ಭಾಗ್ಯಲಕ್ಷ್ಮಿ ಸೀರಿಯಲ್‌ ನಟಿ ಪದ್ಮಜಾ ರಾವ್‌ಗೆ 3 ತಿಂಗಳು ಜೈಲು, 40.20 ಲಕ್ಷ ದಂಡ ವಿಧಿಸಿದ ನ್ಯಾಯಾಲಯ; ಇವರು ಮಾಡಿದ ಅಪರಾಧವೇನು?-sandalwood news court sentenced actress padmaja rao to 3 months jail fined 40 20 lakhs cheque bounce case pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಭಾಗ್ಯಲಕ್ಷ್ಮಿ ಸೀರಿಯಲ್‌ ನಟಿ ಪದ್ಮಜಾ ರಾವ್‌ಗೆ 3 ತಿಂಗಳು ಜೈಲು, 40.20 ಲಕ್ಷ ದಂಡ ವಿಧಿಸಿದ ನ್ಯಾಯಾಲಯ; ಇವರು ಮಾಡಿದ ಅಪರಾಧವೇನು?

ಭಾಗ್ಯಲಕ್ಷ್ಮಿ ಸೀರಿಯಲ್‌ ನಟಿ ಪದ್ಮಜಾ ರಾವ್‌ಗೆ 3 ತಿಂಗಳು ಜೈಲು, 40.20 ಲಕ್ಷ ದಂಡ ವಿಧಿಸಿದ ನ್ಯಾಯಾಲಯ; ಇವರು ಮಾಡಿದ ಅಪರಾಧವೇನು?

Actress Padmaja Rao cheque bounce case: ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕನ್ನಡ ಸಿನಿಮಾ ಮತ್ತು ಕಿರುತೆರೆ ನಟಿ ಪದ್ಮಜಾ ರಾವ್‌ ಅವರಿಗೆ ಮಂಗಳೂರಿನ 8ನೇ ಜೆಎಂಎಫ್‌ಸಿ ಮೂರು ತಿಂಗಳ ಸಾದಾ ಜೈಲು ಶಿಕ್ಷೆ ಮತ್ತು 40.20 ಲಕ್ಷ ರೂಪಾಯಿ ದಂಡ ವಿಧಿಸಿದೆ.

ಭಾಗ್ಯಲಕ್ಷ್ಮಿ ಸೀರಿಯಲ್‌ ನಟಿ ಪದ್ಮಜಾ ರಾವ್‌ಗೆ ದಂಡ ವಿಧಿಸಿದ ಕೋರ್ಟ್‌
ಭಾಗ್ಯಲಕ್ಷ್ಮಿ ಸೀರಿಯಲ್‌ ನಟಿ ಪದ್ಮಜಾ ರಾವ್‌ಗೆ ದಂಡ ವಿಧಿಸಿದ ಕೋರ್ಟ್‌

ಬೆಂಗಳೂರು: ಕನ್ನಡ ಸಿನಿಮಾ ಮತ್ತು ಕಿರುತೆರೆ ನಟಿ ಪದ್ಮಜಾ ರಾವ್‌ ಅವರಿಗೆ 8ನೇ ಜೆಎಂಎಫ್‌ಸಿ ಮೂರು ತಿಂಗಳ ಸಾದಾ ಜೈಲು ಶಿಕ್ಷೆ ಮತ್ತು 40.20 ಲಕ್ಷ ರೂಪಾಯಿ ದಂಡ ವಿಧಿಸಿದೆ. ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯವು ಈ ತೀರ್ಪು ನೀಡಿದೆ. ಈ ಮೂಲಕ ಸ್ಯಾಂಡಲ್‌ವುಡ್‌ನಿಂದ ಜೈಲು ಪ್ರವೇಶಿಸಿದ ನಟಿ, ನಟರ ಸಾಲಿಗೆ ಹಿರಿಯ ನಟಿ ಪದ್ಮಜಾ ರಾವ್‌ ಹೊಸದಾಗಿ ಸೇರ್ಪಡೆಯಾಗುತ್ತಿದ್ದಾರೆ.

ಪದ್ಮಾಜಾ ರಾವ್‌ ಮಾಡಿದ ಅಪರಾಧವೇನು?

ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಗಳೂರು ನ್ಯಾಯಾಲಯವು ಮೂರು ತಿಂಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದೆ. ವೀರು ಟಾಕೀಸ್‌ ಸಂಸ್ಥೆಯ ಮಾಲೀಕರಾದ ಮಂಗಳೂರಿನ ವೀರೇಂದ್ರ ಶೆಟ್ಟಿ ಈಕೆಯ ವಿರುದ್ಧ ದೂರು ನೀಡಿದ್ದರು. ಸೀರಿಯಲ್‌ ನಟಿ ಪದ್ಮಜಾ ರಾವ್‌ ಅವರು 40 ಲಕ್ಷ ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಬೆಂಗಳೂರಿನ ಬನಶಂಕರಿಯಲ್ಲಿರುವ ಐಸಿಐಸಿಐ ಬ್ಯಾಂಕ್‌ನಲ್ಲಿರುವ ತಮ್ಮ ಖಾತೆಯ ಚೆಕ್‌ ನೀಡಿದ್ದರು. ಸಾಲ ವಾಪಸ್‌ ನೀಡಬೇಕಿದ್ದ ಸಮಯದಲ್ಲಿ ಚೆಕ್‌ ಅನ್ನು ಬ್ಯಾಂಕ್‌ಗೆ ಹಾಕಿದಾಗ ಖಾತೆಯಲ್ಲಿ ಅಷ್ಟೊಂದು ಹಣವಿರಲಿಲ್ಲ. ಹದಿನೈದು ದಿನಗಳ ಒಳಗೆ ಹಣ ನೀಡುವಂತೆ ನೋಟಿಸ್‌ ನೀಡಿದ್ದರೂ ಅವರು ಹಣ ಪಾವತಿಸಿಲ್ಲ. ಇಷ್ಟು ಮಾತ್ರವಲ್ಲದೆ ನಾನು ಸಾಲ ಪಡೆದಿಲ್ಲ, ಯಾವುದೇ ಚೆಕ್‌ ನೀಡಿಲ್ಲ ಎಂದು ನಟಿ ಪದ್ಮಜಾ ರಾವ್‌ ಹೇಳಿಕೆ ನೀಡಿದ್ದರು.

ಚೆಕ್‌ ಅನ್ನು ಬ್ಯಾಂಕ್‌ಗೆ ಹಾಕಿದ ಸಂದರ್ಭದಲ್ಲಿ ಪದ್ಮಜಾ ರಾವ್‌ ಅವರ ಖಾತೆಯಲ್ಲಿ ಹಣವಿರಲಿಲ್ಲ. ಜೂನ್‌ 30, 2020ರಂದು ನೋಟಿಸ್‌ ನೀಡಿದರೂ ಪ್ರಯೋಜನವಾಗಲಿಲ್ಲ. ನಾನು ಚೆಕ್‌ ನೀಡಿಲ್ಲ. ಯಾವುದೇ ಸಾಲ ಪಡೆದಿಲ್ಲ ಎಂದು ಪದ್ಮಜಾ ರಾವ್‌ ಹೇಳಿದ್ದರು. ಪದ್ಮಜಾ ರಾವ್‌ 52.70 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ಬೆಂಗಳೂರಿನ ಜೆಪಿ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. "ನಮ್ಮ ಮನೆಯಿಂದ ಚೆಕ್‌ ಕಳವು ಮಾಡಿ, ಪೋರ್ಜರಿ ಸಹಿ ಮಾಡಲಾಗಿದೆ" ಎಂದು ನಟಿಯ ಪರ ವಕೀಲರು ಕೋರ್ಟ್‌ನಲ್ಲಿ ವಾದಿಸಿದ್ದರು. ಆದರೆ, ಇದಕ್ಕೆ ಸಂಬಂಧಪಟ್ಟಂತೆ ಪೂರಕ ದಾಖಲೆ ನೀಡಲು ವಿಫಲರಾಗಿದ್ದರು.

ಈ ಕುರಿತು ಇತ್ತೀಚೆಗೆ ಎಂಟನೇ ಜೆಎಂಎಫ್‌ಸಿ ನ್ಯಾಯಾಲಯವು ತೀರ್ಪು ನೀಡಿದ್ದು, ಪದ್ಮಜಾ ರಾವ್‌ ಅವರು 40.20 ಲಕ್ಷ ರೂಪಾಯಿ ದಂಡ ಪಾವತಿಸಬೇಕು. ದೂರುದಾರರಿಗೆ 40.17 ಲಕ್ಷ ರೂಪಾಯಿ ಮತ್ತು ಸರಕಾರಕ್ಕೆ 3 ಸಾವಿರ ರೂಪಾಯಿ ನೀಡಬೇಕು" ಎಂದು ತೀರ್ಪು ನೀಡಿದ್ದು, ಜತೆಗೆ 3 ತಿಂಗಳ ಸಾದಾ ಜೈಲು ಶಿಕ್ಷೆಯನ್ನೂ ವಿಧಿಸಿದೆ.

ನಟಿ ಪದ್ಮಜಾ ರಾವ್‌ ನಟಿಸಿರುವ ಸಿನಿಮಾಗಳು

ಕನ್ನಡದಲ್ಲಿ ಹಲವು ಸಿನಿಮಾಗಳಲ್ಲಿ ನಟಿ ಪದ್ಮಜಾ ರಾವ್‌ ನಟಿಸಿದ್ದಾರೆ. ನಮ್ಮ ದುನಿಯಾ ನಮ್‌ ಸ್ಟೈಲ್‌, ಪೆಟ್ರೋಮ್ಯಾಕ್ಸ್‌, ಬಾಡಿ ಗಾರ್ಡ್‌, ಬಹುದ್ಧೂರ್‌, ಬಚ್ಚನ್‌, ವರದನಾಯಕ, ಅಧ್ಯಕ್ಷ ಇನ್‌ ಅಮೆರಿಕ, ಟಾಮ್‌ ಆಂಡ್‌ ಜೆರಿ, ಪಾರಿಜಾತ, ಬ್ರಹ್ಮಚಾರಿ, ರುಸ್ತುಂ, ಆರೇಂಜ್‌, ಕೃಷ್ಣ ತುಳಸಿ, ಆಟ, ಶಿವ, ಪಂಚಾಮೃತ, ಹಠವಾದಿ, ಚಾಲಿಪೋಲಿಲು, ಮುಂಗಾರು ಮಳೆ, ಬ್ರಹ್ಮ, ಗಾಳಿಪಟ, ರಾಕಿ, ಕ್ವಾಟ್ಲೆ ಸತೀಶ, ದಕ್ಷ, ಮಾದೇಶ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಪದ್ಮಜಾ ರಾವ್‌ ನಟಿಸಿರುವ ಸೀರಿಯಲ್‌ಗಳು

ಕಿರುತೆರೆ ಪ್ರೇಕ್ಷಕರಿಗೂ ಪದ್ಮಜಾ ರಾವ್‌ ಹಲವು ಸೀರಿಯಲ್‌ ಮೂಲಕ ಪರಿಚಿತರು. ಬೆಂಕಿಯಲ್ಲಿ ಅರಳಿದ ಹೂವು, ಸಮ ರೇಖೆಗಳು, ಶಿಖರ, ಅರಮನೆ ಗಿಳಿ, ಜೊತೆಜೊತೆಯಲಿ, ಹೂವಿ, ಭಾಗ್ಯಲಕ್ಷ್ಮಿ ಮುಂತಾದ ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ.