ಕನ್ನಡ ಸುದ್ದಿ  /  ಮನರಂಜನೆ  /  ರೇಣುಕಾಸ್ವಾಮಿಯಿಂದ ಕನ್ನಡದ ಮತ್ತೋರ್ವ ನಟಿಗೆ ಅಶ್ಲೀಲ ಸಂದೇಶ ರವಾನೆ; ಪುರಾವೆ ಸಮೇತ ಬಂದ ಬಿಗ್‌ ಬಾಸ್‌ ಖ್ಯಾತಿಯ ಚಿತ್ರಾಲ್‌ ರಂಗಸ್ವಾಮಿ

ರೇಣುಕಾಸ್ವಾಮಿಯಿಂದ ಕನ್ನಡದ ಮತ್ತೋರ್ವ ನಟಿಗೆ ಅಶ್ಲೀಲ ಸಂದೇಶ ರವಾನೆ; ಪುರಾವೆ ಸಮೇತ ಬಂದ ಬಿಗ್‌ ಬಾಸ್‌ ಖ್ಯಾತಿಯ ಚಿತ್ರಾಲ್‌ ರಂಗಸ್ವಾಮಿ

ನಟಿ ಮತ್ತು ಲೇಡಿ ಬಾಡಿ ಬಿಲ್ಡರ್‌ ಆಗಿ ಗುರುತಿಸಿಕೊಂಡ ಚಿತ್ರಾಲ್‌ ರಂಗಸ್ವಾಮಿ ಇದೀಗ ಹತ್ಯೆಯಾದ ರೇಣುಕಾಸ್ವಾಮಿ ವಿರುದ್ಧ ಆರೋಪ ಮಾಡಿದ್ದಾರೆ. ಅಶ್ಲೀಲ ಸಂದೇಶಗಳನ್ನು ನನಗೂ ಕಳಿಸಿದ್ದಾರೆ ಎಂದು ಪುರಾವೆ ಸಮೇತ ಆಗಮಿಸಿದ್ದಾರೆ.

ರೇಣುಕಾಸ್ವಾಮಿಯಿಂದ ಕನ್ನಡದ ಮತ್ತೋರ್ವ ನಟಿಗೆ ಅಶ್ಲೀಲ ಸಂದೇಶ ರವಾನೆ; ಸ್ಕ್ರೀನ್‌ಶಾಟ್‌ ಪುರಾವೆ ಸಮೇತ ಬಂದ ಚಿತ್ರಾಲ್‌ ರಂಗಸ್ವಾಮಿ
ರೇಣುಕಾಸ್ವಾಮಿಯಿಂದ ಕನ್ನಡದ ಮತ್ತೋರ್ವ ನಟಿಗೆ ಅಶ್ಲೀಲ ಸಂದೇಶ ರವಾನೆ; ಸ್ಕ್ರೀನ್‌ಶಾಟ್‌ ಪುರಾವೆ ಸಮೇತ ಬಂದ ಚಿತ್ರಾಲ್‌ ರಂಗಸ್ವಾಮಿ

Chitral Rangaswamy: ನಟ ದರ್ಶನ್‌ ಗೆಳತಿ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ಮತ್ತು ಅಸಭ್ಯ ಫೋಟೋ ಕಳುಹಿಸಿದ್ದಾನೆ ಎಂಬ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಅಪಹರಿಸಿ ಕರೆತಂದು ಪಟ್ಟಣಗೆರೆ ಶೆಡ್‌ನಲ್ಲಿ ಚಿತ್ರಹಿಂಸೆ ನೀಡಿ ಹತ್ಯೆಮಾಡಲಾಗಿತ್ತು. ಕೊಲೆ ಬಳಿಕ ಎಲ್ಲ 17 ಮಂದಿ ಆರೋಪಿಗಳನ್ನು ಬಂಧಿಸಿ ವಿಚಾರಣೆಯನ್ನೂ ಪೂರ್ಣಗೊಳಿಸಿದ್ದಾರೆ ಪೊಲೀಸರು. ಜತೆಗೆ ಕೋರ್ಟ್‌ನ ಆದೇಶದಂತೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೂ ನೀಡಲಾಗಿದೆ. ಈ ನಡುವೆ ನಟಿ ಮತ್ತು ಬಿಗ್‌ಬಾಸ್‌ ಖ್ಯಾತಿಯ ಚಿತ್ರಾಲ್‌ ರಂಗಸ್ವಾಮಿ ಸಹ ಕೊಲೆಯಾದ ರೇಣುಕಾಸ್ವಾಮಿ ವಿರುದ್ಧ ಆರೋಪವೊಂದನ್ನು ಮಾಡಿದ್ದಾರೆ.

ರೇಣುಕಾ ಸ್ವಾಮಿ ತಮ್ಮದೇ ಫೋನ್‌ನಿಂದ ಹತ್ತು ಹಲವು ಬೇರೆ ಬೇರೆ ಹೆಸರುಗಳಿಂದ ಫೇಕ್‌ ಇನ್‌ಸ್ಟಾಗ್ರಾಂ ಖಾತೆ ತೆರೆದು ಎಲ್ಲರಿಗೆ ಸಂದೇಶ ಕಳುಹಿಸಿದ್ದ ಎಂಬುದು ತನಿಖೆ ವೇಳೆ ತಿಳಿದುಬಂದಿತ್ತು. ಅದರಂತೆ goutham_ks_1990 ಎಂಬ ಇನ್‌ಸ್ಟಾ ಖಾತೆಯಿಂದಲೂ ನಟಿ, ಲೇಡಿ ಬಾಡಿ ಬಿಲ್ಡರ್‌ ಆಗಿರುವ ಚಿತ್ರಾಲ್‌ ರಂಗಸ್ವಾಮಿ ಅವರಿಗೂ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದರಂತೆ. ಈ ವಿಚಾರವನ್ನು ಸ್ವತಃ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿರಯವ ಚಿತ್ರಾಲ್‌, ನಿಮ್ಮ ಇನ್‌ಸ್ಟಾಗ್ರಾಂ ಅನ್ನು ಒಂದು ಬಾರಿ ಚೆಕ್‌ ಮಾಡಿಕೊಳ್ಳಿ ಎಂದೂ ಮನವಿ ಮಾಡಿದ್ದಾರೆ.‌

ಟ್ರೆಂಡಿಂಗ್​ ಸುದ್ದಿ

ನಿಮ್ಮ ಬ್ಲಾಕ್‌ ಲಿಸ್ಟ್‌ ಚೆಕ್‌ ಮಾಡಿ..

ಈ ಕುರಿತು ಸುದೀರ್ಘವಾಗಿ ಮಾತನಾಡಿರುವ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಚಿತ್ರಾಲ್‌, "ನನ್ನ ಇನ್‌ಸ್ಟಾಗ್ರಾಂಗೆ ಯಾರಾದರೂ ಅಶ್ಲೀಲ ಮೆಸೇಜ್‌, ಫೋಟೋಗಳನ್ನು ಕಳಿಸಿದ್ರೆ, ಅಂಥ ಖಾತೆಗಳನ್ನು ನಾನು ಬ್ಲಾಕ್‌ ಮಾಡುತ್ತೇನೆ. ಅದೇ ರೀತಿ goutham_ks_1990 ಐಡಿಯನ್ನು ಪೊಲೀಸರು ಬಹಿರಂಗ ಪಡಿಸುತ್ತಿದ್ದಂತೆ, ಈ ಐಡಿಯಿಂದ ನನಗೂ ಮೆಸೆಜ್‌ ಬಂದಿತ್ತಲ್ಲ ಎಂದು ಅನಿಸಿ ನನ್ನ ಬ್ಲಾಕ್ ಲಿಸ್ಟ್ ಚೆಕ್ ಮಾಡಿದಾಗ, ಈ ಅಕೌಂಟ್ ಕಾಣಿಸಿತ್ತು. ನನಗೂ ಕೊಂಚ ಭಯ ಆಯ್ತು. ಹಾಗಾಗಿ ಈ ಕೂಡಲೇ ನಿಮ್ಮ ಬ್ಲಾಕ್ ಲಿಸ್ಟ್‌ ಈಗಲೇ ಒಮ್ಮೆ ನೋಡಿ" ಎಂದಿದ್ದಾರೆ ಚಿತ್ರಾಲ್.‌

ನಾನಿಲ್ಲಿ ಯಾರ ಪರವಾಗಿಯೂ ಮಾತನಾಡುತ್ತಿಲ್ಲ

"ರೇಣುಕಾಸ್ವಾಮಿಗೆ ಚೆನ್ನಾಗಿರುವ ಹೆಂಡತಿ ಇರುವಾಗ, ಬೇರೆ ಹೆಣ್ಣುಮಕ್ಕಳಿಗೆ ಈ ರೀತಿ ಸಂದೇಶ, ಅಸಭ್ಯ ಮೆಸೆಜ್‌ಗಳನ್ನು ಕಳುಹಿಸುವುದು ಯಾಕೆ? ಕೆಲವರಿಗೆ ಇದು ಸಹಜ ಅನಿಸಬಹುದು. ಆದರೆ, ಈ ರೀತಿ ಕೆಟ್ಟ ಸಂದೇಶ ನೋಡಿದಾಗ ಅಸಹ್ಯ ಅನಿಸುತ್ತದೆ. ಈ ಮೂಲಕ ನಾನು ಇನ್ನೊಂದು ವಿಚಾರ ಸ್ಪಷ್ಟಪಡಿಸುವೆ. ನಾನಿಲ್ಲಿ ಯಾರ ಪರವಾಗಿಯೂ ಮಾತನಾಡುತ್ತಿಲ್ಲ. ಇನ್ನೊಬ್ಬರ ವೈಯಕ್ತಿಕ ವಿಚಾರಗಳನ್ನು ಕಾಮೆಂಟ್‌ನಲ್ಲಿ ಹಾಕಿ ಜಡ್ಜ್‌ ಮಾಡಬೇಡಿ. ನಿಮಗೂ ಒಂದು ಜೀವನ ಇದೆ ಎಂಬುದನ್ನು ನೋಡಿಕೊಳ್ಳಿ" ಎಂದಿದ್ದಾರೆ.

ಸ್ಟ್ರೀನ್‌ ಶಾಟ್‌ ಶೇರ್‌ ಮಾಡಿದ ಚಿತ್ರಾಲ್

"ನನ್ನ ಬ್ಲಾಕ್ ಲಿಸ್ಟ್ ಅಲ್ಲೂ ಆ ಅಕೌಂಟ್ ಇದೆ ಎಂದರೆ, ನನಗೆ ಅದರಿಂದ ಕೆಟ್ಟ ಸಂದೇಶ ಅಥವಾ ಫೋಟೋ ನನಗೂ ಬಂದಿರುತ್ತದೆ ಎಂದೇ ಅರ್ಥ. ಹಾಗೆ ಬಂದಿದ್ದಕ್ಕೆನೇ ನಾನು ಆ ಖಾತೆಯನ್ನು ಬ್ಲಾಕ್ ಮಾಡಿರುತ್ತೇನೆ" ಎಂದು ಸ್ಕ್ರೀನ್‌ಶಾಟ್‌ ಸಮೇತ ಒಂದಷ್ಟು ಪುರಾವೆಗಳನ್ನು ಹಂಚಿಕೊಂಡಿದ್ದಾರೆ ಚಿತ್ರಾಲ್‌ ರಂಗಸ್ವಾಮಿ.