Jingo Movie: ಅಭಿಮಾನಿಗಳಿಗೆ ಡಾಲಿ ಧನಂಜಯ್ ಹುಟ್ಟುಹಬ್ಬದ ಕೊಡುಗೆ; ನರ ನರ ಜಿಂಗೋ ನರನಾಡಿ ಜಿಂಗೋ!-sandalwood news daali dhananjay birthday blast jingo movie title revealed by daali pictures fans happy pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Jingo Movie: ಅಭಿಮಾನಿಗಳಿಗೆ ಡಾಲಿ ಧನಂಜಯ್ ಹುಟ್ಟುಹಬ್ಬದ ಕೊಡುಗೆ; ನರ ನರ ಜಿಂಗೋ ನರನಾಡಿ ಜಿಂಗೋ!

Jingo Movie: ಅಭಿಮಾನಿಗಳಿಗೆ ಡಾಲಿ ಧನಂಜಯ್ ಹುಟ್ಟುಹಬ್ಬದ ಕೊಡುಗೆ; ನರ ನರ ಜಿಂಗೋ ನರನಾಡಿ ಜಿಂಗೋ!

Daali Dhananjay Birthday: ಆಗಸ್ಟ್‌ 23ರಂದು ಕನ್ನಡ ನಟ ಡಾಲಿ ಧನಂಜಯ್‌ ಹುಟ್ಟುಹಬ್ಬ. ಹುಟ್ಟುಹಬ್ಬದ ಶುಭ ಸಮಯದಲ್ಲಿ ಅಭಿಮಾನಿಗಳಿಗೆ ಡಾಲಿ ಫಿಕ್ಚರ್ಸ್‌ ಕಡೆಯಿಂದ ಗುಡ್‌ನ್ಯೂಸ್‌ ಬಂದಿದೆ. ಡಾಲಿ ಧನಂಜಯ್‌ ಮುಂದಿನ ಸಿನಿಮಾ "ಜಿಂಗೋ" ಪೋಸ್ಟರ್‌ ಲಾಂಚ್‌ ಆಗಿದೆ.

Jingo Movie: ಅಭಿಮಾನಿಗಳಿಗೆ ಡಾಲಿ ಧನಂಜಯ್ ಹುಟ್ಟುಹಬ್ಬದ ಕೊಡುಗೆಯಾಗಿ ಜಿಂಗೋ ಸಿನಿಮಾದ ಕುರಿತು ಮಾಹಿತಿ ನೀಡಲಾಗಿದೆ.
Jingo Movie: ಅಭಿಮಾನಿಗಳಿಗೆ ಡಾಲಿ ಧನಂಜಯ್ ಹುಟ್ಟುಹಬ್ಬದ ಕೊಡುಗೆಯಾಗಿ ಜಿಂಗೋ ಸಿನಿಮಾದ ಕುರಿತು ಮಾಹಿತಿ ನೀಡಲಾಗಿದೆ.

Daali Dhananjay Birthday: ಆಗಸ್ಟ್‌ 23ರಂದು ಕನ್ನಡ ನಟ ಡಾಲಿ ಧನಂಜಯ್‌ ಹುಟ್ಟುಹಬ್ಬ. ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ನಟ ನಿರ್ಧರಿಸಿದ್ದರು. ಆದರೆ, ಅದಕ್ಕೆ ಮುನ್ನ ಹುಟ್ಟುಹಬ್ಬದ ಬ್ಲಾಸ್ಟ್‌ ಆಗಿ ಡಾಲಿ ಫಿಕ್ಚರ್ಸ್‌ನ ಮುಂದಿನ ಸಿನಿಮಾದ ಹೆಸರು ಘೋಷಿಸಿದ್ದಾರೆ. ಜಿ... ಮುಂದೆ ಒಂದಿಷ್ಟು ಪ್ರಶ್ನಾರ್ಥಕ ಚಿಹ್ನೆ ಹಾಕಿ ನರ ನರ ಜಿಂಗೋ ನರನಾಡಿ ಜಿಂಗೋ! ಎಂದು ಕ್ಯಾಪ್ಷನ್‌ ಬರೆದಿದ್ದಾರೆ. ಈ ಮೂಲಕ ತಮ್ಮ ಮುಂದಿನ ಸಿನಿಮಾದ ಹೆಸರು ಜಿಂಗೋ ಎಂದು ಸೂಚನೆ ನೀಡಿದ್ದಾರೆ.

ಡಾಲಿ ಧನಂಜಯ್‌ ಮುಂದಿನ ಸಿನಿಮಾ ಜಿಂಗೋ

ಡಾಲಿ ಧನಂಜಯ್‌ ಹುಟ್ಟುಹಬ್ಬದ ಬ್ಲಾಸ್ಟ್‌ ಹೊರಬಿದ್ದಿದೆ. ಜಿಂಗೋ ಮುಂದಿನ ಸಿನಿಮಾ ಎಂದು ಡಾಲಿ ಫಿಕ್ಚರ್ಸ್‌ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಬ್ರೇಕಿಂಗ್‌ ಸುದ್ದಿ ಹಂಚಿಕೊಳ್ಳಲಾಗಿದೆ.

ಈ ಪೋಸ್ಟರ್‌ ನೋಡಿ ಅಭಿಮಾನಿಗಳು ಖುಷಿಗೊಂಡಿದ್ದಾರೆ. ಜಿಂಗೋ ಹೆಸರು ಬೆಂಕಿಯಂತೆ ಇದೆ ಎಂದು ಎಲ್ಲರೂ ಬೆಂಕಿ ಇಮೋಜಿ ಹಾಕಿದ್ದಾರೆ. ನಮಗೆ ಇದೇ ಬೇಕಾಗಿರೋದು ನರನರ ಜಿಂಗೋ, ನರನಾಡಿ ಜಿಂಗೋ ಎಂದು ಫ್ಯಾನ್ಸ್‌ ಕಾಮೆಂಟ್‌ ಮಾಡುತ್ತಿದ್ದಾರೆ. ಡಾಲಿ ಫಿಕ್ಚರ್ಸ್‌ ಹಂಚಿಕೊಂಡ ಪೋಸ್ಟರ್‌ನಲ್ಲಿ ಉದ್ದ ಕೂದಲಿನ ವ್ಯಕ್ತಿಯೊಬ್ಬರು ಹಿಂದಕ್ಕೆ ತಿರುಗಿ ನಿಂತಿದ್ದಾರೆ. ಇದು ಡಾಲಿ ಧನಂಜಯ್‌ ಹೌದೋ ಅಲ್ವೋ ಎಂದು ಡೌಟ್‌ ಬರುವಂತೆ ಇದೆ. ಉದ್ದಕೂದಲು ನೋಡಿದಾಗ ಕೆಲವರಿಗೆ ಶಿವಣ್ಣನ ನೆನಪಾಗಿದೆ. ಮೈಕ್‌ ಮುಂದೆ ಭಾಷಣ ಮಾಡುವ ಸೀನ್‌ ಇದಾಗಿದೆ. ಮುಂದೆ ಸಾವಿರಾರು ಜನರು ಪ್ರೇಕ್ಷಕರು ಇದ್ದಾರೆ. ಈ ಪೋಸ್ಟರ್‌ ಸಾಕಷ್ಟು ಕುತೂಹಲ ಕೆರಳಿಸಿದೆ.

ಹುಟ್ಟುಹಬ್ಬ ಆಚರಿಸಿಕೊಳ್ಳದ ಡಾಲಿ

ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎಂದು ಡಾಲಿ ಧನಂಜಯ್‌ ಮಾಹಿತಿ ನೀಡಿದ್ದರು. "August 23, ಪ್ರತಿ ವರ್ಷದಂತೆ ನಿಮ್ಮೊಡನೆ ಹುಟ್ಟು ಹಬ್ಬವನ್ನು ಸಂಭ್ರಮಿಸಿದ ಉತ್ಸಾಹವಿದ್ದರೆ , ಕಾರಣಾಂತರಗಳಿಂದ ಆಚರಿಸಲಾಗುತ್ತಿಲ್ಲ. ಕ್ಷಮೆಯಿರಲಿ. ಎಲ್ಲಿರುತ್ತೀರೋ ಅಲ್ಲಿಂದಲೇ ಹರಸಿ, ಹಾರೈಸಿ. ಆದಷ್ಟು ಬೇಗ ಸಿಗೋಣ, ಸಾಕಷ್ಟು ಒಳ್ಳೆ ವಿಷಯಗಳೊಂದಿಗೆ, ಸಂಭ್ರಮಗಳೊಂದಿಗೆ. ಪ್ರೀತಿಯಿರಲಿ" ಎಂದು ಡಾಲಿ ಧನಂಜಯ್‌ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದರು.

ಡಾಲಿ ಧನಂಜಯ್‌ ನಟನೆಯ ಕೋಟಿ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ

ಡಾಲಿ ಧನಂಜಯ್‌ ನಟನೆಯ ಕೋಟಿ ಸಿನಿಮಾ ಆಗಸ್ಟ್‌ 14ರಂದು ಒಟಿಟಿಯಲ್ಲಿ ಬಿಡುಗಡೆಯಾಗಿತ್ತು. ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಈ ಸಿನಿಮಾ ಲಭ್ಯವಿದ್ದು, ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯುತ್ತಿದೆ. ಇದೇ ಸಮಯದಲ್ಲಿ ತನ್ನ ಹುಟ್ಟುಹಬ್ಬಕ್ಕೆ ಮುನ್ನ ಡಾಲಿ ಧನಂಜಯ್‌ ನಟನೆಯ ಜಿಂಗೋ ಸಿನಿಮಾದ ಕುರಿತು ಅಪ್‌ಡೇಟ್‌ ಹೊರಬಿದ್ದಿದೆ. ಡಾಲಿ ನಟನೆಯ ಉತ್ತರಕಾಂಡ ಸಿನಿಮಾ ಈ ವರ್ಷ ರಿಲೀಸ್‌ ಆಗಲಿದೆ. ಶಿವಣ್ಣನ ಜತೆ ಡಾಲಿ ಉತ್ತರಕಾಂಡದಲ್ಲಿ ನಟಿಸಿದ್ದಾರೆ.