‘ಸುಧೀರ್‌ ಅಣ್ಣನ ಮಕ್ಕಳು ಮದುವೆಗೂ ಕರೆದಿಲ್ಲ, ನಿರ್ದೇಶಕರಾದ ಮೇಲೆ ಸಿನಿಮಾಗಳಲ್ಲಿಯೂ ಚಾನ್ಸ್‌ ಕೊಡಲಿಲ್ಲ’ ಟೆನ್ನಿಸ್‌ ಕೃಷ್ಣ ಬೇಸರ-sandalwood news comedian tennis krishna is upset tith director tharun sudhir for not inviting him to wedding mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ‘ಸುಧೀರ್‌ ಅಣ್ಣನ ಮಕ್ಕಳು ಮದುವೆಗೂ ಕರೆದಿಲ್ಲ, ನಿರ್ದೇಶಕರಾದ ಮೇಲೆ ಸಿನಿಮಾಗಳಲ್ಲಿಯೂ ಚಾನ್ಸ್‌ ಕೊಡಲಿಲ್ಲ’ ಟೆನ್ನಿಸ್‌ ಕೃಷ್ಣ ಬೇಸರ

‘ಸುಧೀರ್‌ ಅಣ್ಣನ ಮಕ್ಕಳು ಮದುವೆಗೂ ಕರೆದಿಲ್ಲ, ನಿರ್ದೇಶಕರಾದ ಮೇಲೆ ಸಿನಿಮಾಗಳಲ್ಲಿಯೂ ಚಾನ್ಸ್‌ ಕೊಡಲಿಲ್ಲ’ ಟೆನ್ನಿಸ್‌ ಕೃಷ್ಣ ಬೇಸರ

ಸಿನಿಮಾ ಅವಕಾಶಗಳು ಸಿಗದೇ ಇರುವ ಬಗ್ಗೆ, ರಾಜ್‌ಕುಮಾರ್‌ ಅವರ ಸಿನಿಮಾಗಳ ಬಗ್ಗೆ, ಚಿತ್ರರಂಗದ ಕೆಲವರಿಂದ ಆದ ಅವಮಾನ.. ಹೀಗೆ ಹಳೇ ನೆನಪುಗಳನ್ನು ನೆನೆದು ಕಣ್ಣೀರಾಗಿದ್ದಾರೆ ಹಿರಿಯ ನಟ ಟೆನ್ನಿಸ್‌ ಕೃಷ್ಣ. ಅದರಲ್ಲೂ ಹಿರಿಯ ನಟ ಸುಧೀರ್‌ ಮತ್ತವರ ಮಕ್ಕಳ ಬಗ್ಗೆಯೂ ಟೆನ್ನಿಸ್‌ ಕೃಷ್ಣ ಮಾತನಾಡಿದ್ದಾರೆ.

ಸಿನಿಮಾ ಅವಕಾಶಗಳು ಸಿಗದೇ ಇರುವ ಬಗ್ಗೆ, ರಾಜ್‌ಕುಮಾರ್‌ ಅವರ ಸಿನಿಮಾಗಳ ಬಗ್ಗೆ, ಚಿತ್ರರಂಗದ ಕೆಲವರಿಂದ ಆದ ಅವಮಾನ.. ಹೀಗೆ ಹಳೇ ನೆನಪುಗಳನ್ನು ನೆನೆದು ಕಣ್ಣೀರಾಗಿದ್ದಾರೆ ಹಿರಿಯ ನಟ ಟೆನ್ನಿಸ್‌ ಕೃಷ್ಣ.
ಸಿನಿಮಾ ಅವಕಾಶಗಳು ಸಿಗದೇ ಇರುವ ಬಗ್ಗೆ, ರಾಜ್‌ಕುಮಾರ್‌ ಅವರ ಸಿನಿಮಾಗಳ ಬಗ್ಗೆ, ಚಿತ್ರರಂಗದ ಕೆಲವರಿಂದ ಆದ ಅವಮಾನ.. ಹೀಗೆ ಹಳೇ ನೆನಪುಗಳನ್ನು ನೆನೆದು ಕಣ್ಣೀರಾಗಿದ್ದಾರೆ ಹಿರಿಯ ನಟ ಟೆನ್ನಿಸ್‌ ಕೃಷ್ಣ.

Actor Tennis Krishna on Tharun Sudhir: ಸ್ಯಾಂಡಲ್‌ವುಡ್‌ ಕಂಡ ಖ್ಯಾತ ಹಾಸ್ಯ ಕಲಾವಿದರಲ್ಲಿ ನಟ ಟೆನ್ನಿಸ್‌ ಕೃಷ್ಣ ಕೂಡ ಒಬ್ಬರು. ದಶಕಗಳಿಂದ ಚಂದನವನದಲ್ಲಿ ನೂರಾರು ಸಿನಿಮಾಗಳಲ್ಲಿ ನಟಿಸಿ, ತಮ್ಮ ಹಾಸ್ಯದ ಮೂಲಕವೇ ಎಲ್ಲರನ್ನು ನಗಿಸಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಇದೇ ‌ನಟ ಟೆನ್ನಿಸ್ ಕೃಷ್ಣ ಅವರಿಗೆ ಅವಕಾಶಗಳೇ ಇಲ್ಲ. ಈ ವಿಚಾರವನ್ನು ಈ ಹಿಂದೆಯೂ ಹಲವು ಬಾರಿ ಹೇಳಿಕೊಂಡಿದ್ದರು. ಹಾಗೆ ಮಾಧ್ಯಮಗಳ ಮುಂದೆ ಬಂದು ಹೇಳಿಕೊಂಡರೂ ಪರಿಸ್ಥಿತಿ ಮಾತ್ರ ಸುಧಾರಿಸಲಿಲ್ಲ. ಇಂದಿಗೂ ಸಿನಿಮಾ ಅವಕಾಶಗಳಿಗಾಗಿ ಟೆನ್ನಿಸ್‌ ಕೃಷ್ಣ ಕಾಯುತ್ತಿದ್ದಾರೆ.

ಈ ನಡುವೆ ಸ್ಯಾಂಡಲ್‌ವುಡ್‌ನ ಖ್ಯಾತ ಹಿರಿಯ ನಟ ಸುಧೀರ್‌ ಅವರ ಕಿರಿ ಪುತ್ರ ತರುಣ್‌ ಸುಧೀರ್‌- ಸೋನಲ್‌ ಮೊಂತೆರೋ ಅವರ ಗ್ರ್ಯಾಂಡ್‌ ವಿವಾಹ ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ನೆರವೇರಿದೆ. ಈ ಅದ್ಧೂರಿ ಮದುವೆಗೆ ಸ್ಯಾಂಡಲ್‌ವುಡ್‌ ಸೇರಿ ಪರಭಾಷೆಯ ಸಾಕಷ್ಟು ಕಲಾವಿದರು ಆಗಮಿಸಿ, ನವ ಜೋಡಿಗೆ ಹರಸಿ ಹಾರೈಸಿದ್ದರು. ಚಂದನವನದ ಆಪ್ತರು ಆಗಮಿಸಿ ಶುಭ ಕೋರಿದ್ದರು. ಆದರೆ, ಇದೇ ಮದುವೆಗೆ ಟೆನ್ನಿಸ್‌ ಕೃಷ್ಣ ಅವರಿಗೆ ಆಮಂತ್ರಣ ಬಂದಿರಲಿಲ್ಲ. ಸುಧೀರ್‌ ಅವರ ನಾಟಕ ಕಂಪನಿಯಲ್ಲಿ ತುಂಬ ಸಕ್ರಿಯರಾಗಿದ್ದ ಟೆನ್ನಿಸ್‌ ಕೃಷ್ಣ, ಅವರ ಮಕ್ಕಳ ಮೇಲೆ ಕೊಂಚ ಬೇಸರಿಸಿಕೊಂಡಿದ್ದಾರೆ.

ಇದೀಗ ಇದೇ ಟೆನ್ನಿಸ್‌ ಕೃಷ್ಣ ಸುದ್ದಿಮನೆ ಯೂಟ್ಯೂಬ್‌ ಚಾನೆಲ್‌ ಜತೆಗೆ ಈ ಹಿಂದಿನ ಒಂದಷ್ಟು ಘಟನಾವಳಿಗಳ ಬಗ್ಗೆ ನೆನಪಿಸಿಕೊಂಡಿದ್ದಾರೆ. ಸಿನಿಮಾ ಅವಕಾಶಗಳು ಸಿಗದೇ ಇರುವ ಬಗ್ಗೆ, ರಾಜ್‌ಕುಮಾರ್‌ ಅವರ ಸಿನಿಮಾಗಳ ಬಗ್ಗೆ, ಚಿತ್ರರಂಗದ ಕೆಲವರಿಂದ ಆದ ಅವಮಾನ.. ಹೀಗೆ ಹಳೇ ನೆನಪುಗಳನ್ನು ನೆನೆದು ಕಣ್ಣೀರಾಗಿದ್ದಾರೆ. ಅದರಲ್ಲೂ ಹಿರಿಯ ನಟ ಸುಧೀರ್‌ ಮತ್ತವರ ಮಕ್ಕಳ ಬಗ್ಗೆಯೂ ಟೆನ್ನಿಸ್‌ ಕೃಷ್ಣ ಮಾತನಾಡಿದ್ದಾರೆ.

ಈ ಹಿಂದೆ ಸಿನಿಮಾನೂ ಮಾಡ್ತಿದ್ದೆ. ನಾಟಕದಲ್ಲೂ ನಟಿಸ್ತಿದ್ದೆ. ಅದರಲ್ಲೂ ಸುಧೀರ್‌ ಅಣ್ಣನವರ ಸಾಕಷ್ಟು ನಾಟಕ ಕ್ಯಾಂಪ್‌ಗಳಲ್ಲಿ ಕೆಲಸ ಮಾಡಿದ್ದೇನೆ. ಸಂಭಾವನೆಗೆ ಬೇಡಿಕೆ ಇಡದೇ, ಅವರು ಕೊಟ್ಟಷ್ಟನ್ನು ತೆಗೆದುಕೊಂಡು ಮಾಡಿದ್ದೇನೆ. ಇವತ್ತು ಅದೇ ಸುಧೀರ್‌ ಅವರ ಮಕ್ಕಳು ಕನ್ನಡ ಚಿತ್ರರಂಗದಲ್ಲಿ ದೊಡ್ಡ ನಿರ್ದೇಶಕರಾಗಿದ್ದಾರೆ. ಖುಷಿಯಾಯ್ತು. ಸುಧೀರ್‌ ನಿಧನದ ಬಳಿಕ ಅವರ ಪತ್ನಿ ನನ್ನ ಬಳಿ ಹೀಗೆ ಹೇಳಿದ್ದರು. ಕೃಷ್ಣಣ್ಣ ಯಾವುದೇ ಕಾರಣಕ್ಕೂ ಕಂಪನಿ ಬಂದ್‌ ಮಾಡಬೇಡ. ಸಮಯ ಇದ್ದಾಗ ದಯಮಾಡಿ ಡೇಟ್‌ ಕೊಡಿ. ನನ್ನ ಮಕ್ಕಳಿಗೆ ಯಾವುದಾದ್ರೂ ಸಿನಿಮಾ ಇದ್ದರೆ ಹೇಳಿ ಎಂದಿದ್ದರು.

ಮುಂದಿನ ವಾರ ಒಂದು ಸಿನಿಮಾ ಮುಹೂರ್ತ ಇದೆ ಅಂತ ಹೇಳಿ ನಂದಕಿಶೋರ್‌ನನ್ನು ಕರೆದುಕೊಂಡು ಹೋಗಿ, ನಿರ್ದೇಶಕರು, ನಿರ್ಮಾಪಕರು ಎಲ್ಲರ ಪರಿಚಯ ಮಾಡಿಸಿಕೊಟ್ಟು, ಎರಡು ಸಿನಿಮಾಗಳಲ್ಲಿ ಅವಕಾಶ ಕೊಡಿಸಿದ್ದೆ. ಆದರೆ, ಇದೀಗ ಇಬ್ಬರೂ ದೊಡ್ಡ ನಿರ್ದೇಶಕರಾಗಿದ್ದಾರೆ. ನನಗೂ ಒಂದು ಚಾನ್ಸ್‌ ಕೊಡಬಹುದಿತ್ತಲ್ಲ. ನನ್ನನ್ನು ಯಾಕೆ ಕರೆಯಲಿಲ್ಲ ಎಂಬುದು ನನ್ನ ಪ್ರಶ್ನೆ. ಆ ದೇವರ ಮೇಲೆ ಆಣೆ ಮಾಡಿ ಹೇಳಲಿ ಬೇಕಿದ್ದರೆ. ನಾನೇ ಅವರಿಗೆ ಸಿನಿಮಾ ಅವಕಾಶ ಕೊಡಿಸಿದ್ದೇನೆ. ಇದೀಗ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಈ ನಡುವೆ ಇತ್ತೀಚೆಗೆ ಚಿಕ್ಕವನದ್ದು ಮದುವೆ ಆಯ್ತು. ಮದುವೆಗೂ ಕರೆದಿಲ್ಲ.

ಕೆಲಸ ಕೊಡದಿದ್ದರೂ ಪರವಾಗಿಲ್ಲ, ಪೋನ್‌ ಮಾಡಿ ಮದುವೆಗೆ ಕರೆದಿದ್ದರೆ ಓಡೋಡಿ ಬರುತ್ತಿದ್ದೆ. ಆದರೆ ಕರೆದಿಲ್ಲ. ಅದೂ ಬೇಜಾರಾಯ್ತು. ಕೆಲವರು ಕೇಳಿದರು ಯಾಕೆ ಮದುವೆಗೆ ಬರಲಿಲ್ಲ ಎಂದು, ಕರೆದರೆ ಅಲ್ವ ಬರೋದು. ಸುಮ್ಮನೆ ಹೇಗೆ ಬರೋಕಾಗುತ್ತೆ" ಎಂದು ಟೆನ್ನಿಸ್‌ ಕೃಷ್ಣ ಮಾತನಾಡಿದ್ದಾರೆ.