ಕನ್ನಡ ಸುದ್ದಿ  /  Entertainment  /  Sandalwood News Crazy Star Ravichandran About Premaloka Part 2 Manoranjan And Vikram Will Act In Premaloka 2 Mnj

Premaloka 2: ಅಪ್ಪ ರವಿಚಂದ್ರನ್‌ ಜತೆ ‘ಪ್ರೇಮಲೋಕ’ದಲ್ಲಿ ಕ್ರೇಜಿ ಬ್ರದರ್ಸ್; ಒಂದೇ ಸಿನಿಮಾದಲ್ಲಿ ಈಶ್ವರಿ ಕುಟುಂಬದ ಕುಡಿಗಳು

ಕಳೆದ ಕೆಲ ದಿನಗಳಿಂದ ಪ್ರೇಮಲೋಕ 2 ಸಿನಿಮಾದ ಬಗ್ಗೆ ಹೇಳಿಕೊಳ್ಳುತ್ತಲೇ ಬರುತ್ತಿದ್ದಾರೆ ನಟ, ನಿರ್ದೇಶಕ ರವಿಚಂದ್ರನ್.‌ ಇದೀಗ ಇದೇ ಸಿನಿಮಾದ ಬಗ್ಗೆ ಮತ್ತಷ್ಟು ಗುಟ್ಟು ಬಿಟ್ಟುಕೊಟ್ಟಿದ್ದಾರೆ.

Premaloka 2: ಅಪ್ಪ ರವಿಚಂದ್ರನ್‌ ಜತೆ ‘ಪ್ರೇಮಲೋಕ’ದಲ್ಲಿ ಕ್ರೇಜಿ ಬ್ರದರ್ಸ್; ಒಂದೇ ಸಿನಿಮಾದಲ್ಲಿ ಈಶ್ವರಿ ಕುಟುಂಬದ ಕುಡಿಗಳು
Premaloka 2: ಅಪ್ಪ ರವಿಚಂದ್ರನ್‌ ಜತೆ ‘ಪ್ರೇಮಲೋಕ’ದಲ್ಲಿ ಕ್ರೇಜಿ ಬ್ರದರ್ಸ್; ಒಂದೇ ಸಿನಿಮಾದಲ್ಲಿ ಈಶ್ವರಿ ಕುಟುಂಬದ ಕುಡಿಗಳು

Premaloka 2: ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಪುತ್ರರಾದ ಮನುರಂಜನ್ ಮತ್ತು ವಿಕ್ರಮ್ ಈಗ ಏನು ಮಾಡ್ತಾಯಿದ್ದಾರೆ. ಯಾವ ಸಿನಿಮಾ ಒಪ್ಪಿಕೊಂಡಿದ್ದಾರೆ ಅನ್ನೊದು ಕ್ರೇಜಿ ಕುಟುಂಬದ ಫ್ಯಾನ್ಸ್‌ಗಿರೋ ಪ್ರಶ್ನೆ. ವಿಕ್ರಮ್ ಅವರ ಮುಧೋಳ್ ಸಿನಿಮಾದ ಟೀಸರ್ ಬಿಟ್ರೇ ಬೇರೆ ಯಾವ ಅಪ್ ಡೇಟ್ ಕೂಡ ಬಂದಿಲ್ಲ. ಇನ್ನೂ ಮನುರಂಜನ್ ಅವರ ಮುಂದಿನ ಸಿನಿಮಾದ ಬಗ್ಗೆ ಯಾವುದೇ ಸುಳಿವು ಕೂಡ ಸಿಕ್ಕಿಲ್ಲ. ಈಗ ಕ್ರೇಜಿ ಪುತ್ರರ ಮುಂದಿನ ಸಿನಿಮಾದ ಬಗ್ಗೆ ಬಿಗ್ ಅಪ್‌ಡೇಟ್ ಸಿಕ್ಕಿದೆ. ಅದರಲ್ಲೂ ಈ ಕ್ರೇಜಿ ಬ್ರದರ್ಸ್ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಅದ್ಯಾಕೋ ಕ್ರೇಜಿ ಸ್ಟಾರ್ ಪುತ್ರರಿಗೆ ಬಿಗ್ ಹಿಟ್ ಸಿಗ್ತಾನೇ ಇಲ್ಲ. ಮನುರಂಜನ್ ಅವರ ಮುಗಿಲ್ ಪೇಟೆ ಸಿನಿಮಾ ತಕ್ಕ ಮಟ್ಟಿಗೆ ಯಶಸ್ಸು ಕಂಡಿತು ಆ ನಂತರ ಅವರ ಹೊಸ ಸಿನಿಮಾ ಅನೌನ್ಸ್ ಆಗಲೇ ಇಲ್ಲ. ವಿಕ್ರಮ್ ಅವರ ತಿವಿಕ್ರಮ ಸಿನಿಮಾ ತಕ್ಕಮಟ್ಟಿಗೆ ಯಶಸ್ಸು ಗಳಿಸಿತು ಆ ನಂತರ ಮುಧೋಳ್ ಸಿನಿಮಾ ಅನೌನ್ಸ್ ಆಗಿ ಒಂದು ವರ್ಷವಾದ್ರೂ ಅದರ ಬಗ್ಗೆ ಬೇರೆ ಅಪ್ ಡೇಟ್ ಬರಲೇ ಇಲ್ಲ. ಈಗ ಕ್ರೇಜಿ ಬ್ರದರ್ಸ್ ಒಟ್ಟಾಗಿ ಶತಾಯಗತಾಯ ಹಿಟ್ ಕೊಡಲೇಬೇಕು ಅಂತ ರೆಡಿಯಾಗಿ ಬಂದಿದ್ದಾರೆ.

ಹೌದು ಕ್ರೇಜಿ ಸ್ಟಾರ್ ಪುತ್ರರು ಈಗ ಒಟ್ಟಿಗೆ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದ ಮತ್ತೊಂದು ವಿಶೇಷ ಏನು ಅಂದರೇ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳ್ತಾಯಿರೋದು ಬೇರೆ ಯಾರು ಅಲ್ಲ ಕನಸುಗಾರ ರವಿಚಂದ್ರನ್! ರವಿಚಂದ್ರನ್ ಅವರು ಮತ್ತೆ ಪ್ರೇಮಲೋಕ ಸಿನಿಮಾ ಮಾಡ್ತಿನಿ ಅಂತ ಹೇಳಿದ್ದು ನಿಮಗೆಲ್ಲ ಗೊತ್ತೇಯಿದೆ. ಪ್ರೇಮಲೋಕ-2 ಸಿನಿಮಾದ ಕತೆ ಫೈನಲ್ ಆಗಿದೆ ಅಂತ ರವಿಮಾಮ ಹೇಳಿಕೊಂಡಿದ್ರು. ಈ ಸಿನಿಮಾದ ಮತ್ತೊಂದು ಎಕ್ಸ್ಕ್ಲೂಸಿವ್ ಅಪ್ ಡೇಟ್ ಏನು ಅಂದರೆ, ಈ ಸಿನಿಮಾದಲ್ಲಿ ರವಿಚಂದ್ರನ್ ಅವರ ಇಬ್ಬರು ಪುತ್ರರೂ ನಟಿಸಲಿದ್ದಾರೆ. ಮಕ್ಕಳ ಸಿನಿ ಕರಿಯರ್‌ಗೆ ಬ್ರೇಕ್ ಕೊಡಲು ಈಗ ಸ್ವತಃ ಕ್ರೇಜಿ ಸ್ಟಾರ್ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಪ್ರೇಮಲೋಕ 2 ಸಿನಿಮಾದಲ್ಲಿ ರವಿಚಂದ್ರನ್ ಕೂಡ ಆ್ಯಕ್ಟ್ ಮಾಡಿ ನಿರ್ದೇಶನ ಮಾಡಲಿದ್ದಾರೆ. ಈಗ ಆ ಸಿನಿಮಾಗೆ ಕ್ರೇಜಿ ಬ್ರದರ್ಸ್ ಎಂಟ್ರಿ ಕೊಟ್ಟಿದ್ದಾರೆ. ಈ ಕಾಂಬಿನೇಷನ್ ನೋಡ್ತಾಯಿದ್ರೇ ತೆಲುಗಿನ ಮನಂ ಸಿನಿಮಾ ನೆನಪಿಗೆ ಬರುತ್ತೆ. ಈ ಸಿನಿಮಾದಲ್ಲಿ ಅಕ್ಕಿನೇನಿ ಕುಟುಂಬದ ಎಲ್ಲಾ ಕುಡಿಗಳು ನಟಿಸಿದ್ದರು. ಈಗ ಕನ್ನಡದಲ್ಲಿ ವೀರಾಸ್ವಾಮಿ ಕುಟುಂಬದ ಎಲ್ಲಾ ಕುಡಿಗಳು ನಟಿಸುತ್ತಿರೋದು ವಿಶೇಷ ಅಂತ ಹೇಳಬಹುದು. ಈ ಸಿನಿಮಾದಲ್ಲಿ ಮತ್ತೊಂದು ಸರ್ಪ್ರೈಸ್ ಇದೆ ಅಂತ ಆಗಾಗ ರವಿಮಾಮ ಹೇಳ್ತಾಯಿರೋದು ನೋಡಿದ್ರೇ ರವಿಚಂದ್ರನ್ ಸಹೋದರ ಬಾಲಾಜಿ ಕೂಡ ಬಣ್ಣ ಹಚ್ಚುತ್ತಿರಬಹುದೇ? ಅದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಬೇಕಿದೆ.

ಯಾವಾಗ ಶುರುವಾಗುತ್ತೆ ಪ್ರೇಮಲೋಕ-2 ಸಿನಿಮಾ?

ಪ್ರೇಮ ಲೋಕ ಸಿನಿಮಾ ಮತ್ತೆ ಮಾಡ್ತಿನಿ ಈ ಸಿನಿಮಾದಲ್ಲಿ ಇಪ್ಪತ್ತೈದು ಹಾಡುಗಳಿರುತ್ವೆ ಅಂತ ಯಾವಾಗ ರವಿಚಂದ್ರನ್ ಹೇಳಿದ್ರೋ ಆಗಿನಿಂದ ಈ ಸಿನಿಮಾ ಬಗ್ಗೆ ಕನಸು ಕಾಣ್ತಾಯಿದ್ದಾರೆ ಕನಸುಗಾರನ ಅಭಿಮಾನಿಗಳು. ಈಗ ಸಿನಿಮಾ ಯಾವಾಗ ಶುರುವಾಗುತ್ತದೆ ಅನ್ನೋ ಅಪ್ಡೇಟ್ ಕೂಡ ರವಿಚಂದ್ರನ್ ಕೊಟ್ಟಿದ್ದಾರೆ. ಈ ಸಿನಿಮಾದ ಮುಹೂರ್ತ ರವಿಚಂದ್ರನ್ ಅವರ ಹುಟ್ಟುಹಬ್ಬದ ದಿನ ನೆರವೇರಲಿದೆ. ಇದೇ ತಿಂಗಳ 30ಕ್ಕೆ ರವಿಚಂದ್ರನ್ ಅವರ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಈ ಸಿನಿಮಾಗೆ ಚಾಲನೆ ಕೊಡೋಕೆ ಕ್ರೇಜಿಸ್ಟಾರ್ ನಿರ್ಧರಿಸಿದ್ದಾರೆ.

ಇಡೀ ಸಿನಿಮಾ ಸೆಟ್ ನಲ್ಲೇ ನಿರ್ಮಾಣ

ರವಿಚಂದ್ರನ್ ನಿರ್ದೇಶನ ಮತ್ತು ನಿರ್ಮಾಣದ ಸಿನಿಮಾ ಅಂದ್ರೇ ಅದು ಕಣ್ಣಿಗೆ ಹಬ್ಬ. ಅದ್ದೂರಿ ಸೆಟ್‌ಗಳು, ಬಣ್ಣಬಣ್ಣದ ಲೈಟಿಂಗ್‌ಗಳು ಇದ್ದೇ ಇರುತ್ತೆ. ಈ ಸಿನಿಮಾ ಕೂಡಾ ಅದೇ ರೀತಿಯಾಗಿ ಇರಲಿದೆಯಂತೆ. ಇಡೀ ಸಿನಿಮಾನಾ ಸೆಟ್‌ನಲ್ಲೇ ಶೂಟಿಂಗ್ ಮಾಡ್ತಾರಂತೆ ರವಿಚಂದ್ರನ್‌. ಹೀಗಾಗಿ ಐವತ್ತು ಅದ್ದೂರಿಯಾಗಿಯಾಗಿರೋ ಸೆಟ್‌ಗಳಿಗೆ ಭರ್ಜರಿಯಾಗಿ ಪ್ಲಾನ್ ರೂಪಿಸುತ್ತಿದ್ದಾರೆ ರವಿಚಂದ್ರನ್.

ಹೊಸ ಪ್ರಪಂಚ, ಇಡೀ ಪ್ರಪಂಚಕ್ಕೆ ತಲುಪುತ್ತೆ ಹೊಸ ಪ್ರೇಮಲೋಕ

ಇನ್ನೂ ಹೊಸ ಪ್ರೇಮಲೋಕದಲ್ಲಿ ಪ್ರೇಕ್ಷಕರಿಗೆ ನೋಡಲು ಹತ್ತಾರು ಹೊಸ ವಿಷಯಗಳಿರುತ್ತವೆ. ಇದು ಇಂದಿನ ಪೀಳಿಗೆಯ ಚಿತ್ರ. ಪ್ರೀತಿ ದೇಶ, ಭಾಷೆ, ಗಡಿಯನ್ನೂ ಮೀರಿದ್ದು. ಅದು ಪ್ರಪಂಚದ ಎಲ್ಲ ಕಡೆಗೂ ವ್ಯಾಪಿಸಿರುತ್ತದೆ. ಹಾಗೇ “ಪ್ರೇಮಲೋಕ’ ಸಿನಿಮಾ ಕೂಡ. ಕನ್ನಡ ಸಿನಿಮಾ ಪ್ರೇಕ್ಷಕರಿಗಷ್ಟೇ ಈ ಸಿನಿಮಾ ಅನ್ವಯಿಸುವುದಿಲ್ಲ. ಪ್ರಪಂಚದ ಎಲ್ಲರಿಗೂ ಈ ಸಿನಿಮಾದ ಪಾತ್ರಗಳು ಕನೆಕ್ಟ್ ಆಗುತ್ತದೆ ಅನ್ನೋ ಮಾಹಿತಿಯನ್ನ ಸ್ವತಃ ರವಿಚಂದ್ರನ್ ಅವರೇ ಬಿಟ್ಟುಕೊಟ್ಟಿದ್ದಾರೆ. ಈ ಮೂಲಕ ಕ್ರೇಜಿ ಸ್ಟಾರ್ ಹೊಸ ಪ್ರೇಮಲೋಕವನ್ನ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರೆಡಿ ಮಾಡ್ತಾರೆ ಅನ್ನೋ ಚರ್ಚೆ ಕೂಡ ಶುರುವಾಗಿದೆ.

ಪ್ರೇಮಲೋಕ ಅಂದರೆ ರವಿಚಂದ್ರನ್ ಜೊತೆಗೆ ನೆನಪಾಗೋ ಇನ್ನೊಂದು ಹೆಸರು ನಾದ ಬ್ರಹ್ಮ ಹಂಸಲೇಖ ಹೊಸ ಪ್ರೇಮಲೋಕಕ್ಕೂ ಹಂಸಲೇಖ ಅವರ ರೊಮ್ಯಾಂಟಿಕ್ ಮ್ಯೂಸಿಕ್ ಇರಲಿ ಅನ್ನೋದು ಕ್ರೇಜಿ ಫ್ಯಾನ್ಸ್ ಆಸೆ. ಈ ಬಗ್ಗೆ ರವಿಚಂದ್ರನ್ ಅವರ ಹುಟ್ಟು ಹಬ್ಬದ ದಿನ ಮಾಹಿತಿ ಸಿಗಲಿದೆ.

ವರದಿ: ಮನೋಜ್ ವಿಜಯೀಂದ್ರ, ಬೆಂಗಳೂರು

IPL_Entry_Point