Daali Dhananjaya: ಶಾಕುಂತ್ಲೆಯ ಪ್ರಿಯಕರನನ್ನು ಜುಡಿಷಿಯಲ್ ಕಸ್ಟಡಿಗೆ ಪಡೆದ ಡಾಲಿ! 5ನೇ ಸಿನಿಮಾ ನಿರ್ಮಾಣಕ್ಕಿಳಿದ ಧನಂಜಯ್
ಧನಂಜಯ್ ಅವರ ಡಾಲಿ ಪಿಕ್ಚರ್ಸ್ ಬ್ಯಾನರ್‌ನಿಂದ 5ನೇ ಸಿನಿಮಾ ಸೆಟ್ಟೇರಿದೆ. ಸೂಪರ್ ಸಕ್ಸಸ್ ನೀಡಿರುವ ಡಾಲಿ ಪಿಕ್ಚರ್ಸ್ ಇದೀಗ ಮತ್ತೊಂದು ವಿಭಿನ್ನ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದೆ. ಈ ಬಾರಿ 'ನಡುವೆ ಅಂತರವಿರಲಿ' ಸಿನಿಮಾ ಖ್ಯಾತಿಯ ನಟ ಪ್ರಖ್ಯಾತ್ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾಗೆ ಜೆಸಿ ಎಂದು ಟೈಟಲ್ ಇಡಲಾಗಿದೆ.
Daali Dhananjaya: ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ನಟನೆ ಜತೆಗೆ ಸಿನಿಮಾ ನಿರ್ಮಾಣದಲ್ಲೂ ಯಶ ಕಂಡಿದ್ದಾರೆ. ಒಂದಲ್ಲ ಎರಡಲ್ಲ ಒಟ್ಟು ನಾಲ್ಕು ಸಿನಿಮಾಗಳನ್ನು ಈಗಾಗಲೇ ನಿರ್ಮಾಣ ಮಾಡಿ, ಲಾಭದ ಕಡೆಗೂ ಹೊರಳಿದ್ದಾರೆ. ಗಟ್ಟಿ ಕಥೆಯ, ಸಣ್ಣ ಬಜೆಟ್ ಸಿನಿಮಾಗಳನ್ನೇ ಆಯ್ಕೆ ಮಾಡಿಕೊಂಡು, ಕನ್ನಡ ಪ್ರೇಕ್ಷಕರಿಗೆ ಸದಭಿರುಷಿಯ ಸಿನಿಮಾ ನೀಡುತ್ತಿದ್ದಾರೆ. ಇದೀಗ ಸದ್ದಿಲ್ಲದೆ ಐದನೇ ಸಿನಿಮಾ ಸೆಟ್ಟೇರಿದೆ. ಚಿತ್ರಕ್ಕೆ 'ಜೆಸಿ ಯೂನಿವರ್ಸಿಟಿ' ಎಂಬ ಶೀರ್ಷಿಕೆ ಇಡಲಾಗಿದೆ.
ಹೌದು, ಧನಂಜಯ ಅವರ ಡಾಲಿ ಪಿಕ್ಚರ್ಸ್ ಬ್ಯಾನರ್‌ನಿಂದ 5ನೇ ಸಿನಿಮಾ ಸೆಟ್ಟೇರಿದೆ. ಸೂಪರ್ ಸಕ್ಸಸ್ ನೀಡಿರುವ ಡಾಲಿ ಪಿಕ್ಚರ್ಸ್ ಇದೀಗ ಮತ್ತೊಂದು ವಿಭಿನ್ನ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದೆ. ಈ ಬಾರಿ ಡಾಲಿ ಪಿಕ್ಚರ್ಸ್ ವತಿಯಿಂದ 'ನಡುವೆ ಅಂತರವಿರಲಿ' ಸಿನಿಮಾ ಖ್ಯಾತಿಯ ನಟ ಪ್ರಖ್ಯಾತ್ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾಗೆ ಜೆಸಿ ಎಂದು ಟೈಟಲ್ ಇಡಲಾಗಿದೆ. ಜೆಸಿ ಎಂದರೆ ಜುಡಿಷಿಯಲ್ ಕಸ್ಟಡಿ. ಜೈಲಿಂದ ಹೊರ ಬಂದ ಯುವಕನ ಕಥೆ ಇದಾಗಿದೆ.
ಬುಧವಾರ ಬೆಳ್ಳಂಬೆಳಗ್ಗೆ ಜೆಸಿ ಸಿನಿಮಾದ ಮುಹೂರ್ತ ನೆರವೇರಿದೆ. ಬೆಂಗಳೂರಿನ ಶ್ರೀನಗರ ಬಳಿಯ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಪೂಜೆ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಲಾಯಿತು. ಮುಹೂರ್ತದ ಸಮಯದಲ್ಲಿ ಇಡೀ ಸಿನಿಮಾತಂಡ ಹಾಜರಿತ್ತು. ಡಾಲಿ ಧನಂಜಯ ತಮ್ಮದೇ ನಿರ್ಮಾಣದ 5ನೇ ಸಿನಿಮಾದ ಮುಹೂರ್ತದಲ್ಲಿ ಭಾಗಿಯಾಗಿ ತಂಡಕ್ಕೆ ಶುಭಹಾರೈಸಿದರು.
ಜೆಸಿ ಫಸ್ಟ್ ಲುಕ್‌ನಲ್ಲಿ ಬೆಂಗಳೂರು ಕಾರಾಗೃಹ, ಜೈಲು ಕಂಬಿಗಳನ್ನು ನೋಡಬಹುದು. ಸದ್ಯ ಟೈಟಲ್ ಪೋಸ್ಟರ್ ರಿಲೀಸ್ ಮಾಡಿರುವ ಸಿನಿಮಾತಂಡ ಸದ್ಯದಲ್ಲೇ ಹೆಚ್ಚಿನ ಮಾಹಿತಿ ಬಿಟ್ಟುಕೊಡಲಿದೆ. ಇನ್ನು 2018ರಲ್ಲಿ ರಿಲೀಸ್ ಆಗಿದ್ದ ನಡುವೆ ಅಂತವಿರಲಿ ಸಿನಿಮಾ ಮೂಲಕ ನಾಯಕನಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದ ಪ್ರಖ್ಯಾತ್, ಇದೀಗ ಜೆಸಿ ಸಿನಿಮಾ ಮೂಲಕ ಮತ್ತೆ ಸ್ಯಾಂಡಲ್‌ವುಡ್ ಪುರ ಪ್ರವೇಶ ಮಾಡಿದ್ದಾರೆ. 5 ವರ್ಷಗಳ ಬಳಿಕ ಪ್ರಖ್ಯಾತ್ ಹೀರೋ ಆಗಿ ಮತ್ತೆ ತೆರೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ.
ಹಾಗಾದರೆ ಈ ಸಿನಿಮಾ ನಿರ್ದೇಶಿಸುತ್ತಿರುವವರು ಯಾರು? ಅದಕ್ಕೂ ಉತ್ತರವಿದೆ. ಜೆಸಿ ಚಿತ್ರಕ್ಕೆ ಚೇತನ್ ಜೈರಾಮ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಿರ್ದೇಶಕ ಚೇತನ್‌ಗೂ ಇದು ಮೊದಲ ಸಿನಿಮಾ. ಪಕ್ಕಾ ಮಾಸ್ ಸಿನಿಮಾ ಇದಾಗಿದ್ದು ಚಿತ್ರಕ್ಕೆ ಮಾಸ್ತಿ ಅವರ ಖಡಕ್ ಡೈಲಾಗ್ ಇರಲಿದೆ. ಕಾರ್ತಿಕ್ ಅವರ ಛಾಯಾಗ್ರಾಹಣ, ರೋಹಿತ್ ಸೋವರ್ ಸಂಗೀತ ಸಂಯೋಜಿಸಲಿದ್ದಾರೆ. ಶೀಘ್ರದಲ್ಲಿ ಸಿನಿಮಾದ ಚಿತ್ರೀಕರಣ ಶುರುವಾಗಲಿದೆ.
ಧನಂಜಯ್ ನಿರ್ಮಾಣದ ಸಿನಿಮಾಗಳು
2021ರಲ್ಲಿ ಬಡವ ರಾಸ್ಕಲ್ ಸಿನಿಮಾ ಮೂಲಕ ತಮ್ಮದೇ ಚಿತ್ರಕ್ಕೆ ಬಂಡವಾಳ ಹೂಡಿ ಗೆಲುವು ಕಂಡಿದ್ದರು. ಅದಾದ ಬಳಿಕ 2022ರಲ್ಲಿ ಹೆಡ್ ಬುಷ್ ಮೂಲಕ ಬೆಂಗಳೂರಿನ ಭೂಗತ ಲೋಕವನ್ನು ಅನಾವರಣ ಮಾಡಿದ್ದರು. 2022ರಲ್ಲಿ ಟಗರು ಪಲ್ಯ ಚಿತ್ರದ ಮೂಲಕ ಕ್ಲಾಸ್ ಆಡಿಯನ್ಸ್‌ಗಳನ್ನು ಸೆಳೆದು, ಹಿಟ್ ಪಟ್ಟಿಗೆ ಸೇರಿದ್ದರು. ಸದ್ಯ ನಾಗಭೂಷಣ್ ಜತೆಗೆ ವಿದ್ಯಾಪತಿ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಇತ್ತ ಅದರ ನಡುವೆಯೇ ಜೆಸಿ ಸಿನಿಮಾದ ಮುಹೂರ್ತವನ್ನೂ ನೆರವೇರಿಸಿಕೊಂಡಿದ್ದಾರೆ.