ಸಿಟ್ಟನ್ನು ಸ್ಕ್ರಿಪ್ಟ್‌ ಮಾಡಬೇಕು, ದರ್ಶನ್‌ ನನ್ನ ಮಗ ಇದ್ದಂತೆ, ತಂದೆಯ ನೋವು ನನಗಾಗ್ತಿದೆ; ನಾದಬ್ರಹ್ಮ ಹಂಸಲೇಖ ಮನದಮಾತು
ಕನ್ನಡ ಸುದ್ದಿ  /  ಮನರಂಜನೆ  /  ಸಿಟ್ಟನ್ನು ಸ್ಕ್ರಿಪ್ಟ್‌ ಮಾಡಬೇಕು, ದರ್ಶನ್‌ ನನ್ನ ಮಗ ಇದ್ದಂತೆ, ತಂದೆಯ ನೋವು ನನಗಾಗ್ತಿದೆ; ನಾದಬ್ರಹ್ಮ ಹಂಸಲೇಖ ಮನದಮಾತು

ಸಿಟ್ಟನ್ನು ಸ್ಕ್ರಿಪ್ಟ್‌ ಮಾಡಬೇಕು, ದರ್ಶನ್‌ ನನ್ನ ಮಗ ಇದ್ದಂತೆ, ತಂದೆಯ ನೋವು ನನಗಾಗ್ತಿದೆ; ನಾದಬ್ರಹ್ಮ ಹಂಸಲೇಖ ಮನದಮಾತು

ಕನ್ನಡ ನಟ ದರ್ಶನ್‌ ಬಂಧನ, ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾದಬ್ರಹ್ಮ ಹಂಸಲೇಖ ಮಾತನಾಡಿದ್ದಾರೆ. "ದರ್ಶನ್‌ ನನ್ನ ಮಗುವಿದ್ದಂತೆ. ಆತ ತಪ್ಪು ಮಾಡಿದರೆ ತಂದೆಗೆ ಆಗುವ ನೋವು ನನಗೆ ಆಗುತ್ತದೆ" ಎಂದಿದ್ದಾರೆ.

ನಾದಬ್ರಹ್ಮ ಹಂಸಲೇಖ ಮನದಮಾತು
ನಾದಬ್ರಹ್ಮ ಹಂಸಲೇಖ ಮನದಮಾತು

ಬೆಂಗಳೂರು: ಕನ್ನಡ ನಟ ದರ್ಶನ್‌ ಬಂಧನ, ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಧ್ಯಮಗಳು ಸಿನಿಮಾ ರಂಗದ ಪ್ರಮುಖರ ಅಭಿಪ್ರಾಯಗಳನ್ನು ಕೇಳುವ ಪ್ರಯತ್ನ ಮುಂದುವರೆಸಿವೆ. ಶಿವರಾಜ್‌ ಕುಮಾರ್‌ ಅವರಲ್ಲಿ ಈ ಕುರಿತ ಅಭಿಪ್ರಾಯ ಕೇಳಿದಾಗ "ಹಣೆಬರಹ-ಫೇಟ್‌" ಕುರಿತು ಮಾತನಾಡಿದ್ದರು. ಇದೀಗ ಹಿರಿಯ ಸಂಗೀತ ನಿರ್ದೇಶಕರಾದ ಹಂಸಲೇಖ ಅವರು ಕೂಡ ಈ ಕುರಿತು ಮಾತನಾಡಿದ್ದು, "ದರ್ಶನ್‌ ನನ್ನ ಮಗುವಿದ್ದಂತೆ. ಆತ ತಪ್ಪು ಮಾಡಿದರೆ ತಂದೆಗೆ ಆಗುವ ನೋವು ನನಗೆ ಆಗುತ್ತದೆ" ಎಂದಿದ್ದಾರೆ.

ಹಂಸಲೇಖ ಏನಂದ್ರು?

"ಬಹಳ ದೊಡ್ಡ ಪ್ರಶಸ್ತಿ. ಸಿಎಂ ಸಿದ್ದರಾಮಯ್ಯನವರು ನನ್ನನ್ನು ದಸರಾ ಉದ್ಘಾಟನೆ ಮಾಡಿ ಅಂದ್ರು. ಸರ್‌ ನನಗ್ಯಾಕೆ ಅಂದೆ. ಇದು ನನ್ನ ಆರ್ಡರ್‌ ಅಂದ್ರು" ಹೀಗೆ ಹಂಸಲೇಖ ಅವರು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಟೆಲಿವಿಷನ್‌ ಮಾಧ್ಯಮಗಳ ವರದಿಗಾರರು ದರ್ಶನ್‌ ಕುರಿತು ಪ್ರಶ್ನಿಸಿದ್ದಾರೆ. "ಇದು ಬೇಕಾ ಈಗ" ಎನ್ನುತ್ತಲೇ ಹಂಸಲೇಖ ಅವರು ತನ್ನ ಅಭಿಪ್ರಾಯವನ್ನು ಹೇಳಿದ್ದಾರೆ.

"ಸಿಟ್ಟನ್ನು ಸ್ಕ್ರಿಪ್ಟ್‌ ಮಾಡಬೇಕು, ದ್ವೇಷವನ್ನು ಕ್ಯಾರೆಕ್ಟರ್‌ ಮಾಡಬೇಕು. ಇದು ಕಲಾವಿದರ ಕರ್ತವ್ಯ. ನಿಜಜೀವನದಲ್ಲಿ ಇದನ್ನು ಮಾಡಲು ಹೋಗಬಾರದು. ದರ್ಶನ್‌ ನನ್ನ ಮಗು. ಆತ ತಪ್ಪು ಮಾಡಿದ್ದರೆ ತಂದೆ ಎಷ್ಟು ನೋವು ಅನುಭವಿಸ್ತಾನೋ ಅಷ್ಟು ನೋವು ನಾನು ಅನುಭವಿಸುವೆ. ಆ ಮಗು ಕೂಡ ಅಷ್ಟೇ ನೋವು ತಿನ್ತಾ ಇರುತ್ತದೆ. ನಾವು ಆತ ಕೊಟ್ಟಿರುವ ಕೊಡುಗೆ ಕುರಿತು ನೋಡೋಣ" ಎಂದು ನಾದಬ್ರಹ್ಮ ಹಂಸಲೇಖ ಹೇಳಿದ್ದಾರೆ.

"ಎತ್ತರಕ್ಕೆ ಹೋದ ಬಳಿಕ ಅಲ್ಲಿಂದ ಬೀಳಬೇಕಾಗುತ್ತದೆ. ಹಾಗೆ ಆಗುವುದು ಬೇಡ. ಕನ್ನಡ ಸಿನಿಮಾ ಉದ್ಯಮ ಚಂದನವನ ಎಷ್ಟೊಂದು ಕೀರ್ತಿ ಗಳಿಸಿತ್ತು. ಎಷ್ಟು ರಾಷ್ಟ್ರ ಪ್ರಶಸ್ತಿಗಳು, ಎಷ್ಟು ಗೌರವ ಗಳಿಸಿತ್ತು. ಎಂತಹ ಪ್ರತಿಭಾನ್ವಿತರು ಹುಟ್ಟಿ ಬೆಳೆದಿದ್ದಾರೆ. ಎಷ್ಟೋ ಎತ್ತರಕ್ಕೆ ಏರಿದ್ದಾರೆ. ಎತ್ತರಕ್ಕೆ ಹೋದವರು ಕೆಳಕ್ಕೆ ಬೀಳಬೇಕಾಗುತ್ತದೆ. ಆದ್ರೆ, ಹಾಗೆ ಆಗುವುದು ಬೇಡ" ಎಂದು ಅವರು ಹೇಳಿದ್ದಾರೆ.

"ಚಂದನವನ ಈಗ ಕೆಳಕ್ಕೆ ಬಿದ್ದಿದೆ. ಕೇರಳ ಸಿನಿಮಾ ಉದ್ಯಮ ಕೂಡ ಇದೇ ರೀತಿ ಆಗಿತ್ತು. ಈಗ ಮಲಯಾಳಂ ಸಿನಿಮಾ ಉದ್ಯಮ ಮೇಲೆ ಎದ್ದಿದೆ. ಕೆಳಗೆ ಬಿದ್ದು ಮೇಲೆ ಎದ್ದಿದೆ. ಒಂದು ಮಳಗೆ ಮರ ಒಣಗಬಹುದು. ಇನ್ನೊಂದು ಮಳೆಗೆ ಕಾಡು ಬೆಳೆಯುತ್ತದೆ. ಕಲಾವಿದರಾದ ನಾವು ಸಿಟ್ಟನ್ನು ಸ್ಕ್ರಿಪ್ಟ್‌ ಮಾಡಿಕೊಳ್ಳಬೇಕು. ದ್ವೇಷವನ್ನು ಕ್ಯಾರೆಕ್ಟರ್‌ ಮಾಡಬೇಕು" ಎಂದು ಅವರು ಹೇಳಿದ್ದಾರೆ.

ಶಿವಣ್ಣ ಏನಂದ್ರು?

ಬೆಂಗಳೂರಿನ ಶಿವಾನಂದ ಸರ್ಕಲ್‌ನಲ್ಲಿ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ನೂತನ ಕಟ್ಟಡದ ಉದ್ಘಾಟನೆ ಕಾರ್ಯಕ್ರಮದ ಬಳಿಕ ಶಿವರಾಜ್‌ ಕುಮಾರ್‌ ಪ್ರತಿಕ್ರಿಯೆ ನೀಡಿದ್ದರು. "ದರ್ಶನ್‌ ವಿಷಯದಲ್ಲಿ ಈ ರೀತಿ ನಡೆಯುತ್ತೆ ಅಂತ ಯಾರೂ ಊಹಿಸಿರಲಿಲ್ಲ. ಹಣೆಬರಹ. ಏನೇ ಮಾಡುವ ಮುನ್ನ, ನಾವು ಏನು ಮಾಡ್ತಿದ್ದೇವೆ, ನಾವು ಮಾಡೋದೋ ಸರೀನಾ ಎಂದು ಒಮ್ಮೆ ಯೋಚನೆ ಮಾಡಬೇಕು. ಯಾಕಪ್ಪ ಹಿಂಗಾಯ್ತು ಅಂತ ತುಂಬ ಬೇಸರ ಆಗುತ್ತೆ. ಇತ್ತ ರೇಣುಕಾ ಸ್ವಾಮಿ ಕುಟುಂಬಕ್ಕೆ, ದರ್ಶನ್​ ಕುಟುಂಬಕ್ಕೂ ನೋವಾಗಿದೆ. ದರ್ಶನ್ ​ಮಗನ ಬಗ್ಗೆಯೂ ಬೇಸರ ಆಗುತ್ತೆ. ಇದು ಜೀವನದ ಒಂದು ಘಟ್ಟ. ಎಲ್ಲವನ್ನು ನಾವು ಎದುರಿಸಲೇಬೇಕು" ಎಂದು ಶಿವರಾಜ್‌ ಕುಮಾರ್‌ ಪ್ರತಿಕ್ರಿಯೆ ನೀಡಿದ್ದರು.

Whats_app_banner