ನಾನು ರಿಮೇಕ್‌ ಸಿನಿಮಾ ಹೀರೋ ಅಲ್ಲ, ಹೀಗೂ ರಿಮೇಕ್‌ ಮಾಡಬಹುದು ಅಂತ ತೋರಿಸಿಕೊಟ್ಟವನು; ರವಿಚಂದ್ರನ್‌
ಕನ್ನಡ ಸುದ್ದಿ  /  ಮನರಂಜನೆ  /  ನಾನು ರಿಮೇಕ್‌ ಸಿನಿಮಾ ಹೀರೋ ಅಲ್ಲ, ಹೀಗೂ ರಿಮೇಕ್‌ ಮಾಡಬಹುದು ಅಂತ ತೋರಿಸಿಕೊಟ್ಟವನು; ರವಿಚಂದ್ರನ್‌

ನಾನು ರಿಮೇಕ್‌ ಸಿನಿಮಾ ಹೀರೋ ಅಲ್ಲ, ಹೀಗೂ ರಿಮೇಕ್‌ ಮಾಡಬಹುದು ಅಂತ ತೋರಿಸಿಕೊಟ್ಟವನು; ರವಿಚಂದ್ರನ್‌

“ರವಿಚಂದ್ರನ್‌ ಸಿನಿಮಾ ಅಂದ್ರೆ ರಿಮೇಕು.. ರಿಮೇಕು.. ರಿಮೇಕ್‌ ಅಂತ ಜನ ಹೇಳ್ತಾರೆ.. ದಯವಿಟ್ಟು ಒರಿಜಿನಲ್‌ ಸಿನಿಮಾವನ್ನೂ ನೋಡಿ, ನಾನು ಮಾಡಿರುವ ಸಿನಿಮಾವನ್ನೂ ನೋಡಿ. ನಾನು ರಿಮೇಕ್‌ ಮಾಡಿಲ್ಲ. ಹೀಗೂ ರಿಮೇಕ್‌ ಮಾಡಬಹುದು ಅಂತ ತೋರಿಸಿಕೊಟ್ಟಿದ್ದೇನೆ” ಎಂದು ರಿಮೇಕ್‌ ಚಿತ್ರಗಳ ಬಗ್ಗೆ ಮಾತನಾಡಿದ್ದಾರೆ ರವಿಚಂದ್ರನ್‌.

ನಾನು ರಿಮೇಕ್‌ ಸಿನಿಮಾ ಹೀರೋ ಅಲ್ಲ, ಹೀಗೂ ರಿಮೇಕ್‌ ಮಾಡಬಹುದು ಅಂತ ತೋರಿಸಿಕೊಟ್ಟವನು; ರವಿಚಂದ್ರನ್‌
ನಾನು ರಿಮೇಕ್‌ ಸಿನಿಮಾ ಹೀರೋ ಅಲ್ಲ, ಹೀಗೂ ರಿಮೇಕ್‌ ಮಾಡಬಹುದು ಅಂತ ತೋರಿಸಿಕೊಟ್ಟವನು; ರವಿಚಂದ್ರನ್‌

Ravichandran Talked about Remake Movies: ಕ್ರೇಜಿಸ್ಟಾರ್‌ ರವಿಚಂದ್ರನ್‌, ಸ್ಯಾಂಡಲ್‌ವುಡ್‌ ಕಂಡ ಸ್ಟಾರ್‌ ನಟ. ತಮ್ಮ ಸಿನಿಮಾಗಳ ಮೂಲಕ ಹೊಸ ಹೊಸ ಪ್ರಯತ್ನ, ಪ್ರಯೋಗಗಳನ್ನು ಮಾಡುತ್ತಿದ್ದ ಕಲಾವಿದ, ನಿರ್ದೇಶಕ, ಸಂಗೀತ ನಿರ್ದೇಶಕ ಮತ್ತು ನಿರ್ಮಾಪಕ. ರವಿಚಂದ್ರನ್‌ ಅಂದ್ರೆ ಇಂದಿಗೂ ಅವರ ಸೂಪರ್‌ ಹಿಟ್‌ ಸಿನಿಮಾಗಳು ಕಣ್ಣ ಮುಂದೆ ತೇಲಿ ಬರುತ್ತವೆ. ಅದರಲ್ಲೂ ದಶಕಗಳ ಹಿಂದಿನ ಅವರ ಹಾಡುಗಳು, ಇಂದಿಗೂ ಮಾಸ್ಟರ್‌ ಪೀಸ್‌. ರವಿಚಂದ್ರನ್‌ಗೆ ವಯಸ್ಸಾದರೂ, ಹಂಸಲೇಖ ಜತೆ ಸೇರಿ ಕನ್ನಡಕ್ಕೆ ಕೊಟ್ಟ ಅವರ ಹಾಡುಗಳಿಗೆ ಈಗಿನ್ನೂ ಹದಿಹರೆಯ!

ಹೀಗೆ ಆಗಿನ ಕಾಲದಲ್ಲಿ ಸಾಲು ಸಾಲು ಹಿಟ್‌ ಸಿನಿಮಾಗಳ ಸರದಾರನಾಗಿ ರವಿಚಂದ್ರನ್‌ ಅವರಿಗೆ, ರಿಮೇಕ್‌ ಹೀರೋ ಅನ್ನೋ ಪಟ್ಟವೂ ಅಂಟಿಕೊಂಡಿತ್ತು. ರಿಮೇಕ್‌ ಸಿನಿಮಾ ಮಾಡಿ ಗೆದ್ದಿದ್ದಾನೆ ಅಂದವರೂ ಹೆಚ್ಚು. ನಾನು ರಿಮೇಕ್‌ ಮಾಡಿರಬಹುದು, ಅದೇ ರಿಮೇಕ್‌ ಅನ್ನು ಹೀಗೂ ಮಾಡಬಹುದು ಅಂತ ತೋರಿಸಿಕೊಟ್ಟವನು ನಾನು ಎಂದು ಅಷ್ಟೇ ಗರ್ವದಿಂದ ಹೇಳಿಕೊಂಡಿದ್ದಾರೆ ರವಿಚಂದ್ರನ್‌. ಈ ಹಿಂದಿನ ಸಂದರ್ಶನವೊಂದರಲ್ಲಿ ಈ ರಿಮೇಕ್‌ ಸಿನಿಮಾಗಳ ಬಗ್ಗೆ ಕ್ರೇಜಿಸ್ಟಾರ್‌ ಮಾತನಾಡಿದ್ದಾರೆ.

ಬಾಲಿವುಡ್‌ ಆಫರ್‌ ರಿಜೆಕ್ಟ್‌ ಮಾಡಿದ್ದ ರವಿಚಂದ್ರನ್‌..

"ನಾವು ಯಾರಿಗಿಂತಲೂ ಕಮ್ಮಿ ಇಲ್ಲ ಎಂಬುದನ್ನು ಇವತ್ತಲ್ಲ, ಯಾವತ್ತಿದ್ದರೂ ಪ್ರೂವ್‌ ಮಾಡೋಕೆ ಅಂತಾನೇ ನಾನು ಕರ್ನಾಟಕದಲ್ಲಿಯೇ, ಕನ್ನಡದಲ್ಲಿಯೇ ಉಳಿದುಕೊಂಡೆ. ಕನ್ನಡದಲ್ಲಿಯೂ ಇರ್ತೀನಿ. ಶ್ರೀದೇವಿ ಅವರ ಜತೆ ಹಿಂದಿ ಸಿನಿಮಾ ಡೈರೆಕ್ಟ್‌ ಮಾಡುವ ಆಫರ್‌ ಬಂದಾಗಲೇ, ರಿಜೆಕ್ಟ್‌ ಮಾಡಿ ಇಲ್ಲಿಯೇ ಉಳಿದವನು ನಾನು. ಪ್ರೇಮಲೋಕ ಸಿನಿಮಾ ಮಾಡಿದಾಗಲೂ ಹಿಂದಿಯಿಂದ ಡೈರೆಕ್ಷನ್‌ ಆಫರ್‌ ಬಂದಿತ್ತು"

ಹೀಗೂ ರಿಮೇಕ್‌ ಮಾಡಬಹುದು ಅಂತ ತೋರಿಸಿದ್ದೇನೆ..

"ರವಿಚಂದ್ರನ್‌ ಸಿನಿಮಾ ಅಂದ್ರೆ ರಿಮೇಕು.. ರಿಮೇಕು.. ರಿಮೇಕ್‌ ಅಂತ ಜನ ಹೇಳ್ತಾರೆ.. ದಯವಿಟ್ಟು ಒರಿಜಿನಲ್‌ ಸಿನಿಮಾವನ್ನೂ ನೋಡಿ, ನಾನು ಮಾಡಿರುವ ಸಿನಿಮಾವನ್ನೂ ನೋಡಿ. ನಾನು ರಿಮೇಕ್‌ ಮಾಡಿಲ್ಲ. ಶಾಟ್‌ ಟು ಶಾಟ್‌ ಶೂಟ್‌ ಮಾಡಿ ತೆಗೆದಿಡೋದು ರಿಮೇಕ್.‌ ನಾನು ಆ ರೀತಿ ಸಿನಿಮಾ ಮಾಡಲ್ಲ. ಆ ಥರ ಸಿನಿಮಾ ಮಾಡೋಕೆ ನನಗೆ ಬರಲ್ಲ. ಜನ ಏನೇನೋ ಹೇಳ್ತಾರೆ. ಹಾಗಂತ ನಾನು ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಲ್ಲ. ಹೀಗೂ ರಿಮೇಕ್‌ ಮಾಡಬಹುದು ಅಂತ ತೋರಿಸಿದ್ದೇನೆ"

ರಿಮೇಕ್‌ ಅಂತ ಬೆರಳು ಮಾಡಿ ತೋರಿಸಬೇಡಿ..

"ರಿಮೇಕ್‌ ಚಿತ್ರೋದ್ಯಮದ ಒಂದು ಅಂಗ. ಅದು ಕಳ್ಳತನ ಅಲ್ಲ. ಯಾರು ಬೇಕಾದರೂ ಮೂಲ ಸಿನಿಮಾದ ಹಕ್ಕು ತಂದು ಸಿನಿಮಾ ಮಾಡಬಹುದು. ನಾನು ಹತ್ತು ಸಿನಿಮಾ ಮಾಡಿರಬಹುದು, ಇನ್ನೊಬ್ಬರು ಎರಡು ಸಿನಿಮಾ ಮಾಡಿರಬಹುದು. ಆದರೆ ಎಲ್ಲರೂ ರಿಮೇಕ್‌ ಮಾಡಿದ್ದಾರೆ. ಹಾಗಾಗಿ ರಿಮೇಕ್‌ ರಿಮೇಕ್‌ ಅಂತ ಬೆರಳು ಮಾಡಿ ತೋರಿಸಬೇಡಿ. ನಾನು ಮಾಡಿರುವ ರಿಮೇಕ್‌ ನೋಡಿ, ಪ್ರತಿಯೊಬ್ಬರೂ ಬಾಯಿ ಮೇಲೆ ಕೈಯಿಟ್ಟುಕೊಂಡ ಉದಾಹರಣೆಗಳು ಸಾಕಷ್ಟಿವೆ."

"ರಣಧೀರ ಸಿನಿಮಾನಾ ಸುಭಾಷ್‌ ಘಾಯ್‌ ನೋಡಿ, ಇದು ನನ್ನ ಸಿನಿಮಾನಾ? ಅಂತ ಅಚ್ಚರಿ ಹೊರಹಾಕಿ, ನನ್ನ ರಣಧೀರ ಚಿತ್ರದ ಸಿಡಿ ಇದೀಗ ಅವರ ಆಫೀಸ್‌ನಲ್ಲಿದೆ. ಅವ್ರು ಹಿಂದಿಯಲ್ಲಿ ಮಾಡಿದ್ರು. ಅವರಿಗಿಂತ ನೂರು ಪಾಲು ಬೆಟರ್‌ ನಮ್ಮ ರಣಧೀರ ಸಿನಿಮಾ ಆಗಿತ್ತು. ಎಷ್ಟು ಚೆನ್ನಾಗಿ ಮಾಡಿದ್ದೀರಾ ಹಿಂದಿಯವ್ರು ಹೇಳ್ತಾರೆ. ಮಾಡಿದರೋದನ್ನೇ ಇನ್ನೊಂದು ಲೆವೆಲ್‌ಗೆ ಸಿನಿಮಾ ಮಾಡಿ ತೋರಿಸಬೇಕಲ್ವಾ? ಅದರ ತಾಕತ್ತು ಎಷ್ಟು ಜನಕ್ಕಿದೆ ಅನ್ನೋದು ಗೊತ್ತಿರಬೇಕು"

ಇಳಯರಾಜಾ, ಪಿ ವಾಸುಗೆ ಹೊಟ್ಟೆಯುರಿ..

"ಅಣ್ಣಯ್ಯ ಆಗಿರಬಹುದು.. ಯಾವುದೇ ಆಗಿರಬಹುದು. ನಾನೇ ಎಲ್ಲವನ್ನೂ ಚೇಂಜ್‌ ಮಾಡಿರ್ತಿನಿ. ರಾಮಾಚಾರಿ ಸಿನಿಮಾ ನೋಡಿ, ಇಂದಿಗೂ ಇಳಯರಾಜಾ ನನ್ನನ್ನು ನೋಡಿ ಬೈತಾರೆ. ತಮಿಳಿನಲ್ಲಿ ಅಷ್ಟು ದೊಡ್ಡ ಹಿಟ್‌ ಸಿನಿಮಾ ಅದು. ಸಂಗೀತದ ಮೂಲಕವೇ ಹಿಟ್‌ ಆಗಿದ್ದ ಆ ಸಿನಿಮಾದ ಹಾಡನ್ನೇ ರಿಮೇಕ್‌ನಲ್ಲಿ ನೀನು ಬದಲಾಯಿಸ್ತಿಯಲ್ಲ.. ಎಂದಿದ್ದರು. ನನಗೆ ಪಿಕ್ಚರ್‌ ಇಷ್ಟ ಆಯ್ತು, ಆದರೆ, ಯತಾವತ್ತಾಗಿ ಸಿನಿಮಾ ಮಾಡೋಕೆ ನನ್ನ ಕೈಲಿ ಆಗಲ್ಲ ಎಂದಿದ್ದೆ"

ಕರ್ನಾಟಕದ ಮೇಲೆ ದೊಡ್ಡ ಋಣ ಇದೆ..

"ಅದನ್ನೇ ಮಾಡಿದ್ರೆ, ನಮಗೆ ನಮ್ಮ ತಾಕತ್ತು ಹೇಗೆ ಗೊತ್ತಾಗೋದು. ಹಾಗಾಗಿ ಆ ಹಾಡುಗಳನ್ನು ನಾನು ರಾಮಾಚಾರಿ ಚಿತ್ರದಲ್ಲಿ ಬಳಸಲಿಲ್ಲ. ಪಿ ವಾಸು ಸಹ ಅದನ್ನೇ ಹೇಳ್ತಾರೆ. ಚಿನ್ನ ತಂಬಿ ಹಿಟ್‌ ಆಗಿದ್ದೇ ಇಳಯರಾಜಾ ಮ್ಯೂಸಿಕ್‌ ಇಂದ. ಆ ಮ್ಯೂಸಿಕ್‌ ಬದಲಾಯಿಸಿಯೇ ಸಿನಿಮಾ ಹಿಟ್‌ ಮಾಡಿ ತೋರಿಸಿದ್ರಿ ಅಂದಿದ್ರು ವಾಸು. ಯಾಕಂದ್ರೆ, ನಾನು ಕರ್ನಾಟಕಕ್ಕೆ, ಇಲ್ಲಿನ ಮಣ್ಣಿಗೆ ಹಾನೆಸ್ಟ್‌ ಆಗಿ, ನಿಷ್ಠೆಯಿಂದ ಬದುಕಿದವನು. ನಾನು ಪೆನ್ನು ಹಿಡಿದವನಲ್ಲ, ಇದೀಗ ಪೆನ್ನು ಹಿಡಿದಿದ್ದೇನೆ. ತಪ್ಪಿದ್ದರೂ ತಿದ್ದಿಕೊಳ್ತಿನಿ. ಹಾಡಿನ ಸಾಹಿತ್ಯ ಬರೀತಿನಿ ಅಂದರೆ, ಈ ಮಣ್ಣು ನನಗೆ ಕಲಿಸಿದ್ದು. ದೊಡ್ಡ ಋಣ ಇದೆ" ಎಂದಿದ್ದಾರೆ ರವಿಚಂದ್ರನ್.

Whats_app_banner