ಮಿತ್ರನ ಮೊಗದಲ್ಲೀಗ ಖಳನ ಕಳೆ, ನಗಿಸೋ ನಟನ ವಿಲನ್‌ ಖದರ್‌ಗೆ‌ ಕನ್ನಡದ ಜತೆಗೆ ತಮಿಳಿನಲ್ಲಿಯೂ ಹೆಚ್ಚಿತು ಬೇಡಿಕೆ
ಕನ್ನಡ ಸುದ್ದಿ  /  ಮನರಂಜನೆ  /  ಮಿತ್ರನ ಮೊಗದಲ್ಲೀಗ ಖಳನ ಕಳೆ, ನಗಿಸೋ ನಟನ ವಿಲನ್‌ ಖದರ್‌ಗೆ‌ ಕನ್ನಡದ ಜತೆಗೆ ತಮಿಳಿನಲ್ಲಿಯೂ ಹೆಚ್ಚಿತು ಬೇಡಿಕೆ

ಮಿತ್ರನ ಮೊಗದಲ್ಲೀಗ ಖಳನ ಕಳೆ, ನಗಿಸೋ ನಟನ ವಿಲನ್‌ ಖದರ್‌ಗೆ‌ ಕನ್ನಡದ ಜತೆಗೆ ತಮಿಳಿನಲ್ಲಿಯೂ ಹೆಚ್ಚಿತು ಬೇಡಿಕೆ

ಮಿತ್ರ ಅಂದ್ರೆ ಕನ್ನಡ ಸಿನಿಮಾರಂಗಕ್ಕೆ ಚಿರಪರಿಚಿತರು ಕಳೆದ ಎರಡು ದಶಕಗಳಿಂದ ಮಿತ್ರ ಕನ್ನಡ ಚಿತ್ರರಂಗದಲ್ಲಿ ಹಿರಿತೆರೆ ಕಿರುತೆರೆ ಸೇರಿದಂತೆ ಎಲ್ಲೆಡೆ ಭಿನ್ನ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿದ್ದಾರೆ. ಇದೀಗ ಖಳನ ಲುಕ್‌ನಲ್ಲಿ ಹೆದರಿಸಲು ಬರುತ್ತಿದ್ದಾರೆ.

ಮಿತ್ರನ ಮೊಗದಲ್ಲೀಗ ಖಳನ ಕಳೆ, ನಗಿಸೋ ನಟನ ವಿಲನ್‌ ಖದರ್‌ಗೆ‌ ಕನ್ನಡದ ಜತೆಗೆ ತಮಿಳಿನಲ್ಲಿಯೂ ಹೆಚ್ಚಿತು ಬೇಡಿಕೆ
ಮಿತ್ರನ ಮೊಗದಲ್ಲೀಗ ಖಳನ ಕಳೆ, ನಗಿಸೋ ನಟನ ವಿಲನ್‌ ಖದರ್‌ಗೆ‌ ಕನ್ನಡದ ಜತೆಗೆ ತಮಿಳಿನಲ್ಲಿಯೂ ಹೆಚ್ಚಿತು ಬೇಡಿಕೆ

Comedian Mithra: ಕಿರುತೆರೆಯ ಕಾಮಿಡಿ ಸೀರಿಯಲ್‌ಗಳಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಬಂದು, ಅಲ್ಲಿ ಯಶಸ್ಸು ಪಡೆದು ಅದಾದ ಬಳಿಕ ಸಿನಿಮಾರಂಗದಲ್ಲಿಯೂ ಸೈ ಎನಿಸಿಕೊಂಡವರು ನಟ ಮಿತ್ರ. ಕಳೆದ ಎರಡು ದಶಕಗಳಿಂದ ಕನ್ನಡಿಗರನ್ನು ತಮ್ಮ ಹಾಸ್ಯಪ್ರಜ್ಞೆಯ ಮೂಲಕ ನಗಿಸುತ್ತಲೇ ಬಂದ ಈ ನಟ, ಇದೀಗ ಖಳನ ಗತ್ತು ತೋರಿಸಲು ಸಿದ್ಧರಾಗಿದ್ದಾರೆ. ಅಂದರೆ, ಪ್ರಜ್ವಲ್‌ ದೇವರಾಜ್‌ ಅವರ ಕರಾವಳಿ ಚಿತ್ರದ ಜತೆಗೆ ಇನ್ನೂ ಹಲವು ಸಿನಿಮಾಗಳಲ್ಲಿ ಖಡಕ್‌ ಖಳನಾಗಿ ತಮ್ಮ ಖದರ್‌ ತೋರಿಸಲಿದ್ದಾರೆ ಮಿತ್ರ.

ಮಿತ್ರ ಅಂದ್ರೆ ಕನ್ನಡ ಸಿನಿಮಾರಂಗಕ್ಕೆ ಚಿರಪರಿಚಿತರು ಕಳೆದ ಎರಡು ದಶಕಗಳಿಂದ ಮಿತ್ರ ಕನ್ನಡ ಚಿತ್ರರಂಗದಲ್ಲಿ ಹಿರಿತೆರೆ ಕಿರುತೆರೆ ಸೇರಿದಂತೆ ಎಲ್ಲೆಡೆ ಭಿನ್ನ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿದ್ದಾರೆ. ಕಾಮಿಡಿ, ಎಮೋಷನ್ ಹೀಗೆ ಎಲ್ಲಾ ರೀತಿಯ ಪಾತ್ರಕ್ಕೂ ತಮ್ಮನ್ನ ತಾವು ಒಗ್ಗಿಸಿಕೊಂಡು ಅಭಿನಯಿಸುತ್ತಾ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ.

ಆದ್ರೆ ಈಗ ನಟ ಮಿತ್ರ ಅವರ ಖದರ್ ಬದಲಾಗಿದೆ. ಲುಕ್ ಬೇರೆಯದ್ದೇ ರೀತಿ ಇದೆ. ಪ್ರಜ್ವಲ್ ದೇವರಾಜ್ ಅವ್ರ ಕರಾವಳಿ ಸಿನಿಮಾದಲ್ಲಿ ಮುಖ್ಯಪಾತ್ರವೊಂದರಲ್ಲಿ ಮಿತ್ರ ಅಭಿನಯ ಮಾಡುತ್ತಿದ್ದಾರೆ. ಅದಕ್ಕಾಗಿ ಗೆಟಪ್ ಕೂಡ ಚೇಂಜ್ ಮಾಡಿಕೊಂಡಿದ್ದಾರೆ. ಒಂದು ಸಿನಿಮಾಗಾಗಿ ಮಾಡಿಕೊಂಡ ಲುಕ್ ಈಗ ಮಿತ್ರ ಅವ್ರ ಕೆರಿಯರ್‌ನಲ್ಲಿ ಟರ್ನಿಂಗ್ ಪಾಯಿಂಟ್ ಆಗಿದೆ.

ಸ್ಟೈಲಿಶ್‌ ವಿಲನ್‌ ಲುಕ್‌ನಲ್ಲಿ ಮಿತ್ರ..

ಇಷ್ಟು ದಿನಗಳ ಕಾಲ ಕಾಮಿಡಿ ಸ್ಟಾರ್ ಆಗಿ ಮಿಂಚ್ತಿದ್ದ ಮಿತ್ರ ಇನ್ನು ಮುಂದೆ ಸ್ಯಾಂಡಲ್ ವುಡ್ ನ ಖಡಕ್ ವಿಲನ್ ಆಗಲಿದ್ದಾರೆ. ಗಡ್ಡ ಬಿಟ್ಟು ಲುಕ್ ಬದಲಾಯಿಸಿಕೊಂಡ ಮೇಲೆ ಬೇರೆ ರೀತಿ ಪಾತ್ರಗಳು ಹುಡುಕಿ ಬರ್ತಿವೆಯಂತೆ. ಸದ್ಯ ಅದಕ್ಕಾಗಿ ಒಂದು ಸ್ಟೈಲಿಷ್ ವಿಲನ್ ಲುಕ್ ನಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ ಮಿತ್ರ.

ಕಾಲಿವುಡ್‌ನ ಸ್ಟೈಲಿಷ್ ಕಣ್ಮಣಿಯಿಂದ ಹೊಸ ಲುಕ್‌

ಸದ್ಯ ಮಿತ್ರ ಅವ್ರು ಮಾಡಿಸಿರೋ ಫೋಟೋಶೂಟ್ ಫೋಟೋಗಳನ್ನು ನೋಡ್ತಿದ್ರೆ ವಾವ್ಹ್ ಮಿತ್ರ ಅವ್ರು ಹೀಗೂ ಕಾಣ್ತಾರಾ ಅಂತ ಅನ್ನಿಸೋದು ಗ್ಯಾರಂಟಿ. ವಿಲನ್ ಲುಕ್‌ನಲ್ಲಿ ಸಾಕಷ್ಟು ವಿಭಿನ್ನ ಶೇಡ್‌ನಲ್ಲಿ ಮಿತ್ರ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಇನ್ನು ಈ ಫೋಟೋ ಶೂಟ್ ಮಾಡಿರೋದು ಕರಾವಳಿ ಸಿನಿಮಾದ ಸಿನಿಮಾಟೋಗ್ರಾಫರ್ ಅಭಿಮನ್ಯು ಸದಾನಂದ್. ಮಿತ್ರ ಅವರ ಲುಕ್ ಅನ್ನು ಸ್ಟೈಲಿಷ್ ಮಾಡಿರೋದು ಕಾಲಿವುಡ್‌ನ ಸ್ಟೈಲಿಷ್ ಕಣ್ಮಣಿ.

ತಮಿಳಿನ ಸಿನಿಮಾಕ್ಕೂ ವಿಲನ್‌..

ಮಿತ್ರ ಅವ್ರ ಈ ಲುಕ್ ಬರೀ ಲುಕ್ ಆಗಿಯೇ ಉಳಿದಿಲ್ಲ. ಕರಾವಳಿ ಸಿನಿಮಾ ಬಿಟ್ಟು ಕನ್ನಡದ ದೊಡ್ಡ ಎರಡು ಸ್ಟಾರ್ ಸಿನಿಮಾಗಳಲ್ಲಿ ಮಿತ್ರ ಖಡಕ್ ವಿಲನ್ ಆಗಿ ಕಾಣಿಸಿಕೊಳ್ತಿದ್ದಾರೆ. ಅದರ ಜೊತೆಗೆ ತಮಿಳಿನ ಒಂದು ಸಿನಿಮಾಗೆ ವಿಲನ್ ಆಗಿ ಆಯ್ಕೆ ಆಗಿದ್ದಾರೆ. ಕಲಾವಿದ ಆದವ್ರು ಎಂದಿಗೂ ಒಂದೇ ಪಾತ್ರಕ್ಕೆ ಅಂಟಿಕೊಳ್ಳಬಾರದು ವಯಸ್ಸಿಗೆ ತಕ್ಕಂತೆ ತಮ್ಮನ್ನ ನಾವು ಬದಲಾಯಿಸಿಕೊಳ್ಳಬೇಕು ಅನ್ನೋದನ್ನು ಮಿತ್ರ ಫಾಲೋ ಮಾಡಿದಂತಿದೆ. ಸದ್ಯ ಸಾಲ್ಟ್ ಅಂಡ್ ಪೆಪ್ಪರ್ ಲುಕ್ ಹಾಗೂ ಮಿಲನ್ ಖದರ್ ನಲ್ಲಿ ಮಿತ್ರ ಸೂಪರ್ ಆಗಿ ಮಿಂಚ್ತಿದ್ದಾರೆ.