನೆ. ಬಂದ ಮೇಲೂ ಬದಲಾಗದಿದ್ದರೆ, ಹಂದಿಗಿಂತ ಕಡೆಯಾಗ್ತಾನೆ ಎಂದಿದ್ದಾರೆ. ಅಷ್ಟೇ ಅಲ್ಲ ನಟ ದರ್ಶನ್‌ಗೆ ಜವಾಬ್ದಾರಿ ಇಲ್ಲ. ಜವಾಬ್ದಾರಿ ಇದ್ದಿದ್ದೇ ಆಗಿದ್ದರೆ, ಈ ರೀತಿ ಘಟನೆಯೇ ಆಗುತ್ತಿರಲಿಲ್ಲ. ಕೆಟ್ಟ ಸಂದೇಶ ಕಳಿಸಿದ ವ್ಯಕ್ತಿಗೆ ಫೋನ್‌ ಮಾಡಿ, ಚೂರು ಏರು ಧ್ವನಿಯಲ್ಲಿ ಮಾತನಾಡಿದ್ದರೆ ಎಲ್ಲವೂ ಬಗೆ ಹರಿಯುತ್ತಿತ್ತು. ಆದರೆ, ದರ್ಶನ್‌ ಹಾಗೆ ಮಾಡಲಿಲ್ಲ ಎಂದೂ ಹೇಳಿದ್ದಾರೆ.

ದರ್ಶನ್‌ಗೆ ಗಿಳಿಗೆ ಹೇಳಿದಂತೆ ಹೇಳಿದೆ.. ಆದ್ರೂ

"ಈ ಮನುಷ್ಯ, ಅಂತಸ್ತು ಗಳಿಸ್ತಾ ಹೋದ, ಜನಪ್ರಿಯತೆ ಗಳಿಸ್ತಾ ಹೋದ, ಅದರ ಜತೆಯಲ್ಲಿ ಜವಾಬ್ದಾರಿ ಬೆಳೆಸಿಕೊಳ್ಳಲಿಲ್ಲ. ದರ್ಶನ್‌ ಅವರನ್ನು ನೋಡಿದರೆ ಬೇಜವಾಬ್ದಾರಿ ಕಾಣಿಸುತ್ತದೆ. ವರ್ತನೆಯಲ್ಲಿ ಡ್ರಿಂಕ್ಸ್‌ಗೆ ದಾಸ ಆದ. ಒಂದು ಸಲ ಜನಪ್ರಿಯತೆ ಸಿಕ್ಕರೆ ಲಕ್ಷಾಂತರ ಜನ ನೋಡುತ್ತಿರುತ್ತಾರೆ. ನಾನು ಗಿಳಿಗೆ ಹೇಳಿದಂತೆ ಹೇಳಿದೆ. ಕಷ್ಟಪಟ್ಟಿದ್ದೀಯಾ, ಲೈಟ್‌ ಬಾಯ್‌ ಆಗಿ ಸಿನಿಮಾಕ್ಕೆ ಬಂದಿದ್ದೀಯಾ, ಇಷ್ಟು ಎಡವಲ್ಲ. ಆ ಬೇಜವಾಬ್ದಾರಿ ತನವೇ ಅವರನ್ನು ಪಾತಾಳಕ್ಕೆ ತಳ್ಳಿದೆ.

ಉಗುರಿಂದ ಹೋಗುವುದಕ್ಕೆ ಕೊಡಲಿ ಎತ್ತಿಕೊಂಡ್ರು..

ದರ್ಶನ್‌ ಜವಾಬ್ದಾರಿ ಬೆಳೆಸಿಕೊಳ್ಳಲಿಲ್ಲ. ದರ್ಶನ್‌ನದ್ದು ಈಗಿನಿಂದಲ್ಲ, ಈ ಹಿಂದೆಯೂ ಸಾಕಷ್ಟು ನೋಡಿದ್ದೇವೆ. ದರ್ಶನ್‌ ಬರೀ ನಟ ಅಲ್ಲ. ಅವನೊಬ್ಬ ಸಾಂಸ್ಕೃತಿಕ ರಾಯಭಾರಿ ಎಂಬುದು ಅವನಿಗೇ ತಿಳಿದಂತಿಲ್ಲ. ಇದೀಗ ಮಾಡಿದ್ದೇನು? ರಾಜ್‌ಕುಮಾರ್‌ ಹೇಗಿದ್ದರು? ಅವರನ್ನಾದರೂ ನೋಡಿ ಕಲಿಯಬೇಕಿತ್ತು. ಉಗುರಲ್ಲಿ ಹೋಗೋದನ್ನು ಕೊಡಲಿ ಕೈಗೆತ್ತಿಕೊಂಡಿದ್ದಾರೆ. ರಾಜ್ಯಾದತ ಅವನ ಎಷ್ಟೋ ಜನ ಭಕ್ತರಿದ್ದಾರೆ. ಆ ಚಿತ್ರದುರ್ಗದ ಸಂಘದ ಅಧ್ಯಕ್ಷ ಅವನಿಂದಲೇ ರೇಣುಕಾಸ್ವಾಮಿ ಕಪಾಳಕ್ಕೆ ಒಂದು ಹೊಡೆಸಿ, ದರ್ಶನ್‌ ಕಡೆಯಿಂದ ಮಾತನಾಡಿಸಿ, ಆ ರೀತಿ ಮಾಡಬೇಡ ಅಂತ ಹೇಳಿದ್ದರೆ ಆಗ್ತಿತ್ತು. ನಿಮ್ಮ ಮನೆಯಲ್ಲೂ ಹೆಣ್ಮಕ್ಕಳಿದ್ದಾರೆ ಅಂದಿದ್ರೆ ಕೊಲೆನೇ ಆಗ್ತಿರಲಿಲ್ಲ. ಇಷ್ಟು ದೊಡ್ಡ ಕಥೆ ಆಗ್ತಾನೆ ಇರುತ್ತಿರಲಿಲ್ಲ.

ದರ್ಶನ್‌ ನೀನು ನಿನಗೆ ಗೊತ್ತಿಲ್ಲದಂತೆ ಆಹಾರವಾದೆ

"ಚಿತ್ರದುರ್ಗದಲ್ಲಿಯೇ ಇದ್ದ ರೇಣುಕಾಸ್ವಾಮಿಗೆ ಒಂದು ಫೋನ್‌ ಮಾಡಿ, ಯಾಕೆ ಹೀಗೆ ಮಾಡಿದೆ ರಾಸ್ಕಲ್‌ ಅಂದಿದ್ರೆ, ಅವನು ಅಣ್ಣಾ ತಪ್ಪಾಯ್ತು ಅಂತ ಹೇಳ್ತಿದ್ದ. ನಮಗಷ್ಟೇ ಅಲ್ಲ ಯಾವ ಹೆಣ್ಮಕ್ಕಳಿಗೂ ಹೀಗೆ ಮಾಡಬೇಡ ಅಂದಿದ್ರೆ ದರ್ಶನ್‌ ಇನ್ನೂ ದೊಡ್ಡವರಾಗುತ್ತಿದ್ದರು. ಆದರೆ, ಅದನ್ನ ಬಿಟ್ಟು ಮಾಡಿದ್ದೇನು? ದರ್ಶನ್‌ ನೀನು ನಿನಗೆ ಗೊತ್ತಿಲ್ಲದಂತೆ ಆಹಾರವಾದೆ. ಯಾರಿಗೆ ಆಹಾರ ಆದೆ, ಯಾಕೆ ಆಹಾರ ಆದೆ ಎಂಬುದು ನಿನಗೆ ಖಂಡಿತ ಗೊತ್ತಿಲ್ಲ. ಗೊತ್ತಿದ್ದಿದ್ದರೆ ಖಂಡಿತ ಈ ತಪ್ಪು ಮಾಡುತ್ತಿರಲಿಲ್ಲ" ಎಂದಿದ್ದಾರೆ.

ಪರಿವರ್ತನೆ ಆಗದಿದ್ದರೆ ಹಂದಿಗಿಂತಲೂ ಕಡೆ..

"ದರ್ಶನ್‌ ಆಚೆ ಬಂದೇ ಬರ್ತಾನೆ. ಬಂದ ಮೇಲೂ ಅವನು ಪರಿವರ್ತನೆ ಆಗದಿದ್ದರೆ ಹಂದಿಗಿಂತಲೂ ಕಡೆಯಾಗ್ತಾನೆ. ಅಂಧಾಭಿಮಾನಿಗಳು ಏನೇ ಹೇಳಿದ್ರೂ ನಾನು ತಲೆ ಕೆಡಿಸಿಕೊಳ್ಳಲ್ಲ. ಹಂದಿಯಾಗಿದ್ರೆ ಎಷ್ಟೋ ಬೆಲೆ ಇರುತ್ತೆ, ಅವನಿಗೆ ಬೆಲೆ ಇರಲ್ಲ" ಎಂದೂ ಅಗ್ನಿ ಶ್ರೀಧರ್‌ ಪವರ್‌ ಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ನಟ ದರ್ಶನ್ ಆಚೆ ಬಂದೇ ಬರ್ತಾನೆ, ಇಷ್ಟಾದ ಮೇಲೂ ಆತ ಬದಲಾಗದಿದ್ರೆ ಹಂದಿಗಿಂತ ಕಡೆಯಾಗ್ತಾನೆ: ಹಿರಿಯ ಪತ್ರಕರ್ತ ಅಗ್ನಿ ಶ್ರೀಧರ್‌
ನಟ ದರ್ಶನ್ ಆಚೆ ಬಂದೇ ಬರ್ತಾನೆ, ಇಷ್ಟಾದ ಮೇಲೂ ಆತ ಬದಲಾಗದಿದ್ರೆ ಹಂದಿಗಿಂತ ಕಡೆಯಾಗ್ತಾನೆ: ಹಿರಿಯ ಪತ್ರಕರ್ತ ಅಗ್ನಿ ಶ್ರೀಧರ್‌
Whats_app_banner