ಕನ್ನಡ ಸುದ್ದಿ  /  ಮನರಂಜನೆ  /  Dhanya Ramkumar: ಪೃಥ್ವಿ ಅಂಬಾರ್ ಚೌಕಿದಾರ್ ಚಿತ್ರಕ್ಕೆ ದೊಡ್ಮನೆ ಕುಡಿ ಧನ್ಯಾ ರಾಮ್‌ಕುಮಾರ್‌ ನಾಯಕಿ

Dhanya Ramkumar: ಪೃಥ್ವಿ ಅಂಬಾರ್ ಚೌಕಿದಾರ್ ಚಿತ್ರಕ್ಕೆ ದೊಡ್ಮನೆ ಕುಡಿ ಧನ್ಯಾ ರಾಮ್‌ಕುಮಾರ್‌ ನಾಯಕಿ

ರಥಾವರ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶಿಸುತ್ತಿರುವ ಹೊಸ ಸಿನಿಮಾ ಚೌಕಿದಾರ್. ಇತ್ತೀಚೆಗಷ್ಟೇ ಡೈಲಾಗ್ ಕಿಂಗ್ ಸಾಯಿಕುಮಾರ್ ಚಿತ್ರತಂಡ ಸೇರಿಕೊಂಡಿದ್ದರು. ಇದೀಗ ಚೌಕಿದಾರ್‌ಗೆ ನಾಯಕಿ ಸಿಕ್ಕಿದ್ದಾಳೆ.

Dhanya Ramkumar: ಪೃಥ್ವಿ ಅಂಬಾರ್ ಚೌಕಿದಾರ್ ಚಿತ್ರಕ್ಕೆ ದೊಡ್ಮನೆ ಕುಡಿ ಧನ್ಯಾ ರಾಮ್‌ಕುಮಾರ್‌ ನಾಯಕಿ
Dhanya Ramkumar: ಪೃಥ್ವಿ ಅಂಬಾರ್ ಚೌಕಿದಾರ್ ಚಿತ್ರಕ್ಕೆ ದೊಡ್ಮನೆ ಕುಡಿ ಧನ್ಯಾ ರಾಮ್‌ಕುಮಾರ್‌ ನಾಯಕಿ

Chowkidar Kannada Movie: ದಿಯಾ ಸಿನಿಮಾ ಖ್ಯಾತಿಯ ಪೃಥ್ವಿ ಅಂಬಾರ್ ಹಾಗೂ ರಥಾವರ ಡೈರೆಕ್ಟರ್ ಚಂದ್ರಶೇಖರ್ ಬಂಡಿಯಪ್ಪ ಜೋಡಿಯ ಹೊಸ ಸಿನಿಮಾಗೆ ಚೌಕಿದಾರ್‌ ಅನ್ನೋ ಮಾಸ್ ಟೈಟಲ್ ಫಿಕ್ಸ್ ಆಗಿದೆ. ಇತ್ತೀಚೆಗಷ್ಟೇ ಈ ಚಿತ್ರದ ಶೀರ್ಷಿಕೆಯನ್ನು ರೋರಿಂಗ್ ಸ್ಟಾರ್ ಶ್ರೀಮುರಳಿ ರಿಲೀಸ್‌ ಮಾಡಿ, ಚಂದ್ರಶೇಖರ್ ಬಂಡಿಯಪ್ಪ ಅವರ 6ನೇ ಪ್ರಯತ್ನಕ್ಕೆ ಸಾಥ್‌ ನೀಡಿದ್ದರು. ಇಡೀ ತಂಡಕ್ಕೆ ಶುಭಾಶಯವನ್ನೂ ತಿಳಿಸಿದ್ದರು. ಇದೀಗ ಇದೇ ಚಿತ್ರಕ್ಕೆ ನಾಯಕಿ ಫಿಕ್ಸ್‌ ಆಗಿದ್ದಾರೆ.

ಹೌದು ರಥಾವರ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶಿಸುತ್ತಿರುವ ಹೊಸ ಸಿನಿಮಾ ಚೌಕಿದಾರ್. ಇತ್ತೀಚೆಗಷ್ಟೇ ಡೈಲಾಗ್ ಕಿಂಗ್ ಸಾಯಿಕುಮಾರ್ ಚಿತ್ರತಂಡ ಸೇರಿಕೊಂಡಿದ್ದರು. ಇದೀಗ ಚೌಕಿದಾರ್‌ಗೆ ನಾಯಕಿ ಸಿಕ್ಕಿದ್ದಾಳೆ. ದೊಡ್ಮನೆ ಬ್ಯೂಟಿ ಧನ್ಯಾ ರಾಮ್ ಕುಮಾರ್ ಪೃಥ್ವಿ ಅಂಬಾರ್‌ಗೆ ಜೋಡಿಯಾಗಿ ನಟಿಸುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಪೃಥ್ವಿ ಅಂಬಾರ್ ನಾಯಕನಾಗಿ ಅಭಿನಯಿಸುತ್ತಿರುವ ಚೌಕಿದಾರ್ ಸಿನಿಮಾದಲ್ಲಿ ಧನ್ಯಾ ರಾಮ್‌ಕುಮಾರ್ ಹೀರೋಯಿನ್ ಆಗಿ ಬಣ್ಣ ಹಚ್ಚುತ್ತಿದ್ದಾರೆ. ನಿನ್ನ ಸನಿಹಕೆ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಯಿತರಾಗಿದ್ದ ಧನ್ಯಾ ಇತ್ತೀಚೆಗಷ್ಟೇ ಜಡ್ಜಮೆಂಟ್ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬಂದಿದ್ದರು. ಸದ್ಯ ಕಾಲಪತ್ಥರ್ ರಿಲೀಸ್‌ಗೆ ಎದುರು ನೋಡುತ್ತಿರುವ ದೊಡ್ಮನೆ ಸುಂದರಿ ಈಗ ಚೌಕಿದಾರ್ ಬಳಗ ಸೇರಿಕೊಂಡಿದ್ದಾರೆ.

ಚೌಕಿದಾರ್ ಬಹುಭಾಷೆಯಲ್ಲಿ ಮೂಡಿ ಬರ್ತಿದೆ. ಕನ್ನಡದ ಜೊತೆಗೆ ಹಲವು ಭಾಷೆಯಲ್ಲಿ ಚಿತ್ರ ತಯಾರಾಗುತ್ತಿದೆ. ಈವರೆಗೆ ಸಿನಿಮಾದಲ್ಲಿ ಲವರ್‌ ಬಾಯ್‌ನಂತೆ ಕಾಣಿಸಿಕೊಂಡಿರುವ ಪೃಥ್ವಿ ಅಂಬಾರ್‌ ಈ ಚಿತ್ರದಲ್ಲಿ ಆಕ್ಷನ್ ಸೀಕ್ವೆನ್ಸ್ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ, ಹಾಗಂತ ಚೌಕಿದಾರ್ ಕಂಪ್ಲೀಟ್ ಆಕ್ಷನ್ ಸಿನಿಮಾವಲ್ಲ. ಪಕ್ಕಾ ಫ್ಯಾಮಿಲಿ ಎಂಟರ್ ಟೈನರ್.

ವಿದ್ಯಾ ಶೇಖರ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಡಾ.ಕಲ್ಲಹಳ್ಳಿ ಚಂದ್ರಶೇಖರ್ ಚೌಕಿದಾರ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಸಚಿನ್‌ ಬಸ್ರೂರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದು, ವಿ. ನಾಗೇಂದ್ರ ಪ್ರಸಾದ್‌, ಪ್ರಮೋದ್‌ ಮರವಂತೆ ಹಾಡುಗಳಿಗೆ ಸಾಹಿತ್ಯ ಬರೆಯುತ್ತಿದ್ದಾರೆ. ಜುಲೈ ಮೂರನೇ ತಾರೀಖಿನಂದು ಬಂಡಿ ಮಹಾಕಾಳಿ ದೇಗುಲದಲ್ಲಿ ಚೌಕಿದಾರ್ ಸಿನಿಮಾ ಮುಹೂರ್ತ ನೆರವೇರಿಸಲು ಚಿತ್ರತಂಡ ಯೋಜನೆ ಹಾಕಿದೆ.